Author: Nammur Express Admin

ಅ.3ರಿಂದ ಮಂಗಳೂರು ದಸರಾ ಶುರು! * ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ * ಬೆಳ್ತಂಗಡಿ: ಶ್ರೀ ದುರ್ಗಾಕಾಳಿಕಾಂಬ ನವರಾತ್ರಿ ಉತ್ಸವ!l * ಕೊಲ್ಯ ಮೂಕಾಂಬಿಕಾ ಸಾನ್ನಿಧ್ಯದಲ್ಲಿ ನವರಾತ್ರಿ ಉತ್ಸವ * ಭರ್ಜರಿ ಉಚ್ಚಿಲ ದಸರಾ: ಸರ್ವರಿಗೂ ಸ್ವಾಗತ NAMMUR EXPRESS NEWS ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅಕ್ಟೋಬರ್ 3ರಿಂದ 14ರ ವರೆಗೆ ನಡೆಯಲಿದ್ದು, ದಸರಾ ವಿಶೇಷವಾಗಿ ಅ.6ರಂದು ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ. ಕುದ್ರೋಳಿ ಕ್ಷೇತ್ರದಲ್ಲಿ 1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವ’ ಕುದ್ರೋಳಿ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಬಾರಿ ಅ.3ರಂದು ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದು,ಅದೇ ದಿನ ಶಾರದೆ, ನವದುರ್ಗೆಯರ ಪ್ರತಿಷ್ಠೆ ನಡೆಯಲಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದ ರಂಗು ದಸರಾ ಸಂದರ್ಭ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನೂರಾರು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಈ ಬಾರಿ ವಿಶೇಷ ಎನ್ನುವಂತೆ,…

Read More

ಗ್ರಾಪಂ ನೌಕರರ ಹೋರಾಟ ಜೋರು! – ರಾಜ್ಯದ ಎಲ್ಲಾ ಕಡೆ ಗ್ರಾಮ ಪಂಚಾಯತ್ ಕೆಲಸ ಡೌನ್ – ಅ. 4ರಂದು ಪ್ರತಿಭಟನೆ: ಸರ್ಕಾರ ತಕ್ಷಣ ಬಗೆಹರಿಸಲು ಪಟ್ಟು NAMMUR EXPRESS NEWS ಬೆಂಗಳೂರು: ಸೇವಾ ಹಿರಿತನದ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರು ಅ.4 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ. ಈಗಾಗಲೇ ಒಂದು ವಾರದಿಂದ ಹೋರಾಟ ನಡೆಯುತ್ತಿದ್ದು, ಜನರ ಕೆಲಸಕ್ಕೆ ಸಮಸ್ಯೆ ಆಗುತ್ತಿದೆ. ಸರ್ಕಾರ ತಕ್ಷಣ ಗಮನಿಸಲು ಜನ ಅಗ್ರಹಿಸಲಾಗಿದೆ. ಇಲಾಖೆಯ ಐದು ವೃಂದದ ನೌಕರರ ಬೇಡಿಕೆ ಈಡೇರಿಕೆ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕರೆದ ಸಭೆಗೂ ನೌಕರರು ಗೈರಾಗುವ ಮೂಲಕ ಪ್ರತಿಭಟನೆ ನಿರ್ಧಾರ ಅಚಲ ಎಂಬ ಸಂದೇಶ ರವಾನಿಸಿದ್ದಾರೆ. ಕ್ಲರ್ಕ್ ಕಂ-ಡೇಟಾ ಎಂಟ್ರಿ ಆಪರೇಟರ್, ಕರವಸೂಲಿಗಾರ, ನೀರುಗಂಟಿ, ಜವಾನ ಮತ್ತು ಸ್ವಚ್ಛತಗಾರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಬದಲಾಗಿ ಇಲಾಖೆಯಿಂದ ವೇತನ ನಿಗದಿಪಡಿಸಿ…

Read More

ನೂತನ ಮಳಿಗೆ ‘ಮಾಡರ್ನ್ ಕ್ಲಾತ್ ಹೌಸ್ ಅ.4ಕ್ಕೆ ಉದ್ಘಾಟನೆ! * ಸೊಪ್ಪುಗುಡ್ಡೆಯಲ್ಲಿ  ಪ್ರಾರಂಭಿಸುತ್ತಿರುವ ನೂತನ ಮಳಿಗೆ! * ಮುಖ್ಯ ಅತಿಥಿಯಾಗಿ ಕೆ.ಜಿ.ಎಫ್. ಚಿತ್ರದ ಗರುಡ ಖ್ಯಾತಿಯ ನಟ ಗರುಡ ರಾಮ್!! NAMMUR EXPRESS NEWS ತೀರ್ಥಹಳ್ಳಿ:ಸೊಪ್ಪುಗುಡ್ಡೆಯಲ್ಲಿ  ಪ್ರಾರಂಭಿಸುತ್ತಿರುವ ನೂತನ ಮಳಿಗೆ ‘ಮಾಡರ್ನ್ ಕ್ಲಾತ್ ಹೌಸ್’ ಉದ್ಘಾಟನೆ ಅ.04ನೇ ಶುಕ್ರವಾರ ಬೆಳಿಗ್ಗೆ 10-30 ಗಂಟೆಗೆ ನೆರವೇರಿಸಲು ನಿಶ್ಚಯಿಸಲಾಗಿದೆ. ಈ ಶುಭ ಸಮಾರಂಭಕ್ಕೆ ತಾವುಗಳು ಸಕುಟುಂಬ ಸಮೇತರಾಗಿ ಆಗಮಿಸಿ ಪಾಲ್ಗೊಂಡು, ಯಥೋಚಿತ ಸತ್ಕಾರವನ್ನು ಸ್ವೀಕರಿಸಿ, ಶುಭ ಹಾರೈಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. ಮುಖ್ಯ ಅತಿಥಿಗಗಳಾಗಿ ಕೆ.ಜಿ.ಎಫ್. ಚಿತ್ರದ ಗರುಡ ಖ್ಯಾತಿಯ ನಟ ಗರುಡ ರಾಮ್, ಮಾಜಿ ಗೃಹ ಸಚಿವರು, ಹಾಲಿ ಶಾಸಕರು ತೀರ್ಥಹಳ್ಳಿ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ, ತೀರ್ಥಹಳ್ಳಿ ಕಿಮ್ಮನೆ ರತ್ನಾಕರ,ಅಧ್ಯಕ್ಷರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್ ಶಿವಮೊಗ್ಗ ಡಾ. ಆರ್.ಎಂ. ಮಂಜುನಾಥ್ ಗೌಡ್ರು, ಡಿ.ವೈ.ಎಸ್.ಪಿ ತೀರ್ಥಹಳ್ಳಿ ಗಜಾನನ ವಾಮನ ಸುತರ,ಮಾಜಿ ನಿರ್ದೇಶಕರು ನೀರು…

Read More

ಅಶ್ಲೀಲ ಚಿತ್ರ ವಿಡಿಯೋ ಕಳುಹಿಸಿದವ ಅರೆಸ್ಟ್!? – ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ: ಕಂಪನಿ ಉದ್ಯೋಗಿ ಬಂಧನ * ಅಂಗಳದಲ್ಲಿ ಕಾರು ಹಿಂದಕ್ಕೆ ಚಲಾಯಿಸಿ ಬಾಲಕ ಸಾವು * ಗುಂಡ್ಯ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಹಲವರಿಗೆ ಗಾಯ NAMMUR EXPRESS ನ್ಯೂಸ್ ಮಂಗಳೂರು: ವಿದ್ಯಾರ್ಥಿನಿಗೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವಿಡಿಯೋ ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿಯನ್ನು ಉಳ್ಳಾಲ ಬಳಿಯ ಮಂಜನಾಡಿ ನಿವಾಸಿ ಮೊಹಮ್ಮದ್ ಶಾಕೀಬ್ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಕೃಷ್ಣಾಪುರ ಬಳಿಯ ವಿದ್ಯಾರ್ಥಿನಿಗೆ ಆರೋಪಿಯು ಪದೇಪದೆ ವಾಟ್ಸ್ ಅಪ್ ಮೆಸೇಜ್ ಮಾಡಿ ಎಷ್ಟು ಬೇಕಾದರೂ ದುಡ್ಡು ಕೊಡಬಲ್ಲೆ. ಬರ್ತೀಯಾ ಎಂದು ಕಿರುಕುಳ ನೀಡುತ್ತಿದ್ದ. ಅಲ್ಲದೇ ನಿರಂತರವಾಗಿ ಆಶ್ಲೀಲ ಚಿತ್ರ ಕಳುಹಿಸುತ್ತಿದ್ದ ಎನ್ನಲಾಗಿದೆ. ಯುವಕನ ದೌರ್ಜನ್ಯದಿಂದ ವಿದ್ಯಾರ್ಥಿನಿ ಮಾನಸಿಕ ಆಘಾತ ಅನುಭವಿಸಿದ್ದಳು.. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.ಆರೋಪಿಯು ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಅಲ್ಲಿಂದಲೇ…

Read More

ತೀರ್ಥಹಳ್ಳಿ ಪಟ್ಟಣದಲ್ಲಿ ಗಾಂಧಿಗೆ ನಮನ! – ಪಟ್ಟಣ ಪಂಚಾಯಿತಿ ಸಾರ್ವಜನಿಕ ಗಾಂಧಿ ಜಯಂತಿ ಆಚರಣೆ – ವಾಕಿಂಗ್ ಬಡ್ಡಿಸ್ ವತಿಯಿಂದ ಪಟ್ಟಣ ಸ್ವಚ್ಛ – ಸಹ್ಯಾದ್ರಿ ಪಿಯು ಕಾಲೇಜು ಮಕ್ಕಳ ಶ್ರಮದಾನ – ಸ್ವಾತಂತ್ರ್ಯ ಹೋರಾಟದ ವೇಳೆ ತೀರ್ಥಹಳ್ಳಿಗೆ ಬಂದಿದ್ದರು ಗಾಂಧೀಜಿ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನಲ್ಲಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಪಟ್ಟಣ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿಯನ್ನು ಡಾ. ಬಿ. ಆರ್, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಜ್ಞೆ ಸ್ವೀಕರದ ಮುಖೇನ ಆಚರಿಸಲಾಯಿತು. ದೇಶ ನೈರ್ಮಲ್ಯ ಕಾರಣಕ್ಕೆ ಸ್ವಚ್ಛ ಆಂದೋಲನದಲ್ಲಿ ಎಲ್ಲರೂ ಸಹಭಾಗಿತ್ವ ವಹಿಸಿಕೊಳ್ಳಬೇಕು. ತೀರ್ಥಹಳ್ಳಿಯನ್ನು ಸುಂದರಪಟ್ಟಣ ಮಾಡುವ ಉದ್ದೇಶದಿಂದ ಸಾಕಷ್ಟು ಸಂಘ ಸಂಸ್ಥೆಗಳ ಆಹ್ವಾನ ಮಾಡಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಡಿ.ಎಸ್.ಸೋಮಶೇಖರ್ ಗಾಂಧೀಜಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಹಾರ್ದಿಕ ಶುಭಾಶಯವನ್ನು ನೀಡುವ ಮೂಲಕ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ತತ್ವ ದೇಶ…

Read More

ಮೈಸೂರು ದಸರಾ ಎಷ್ಟೊಂದು ಸುಂದರ..! – ದಸರಾ ಸಂಭ್ರಮ ಶುರು: ನಾಡ ಹಬ್ಬಕ್ಕೆ ಸ್ವಾಗತ – ಕಳೆಗಟ್ಟಿದ ದಸರಾ: ದಸರಾ ಯಾವತ್ತು ಏನೇನು..? ವಿಶೇಷ ವರದಿ: ದಿವ್ಯಶ್ರೀ ದಾಸ್ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದಾಕ್ಷಣ ನೆನಪಾಗುವುದು ನಾಡ ಹಬ್ಬ ದಸರಾ. ಈ ಬಾರಿಯ ದಸರಾ ಸಂಭ್ರಮಾಚರಣೆಯನ್ನು ಬಹಳ ಅದ್ದೂರಿಯಾಗಿ ಮಾಡಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಮೈಸೂರು ದಸರಾ ಸ್ವಾಗತಕ್ಕೆ ಸಿದ್ಧವಾಗಿದೆ. ಮೈಸೂರಿನಲ್ಲಿ ದಸರಾ ಆಚರಣೆಗಳು ಗುರುವಾರ, 3 ನೇ ಅಕ್ಟೋಬರ್ 2024 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಅಂತಿಮ ದಿನ ವಿಜಯದಶಮಿಯು ಶನಿವಾರ , 12 ನೇ ಅಕ್ಟೋಬರ್ 2024 ರಂದು ನಡೆಯಲಿದೆ. ಜಂಬೂ ಸವಾರಿ ಮತ್ತು ಪಂಜಿನ ಮೆರವಣಿಗೆ, ಅಂತಿಮ ದಿನದ ದಸರಾದ ಎರಡು ಪ್ರಮುಖ ಆಕರ್ಷಣೆಗಳಾಗಿವೆ. ದಸರಾ ಸಂಭ್ರಮ ಕಣ್ಣು ತುಂಬಿಕೊಳ್ಳಲು ರಾಜ್ಯ, ದೇಶ, ವಿದೇಶಗಳಿಂದ ಲಕ್ಷ ಲಕ್ಷ ಜನ ಆಗಮಿಸಲಿದ್ದಾರೆ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರು! ಮೈಸೂರಿನ ರಾಜಮನೆತನದವರು ದಸರಾ ಸಂದರ್ಭದಲ್ಲಿ ವಿಶೇಷ…

Read More

ಸೌಮ್ಯ ಸ್ವಭಾವದ ಅಪ್ರತಿಮ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ * ಹೋರಾಟದ ಉರಿಯಲ್ಲಿ ಬೆಂದು ಪ್ರೌಢರಾದ ವೀರ * ಭಾರತೀಯ ಸಂಸ್ಕೃತಿಯ ಪ್ರತೀಕ: ನಮಸ್ತೆ ಶಾಸ್ತ್ರೀಜಿ NAMMUR EXPRESS NEWS ಸೌಮ್ಯ ಸ್ವಭಾವದ ಅಪ್ರತಿಮ ನಾಯಕ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ನಮನಗಳು. ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂದಿದ್ದು, ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಉಳಿದರು. ಬೆಳೆಯುತ್ತಿದ್ದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚತೊಡಗಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು.…

Read More

ಗಾಂಧಿಗೆ ನಮನ: ಗಾಂಧಿ ಶಾಂತಿ ನಾಯಕ! – ಸತ್ಯ, ಅಹಿಂಸೆಯ ಪ್ರತೀಕ – ಗಾಂಧಿ ನೆನೆಯೋಣ…ಅಕ್ಷರ ನಮನ NAMMUR EXPRESS NEWS ಸತ್ಯಾಗ್ರಹ ಮತ್ತು ಅಹಿಂಸೆ ಎಂಬ ಅಸ್ತ್ರಗಳಿಂದ ಭಾರತ ಮಾತೆಯ ದಾಸ್ಯ ಮುಕ್ತಿಗಾಗಿ ಸಮಸ್ತ ಭಾರತೀಯರನ್ನು ಒಗ್ಗೂಡಿಸಿ ಜಾಗತಿಕ ಮನ್ನಣೆ ಗಳಿಸಿದ, ಮಹಾನ್ ದಾರ್ಶನಿಕ, ಮಾನವತಾವಾದಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ಶ್ರೇಷ್ಠ ವ್ಯಕ್ತಿತ್ವದೊಂದಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಶಾಂತಿಯ ಮಾರ್ಗದಲ್ಲಿ ಮುನ್ನಡೆಸಿ ಬ್ರಿಟಿಷರು ಭಾರತವನ್ನು ತೊರೆಯಲು ಪ್ರಮುಖ ಕಾರಣವಾದರು. ಸತ್ಯವೇ ಜೀವನದ ಅಂತಿಮ ಗುರಿ ಮತ್ತು ಅಹಿಂಸೆ ಅದರ ಸಾಧನವಾಗಿದೆ ಎಂದು ಸಾರಿದ ಮಹಾತ್ಮ ಗಾಂಧಿಯವರು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜದಲ್ಲಿನ ಜಾತೀಯತೆ ಅಂತಹ ನೂರಾರು ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಹೋರಾಡಿದ ಮಹಾನ್ ಚೇತನ. ಪರಿಸರ ಸುಸ್ಥಿರತೆಗೆ ಮಹತ್ವದ ಕೊಡುಗೆ ನೀಡಿದ ಮಹಾತ್ಮ ಗಾಂಧಿಯವರು, ನವೀಕರಿಸಬಹುದಾದ ಶಕ್ತಿ ಮತ್ತು ಸಣ್ಣ-ಪ್ರಮಾಣದ ನೀರಾವರಿ ವ್ಯವಸ್ಥೆಗಳ ಉತ್ತೇಜನಗಳೊಂದಿಗೆ ಅತಿಯಾದ ದೊಡ್ಡ ಕೈಗಾರಿಕಾ ಅಭಿವೃದ್ಧಿಯ ವಿರುದ್ಧ ಅಭಿಯಾನಗಳನ್ನು…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ಮಹಾಲಯ ಅಮಾವಾಸ್ಯೆ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಇಂದು ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವುದು ಮುಖ್ಯ. ಆತ್ಮವಿಶ್ವಾಸ ತುಂಬಿದ್ದರೂ ತಾಳ್ಮೆಯ ಕೊರತೆ ಕಾಡುತ್ತದೆ. ಸಂಭಾಷಣೆಯಲ್ಲಿ ಜಾಗರೂಕರಾಗಿರಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಪೋಷಕರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ ** ವೃಷಭ ರಾಶಿ : ಇಂದು ಕುಟುಂಬದಲ್ಲಿ ಕೆಲವು ವಿಷಯಗಳ ಬಗ್ಗೆ ವಿವಾದಗಳು ಉಂಟಾಗಬಹುದು. ಅದು ಮನಸ್ಸಿಗೆ ತೊಂದರೆಯಾಗಬಹುದು. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಂದೆಯಿಂದ ಬೆಂಬಲ ಸಿಗಲಿದೆ. ಖರ್ಚು ಹೆಚ್ಚಾಗಲಿದೆ. ಕೆಲವು ದಿನಗಳವರೆಗೆ ಜೀವನದಲ್ಲಿ…

Read More

ಹೊಸದುರ್ಗವನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸುವ ಕನಸು! – 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ – ರಾಜಕಾರಣಕ್ಕೆ ಬಂದು ಭ್ರಷ್ಟಾಚಾರ ಮಾಡಲ್ಲ, ಉದ್ಯೋಗ ಸೃಷ್ಟಿ ಪ್ಲಾನ್ NAMMUR EXPRESS NEWS ಹೊಸದುರ್ಗ: ಹೊಸದುರ್ಗ ತಾಲ್ಲೂಕಿನಲ್ಲಿ ಕೈಗಾರಿಕಾ ಉದ್ದಿಮೆಗಳನ್ನ ಸ್ಥಾಪಿಸಿ ಯುವಕರಿಗೆ ಒಳ್ಳೆಯ ಉದ್ಯೋಗವಕಾಶ ಸಿಗುವಂತೆ ಮಾಡುವ ಕನಸು ನನ್ನದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದ್ದಾರೆ. ಹೊಸ ದುರ್ಗ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅಭಿಮಾನಿಗಳು ಆಯೋಜಿಸಿದ್ದ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ನನ್ನ ತಂದೆಯ ಊರು ಪಕ್ಕದ ತಾಲೂಕಿನ ಎನ್.ಜಿ.ಹಳ್ಳಿ. ಆದರೆ, ನನ್ನೆಲ್ಲಾ ಆಸ್ತಿ ಜಮೀನು, ತೋಟ, ಮನೆ ಎಲ್ಲ ಇರುವುದು ಹೊಸದುರ್ಗ ತಾಲೂಕಿನಲ್ಲಿಯೇ. ನಾನು ಹೊಸದುರ್ಗ ತಾಲ್ಲೂಕಿನ ವ್ಯಕ್ತಿಯೇ, ಹೊಸದುರ್ಗ ತಾಲೂಕಿನ ಬಗ್ಗೆ ನನಗೆ ವಿಶೇಷವಾದ ಕನಸಿದ್ದು, ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಹಾಗೂ ಮಾರ್ಗದರ್ಶನದ ಮೂಲಕ ಅಭಿವೃದ್ಧಿಪಡಿಸುವ ಕೆಲಸ ಮಾಡುವೆ ಎಂದರು. ನನ್ನ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ಎಂಬ…

Read More