25 ರೂ. ಏರಿಕೆ, ಇನ್ನಷ್ಟು ಏರಿಕೆ ಸಾಧ್ಯತೆವಿದ್ಯುತ್ ಬೆಲೆ ಏರಿಕೆ ಆಗುತ್ತಾ..?ಜನರ ಬದುಕು ಮೂರಾಬಟ್ಟೆ NAMMUR EXPRESSನವ ದೆಹಲಿ: ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸತತ ಮೂರನೇ ತಿಂಗಳು ಮುಂದುವರಿದಿದೆ. ಇದೀಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಕಳೆದ ಹದಿನೈದು ದಿನಗಳಲ್ಲಿ ಎರಡನೇ ಬಾರಿಗೆ ಬೆಲೆ 50 ರೂಪಾಯಿ ಹೆಚ್ಚಳವಾದಂತಾಗಿದೆ.ಭಾರತೀಯ ತೈಲ ಕಂಪನಿಗಳು ಅಗಸ್ಟ್ 17ರಂದು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ 14.2 ಕೆ.ಜಿ. ಗೃಹ ಬಳಕೆಯ ಸಿಲಿಂಡರ್ ಬೆಲೆ ಈಗ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ 884.50 ರೂ. . ಮುಂಬೈನಲ್ಲಿ (ಸಬ್ಸಿಡಿ ರಹಿತ LPG) ಸಿಲಿಂಡರ್ ಈಗ 884.50 ರೂ.ಕ್ಕೆ ಏರಿಕೆ ಕಂಡಿದೆ.ದೇಶದಲ್ಲಿ ಸತತ ಮೂರು ತಿಂಗಳಿನಿಂದಲೂ ಗ್ಯಾಸ್ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಲೇ ಇದೆ. ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆ 834 ರೂ. ಇತ್ತು. ಆಗಸ್ಟ್ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಯಿತು. ಆದರೆ…
Author: Nammur Express Admin
ಎಲ್ಲಾ ವಿಷಯದಲ್ಲೂ ರಾಜಕೀಯ ಬೇಕೇ..?ಹಳ್ಳಿ ನಾಯಕನ ಪ್ರಾಮಾಣಿಕ ಮಾತು ಎಡವಟ್ಟುತಳಕು ಬಳಕು ರಾಜಕೀಯ ಗೊತ್ತಿಲ್ಲದ ನಾಯಕ NAMMUR EXPRESS EDITORIALಬೆಂಗಳೂರು: ಮೈಸೂರಲ್ಲಿ ನಡೆದ ಯುವತಿಯ ಗ್ಯಾಂಗ್ ರೇಪ್ ಪ್ರಕರಣ ಇದೀಗ ರಾಜ್ಯವ್ಯಾಪಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಗೃಹ ಮಂತ್ರಿ, ಮಲೆನಾಡ ಹೆಮ್ಮೆಯ ನಾಯಕ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಎರಡು ಹೇಳಿಕೆ ಕೂಡ ಭಾರೀ ಸದ್ದು ಮಾಡಿವೆ.ಒಂದು ಕತ್ತಲೆಯಲ್ಲಿ ಆ ಹುಡುಗಿ ಅಲ್ಲಿ ಏಕೆ ಹೋದಳು?, ಇನ್ನೊಂದು ಕಾಂಗ್ರೆಸ್ ಪಕ್ಷದವರು ನನ್ನ ರೇಪ್ ಮಾಡ್ತಾರೆ..!.ಎರಡು ಹೇಳಿಕೆಗಳು ಗೊಂದಲದಿಂದ ಕೂಡಿದ್ದರೂ ವಾಸ್ತವತೆಗೆ ಹತ್ತಿರವಾಗಿದೆ.ಹೇಳಿಕೆ 1. ಯಾವುದೇ ಮನೆಯ ಹೆಣ್ಣು ಮಕ್ಕಳು ಕೂಡ ರಾತ್ರಿ ನಿರ್ಜನ ಪ್ರದೇಶಕ್ಕೆ ಹೋಗುವುದು ತಪ್ಪು.ನಮ್ಮ ಹುಷಾರಲ್ಲಿ ನಾವಿರಬೇಕು ಎಂಬುದು ಅವರ ಮಾತಿನ ಅರ್ಥ. ಆದರೆ ಅದು ಅಂದಿನ ಪರಿಸ್ಥಿತಿಗೆ ತಪ್ಪು ಅನಿಸುತ್ತದೆ. ಆದರೆ ಎಲ್ಲಾ ಮನೆಗೆ ಓರ್ವ ಪೊಲೀಸ್ ಕೊಡಲು ಯಾವ ವ್ಯವಸ್ಥೆಗೂ ಸಾಧ್ಯವಿಲ್ಲ. ಪ್ರತಿ ಪ್ರಜೆಯೂ ತನ್ನ ಹುಷಾರಲ್ಲಿ ಇರಬೇಕು. ಮೊದಲೇ ಸಿಬ್ಬಂದಿ…
ಮೊಬೈಲ್ ಟವರ್ ಅಧರಿಸಿ ಆರೋಪಿಗಳ ಬಂಧನ?ರೇಪ್ ಮಾಡಿ ವಿಡಿಯೋ ಮಾಡಿಕೊಂಡಿದ್ದ ಕಿರಾತಕರುಆರೋಪಿಗಳ ಬಂಧನಕ್ಕೆ ಕ್ರಮ: ಆರಗ ಜ್ಞಾನೇಂದ್ರಖ್ಯಾತ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು NAMMUR EXPRESSಮೈಸೂರು: ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು ಇದೀಗ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.ಹೊರ ರಾಜ್ಯದಿಂದ ವ್ಯಾಸಂಗಕ್ಕೆ ಬಂದು ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ತೆರಳಿದ್ದಳು. ಈ ವೇಳೆಯಲ್ಲಿ ಐದಾರು ಮಂದಿ ಯುವಕರ ತಂಡ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದೆ ಎನ್ನಲಾಗಿದೆ. ಪ್ರಕರಣದ ದುಷ್ಕರ್ಮಿಗಳು ಯುವತಿ ಜತೆ ಇದ್ದ ಯುವಕನಿಗೆ ಹಲ್ಲೆ ಮಾಡಿ, ನಂತರ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ನಡೆದ ಬಳಿಕ ವಿದ್ಯಾರ್ಥಿನಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.ಈ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ…
ಪತ್ರಕರ್ತರಿಗೆ ಎರಡನೇ ಡೋಸ್ ಲಸಿಕೆಹಳ್ಳಿ ಹಳ್ಳಿಯಲ್ಲೂ ಲಸಿಕಾ ಅಭಿಯಾನಲಸಿಕೆ ಹಾಕಿಸಿ.. ಕರೋನಾ ಓಡಿಸಿ..! NAMMUR EXPRESSತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ಕರೋನಾ ಸೋಂಕು ಹೆಚ್ಚು ಇರುವ ತಾಲೂಕು ಆಗಿದೆ. ಈ ಬಗ್ಗೆ ಗೃಹ ಮಂತ್ರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಗೃಹ ಸಚಿವರ ತವರಲ್ಲಿ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ.ಆ.26ರ ಗುರುವಾರ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಆಟೋ ಚಾಲಕರಿಗೆ ಮೊದಲು ಮತ್ತು ಎರಡನೇ ಡೋಸ್ ಲಸಿಕೆ ಹಾಕಲಾಗುತ್ತದೆ. ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಮನವಿ ಮಾಡಿದ್ದಾರೆ.ಪತ್ರಕರ್ತರಿಗೆ ಲಸಿಕೆ: ತೀರ್ಥಹಳ್ಳಿಯ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ಬುಧವಾರ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಎರಡನೇ ಡೋಸ್ ಲಸಿಕೆ ಹಾಕಲಾಯಿತು. ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು. ಆರೋಗ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು.ಹಳ್ಳಿ ಹಳ್ಳಿಯಲ್ಲೂ ಅಭಿಯಾನ!:ತೀರ್ಥಹಳ್ಳಿ ತಾಲೂಕಿನ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ಲಸಿಕಾ ಅಭಿಯಾನ…
ರಾವೆಯಿಂದ ನಗರದವರೆಗೆ ಪ್ರತಿಭಟನಾ ಪಾದಯಾತ್ರೆಯುವ ಕಾಂಗ್ರೆಸ್ ಸಂಘಟನೆಯಿಂದ ಆಯೋಜನೆಆ.27ಕ್ಕೆ ಪಾದಯಾತ್ರೆ: ಕಿಮ್ಮನೆ ಹಾಜರ್ NAMMUR EXPRESSತೀರ್ಥಹಳ್ಳಿ: ಮಲೆನಾಡಿನ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು. ಯಾವುದೇ ಹಳ್ಳಿಗಳಲ್ಲೂ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ. ಇದರಿಂದ ಜನತೆಗೆ ತೊಂದರೆಯಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಮನವಹಿಸುತ್ತಿಲ್ಲ. ಸರಕಾರದ ನಿರ್ಲಕ್ಷ್ಯ ಖಂಡಿಸಿ ಆ.27ರ ಶುಕ್ರವಾರ ತೀರ್ಥಹಳ್ಳಿ ತಾಲೂಕಿನ ರಾವೆ ಇಂದ ನಗರದವರೆಗೆ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದೆ.ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರ ಹೋಬಳಿಯಾದ್ಯಂತ ವ್ಯಾಪಕ ನೆಟ್ವರ್ಕ್ ಸಮಸ್ಯೆ ಎದುರಾಗಿದ್ದು ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆ ಬರಿ ಮಾತಾಗಿಯೇ ಉಳಿದು ಹೋಗಿದೆ. ಕಳೆದ ಒಂದೂವರೆ ವರ್ಷದಿಂದ ಕರೋನಾ ಕಾಯಿಲೆಯಿಂದಾಗಿ ಶಾಲಾ ಕಾಲೇಜುಗಳು ಮುಚ್ಚಿದ್ದು ಇದೀಗ ಪ್ರಾರಂಭವಾಗುತ್ತಿವೆ. ಆ ಒಂದೂವರೆ ವರ್ಷಗಳ ಕಾಲ ಆನ್ಲೈನ್ ನಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿತ್ತು ಆಗಲೇ ಶುರುವಾಗಿದ್ದು ನೆಟ್ವರ್ಕ್ ಸಮಸ್ಯೆ ಹೆಚ್ಚಾಗಿದೆ.…
ರಕ್ತದಾನ ಮಾಡಿ ಯುವ ಕೃಷಿಕ ಮದನ್ ಮಾದರಿವಿಶೇಷಚೇತನ ಮಕ್ಕಳಿಗೆ ಕೇಕ್ ತಿನ್ನಿಸಿ ಆಚರಣೆ NAMMUR EXPRESSತೀರ್ಥಹಳ್ಳಿ: ಅವಧೂತ ವಿನಯ್ ಗುರೂಜಿ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿಯಲ್ಲಿ ಹಲವು ಸಾಮಾಜಿಕ ಕೆಲಸಗಳು ನಡೆದವು. ವಿನಯ್ ಗುರೂಜಿ ಅವರು ಈ ಹಿಂದೆ ತೀರ್ಥಹಳ್ಳಿಯಲ್ಲೂ ಕೆಲಸ ಮಾಡಿದ್ದರು. ತೀರ್ಥಹಳ್ಳಿಯಲ್ಲಿ ಸಾವಿರಾರು ಮಂದಿ ಅವರ ಶಿಷ್ಯರು ಇದ್ದಾರೆ. ಅವರ ಹುಟ್ಟು ಹಬ್ಬವನ್ನು ವಿವಿಧ ಸಾಮಾಜಿಕ, ಮಾನವೀಯ ಕೆಲಸ ಮಾಡುವ ಮೂಲಕ ಆಚರಿಸಿದ್ದಾರೆ.ರಕ್ತದಾನ!: ಪ್ರಗತಿಪರ ಯುವ ಕೃಷಿಕ, ವೈಜ್ಞಾನಿಕ ಸಲಹಾ ಸಮಿತಿ ಸದಸ್ಯ, ಐಸಿಎಆರ್, ಕೆವಿಕೆ ಶಿವಮೊಗ್ಗ,ರಾಜ್ಯ ಪ್ರಶಸ್ತಿ ಪುರಸ್ಕೃತ ತನಿಕಲ್ ಮದನ್ ಅವರು 9ನೇ ಬಾರಿಗೆ ರಕ್ತದಾನ ಮಾಡಿ ಮಾನವೀಯ ಸೇವೆ ಮೆರೆದಿದ್ದಾರೆ. ಈ ವೇಳೆ ಸಮಾಜ ಸೇವಕ ಮಹೇಶ್ ಇದ್ದರು.ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ವಿಶೇಷಚೇತನರ ಮಕ್ಕಳ ಶಾಲೆಯಲ್ಲಿ ವಿನಯ್ ಗುರೂಜಿ ಅವರ ಹುಟ್ಟಿದ ಹಬ್ಬವನ್ನು ಮಕ್ಕಳಿಗೆ ವಿಶೇಷ ಚೇತನ ಮಕ್ಕಳಿಗೆ ಕೇಕ್ ಕಟ್ ಮಾಡಿ ತಿನ್ನಿಸುವ ಮೂಲಕ ಆಚರಣೆ ಮಾಡಲಾಯಿತು. ಡಿವೈಎಸ್ಪಿ ಶಾಂತವೀರಪ್ಪ, ಅಭಿಜಿತ್, ಅಭಿಲಾಶ್ (ಮಯೂರೇಶ್ವರಿ…
ವಾಯು ಸೇನೆ ವಿಮಾನದಲ್ಲಿ ದೆಹಲಿಗೆ14 ದಿನಗಳ ಕ್ವಾರೈಟೈನ್ ಬಳಿಕ ತವರಿಗೆತೀರ್ಥಹಳ್ಳಿಯ ತವರು ಜನರಲ್ಲಿ ಸಂತಸ NAMMUR EXPRESSಬೆಂಗಳೂರು: ಆಪಘನಿಸ್ಥಾನದಲ್ಲಿ ಉಗ್ರರ ಅಟ್ಟಹಾಸದ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ರಾಬರ್ಟ್ ರೋಡ್ರಿಗಸ್ ಭಾರತಕ್ಕೆ ಮರಳಿದ್ದಾರೆ.ಭಾನುವಾರ ಅವರು ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯು ಸೇನೆ ವಿಮಾನದಲ್ಲಿ ಮೂವರು ಕನ್ನಡಿಗರೊಂದಿಗೆ 168 ಮಂದಿ ಭಾರತೀಯರ ಜತೆ ಬಂದಿಳಿದಿದ್ದಾರೆ.ದೆಹಲಿಯ ಗಾಜಿಯಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ದೆಹಲಿಯ ಚಾವಲ್ಲಾ ಪ್ರದೇಶದಲ್ಲಿ ಸರಕಾರಿ ಕರೋನಾ ನಿಯಮ ಕಾರಣ 14 ದಿನ ಕ್ವಾರೈಟೈನ್ ಆಗಲಿದ್ದಾರೆ. ಇದೀಗ ಕುಟುಂಬದವರು, ಸ್ನೇಹಿತರಲ್ಲಿ ಸಂತಸ ಮೂಡಿದೆ.ಮೂವರು ಕನ್ನಡಿಗ ಸಂಡೂರಿನ ಜಲಾಲ್, ಸಯ್ಯದ್, ತನ್ವಿನ್ ಜತೆ ರಾಬರ್ಟ್ ಬಂದಿಳಿದಿದ್ದಾರೆ.ರಾಬರ್ಟ್ ತೀರ್ಥಹಳ್ಳಿಯಲ್ಲಿ ತಮ್ಮ ಶಿಕ್ಷಣ ಮುಗಿಸಿ ಮಂಗಳೂರು, ಬೆಂಗಳೂರು, ಪುನಾದಲ್ಲಿ ಕೆಲಸ ಮಾಡಿದ್ದರು. ಬಳಿಕ ಸಮಾಜ ಸೇವೆಗಾಗಿ ಆಫ್ಘನ್ ದೇಶಕ್ಕೆ ತೆರಳಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದಿತ್ತು.ಆರಗ ಹೇಳಿದ್ದೇನು..?: ಆಪಘನಿಸ್ಥಾನದಲ್ಲಿ ಆರಾಜಕತೆ ಸೃಷ್ಟಿಯಾಗಿದ್ದು ಭಾರತೀಯರು ಸಿಲುಕಿದ್ದು…
ತೀರ್ಥಹಳ್ಳಿಯಲ್ಲಿ ಕೊರೋನಾ ವೇಳೆ ಉಚಿತ ಸೇವೆಹತ್ತಾರು ಸಾಮಾಜಿಕ ಕೆಲಸಗಳ ಮೂಲಕ ಹೊಸ ಹೆಜ್ಜೆರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಹೊಸ ಪ್ರಯೋಗ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯ ಸಹಕಾರಿ ಕ್ಷೇತ್ರದಲ್ಲಿ ಕಳೆದ 8 ವರ್ಷಗಳಲ್ಲಿ ಉತ್ತಮ ಸೇವೆ ನೀಡುತ್ತಿರುವ ದಿವ್ಯ ಚೇತನ ಸೌಹಾರ್ದ ಸಹಕಾರಿ ಸಂಸ್ಥೆ ಇದೀಗ ಮತ್ತೊಂದು ಸಾಧನೆಯ ಹೆಜ್ಜೆ ಇಟ್ಟಿದೆ. ರಾಜ್ಯದ ಸಹಕಾರಿ ಕ್ಷೇತ್ರದಲ್ಲೇ ಹೊಸ ಪ್ರಯೋಗ ಮಾಡಿ ಸಹಕಾರಿ ವತಿಯಿಂದ ಕರೋನಾ ಸಂಕಷ್ಟದ ಈ ಸಮಯದಲ್ಲಿ ಆಂಬುಲೆನ್ಸ್ ಸೇವೆ ಶುರು ಮಾಡಿದೆ.ಸಹಕಾರಿಯು ಈಗಾಗಲೇ ಕರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಸುಲಭ ಕಂತಿನ ಲ್ಯಾಪ್‌ಟಾಪ್ ಸಾಲದ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈಗಾಗಲೇ ನೂರಾರು ಮಂದಿ ಷೇರುದಾರರು ಇದರ ಪ್ರಯೋಜನ ಪಡೆದಿದ್ದಾರೆ.ಇದೀಗ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಹಾಗೂ ಅನಾರೋಗ್ಯದ ಸಂಕಷ್ಟದಲ್ಲಿ ಇರುವವರಿಗೆ ಅಗತ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಸದಸ್ಯರ ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಟಿ.ಟಿ ಆಂಬ್ಯುಲೆನ್ಸ್ ಸೇವನೆಯನ್ನು ಸ್ವಾತಂತ್ರ್ಯ ದಿನದಿಂದ…
ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದ ಆರಗತೀರ್ಥಹಳ್ಳಿ ಅಭಿವೃದ್ಧಿಗೆ ಹೊಸ ಹೆಜ್ಜೆ ನಿರೀಕ್ಷೆಉದ್ಯೋಗ ಸೃಷ್ಟಿಗೆ ಆರಗ ಮಾಸ್ಟರ್ ಪ್ಲಾನ್?!ಕ್ಷೇತ್ರದ ಟಾಪ್ 10 ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ ಸಾರ್! NAMMUR EXPRESS EXCLUSIVEತೀರ್ಥಹಳ್ಳಿ: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇದೀಗ ರಾಜ್ಯ ಸರ್ಕಾರದ ಟಾಪ್ 2 ಸ್ಥಾನದಲ್ಲಿದ್ದಾರೆ. ಇದು ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ. ಈ ನಡುವೆ ಅವರ ತವರು ಕ್ಷೇತ್ರದಲ್ಲಿ ಕೂಡ ಬೆಟ್ಟದಷ್ಟು ಸಮಸ್ಯೆಗಳಿವೆ. ಇನ್ನು ಗೃಹ ಸಚಿವರಾದ ಮೇಲೆ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಮಾತನ್ನು ಅವರೇ ಹೇಳಿದ್ದಾರೆ. ಈ ನಡುವೆ ಸೋಮವಾರ ಬೆಳಗ್ಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಮಳೆಹಾನಿ, ಕೋವಿಡ್, ಎಲ್ಲಾ ಇಲಾಖೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.ಗೃಹ ಮಂತ್ರಿ ಆರಗ ಕ್ಷೇತ್ರ ತೀರ್ಥಹಳ್ಳಿ ಆದರೂ ಹೊಸನಗರದ ಒಂದು ಹೋಬಳಿ ಸೇರಿಕೊಂಡಿದೆ. ಹೀಗಾಗಿ ಅಲ್ಲಿಯೂ ಅಭಿವೃದ್ಧಿ ಆಗಬೇಕಿದೆ.ಆರಗ ಅವರು 4 ಬಾರಿ ಶಾಸಕರಾಗಿ ಮೊದಲ ಬಾರಿಗೆ ಸಚಿವರಾಗಿದ್ದಾರೆ.…
ಪತ್ನಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಲ್ಲಿದ್ದ ಕಿಮ್ಮನೆಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪುಮತ್ತೆ ಅಖಾಡಕ್ಕೆ ಇಳಿಯಲು ಕಿಮ್ಮನೆ ಸಿದ್ಧಜಿಲ್ಲಾ ಸಂಘಟನೆಯತ್ತ ಮಂಜುನಾಥ ಗೌಡ? NAMMUR EXPRESSತೀರ್ಥಹಳ್ಳಿ: ಕಾಂಗ್ರೆಸ್ ನಾಯಕ, ಮಾಜಿ ಶಿಕ್ಷಣ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರು ಭಾನುವಾರ ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪತ್ನಿ ಅನಾರೋಗ್ಯ ಕಾರಣ ಬೆಂಗಳೂರಲ್ಲಿದ್ದ ಕಿಮ್ಮನೆ ರತ್ನಾಕರ್ ಅವರು ಕಳೆದ ಒಂದೆರಡು ತಿಂಗಳಿಂದ ರಾಜಕೀಯದಿಂದ ದೂರ ಆಗಿದ್ದರು. ಇದೀಗ ಪತ್ನಿ ಆರೋಗ್ಯ ಚೇತರಿಕೆಗೊಂಡಿದ್ದು, ತೀರ್ಥಹಳ್ಳಿಗೆ ಭಾನುವಾರ ಅಥವಾ ಸೋಮವಾರ ಆಗಮಿಸಲಿದ್ದಾರೆ ಎನ್ನಲಾಗಿದೆ.ಕಿಮ್ಮನೆ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಅಭಿಮಾನಿಗಳಲ್ಲಿ ಮತ್ತೆ ಹುರುಪು ಬಂದಿದೆ. ಈಗಾಗಲೇ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರು ಕ್ಷೇತ್ರದಲ್ಲಿದ್ದು ಇಬ್ಬರೂ ನಾಯಕರು ಅಭಿವೃದ್ಧಿ ಕಡೆ ಗಮನ ಕೊಡಲಿದ್ದಾರೆ. ಮತ್ತೊಂದು ಹೋರಾಟಕ್ಕೆ ಕಿಮ್ಮನೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.ಜಿಲ್ಲಾ ಸಂಘಟನೆ ಕಡೆ ಮಂಜುನಾಥ ಗೌಡ?: ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ಸಂಘಟನೆ ಮಾಡಿದರೆ ಮತ್ತೊರ್ವ ನಾಯಕ ಮಂಜುನಾಥ ಗೌಡ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ…