ಹಾಲು ಔಷಧಿ ಓಕೆ, ಉಳಿದೆಲ್ಲ ವ್ಯವಹಾರ ನಿಷೇಧ?ಜಿಲ್ಲೆಯೂ ಸಂಪೂರ್ಣ ಬಂದ್ ಸಾಧ್ಯತೆ? ಶಿವಮೊಗ್ಗ: ಕರೋನಾ ತಡೆಗೆ ಶಿವಮೊಗ್ಗ ಜಿಲ್ಲಾಡಳಿತ ಇದೀಗ ಸಂಪೂರ್ಣ ಲಾಕ್ ಡೌನ್ ಮಾಡಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಸಾಗರ ಘೋಷಣೆಯಾಗಿದೆ. ತೀರ್ಥಹಳ್ಳಿ, ಹೊಸನಗರ ಘೋಷಣೆ ಬಾಕಿ ಇದೆ.ಭಾನುವಾರ ಮಧ್ಯಾಹ್ನದವರೆಗೆ ಅಗತ್ಯ ವಸ್ತು ಪಡೆಯಲು ಅವಕಾಶ ನೀಡಿದ್ದು, ಮಾರ್ಗಸೂಚಿ ಹೊರ ಬೀಳಲಿದೆ. ಒಂದು ವಾರ ಕಾಲ ಇಡೀ ತಾಲ್ಲೂಕು ಸಂಪೂರ್ಣ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.ಅಧಿಕಾರಗಳನ್ನು ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದರು. ಇದೀಗ ಹೊಸನಗರ, ತೀರ್ಥಹಳ್ಳಿ ಬಂದ್ ಬಹುತೇಕ ಪಕ್ಕಾ ಆಗಿದೆ.ಸಾಗರದಲ್ಲಿ ಈಗಾಗಲೆ ಸೋಮವಾರದಿಂದ ಬಂದ್ ಘೋಷಣೆ ಆಗಿದೆ. ಈ ವೇಳೆ ಹಾಲು, ಔಷಧಕ್ಕೆ ಮಾತ್ರ ಅವಕಾಶ ಇರಲಿದೆ. ಪೊಲೀಸರು ಎಲ್ಲಾ ಕಡೆ ಹದ್ದಿನಗಣ್ಣು ಇಡಲಿದ್ದಾರೆ.
Author: Nammur Express Admin
ತೀರ್ಥಹಳ್ಳಿ ತಾಲೂಕಿನಲ್ಲೆ ಉತ್ತಮ ಸಾಧನೆಕರೋನಾ ನಿಯಂತ್ರಣದಲ್ಲಿ ಆಡಳಿತದ ಶ್ರಮಯಾವ ಗ್ರಾಮ ಪಂಚಾಯತ್ ಕರೋನಾ ಮುಕ್ತ? ತೀರ್ಥಹಳ್ಳಿ: ಕರೋನಾ ನಿಯಂತ್ರಣ ಮತ್ತು ಜಾಗೃತಿ, ಉತ್ತಮ ಕಾರ್ಯ ದಕ್ಷತೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮ ಪಂಚಾಯತ್ ಸ್ಥಾನ ಪಡೆದಿದೆ.ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಗಡಿಯಲ್ಲಿರುವ ಗ್ರಾಮ ಪಂಚಾಯತ್ ಇದೀಗ ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯತ್ ಪೈಕಿ 4 ಗ್ರಾಮ ಪಂಚಾಯತ್ ಕರೋನಾ ಮುಕ್ತವಾಗಿದ್ದವು. ಜೊತೆಗೆ ಗ್ರಾಮ ಪಂಚಾಯತ್ ಆಡಳಿತದ ಶ್ರಮದಿಂದ ಸೋಂಕು ಹರಡಿರಲಿಲ್ಲ. ಸಾಗರದ ಶಂಕಣ್ಣ ಶಾನುಬೋಗ್, ಚನ್ನಾಗೊಂಡ, ಶಿವಮೊಗ್ಗದ ಕೊನಗವಳ್ಳಿ ಸೇರಿ 4 ಪಂಚಾಯತ್ ಮಾತ್ರ ಕರೋನಾ ಮುಕ್ತವಾಗಿ ಹಸಿರು ವಲಯ ಪಟ್ಟಿಗೆ ಸೇರಿವೆ.ಶಾಸಕ ಆರಗ ಜ್ಞಾನೆಂದ್ರ, ತಹಸೀಲ್ದಾರ್ ಶ್ರೀಪಾದ, ಇಒ ಆಶಾಲತಾ, ಗ್ರಾಮ ಪಂಚಾಯತ್ ಪಿಡಿಓ, ಎಲ್ಲಾ ಸಿಬ್ಬಂದಿ, ಸದಸ್ಯರು, ಎಲ್ಲಾ ಜನತೆಯ ಸಹಕಾರದೊಂದಿಗೆ ಈ ಸಾಧನೆ ಆಗಿದೆ. ಮುಂದಿನ ದಿನಗಳಲ್ಲಿ ನಾವು ಮತ್ತಷ್ಟು ಜಾಗೃತಿ ಆಗಬೇಕಾಗಿದೆ ಎಂದು ಯುವ ನಾಯಕ, ಗ್ರಾಮ ಪಂಚಾಯತ್ ಸದಸ್ಯ ಅಮೃತ್…
ತಿಪಟೂರ್ ರಘು, ಅಭಿರಾಮ್ ವಿಧಿವಶಹಿರಿಯ ಬಿಜೆಪಿ ನಾಯಕ ಉದಾಸಿ ಅಸ್ವಸ್ಥಮಗ ತಲೆ ಕೊಚ್ಚಿದ ತಂದೆ ಉಳಿಯಲಿಲ್ಲ..! ಬೆಂಗಳೂರು: ಕರೋನಾ ಕನ್ನಡ ಚಲನಚಿತ್ರ ರಂಗದ ಮತ್ತಿಬ್ಬರು ನಿರ್ದೇಶಕರು ಬಲಿಯಾಗಿದ್ದಾರೆ.ಹಿರಿಯ ನಿರ್ದೇಶಕ ತಿಪಟೂರು ರಘು (83) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಿಪಟೂರು ರಘು ಅವರು ಉಸಿರಾಟದ ಸಮಸ್ಯೆಯಿಂದಾಗಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರಾಗಿರುವ ಇವರು 1984ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ನಾಗಕಾಳಭೈರವ, ಬೆಟ್ಟದ ಹುಲಿವೀಣೆ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.ಯುವ ನಿರ್ದೇಶಕ ಸಾವು!: ಕನಸಿನ ಸಿನಿಮಾ ತೆರೆಗೆ ಬರುವ ಮುನ್ನವೇ ನಿರ್ದೇಶಕ ಅಭಿರಾಮ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೆಲ ತಿಂಗಳ ಹಿಂದೆ ಅಭಿರಾಮ್ ನಿರ್ದೇಶನದ 0% ಲವ್ ಚಿತ್ರದ ನಾಯಕ ನಟ ಡಿ.ಎಸ್.ಮಂಜುನಾಥ್ ಸಹ ಸಾವನ್ನಪ್ಪಿದ್ದರು.ಸಂಯುಕ್ತ-2 ಸಿನಿಮಾದ ಮೂಲಕ ನಿರ್ಮಾಪಕರಾಗಿ ಮತ್ತು ನಟನಾಗಿ ಮಂಜುನಾಥ್ ಚಿತ್ರರಂಗಕ್ಕೆ ಬಂದಿದ್ದವರು. ನಂತರ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾವನ್ನು ನಿರ್ಮಿಸಿ ಹೆಸರು ಮಾಡಿದರು. ಸದ್ಯ…
3 ದಿನ ಮಳೆ ಸಾಧ್ಯತೆ: ಮೋಡ ಕವಿದ ವಾತಾವರಣಯಾಸ್ ಚಂಡ ಮಾರುತ ಎಫೆಕ್ಟ್: ತಂಡಿ ಹವಾಕೃಷಿ ಚಟುವಟಿಕೆ ಎಲ್ಲೆಡೆ ಚುರುಕು..!ಕಾಡು ನಾಶ ಮಾಡಬೇಡಿ, ಹಸಿರು ಗಿಡ ನೆಡಿ..! ಬೆಂಗಳೂರು: ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದ್ದು ಮೂರ್ನಾಲ್ಕು ದಿನ ಮಳೆ ಸಾಧ್ಯತೆ ಇದೆ. ಕೇರಳಕ್ಕೆ ಮೇ 31ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಜೂನ್ 1ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದ್ಲಲಿ ಮೇ 29ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.ಲಾಕ್ ಡೌನ್ ಹಿನ್ನೆಲೆ ಎಲ್ಲಾ ಕಡೆ ಕೃಷಿ ಚಟುವಟಿಕೆ…
ಕರೋನಾ ಕೇಸ್ ಹೆಚ್ಚಳ: ಬದುಕು ಬರ್ಬಾತ್ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶ ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ ಮುಳಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ನಗರ ಇದೀಗ ಶುಕ್ರವಾರ ಸಂಪೂರ್ಣ ಸೀಲ್ಡೌನ್ ಆಗಿದೆ.ಕರೋನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ತಾಲೂಕು ಆಡಳಿತ ಸ್ಥಳಕ್ಕೆ ತೆರಳಿ ಲಾಕ್ ಡೌನ್ ಮಾಡಿಸಿದೆ.ಕೂಲಿ ಕಾರ್ಮಿಕರೇ ಹೆಚ್ಚು!: ತೀರ್ಥಹಳ್ಳಿಯಲ್ಲಿಯೇ ಅತೀ ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿರುವ ಪ್ರದೇಶ ಇಂದಿರಾ ನಗರ. ಎಲ್ಲರೂ ದಿನದ ಕೂಲಿ ನಂಬಿ ಜೀವನ ಸಾಗಿಸುವವರು. ಇದೀಗ ಸೀಲ್ಡೌನ್ ಮಾಡಿದ್ದರಿಂದ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಹೋಗುವವರ ಬದುಕು ಹೈರಾಣ ಆಗಲಿದೆ ಎಂದು ಸ್ಥಳೀಯರು ನೋವು ತೋಡಿಕೊಂಡರು. ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಇಲ್ಲಿಗೆ ಕಿಟ್ ವಿತರಣೆ ಮಾಡಬೇಕೆಂದು ಮನವಿ ಮಾಡಿದರು.
ಎಲ್ಲಾ ಕಡೆ ಸಾವಿನ ಸಂಖ್ಯೆ ಹೆಚ್ಚಾಯ್ತುಕರೋನಾಗೆ 27 ಸಾವಿರ ಮಂದಿ ಸಾವುಗ್ಯಾಂಗ್ ರೇಪ್ ಆರೋಪಿಗಳಿಗೆ ಶೂಟ್ ಔಟ್ಕರೋನಾಕ್ಕೆ ಮಕ್ಕಳ ಬಲಿ ಶುರು..ಎಚ್ಚರ..!ಪಾದರಕ್ಷೆ, ಬಟ್ಟೆ ದರ ಏರಿಕೆ ಶಾಕ್..? ಬೆಂಗಳೂರು: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಮತ್ತೆ ಸದ್ದು ಮಾಡಿದೆ. ಪ್ರತಿ ದಿನ ನೂರಾರು ಬಲಿ ಪಡೆದುಕೊಳ್ಳುತ್ತಿದೆ. ಒಂದು ಕಡೆ ಕರೋನಾ ಜನರ ಜೀವ ಮತ್ತು ಬದುಕು ಸಂಪೂರ್ಣ ಬಲಿ ಪಡೆದಿದೆ. ಲಸಿಕೆ, ಆಮ್ಲಜನಕ, ವೆಂಟಿಲೇಟರ್ ಎಲ್ಲಿಯೂ ಸಿಗುತ್ತಿಲ್ಲ. ಈ ನಡುವೆ ಬ್ಲಾಕ್ ಫಂಗಸ್ ಔಷಧಿ ಆಂಪೋಟೆರಿಸಿನ್ ಸಿಗುತ್ತಿಲ್ಲ. ಕರ್ನಾಟಕದಲ್ಲಿ 600 ಕೇಸುಗಳಿದ್ದು, 42000 ವಯಲ್ಸ್ ಔಷಧಿ ಬೇಕು. ಕನಿಷ್ಠ 36000 ವಯಲ್ಸ್ ಆದರೂ ಬೇಕು. ಆದ್ರೆ ಕೇಂದ್ರ ಸರಕಾರ 5170 ವಯಲ್ಸ್ ನೀಡಿದೆ. ಪ್ರತಿ ಜಿಲ್ಲೆಯಲ್ಲೂ ಬ್ಲಾಕ್ ಫಂಗಸ್ ಜನರ ಬಲಿ ಪಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಮೂವರು ಸಾವನ್ನು ಕಂಡಿದ್ದಾರೆ. ಔಷಧ ಉತ್ಪಾದನೆಗೆ ಸರಕಾರ, ಕಂಪನಿಗಳು ಮುಂದಾಗಿ ಜನರ ಜೀವ ಉಳಿಸಬೇಕಿದೆ. ರಾಜ್ಯಕ್ಕೆ ಕಂಟಕ!: ರಾಜ್ಯದಲ್ಲಿ 25 ಲಕ್ಷ ಕರೋನಾ ಕೇಸ್ ದಾಖಲಾಗಿದ್ದು,ರಾಜ್ಯಕ್ಕೆ…
ನಿನ್ನೆ 79 ಕೇಸ್:ಪ್ರತಿ ನಿತ್ಯ ಸಾವು: ಹೆಚ್ಚಿದ ಆತಂಕಲಸಿಕೆ ಇಲ್ಲ: ಸಿಎಂ ಭೇಟಿ ಮಾಡಿದ ಶಾಸಕ ಜ್ಞಾನೇಂದ್ರತೀರ್ಥಹಳ್ಳಿ ಆಟೋ ಚಾಲಕರಿಗೆ ಆಧ್ಯತೆ ಲಸಿಕೆಕೋಣಂದೂರು ಬಳಿಕ ಇಂದಿರಾನಗರ ಸೀಲ್ಡೌನ್?!ತೀರ್ಥಹಳ್ಳಿ ಭಜರಂಗ ದಳ, ವಿಎಚ್ಪಿ “ಮಾದರಿ ಸೇವೆ” ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಪ್ರತಿ ಹಳ್ಳಿಯಲ್ಲೂ ಸೋಂಕು ಹೆಚ್ಚುತ್ತಿದೆ. ಗುರುವಾರ 79 ಕೇಸ್ ವರದಿಯಾಗಿದೆ. ಸಾವು ಕೂಡ ಸಂಭವಿಸುತ್ತಿವೆ. ತೀರ್ಥಹಳ್ಳಿ ಜೇಸಿ ಆಸ್ಪತ್ರೆಯಲ್ಲಿ 13 ಬೆಡ್ ಲಭ್ಯವಿದೆ.ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಂಪೂರ್ಣ ಲಾಕ್ ಡೌನ್ ಆಗಿದೆ. ಇದೀಗ 1ವಾರ ಕಾಲ ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಇಂದಿರಾನಗರ ಬಡಾವಣೆ ಸೀಲ್ ಡೌನ್ ಆಗುವ ಸಾಧ್ಯತೆ ಇದೆ. ಸಿಎಂ ಭೇಟಿ ಮಾಡಿದ ಶಾಸಕ ಆರಗ!: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕರೋನಾ ಸೇವೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದಾರೆ. ಆದರೆ ತೀರ್ಥಹಳ್ಳಿ ತಾಲೂಕಿನವರು ಅತೀ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದ ಕಾರಣ ಕರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೂ ಆಡಳಿತ, ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಶ್ರೀಪಾದ್,…
ತರೀಕೆರೆಯ ಅರೋಗ್ಯಧಿಕಾರಿ ಅಪಘಾತಕ್ಕೆ ಬಲಿಇನ್ನೋವಾ ಕಾರಲ್ಲಿ ಕುಳಿತು ನೋಡುತ್ತಿದ್ದ ಶಾಸಕತರೀಕೆರೆ ಶಾಸಕ ಸುರೇಶ್ ಅಮಾನವೀಯ ಮುಖಬಿಜೆಪಿ ಶಾಸಕನ ವಿರುದ್ಧ ಜನಾಕ್ರೋಶದ ಕಿಡಿ..!ಕಾರಿನಿಂದ ಇಳಿಯದ ಶಾಸಕ: ಲಕ್ಕವಳ್ಳಿ ಬಳಿ ಘಟನೆನಾನು ಅನಾರೋಗ್ಯದಿಂದ ನಿದ್ದೆ ಮಾಡಿದ್ದೆ: ಶಾಸಕ ತರೀಕೆರೆ: ಬಿಜೆಪಿ ಶಾಸಕನೊಬ್ಬನ ಅಮಾನವೀಯ ವರ್ತನೆಗೆ ಓರ್ವ ವೈದ್ಯ ಬಲಿಯಾಗಿದ್ದಾನೆ. ಹೌದು. ಇಂತಹ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳಿ ನಡೆದಿದ್ದು, ಇದೀಗ ತರೀಕೆರೆ ಬಿಜೆಪಿ ಶಾಸಕನ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ.ಕರೊನಾ ಕರ್ತವ್ಯ ಮುಗಿಸಿ ಹಿಂದಿರುಗುವಾಗ ತರೀಕೆರೆ ತಾಲೂಕು ಹಿರಿಯ ಆರೋಗ್ಯಾಧಿಕಾರಿ ಬೈಕ್ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತಕ್ಕೆ ಒಳಗಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ತರೀಕೆರೆ ಶಾಸಕ ಸುರೇಶ್ ತಮ್ಮ ಕಾರಿನಿಂದ ಕೆಳಗಿಳಿಯದೇ ವೈದ್ಯ ರಸ್ತೆಯಲ್ಲಿ ಬಿದ್ದರೂ ನೆರವಿಗೆ ಧಾವಿಸುವ ಪ್ರಯತ್ನ ಮಾಡಿಲ್ಲ. ಪರಿಣಾಮ ವೈದ್ಯರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಶಾಸಕರು ಅಲ್ಲಿಂದ 5 ಕಿಮೀ ವ್ಯಾಪ್ತಿಯ ತರೀಕೆರೆ…
ಲಸಿಕೆ ಇಲ್ಲದಿದ್ರೂ ಸಚಿವರ ಬಾಯಿ ಪ್ರಚಾರ!ಆಶಾ ಕಾರ್ಯಕರ್ತೆಯರ ಸೇವೆಗೆ ಬೆಲೆ ಇಲ್ವೇ..?ಯುವ ಚಿಂತಕ ಶಶಾಂಕ್ ಹೆಗ್ಡೆ ಪ್ರಶ್ನೆ ತೀರ್ಥಹಳ್ಳಿ: ಕರೋನಾದ ತುರ್ತು ನಡುವೆ ಆಡಳಿತದ ಗೊಂದಲ ಮತ್ತು ಸಚಿವರು, ಶಾಸಕರ ಹೇಳಿಕೆ ಗೊಂದಲದಿಂದ ಜನತೆಗೆ ತೊಂದರೆಯಾಗುತ್ತಿದೆ. ಲಸಿಕೆ ಒಂದು ದಿನ ಕೊಟ್ಟು ಮತ್ತೆ ಮಾರನೇ ದಿನ ಇರುವುದಿಲ್ಲ. ಟಿವಿಯಲ್ಲಿ ಸಚಿವರು ಲಸಿಕೆ, ಆಕ್ಸಿಜನ್, ಬೆಡ್ ಕೊರತೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಮಲೆನಾಡಿನ ಯುವ ಚಿಂತಕ, ರಾಜಕಾರಣಿ ಶಶಾಂಕ್ ಹೆಗ್ಡೆ ಗುಡ್ಡೆಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮೂರ್ ಎಕ್ಸ್ಪ್ರೆಸ್ ಮಧ್ಯಮದ ಜತೆ ಮಾತನಾಡಿದ ಅವರು, ತಾಲೂಕು ಕೇಂದ್ರದಲ್ಲಿ ಲಸಿಕೆ ಇದೆ ಎಂದು ಜನ ಮುಂಜಾನೆ ಮುಗಿ ಬೀಳುತ್ತಾರೆ. ಲಸಿಕೆ ಇದೆ ಎಂದು ಗೊಂದಲ ಮಾಡಬೇಡಿ. ಇಲ್ಲವಾದರೆ ಸತ್ಯ ಒಪ್ಪಿಕೊಳ್ಳಿ. ಜನತೆಗೆ ತೊಂದರೆ ಆಗಬಾರದು. ಜನರಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ, ಅವೈಜ್ಞಾನಿಕ ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಬಿಜೆಪಿ ನಾಯಕರು ಲಸಿಕೆಯ ಕುರಿತಂತೆ ತಪ್ಪುಸಂದೇಶಗಳನ್ನು ಹರಡುತ್ತಿರುವ…
ಮರಳು, ಕಲ್ಲು,ಭೂ ಒತ್ತುವರಿ, ಅರಣ್ಯ ಅಕ್ರಮಹಳ್ಳಿ ಹಳ್ಳಿಯಲ್ಲೂ ಅಕ್ರಮ ಮದ್ಯದ ಅಮಲುಬಾಲಕಿ ಮೇಲೆ ರೇಪ್: ಓರ್ವ ಅರೆಸ್ಟ್..!ತಂದೆಯನ್ನು ಕೊಡಲಿಯಿಂದ ಕೊಚ್ಚಿದ ಮಗ! ಮಲೆನಾಡು: ಮಲೆನಾಡಲ್ಲಿ ಒಂದು ಕಡೆ ಕರೋನಾ ಕೇಕೆ ಹಾಕಿ ನೂರಾರು ಬಲಿ ಪಡೆಯುತ್ತಿದೆ. ಪ್ರತಿ ದಿನ ಜನ ಹಾಸಿಗೆ ಮೇಲೆ ನರಳಾಟ ನಡೆಸುತ್ತಿದ್ದಾರೆ. ಆದರೆ ಅಕ್ರಮಗಳು ಹೆಚ್ಚಿವೆ. ರಾತ್ರಿ ಹಗಲು ಕಲ್ಲು, ಮರಳು, ಮರ, ಭೂ ಒತ್ತುವರಿ, ಅಕ್ರಮ ಮದ್ಯ ಸೇರಿದಂತೆ ಅನೇಕ ಅಕ್ರಮಗಳು ಸದ್ದಿಲ್ಲದೇ ನಡೆಯುತ್ತಿದೆ. ಮಲೆನಾಡಿನ ತೀರ್ಥಹಳ್ಳಿ, ಶೃಂಗೇರಿ, ಹೊಸನಗರ, ಸಾಗರ, ಕೊಪ್ಪ ಸೇರಿ ಇಲ್ಲಾ ತಾಲೂಕಲ್ಲಿ ಅಕ್ರಮ ಒಳಗಿಂದ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಕರೋನಾ ನಡುವೆಯೂ ಕುರುವಳ್ಳಿ ಸೇರಿ ಹಲವೆಡೆ ಕಲ್ಲು ಅಕ್ರಮ ನಡೆಯುತ್ತಿದೆ. ಮರಳು ಕ್ವಾರಿಗಳಲ್ಲಿ ಡಬಲಿಂಗ್ ನಡೆಯುತ್ತಿದೆ. ಅಕ್ರಮಕ್ಕೆ ಕೆಲವರ ಸಾಥ್ ಕಾಣುತ್ತಿದೆ. ಪ್ರತಿ ಹಳ್ಳಿಯಲ್ಲಿ ಅರಣ್ಯ ನಾಶ ಆಗುತ್ತಿದೆ. ಭೂ ಒತ್ತುವರಿ ಕಾಣುತ್ತಿದೆ. ಅಕ್ರಮವಾಗಿ ತೋಟ ಮಾಡಲಾಗುತ್ತಿದೆ. ಮಣ್ಣು ಅಗೆಯಲಾಗುತ್ತಿದೆ. ಕರೋನಾ ನಡುವೆಯೂ ಜನರು ಅರಣ್ಯ ಲೂಟಿ ಮಾಡುತ್ತಿದ್ದಾರೆ. ಅರಣ್ಯ ಇಲಾಖೆ…