ಪೊಲೀಸ್ ಇಲಾಖೆಗೆ ನೇರ ನೇಮಕಾತಿ4000 ಹುದ್ದೆಗಳು ಖಾಲಿ NAMMUR EXPRESSಶಿವಮೊಗ್ಗ: ಕರ್ನಾಟಕ ಪೋಲಿಸ್ ಇಲಾಖೆ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿಗೆ ಚಾಲನೆ ನೀಡಿದ್ದು, ಶಿವಮೊಗ್ಗ, ಮಂಗಳೂರು ನಗರ, ಉಡುಪಿ ಹಾಗೂ ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 4000 ಖಾಲಿ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿನಂತಿಸುತ್ತಿದ್ದೇವೆ. ಆಸಕ್ತ ಯುವಕರು/ಯುವತಿಯರು ಸರ್ಕಾರಿ ಉದ್ಯೋಗ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಇಲಾಖೆಗೆ ಸೇರಿಕೊಳ್ಳಲು ಇದು ಒಳ್ಳೆಯ ಅವಕಾಶ.ಅರ್ಹತೆ ಏನು?: ದ್ವಿತೀಯ ಪಿಯುಸಿ ಉತ್ತೀರ್ಣ.ಪುರುಷರು 168cm ಎತ್ತರ ಇರಬೇಕು. ಮಹಿಳೆಯರು 157cm ಎತ್ತರ ಇರಬೇಕುವೇತನ: 23500-47650 ರೂ. ಅಂದರೆ ಸುಮಾರು 34000 ರೂ.ವೇತನ.ಹುದ್ದೆಗಳು: 4000ವಯೋಮಿತಿ: ಕನಿಷ್ಟ 19ವರ್ಷಗರಿಷ್ಟ -ಸಾಮಾನ್ಯ ವರ್ಗ 25 ವರ್ಷ. SC /ST/ OBC-27 ವರ್ಷ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021.ಬೇಕಾಗುವ ದಾಖಲೆ1.SSLC ಮಾರ್ಕ್ ಕಾರ್ಡ್2.ಪಿಯುಸಿ ಮಾರ್ಕ್ ಕಾರ್ಡ್3.ಆಧಾರ್ ಕಾರ್ಡ್4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ5.ಕನ್ನಡ ಮಾಧ್ಯಮ6.ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ ನಾಲ್ಕುಪಾಸ್ಪೋರ್ಟ್…
Author: Nammur Express Admin
ಮತ್ತೆ ಮರೆಯುತ್ತಾರಾ ಜನ ಕರೋನಾ ನಿಯಮಎಲ್ಲಿ ಎಷ್ಟೆಷ್ಟು ಕೇಸ್.. ಏನಾಗುತ್ತೆ ಬಂದ್..?ಕಳ್ಳರು ಕತ್ತು ಹಿಸುಕಿದ್ದ ಅಜ್ಜಿ ನಿಧನ NAMMUR EXPRESSಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 494 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು 9 ಮಂದಿ ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5905 ಆಗಿದೆ. ಶಿವಮೊಗ್ಗದಲ್ಲಿ ಶೇ.13ರಷ್ಟು ಪಾಸಿಟಿವಿಟಿ ದರ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 888ಕ್ಕೇರಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ 27 ಮಂದಿಗೆ ಸೋಂಕು ಧೃಡಪಟ್ಟಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ತಿಳಿಸಿದೆ.ಯಾವ ತಾಲೂಕು ಎಷ್ಟು?!: ಶಿವಮೊಗ್ಗ 17, ಭದ್ರಾವತಿ 112, ಶಿಕಾರಿಪುರ 52, ತೀರ್ಥಹಳ್ಳಿ 37, ಸೊರಬ 30, ಹೊಸನಗರ 32, ಸಾಗರ 47, ಇತರೆ ಜಿಲ್ಲೆ 14 ಕೇಸ್ ಇದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ 339 ಮಂದಿಗೆ ಕರೋನಾ ಸೋಂಕು ತಗುಲಿದೆ.ಚಿಕ್ಕಮಗಳೂರು 68, ಕಡೂರು 94, ತರೀಕೆರೆ 101, ಎನ್. ಆರ್. ಪುರ 12, ಮೂಡಿಗೆರೆ 32, ಕೊಪ್ಪ 15, ಶೃಂಗೇರಿ 17 ಪ್ರಕರಣಗಳಿವೆ. 669 ಮಂದಿ…
ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ದುರಂತದ ಸಾವುಮೈಮೇಲೆ ಬಿದ್ದ ಇಲಿ: ಹೆದರಿ ಹೃದಯಾಘಾತಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಶಕುಂತಲಾ NAMMUR EXPRESSತೀರ್ಥಹಳ್ಳಿ: ಮನೆಯ ಮಹಡಿಯ ಮೇಲಿಂದ ಇಲಿಯೊಂದು ಮೈಮೇಲೆ ಬಿದ್ದು ಕಚ್ಚಿದ ಕಾರಣ ಗಾಬರಿಗೊಂಡ ಪರಿಣಾಮ ಮಹಿಳೆಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆದಿದೆ.ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರುವಳ್ಳಿ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯಲ್ಲಿ ವಾಸವಾಗಿದ್ದ ಶಕುಂತಲಾ( 52) ಎಂಬಾಕೆ ಬೆಳಿಗ್ಗೆ ಮನೆಯಲ್ಲಿ ಇದ್ದಾಗ ಇಲಿಯೊಂದು ಮಹಡಿಯಿಂದ ಮೈ ಮೇಲೆ ಬಿದ್ದು ಕಚ್ಚಿದೆ. ಇದರಿಂದ ಗಾಬರಿಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯೆಯಾಗಿದ್ದು, ತಮ್ಮ ಮೃದು ಸ್ವಭಾವದಿಂದ ಜನಮನ್ನಣೆ ಗಳಿಸಿದ್ದರು. ಸಾಮಾಜಿಕ ಕಳಕಳಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಕಾರು ಚಾಲಕರಾಗಿರುವ ಚಂದ್ರಕಾಂತ್‌ರವರ ಸಹೋದರಿಯಾಗಿದ್ದು ಓರ್ವ ಪುತ್ರ ಹಾಗೂ ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಕರವೇ ನಾಯಕರ ಕಂಬನಿ: ಕರವೇ ಜಿಲ್ಲಾಧ್ಯಕ್ಷರಾದ ಪಟೇಲ್…
ಶಿವಮೊಗ್ಗದಿಂದ ಕಳ್ಳತನಕ್ಕೆ ತೀರ್ಥಹಳ್ಳಿಗೆ ಬಂದರುವೃದ್ದೆ ಸ್ಥಿತಿ ಗಂಭೀರ: ಓರ್ವನನ್ನು ಹಿಡಿದ ಸ್ಥಳೀಯರುತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಬಳಿ ಘಟನೆಮದ್ಯ ಮಾರಾಟ ಮಾಡುತ್ತಿದ್ದಳೇ ಅಜ್ಜಿ..? NAMMUR EXPRESSತೀರ್ಥಹಳ್ಳಿ: ಅಂಚೆ ಕಚೇರಿಯಿಂದ ಬರುತ್ತಿದ್ದ ವೇಳೆ ಮನೆಯ ಬಳಿ ಬೈಕಲ್ಲಿ ಬಂದ ಕಳ್ಳರಿಬ್ಬರು ಆಕೆಯ ಕತ್ತು ಹಿಸುಕಿ ಹಣ ಕಸಿದು ಪರಾರಿಯಾಗುವ ಯತ್ನ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಬಳಿ ಗಣಪತಿಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಅಜ್ಜಿ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕಟ್ಟೆಹಕ್ಲು ಗಣಪತಿ ದೇವಸ್ಥಾನದ ಎದುರು ವಾಸವಾಗಿರುವ ವೃದ್ಧೆ ಭವಾನಿಯಮ್ಮ(85) ಅಂಚೆ ಕಛೇರಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ ಇಬ್ಬರು ಕಳ್ಳರು ಬೈಕ್ನಲ್ಲಿ ಇಬ್ಬರು ಅಡ್ಡಹಾಕಿ ಕುತ್ತಿಗೆ ಹಿಸುಕಿದ್ದಾರೆ. ಈ ವೇಳೆ ಸ್ಥಳೀಯರು ನೋಡಿ ಕೂಗಿಕೊಂಡಾಗ ಓರ್ವ ಬೈಕಲ್ಲಿ ಪರಾರಿಯಾಗಿದ್ದಾನೆ. ಇನ್ನೋರ್ವ ಓಡಿ ಹೋಗಿದ್ದು, ಹೆರಂಬಾಪುರ ಬಳಿ ಸ್ಥಳೀಯರು ಸೇರಿ ಚೇಸ್ ಮಾಡಿ ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ನಿತಿನ್ (36) ಶಿವಮೊಗ್ಗದ ಗೋಪಾಳದವನು. ಇನ್ನೊರ್ವ ಎಲ್ಲಿಯವನು ಎಂದು ತನಿಖೆ ನಡೆಯುತ್ತಿದೆ.…
ಕರೋನಾ ಸೇವೆಗೆ ಸತೀಶ್ ಶೆಟ್ಟಿ, ಶ್ರೀಪತಿ ಹೊಸ ಪ್ಲಾನ್ನೂರಾರು ಜನರಿಗೆ ಆನ್ಲೈನ್ ಸೇವೆ: ಜನರ ಮೆಚ್ಚುಗೆ NAMMUR EXPRESSತೀರ್ಥಹಳ್ಳಿ: ಸರಕಾರ ಕರೋನಾ ತುರ್ತು ವೇಳೆ ಘೋಷಣೆ ಮಾಡಿರುವ ಹಲವು ಅನುದಾನ, ಸಹಾಯ ಧನ ಪಡೆಯಲು ಗ್ರಾಮೀಣ ಭಾಗದ ಜನ ಮತ್ತು ಅವಿದ್ಯಾವಂತರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ತೀರ್ಥಹಳ್ಳಿಯ ಯುವ ಉದ್ಯಮಿಗಳಾದ ಸತೀಶ್ ಶೆಟ್ಟಿ(sms), ಶ್ರೀಪತಿ ಮತ್ತು ತಂಡ ಎಲ್ಲಾ ಜನತೆಗೆ ಉಚಿತ ಆನ್ಲೈನ್ ಸೇವೆ ನೀಡುತ್ತಿದೆ.ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣ ಸಮೀಪದ ಕಾರ್ ನಿಲ್ದಾಣದಲ್ಲಿ ತೆರೆಯಲಾಗಿರುವ ಆನ್ಲೈನ್ ಸೆಂಟರ್ ಅಲ್ಲಿ ಸರಕಾರದ ಸೇವಾ ಸಿಂಧು ಪೋರ್ಟಲ್ ಅಡಿ ಬರುವ ಎಲ್ಲಾ ಸೇವೆಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತಿದೆ. ಆಟೋ, ಟ್ಯಾಕ್ಸಿ ಚಾಲಕರ ಸಹಾಯ ಧನ, ತರಕಾರಿ ಮಾರಾಟಗಾರರು, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿ ಸರಕಾರ ಘೋಷಣೆ ಮಾಡಿರುವ ಎಲ್ಲಾ ಜನತೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವ ಕೆಲಸವನ್ನು ಈ ಯುವಕರು ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಜ್ಞಾನವನ್ನು ಕರೋನಾ ಸೇವೆಗೆ ಬಳಸಿದ್ದಾರೆ.ಪ್ರತಿ ದಿನ…
ಪಾನ್-ಆಧಾರ್ ಲಿಂಕ್: ಎಸ್ಬಿಐ ಹೊಸ ನಿಯಮಟ್ಯಾಕ್ಸ್ ಪಾವತಿಗೆ ಹೊಸ ವೆಬ್: ಸಂಪೂರ್ಣ ಮಾಹಿತಿ! NAMMUR EXPRESS BUSINESSಬೆಂಗಳೂರು: ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವ ಸೂಚನೆ ನೀಡಿದ್ದು, ಜುಲೈ 1ರಿಂದ ಸಂಸ್ಥೆಯ ಐಎಫ್ಎಸ್‌ಸಿ ಕೋಡ್ ಬದಲಾಗಲಿದೆ. ಹೊಸ ಕೋಡ್ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದೆ.ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ. ಎಸ್ಬಿಐ ಕೂಡ ಹೊಸ ನಿಯಮ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಜೂನ್ 30ರೊಳಗೆ ಆಧರ್ ಕಾರ್ಡ್‌ಗಳೊಂದಿಗೆ ತಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ನವೀಕರಿಸಲು ತಿಳಿಸಿದೆ.ಪ್ಯಾನ್ ನಿಷ್ಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗುವುದು ಮತ್ತು…
ಕರೋನಾ ನಡುವೆ ವೇಗ, ಮಳೆ ಕಾರಣ ಆಕ್ಸಿಡೆಂಟ್ಆಗುಂಬೆ ಘಾಟಿಯಲ್ಲಿ ಪಲ್ಟಿ ಹೊಡೆದ ಲಾರಿ15 ಲಕ್ಷ ಮೌಲ್ಯದ ಬ್ಯಾಟರಿ ಹಾಳುಮಂಡಗದ್ದೆಯಲ್ಲಿ ವೇಗಕ್ಕೆ ಬೈಕ್ ಬಲಿ! NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಅತೀ ವೇಗ ಕಾರಣ ಎನ್ನಲಾಗಿದೆ.ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ತಿರುವಿನಲ್ಲಿ ಬ್ಯಾಟರಿ ತುಂಬಿದ್ದ ಲಾರಿ ಪಲ್ಟಿ ಹೊಡೆದ ಕಾರಣ ಚಾಲಕ,ಕ್ಲಿನರ್ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಲಾರಿ ಪುಡಿ ಪುಡಿಯಾಗಿದ್ದು, ಅದರಲ್ಲಿದ್ದ 13 ಲಕ್ಷ ಮೌಲ್ಯದ ಬ್ಯಾಟರಿ ಹಾನಿಯಾಗಿದೆ. ಮಂಗಳೂರಿನಿಂದ ಬ್ಯಾಟರಿಗಳನ್ನು ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ 7 ಮತ್ತು 8ನೇ ತಿರುವಲ್ಲಿ ಪಲ್ಟಿ ಹೊಡೆದಿದೆ. ಲಾರಿ ಸಂಪೂರ್ಣವಾಗಿ ಜಖಂ ಆಗಿದ್ದು ಎಲ್ಲಾ ಕಡೆ ಬ್ಯಾಟರಿಗಳು ಬಿದ್ದಿವೆ. ಚಾಲಕ ಹಾಗೂ ಕ್ಲಿನರ್ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಗುಂಬೆ ಪೊಲೀಸ್ ಸ್ಥಳಕ್ಕೆ ಬಂದು ಮಹಜರು ಮಾಡಿ ಚಾಲಕರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಆಂಧ್ರ ಪ್ರದೇಶ ಮೂಲದ ಲಾರಿ ಎನ್ನಲಾಗಿದೆ.ಮಂಡಗದ್ದೆ ಬಳಿ ಬೈಕ್…
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವುಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ NAMMUR EXPRESSಬೆಂಗಳೂರು: ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಸಿಎಂ ಉದಾಸಿ(81) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಉದಾಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾನಗಲ್‍ನಲ್ಲಿ ಬುಧವಾರ ಉದಾಸಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಉದಾಸಿ ಅವರ ಆರೋಗ್ಯ ವಿಚಾರಿಸಿದ್ದರು. ಸಿ.ಎಂ.ಉದಾಸಿಯವರು ಸಜ್ಜನ ಹಾಗೂ ಕ್ರಿಯಾಶೀಲ ರಾಜಕಾರಣಿ. ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಆ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಸಂಸದರಾಗಿದ್ದಾರೆ. ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ,…
ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವುಜನರಿಗೆ ಧೈರ್ಯ ತುಂಬಿದ್ದ ಶ್ರೀಗಳು ಇನ್ನಿಲ್ಲಮಠದಲ್ಲೇ ಅಂತಿಮ ಸಂಸ್ಕಾರ ಸಾಧ್ಯತೆ? NAMMUR EXPRESSತೀರ್ಥಹಳ್ಳಿ: ಭುವನಗಿರಿ ಸಂಸ್ಥಾನ ಕವಲೆದುರ್ಗದ ಡಾ. ಶ್ರೀ ಸಿದ್ದಗಂಗಾ ಶಿವಾಚಾರ್ಯ ಸ್ವಾಮೀಜಿ ಕರೋನಾಕ್ಕೆ ಬಲಿಯಾಗಿದ್ದಾರೆ.ಕೆಲವು ದಿನಗಳ ಹಿಂದೆ ಶೀತ ಸುಸ್ತು ಕಾರಣ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಬಳಿಕ ಅವರಿಗೆ ಪಾಸಿಟಿವ್ ದೃಢವಾಗಿತ್ತು. ಅವರ ಶ್ವಾಸಕೋಶ ಸಂಪೂರ್ಣ ಹಾನಿಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ 2 ದಿನಗಳ ಹಿಂದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕಳೆದ ಒಂದು ವಾರದ ಹಿಂದೆ ಹಳ್ಳಿಗೆ ಹೋಗಿದ್ದೆ ಎಂದು ಮಾಹಿತಿ ನೀಡಿರುವ ಶ್ರೀಗಳು ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಸಿಬ್ಬಂದಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮಾನವೀಯತೆ ಮೆರೆದ ಶ್ರೀಗಳು!: ಕರೋನಾ ಸೋಂಕು ಬಂದ ತಕ್ಷಣ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ ತಮ್ಮ ಜತೆ ಇದ್ದ ಓರ್ವ ಶಿಷ್ಯನ ಮನೆ ಸೀಲ್ ಡೌನ್ ಮಾಡಿದ್ದು, ಅವರ ಕುಟುಂಬಕ್ಕೆ ಶ್ರೀಗಳು 15 ಸಾವಿರ ಧನ…
ತೀರ್ಥಹಳ್ಳಿ ಆಡಳಿತಕ್ಕೆ ಮದ್ಯ ಮಾರಾಟಗಾರರ ಸಾಥ್ಡಿಸಿ ಜತೆ ಮೀಟಿಂಗ್: ಸಭೆಯಲ್ಲಿ ನಿರ್ಧಾರ..?ಸರಕಾರದ ನಿಯಮದಿಂದ ಮಾರಾಟಗಾರರು ಇಕ್ಕಟ್ಟು! NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕರೋನಾ ಲಾಕ್ ಡೌನ್ ಮುಗಿಯುವವರೆಗೆ ಮದ್ಯದ ಅಂಗಡಿ ತೆರೆಯಲ್ಲ ಎಂದು ತೀರ್ಥಹಳ್ಳಿ ತಾಲೂಕು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಆದರೆ ಆಡಳಿತ ಈ ಬಗ್ಗೆ ಒಪ್ಪಿಗೆ ಕೊಟ್ಟಿಲ್ಲ.ಶಿವಮೊಗ್ಗ ಜಿಲ್ಲಾಧಿಕಾರಿಗಳು ತೀರ್ಥಹಳ್ಳಿಗೆ ಭೇಟಿ ನೀಡಿದ್ದು ಈ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.ತೀರ್ಥಹಳ್ಳಿ ತಾಲೂಕಿನಲ್ಲಿ ಕರೋನಾ ಹರಡುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ತಾಲ್ಲೂಕಿನ ಜನರ ಆರೋಗ್ಯದ ಬಗೆಗಿನ ಕಾಳಜಿ ಮತ್ತ ಕಳಕಳಿಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮದ್ಯದಂಗಡಿ ಗಳನ್ನು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ತಾಲೂಕು ಆಡಳಿತಕ್ಕೆ ಮದ್ಯ ಮಾರಾಟಗಾರರಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ.ಶಾಸಕ ಆರಗ ಜ್ಞಾನೇಂದ್ರ ಮತ್ತು ತಹಶೀಲ್ದಾರ್ ಹಾಗೂ ಎಲ್ಲಾ ಎಲ್ಲಾ ಇಲಾಖೆಯ ಸರ್ಕಾರಿ…