Author: Nammur Express Admin

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕರ ಅಗ್ರಹಸರಕಾರದ ವಿರುದ್ಧ ಮಂಜುನಾಥ ಗೌಡ ಆಕ್ರೋಶ NAMMUR EXPRESSತೀರ್ಥಹಳ್ಳಿ: ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಇದೀಗ ಹೋರಾಟ ಶುರು ಮಾಡಿದ್ದಾರೆ.ಜನತೆಗೆ ಲಸಿಕೆ ನೀಡುವಂತೆ ಕಾಂಗ್ರೆಸ್ ಎಲ್ಲಾ ತಾಲೂಕಲ್ಲಿ ಮನವಿ ಅಭಿಯಾನ ಶುರು ಮಾಡಿದ್ದು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ನಾಯಕ ಡಾ.ಆರ್.ಎಂ. ಮಂಜುನಾಥ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ತಾಲೂಕು ಕಚೇರಿ ಮುಂದೆ ಸೇರಿದ ಕಾಂಗ್ರೆಸ್ ನಾಯಕರು ತಾಲೂಕಿನ ಎಲ್ಲಾ ಜನತೆಗೆ ಲಸಿಕೆ ನೀಡುವಂತೆ ಒತ್ತಾಯಿಸಿದರು. ಡಾ.ಆರ್.ಎಂ.ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬರಾಘವೇಂದ್ರ,ಹಿರಿಯ ಕಾಂಗ್ರೆಸ್ ಮುಖಂಡರಾದ ಹಾರೋಗೊಳಿಗೆ ಪದ್ಮನಾಭ, ಬಾಳೆಹಳ್ಳಿ ಪ್ರಭಾಕರ್, ಕೆಳಕೆರೆ ದಿವಾಕರ್,ಬಿ.ಎಸ್ ಯಲ್ಲಪ್ಪ, ಡಿ.ಎಸ್.ವಿಶ್ವನಾಥ್ ಶೆಟ್ಟಿ, ಗಣಪತಿ, ಸುಶೀಲಾ ಶೆಟ್ಟಿ, ನಾಗರಾಜ್ ಪೂಜಾರಿ ಸೇರಿದಂತೆ ಪಟ್ಟಣ ಪಂಚಾಯ್ತಿ ಹಾಲಿ, ಮಾಜಿ ಸದಸ್ಯರು, ಎಲ್ಲಾ ಚುನಾಯಿತ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್…

Read More

ಪ್ರಥಮ ಪಿಯುಸಿ ಆಧಾರದ ಮೇಲೆ ಫಲಿತಾಂಶಜುಲೈ ಅಂತ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ!ರಾಜ್ಯ ಸರಕಾರದ ಮಹತ್ವದ ಘೋಷಣೆ NAMMUR EXPRESSಬೆಂಗಳೂರು: ರಾಜ್ಯದಲ್ಲಿ ದ್ವಿತೀಯ PUC ಪರೀಕ್ಷೆ ರದ್ದು ಮಾಡಲಾಗಿದೆ. ಆದ್ರೆ SSLC ವಿದ್ಯಾರ್ಥಿಗಳಿಗೆ ಎಕ್ಸಾಂ ಇರುತ್ತೆ. ಜುಲೈ ಅಂತ್ಯದಲ್ಲಿ ಪರೀಕ್ಷೆ ನಡೆಯುತ್ತೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಹೇಳಿದ್ದಾರೆ.ಗ್ರೇಡ್ ಆಧಾರದ ಮೇಲೆ ಪಾಸ್ ಮಾಡಲು ನಿರ್ಧಾರ ಮಾಡಲಾಗಿದೆ. ಕರೋನಾ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಮಾಡಲಾಗಿದೆ.ಕಳೆದ ವರ್ಷದ ಕರೋನಾ ನಡುವೆ ಮೊದಲ ಪಿಯುಸಿ ಪರೀಕ್ಷೆ ಎದುರಿಸಿ ಜಿಲ್ಲಾ ಮಟ್ಟದಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಕೊಡಲು ತಯಾರಿ ನಡೆಸಲಾಗಿದೆ.ಪರೀಕ್ಷೆ ಹೇಗಿರುತ್ತೆ?: ಶಿಕ್ಷಣ ಸಚಿವರಾದ ಎಸ್​.ಸುರೇಶ್​ ಕುಮಾರ್​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಕೇಂದ್ರ ಸರ್ಕಾರ ಈಗಾಗಲೇ ಸಿಬಿಎಸ್​ಇ ಹಾಗೂ ಐಸಿಎಸ್​ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಹೀಗಾಗಿ ರಾಜ್ಯದಲ್ಲೂ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿ ಎಂಬ ಮನವಿಗಳು ಕೇಳಿ ಬಂದಿದ್ದವು. ಈ…

Read More

ಕೊಪ್ಪದ ಕುಂಚೂರು ಹರೀಶ್ ಚಿಕ್ಕಮಗಳೂರಲ್ಲಿ ಸಾವುಭದ್ರಾವತಿ ಹೆಚ್ಚು, ತೀರ್ಥಹಳ್ಳಿಯಲ್ಲಿ ಕಡಿಮೆ ಕೇಸ್ಲಾಕ್ ಇದ್ರೂ ಕಾಫಿ ನಾಡಲ್ಲಿ ಹೆಚ್ಚುತ್ತಿದೆ ಕರೋನಾ! NAMMUR EXPRESSಮಲೆನಾಡು: ಮಲೆನಾಡಿನ ಖ್ಯಾತ ಜಾನಪದ ಕಲಾವಿದ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೊಪ್ಪ, ಮಲೆನಾಡು ಹೆಸರನ್ನು ಬೆಳಗಿಸಿದ್ದ ಕುಂಚೂರು ಹರೀಶ್ ಕರೋನಾಗೆ ಬಲಿಯಾಗಿದ್ದಾರೆ.ಕೊಪ್ಪ ತಾಲೂಕಿನ ಕುಂಚೂರಿನ ಹರೀಶ್(45) ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದ್ರೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ನೂರಾರು ಯುವ ಜನ ಮೇಳ, ಸ್ಪರ್ಧೆ, ಹಬ್ಬ, ಉತ್ಸವಗಳಲ್ಲಿ ಇವರ ದನಿ ಹೆಸರು ಮಾಡಿತ್ತು. ಪತ್ನಿ, ಇಬ್ಬರು ಪುತ್ರಿ ಸೇರಿ ಅಪಾರ ಅಭಿಮಾನಿಗಳನ್ನು ಅವರು ಆಗಲಿದ್ದಾರೆ.ಜಾನಪದ ಗೀತೆ, ಲಾವಣಿ, ಗೀಗಿ ಪದ, ಗಾಯನದಲ್ಲಿ ಹೆಸರು ಮಾಡಿದ್ದ ಹರೀಶ್ ಅವರನ್ನು ಸರಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು. ಗುರುವಾರ ಸಂಜೆ ಕರೋನಾ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಯಿತು.ಸಂತಾಪ: ಶೃಂಗೇರಿ ಶಾಸಕ ರಾಜೇಗೌಡ, ನಾಯಕ ಸುಧೀರ್ ಕುಮಾರ್ ಮುರೊಳ್ಳಿ, ಪತ್ರಕರ್ತ ರವಿಕಾಂತ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.ನಮ್ಮೂರ್ ಎಕ್ಸ್ಪ್ರೆಸ್ ಮಾರ್ಗದರ್ಶಕರೂ ಆಗಿದ್ದ ಹರೀಶ್ ಅವರ…

Read More

ಸರಕಾರದ ಘೋಷಣೆ ಡೀಟೇಲ್ಸ್ NAMMUR EXPRESSಬೆಂಗಳೂರು: ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಈಗಾಗಲೇ ಪರಿಹಾರದ ಪ್ಯಾಕೇಜ್‍ನ್ನು ನಮ್ಮ ಸರ್ಕಾರ ಘೋಷಣೆ ಮಾಡಿರುತ್ತದೆ.ಇದಲ್ಲದೇ ಕಠಿಣ ನಿರ್ಬಂಧಗಳಜಾರಿಯಿಂದ ತೊಂದರೆಗೀಡಾಗಿರುವ ಬೇರೆ ಬೇರೆ ವರ್ಗದವರಿಂದಲೂ ಕೂಡ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತನದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಈ ಕೆಳಗಿನ ಪರಿಹಾರವನ್ನು ನಾನು ಘೋಷಣೆ ಮಾಡುತ್ತಾ ಇದ್ದೇನೆ. ಪವರ್ ಲೂಮ್ ನೇಕಾರರು ಪ್ರತಿ ಪವರ್ ಲೂಮ್‍ಗೆ ಇಬ್ಬರು ಕೆಲಸಗಾರರಿಗೆ ಮೀರದಂತೆ ತಲಾ ರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 59 ಸಾವಿರ ಪವರ್ ಲೂಮ್‍ಗಳಿಗೆ 35 ಕೋಟಿ ವೆಚ್ಚವಾಗಲಿದೆ. ಚಲನಚಿತ್ರ ಮತ್ತುದೂರದರ್ಶನ ಮಾಧ್ಯಮದಲ್ಲಿನಅಸಂಘಟಿತಕಾರ್ಮಿಕರು ಚಲನಚಿತ್ರೋದ್ಯಮ ಹಾಗೂ ದೂರದರ್ಶನ ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ (ಕಲಾವಿದರು, ತಂತ್ರಜ್ಞರು) ತಲಾರೂ 3,000ದಂತೆ ಪರಿಹಾರ ನೀಡಲು ನಿರ್ಧರಿಸಿದೆ. ಇದರಿಂದ ಸುಮಾರು 22 ಸಾವಿರ ನೋಂದಾಯಿತ ಕಾರ್ಮಿಕರಿಗೆ ಅನುಕೂಲವಾಗಲಿದ್ದು…

Read More

-10ಕೋಟಿ ರೂ ಬಿಡುಗಡೆಸಚಿವ ಬಿ.ಶ್ರೀರಾಮುಲು ಸಾಥ್ NAMMUR EXPRESSಬೆಂಗಳೂರು: ಮಹಾಮಾರಿ ಕೊರೊನಾ ರೋಗವನ್ನು ನಿಯಂತ್ರಣಗೊಳಿಸಲು ಎರಡನೇ ಬಾರಿಗೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಬದಿ, ಹೋಟೆಲ್ , ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ಚರ್ಮಗಾರಿಕೆಯಲ್ಲಿ ತೊಡಗಿಸಿಕೊಂಡು ಪಾದರಕ್ಷೆ ಮತ್ತಿತರ ಚರ್ಮ ವಸ್ತುಗಳ ದುರಸ್ತಿ, ಪಾಲಿಷ್ ಮಾಡುವ ಕಾಯಕದಲ್ಲಿ ತೊಡಗಿರುವ 50,000 ಚರ್ಮ ಕುಶಲಕರ್ಮಿಗಳೂ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಾತ್ಕಾಲಿಕ ಪರಿಹಾರವಾಗಿ ಈ ಕುಟುಂಬಗಳಿಗೆ ತಲಾ ಎರಡು ಸಾವಿರ ರೂ ಆರ್ಥಿಕ ನೆರವು ನೀಡಲು 10 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಪರಿಹಾರಧನ ನೀಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಸಮಾಜ ಕಲ್ಯಾಣಇಲಾಖೆ ಸಚಿವರಾದ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ. ಚರ್ಮ ಕುಶಲಕರ್ಮಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವಂತೆ ತಾವು ಸಲ್ಲಿಸಿದ ಪ್ರಸ್ತಾವನೆಯನ್ನು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ, ಅನುಮೋದನೆ ನೀಡಿ ನೆರವಾಗಲು ಅನುದಾನವನ್ನೂ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳಿಗೆ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ಶ್ರೀರಾಮುಲು ಅವರು…

Read More

ಸಚಿವ ಅರವಿಂದ ಲಿಂಬಾವಳಿ ಅವರಿಂದ ಲೋಕಾರ್ಪಣೆ NAMMUR EXPRESSಬೆಂಗಳೂರು: ಕೋವಿಡ್ ಸೊಂಕಿತರಿಗೆ ಇನ್ನು ಮುಂದೆ ಭೌತಿಕ ತಪಾಸಣಾ ಕೇಂದ್ರಗಳಿಂದ ಅಂದರೆ ಟ್ರಯಾಜಿಂಗ್ ಕೇಂದ್ರ ಗಳಿಂದ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ನೇರವಾಗಿ ಕಾಯ್ದಿರಿಸುವ ಸೌಲಭ್ಯವನ್ನ ಕಲ್ಪಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಈ ಸಂಬಂಧ ಸಿದ್ಧಪಡಿಸಿರುವ ಹೊಸ ತಂತ್ರಾಂಶವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಸಂಸದ ತೇಜಸ್ವಿ ಸೂರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ತಂತ್ರಾಂಶ ಸಿದ್ಧಪಡಿಸುವಲ್ಲಿ ವಿಶೇಷ ಆಸಕ್ತಿ ತೋರಿಸಿದ ತೇಜಸ್ವಿ ಸೂರ್ಯ ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ಸಚಿವ ಅರವಿಂದ ಲಿಂಬಾವಳಿ, ಇತ್ತೀಚೆಗೆ ಟ್ರಯಾಜ್ ಮಾಡುತ್ತಿರುವ ಎಲ್ಲಾ ಕೋವಿಡ್ ಸೋಂಕಿತರಿಗೆ ಹೋಮ್ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಮತ್ತು ಆಸ್ಪತ್ರೆಗೆ ವಲಯಗಳ ನಿಯಂತ್ರಣ ಕೊಠಡಿಗಳು ಹಾಗೂ ಬಿಬಿಎಂಪಿಯ ಕೇಂದ್ರ ವಾರ್ ರೂಂನಲ್ಲಿರುವ…

Read More

209 ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಲ್ಲಿ ಶಾಶ್ವತ ಪರಿಹಾರ ರೂಪಿಸಲು ನಿರ್ದೇಶನ ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರು ನಗರದಲ್ಲಿ ಮಳೆ ವಿಕೋಪ ತಡೆಯಲು ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ದಿನದ 24 ಗಂಟೆಯೂ ಈ ನಿಯಂತ್ರಣಕೊಠಡಿಗಳು ಕಾರ್ಯನಿರ್ವಹಿಸಲಿದ್ದು, ಅನ್-ಸ್ಕಿಲ್ಡ್ ಕೂಲಿಗಳು, ಮೇಲ್ವಿಚಾರಕರು, ಮತ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುತ್ತಿದೆ. ರಸ್ತೆ ಬದಿ ಮಳೆನೀರು ಚರಂಡಿಗಳ ಹೂಳು ತೆರವುಗೊಳಿಸುವುದು, ಅಡ್ಡಮೋರಿಗಳ ಹೂಳು ತೆಗೆಯುವುದು, ರಾಜ ಕಾಲುವೆಗೆ ಸಂಪರ್ಕಿಸುವ ಚರಂಡಿಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಲು ಕ್ರಮ ವಹಿಸಲಾಗಿದೆ. ದೊಡ್ಡ ಕಾಲುವೆಗಳಲ್ಲಿ 26 ವಾಟರ್ ಲೆವೆಲ್ ಸೆನ್ಸರ್ ಗಳನ್ನು ಅಳವಡಿಸಲಾಗಿದೆ. ಬೆಂಗಳೂರು ಮೇಘ ಸಂದೇಶ ಆಪ್ ನಲ್ಲಿ ಮಳೆಯ ಪ್ರಮಾಣದ ಮಾಹಿತಿ ಲಭ್ಯ. ನೀರು ಸಂಗ್ರಹವಾಗಿರುವ ಸ್ಥಳಗಳು, ಜನರಿಗೆ ಸುರಕ್ಷಿತ ಮಾರ್ಗ ಬಳಕೆಯ ಕುರಿತು ಮಾಹಿತಿ ನೀಡುತ್ತದೆ. 209…

Read More

ಇನ್ನು ಮನೆ, ಕಚೇರಿ ಅಡ್ವಾನ್ಸ್ ಹಣ ಕಡಿಮೆಬಾಡಿಗೆ ಮನೆಗೆ 2 ತಿಂಗಳು, ವಾಣಿಜ್ಯಕ್ಕೆ 6 ತಿಂಗಳ ಹಣಜಾಗದ ಮಾಲೀಕ ಕಿರಿಕಿರಿ ಮಾಡಿದ್ರೆ ಕ್ರಮ ನವದೆಹಲಿ: ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ರೂಪಿಸಲಾಗಿದೆ. ಮನೆ ಬಾಡಿಗೆಗೆ 2 ತಿಂಗಳ ಬಾಡಿಗೆ ಅಡ್ವಾನ್ಸ್, ವಾಣಿಜ್ಯ ಕಾರಣಕ್ಕೆ 6 ತಿಂಗಳ ಬಾಡಿಗೆ ಹಣ ಅಡ್ವಾನ್ಸ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.ಮಾದರಿ ಬಾಡಿಗೆ ಕಾಯ್ದೆ ರೂಪಿಸಿದ್ದು, ಕರೋನಾ ತುರ್ತು ಪರಿಸ್ಥಿತಿ ಕಷ್ಟದ ಕಾರಣ ಖಾಸಗಿ ವಲಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಲಾಗಿದೆ.ಬಾಡಿಗೆ ಮನೆ ಮಾಲೀಕರು ಇನ್ನು ಮುಂದೆ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡ ಪಡೆಯಬೇಕಿದೆ. ಬಾಡಿಗೆ ಪ್ರಾಧಿಕಾರ ರಚನೆ ಮಾಡಲಿದ್ದು, ಮನೆ ಮತ್ತು ವಾಣಿಜ್ಯ ಕಟ್ಟಡ ಬಾಡಿಗೆ ಒಪ್ಪಂದಗಳನ್ನು ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರ ಎಲ್ಲಾ ವ್ಯಾಜ್ಯಗಳ ಇತ್ಯರ್ಥಕ್ಕೆ ವ್ಯವಸ್ಥೆ ಕಲ್ಪಿಸುತ್ತದೆ. ಈ ಮೂಲಕ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ. ಬಾಡಿಗೆ ಒಪ್ಪಂದ ಮುಗಿದ ನಂತರ ಮನೆ ಖಾಲಿ ಮಾಡದಿದ್ದರೆ ಮನೆ ಮಾಲೀಕರು…

Read More

ಕರೋನಾ ತುರ್ತು ವೇಳೆ ಅಧಿಕಾರಿಗಳ ದಾಳಿ2 ಕಡೆ ಮದ್ಯ ವಶ: ಮದ್ಯ ಮಾರಿದ್ರೆ ಹುಷಾರ್ಹಳ್ಳಿಗಳ ಮೇಲೆ ಈಗ ಅಬಕಾರಿ ಅಧಿಕಾರಿಗಳ ಕಣ್ಣು NAMMUR EXPRESSತೀರ್ಥಹಳ್ಳಿ: ಕರೋನಾ ಸಂಕಷ್ಟದಲ್ಲಿ ಹಣ ಇಲ್ಲದೆ ಜನ ಬೀದಿಯಲ್ಲಿ ಸಾಯುತ್ತಿದ್ದಾರೆ. ಚಿಕಿತ್ಸೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಲಾಕ್ ಡೌನ್ ಹಿನ್ನೆಲೆ ಎಲ್ಲಾ ಮದ್ಯದಂಗಡಿ ಬಂದ್ ಮಾಡಲಾಗಿದೆ. ಆದ್ರೆ ಹಳ್ಳಿಗಳಲ್ಲಿ ಅಂಗಡಿ, ಗೂಡಂಗಡಿ, ಚಿಕನ್ ಅಂಗಡಿಗಳಲ್ಲಿ ಅಕ್ರಮ ಮದ್ಯ ಎಂಆರ್ಪಿಗೂ ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮನೆ ಮನೆಯಲ್ಲಿ ನೆಮ್ಮದಿ ಮರೆಯಾಗಿದೆ. ಈ ನಡುವೆ ತೀರ್ಥಹಳ್ಳಿ ಅಬಕಾರಿ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಹಳ್ಳಿ ಹಳ್ಳಿಯಲ್ಲಿ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ. ಬುಧವಾರ ಎರಡು ಕಡೆ ಅಕ್ರಮ ಮದ್ಯ ವಶಪಡಿಸಿಕೊಂಡು ಕ್ರಮ ತೆಗೆದುಕೊಳ್ಳುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಶನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ತೀರ್ಥಹಳ್ಳಿ ಉಪ…

Read More

ಸಿಎಂ ತವರು ಶಿವಮೊಗ್ಗದಲ್ಲಿ ಕರೋನಾ ಅಟ್ಟಹಾಸದಿನ ನಿತ್ಯ ಹತ್ತಾರು ಸಾವು, ಸಾವಿರಾರು ಕೇಸ್ಅರೋಗ್ಯ ಸೌಲಭ್ಯ ಕೊರತೆ ಕಾರಣ..? NAMMUR EXPRESSಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಗುರುವಾರ 793 ಜನರಲ್ಲಿ ಸೋಂಕು ಪತ್ತೆಯಾಗಿದ್ದು12 ಮಂದಿ ಸಾವನ್ನು ಕಂಡಿದ್ದಾರೆ. ಆದ್ರೆ ಪ್ರಕರಣ, ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ.ಜನ ಹೊರ ಬಾರದ ಕಾರಣ ಕರೋನಾ ಟೆಸ್ಟ್ ಮಾಡಿಸಿಲ್ಲ. ಆದರೂ ಕೇಸ್ ಕಡಿಮೆ ಆಗಿಲ್ಲ.ಶಿವಮೊಗ್ಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6861 ಆಗಿದೆ. ಬುಧವಾರ ಜಿಲ್ಲೆಯಲ್ಲಿ 12 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 832ಕ್ಕೇರಿದೆ‌.ಭಾರೀ ಬಂದೋಬಸ್ತ್! ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕಲ್ಲು ಆಡಳಿತ ಮತ್ತು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಕಡೆ ಅಗತ್ಯ ವಸ್ತು ಬಿಟ್ಟರೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.ಬುಧವಾರ ಎಷ್ಟು ಕೇಸ್?: ಶಿವಮೊಗ್ಗ 285,ಭದ್ರಾವತಿ 150,ಶಿಕಾರಿಪುರ 87,ತೀರ್ಥಹಳ್ಳಿ 49,ಸೊರಬ 51,ಹೊಸನಗರ 76,ಸಾಗರ 69,ಇತರೆ ಜಿಲ್ಲೆ 26.ಕರೋನಾ ಅಲೆಯಲ್ಲಿ ವಯೋವೃದ್ಧರು, ಯುವ ಜನತೆ, ಮಕ್ಕಳು ಬಲಿಯಾಗುತ್ತಿದ್ದಾರೆ.…

Read More