ಮುಂಗಡ ಬುಕಿಂಗ್ ಪ್ರಾರಂಭ: ಬಾರಿ ಡಿಮ್ಯಾಂಡ್ಅಡಿಕೆ ಸುಲಿತದ ವೇಗ, ಕಾರ್ಮಿಕರ ಅವಶ್ಯಕತೆ ಇಲ್ಲಹೈಟೆಕ್ ತಂತ್ರಜ್ಞಾನದೊಂದಿಗೆ ಅಡಿಕೆ ಸುಲಿತ ಮಲೆನಾಡು: ರೈತನ ಮಗನಾಗಿ ವಿಟೆಕ್ ಸಂಸ್ಥೆ ಮೂಲಕ ಕುಂಟವಳ್ಳಿ ವಿಶ್ವನಾಥ್ 1998ರಿಂದ 2005ರವರೆಗಿನ 7 ವರುಷಗಳ ನಿರಂತರ ಶ್ರಮದಿಂದ “ಅಡಿಕೆ ಸುಲಿಯುವ ಯಂತ್ರವನ್ನು” ಸಂಶೋಧಿಸಿ ಅಡಿಕೆ ಬೆಳೆಗಾರರ ಕಾರ್ಮಿಕ ಕೊರತೆಯನ್ನು ನೀಗಿಸಿದ್ದಾರೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿ ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡದಲ್ಲೂ ಈ ಅಡಿಕೆ ಸುಲಿಯುವ ಯಂತ್ರಗಳಿಗೆ ಭಾರೀ ಡಿಮ್ಯಾಂಡ್ ಇದೆ. ಪ್ರತೀವರುಷವೂ ರೈತಸ್ನೇಹಿಯಾಗಿ ಯಂತ್ರವನ್ನು ಅಭಿವೃದ್ಧಿಪಡಿಸುತ್ತಾ,ರೈತರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ತಂತ್ರಜ್ಞಾನದೊಂದಿಗೆ ಹೊಸ ಮಾದರಿಯ ಯಂತ್ರಗಳು ಬಂದಿವೆ. ಅಡಿಕೆ ಬೆಳೆಗಾರರನ್ನು ಉಳಿಸಿದ ಮೂಲ ಸಂಶೋಧಕ ಸಂಸ್ಥೆ “ವಿ-ಟೆಕ್ ಎಂಜಿನೀರ್ಸ್” ನಮ್ಮ ಆಯ್ಕೆಯಾಗಿರಲಿ. ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.ಸಂಪರ್ಕಿಸಿ 8971312191
Author: Nammur Express Admin
ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಕಸರತ್ತುಮಾಸ್ ನಾಯಕನ ತೆರೆಮರೆಗೆ ಕಳುಹಿಸುವ ಯತ್ನಕರೋನಾ ನಡುವೆ ಬಿಜೆಪಿ ರಾಜಕೀಯ.. ಥು ಹೇಸಿಗೆ..! ಬೆಂಗಳೂರು: ರಾಜ್ಯದಲ್ಲಿ ಕರೋನಾ ಸರಕಾರದ ಬುಡ ಅಲ್ಲಾಡಿಸಲು ಶುರು ಮಾಡಿದೆ. ಕರೋನಾ ಸಾವು ಮತ್ತು ಪ್ರಕರಣದಲ್ಲಿ ರಾಜ್ಯ ದೇಶಕ್ಕೆ ನಂ.1 ಎಂಬ ಕಳಂಕ ಅಂಟಿಸಿಕೊಂಡಿದೆ. ಈ ನಡುವೆ ಸಿಎಂ ಯಡಿಯೂರಪ್ಪ ಬದಲಾವಣೆ ಮಹಾ ಡ್ರಾಮಾಕ್ಕೆ ಬಿಜೆಪಿ ಹೈಕಮಾಂಡ್ ಚಾಲನೆ ಕೊಟ್ಟಿದೆ. ನಾಯಕತ್ವ ಬದಲಾವಣೆಗೆ ಬಿಜೆಪಿ ಶಾಸಕರೇ ಪಟ್ಟು ಹಿಡಿದಿದ್ದು, 20 ಶಾಸಕರು ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ತಿಂಗಳಿನಿಂದಲೂ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ಬಿಜೆಪಿಯಲ್ಲೇ ಒಂದು ಟೀಂ ಪ್ರಯತ್ನ ಮಾಡುತ್ತಿದೆ. ಕರೋನಾ ಕಷ್ಟದಲ್ಲಿ ಜನರ ಜತೆ ಇರಬೇಕಾದ ಶಾಸಕರು ದೆಹಲಿಯಲ್ಲಿದ್ದಾರೆ. ಜೂನ್ 7 ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು,ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ.ಬಿಜೆಪಿ ಪಾಳಯದಲ್ಲಿ ಸಾಲು ಸಾಲು ಸಭೆಗಳು ನಡೆಯುತ್ತಿದ್ದು, ಬೊಮ್ಮಾಯಿ, ವಿಜಯೇಂದ್ರ ಅವರು ಮೇ 7,8,9ರಂದು ಹೈಕಮಾಂಡ್ ಭೇಟಿ ಮಾಡಿದ್ದರು.…
ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಕುಟುಂಬಕ್ಕೆ ಪರಿಹಾರ ನೀಡಲು ಪತ್ರಕರ್ತರ ಅಗ್ರಹಪತ್ರಕರ್ತರಿಗೆ, ಅವರ ಕುಟುಂಬಕ್ಕೆ ಲಸಿಕೆ ಬೇಕು..! ಚಿಕ್ಕಮಗಳೂರು: ಕರೋನಾಕ್ಕೆ ರಾಜ್ಯದಲ್ಲಿ ಹತ್ತಾರು ಪತ್ರಕರ್ತರು ಬಲಿಯಾಗಿದ್ದು, ಕುಟುಂಬದ ನೂರಾರು ಮಂದಿ ಸಾವನ್ನು ಕಂಡಿದ್ದಾರೆ. ಫ್ರಂಟ್ ಲೈನ್ ಕರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೊಪ್ಪದ ಪತ್ರಕರ್ತ ಸಾಧಿಕ್ (47) ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದಾರೆ.ಕಳೆದ ಎರಡು ವಾರದ ಹಿಂದೆ ಉಸಿರಾಟ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ನಂತರ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಮೃತರು ಕೊಪ್ಪದಲ್ಲಿ ಹಲವು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಕೊಪ್ಪ ಸೇರಿ ಮಲೆನಾಡಿನ ನೂರಾರು ಸಮಸ್ಯೆಗಳಿಗೆ ದನಿಯಾಗಿದ್ದರು. ಇತ್ತೀಚೆಗೆ ಮೇಲಿನಪೇಟೆಯಲ್ಲಿ ವಾಹನಗಳ ಹೊಗೆ ತಪಾಸಣೆ ಕೇಂದ್ರವನ್ನು ತೆರೆದು ಉದ್ಯಮಕ್ಕೆ ಶುರು ಮಾಡಿದ್ದರು. ಕೊಪ್ಪದ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಸಹ…
ಒಳ್ಳೆ ಉದ್ದೇಶಕ್ಕಿಂತ ಕೆಟ್ಟದಾಗೋದೇ ಹೆಚ್ಚುಮೊಬೈಲ್ ಗೀಳಿನಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಬೆಂಗಳೂರು: ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಸರಕಾರಕ್ಕೆ ಸವಾಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುತ್ತಿಲ್ಲ. ಪರೀಕ್ಷೆ ನಡೆಸಲು ಕಷ್ಟ. ಈ ನಡುವೆಸರಕಾರ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲಾ ಮಕ್ಕಳಿಗೆ ಉಚಿತ ‘ಸ್ಮಾರ್ಟ್ ಫೋನ್’ ವಿತರಣೆಯ ಕುರಿತು ಚಿಂತನೆ ನಡೆಸಿದೆ. ಆದರೆ ಈ ಯೋಜನೆ ಸರಕಾರದ ಲೆಕ್ಕದಲ್ಲಿ ಒಳ್ಳೆಯದು. ಆದ್ರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಟ್ಟದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆನ್ಲೈನ್ ಕ್ಲಾಸ್ನಿಂದ ಯಾವ ಮಕ್ಕಳು ಕೂಡ ವಂಚಿತರಾಗಬಾರದು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ, ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳ ನೆರವಿಗೆ ಸರ್ಕಾರ ಬರಲಿದೆ ಎಂದಿದ್ದಾರೆ. ಆದರೆ ಈ ನಿರ್ಧಾರವನ್ನು ಮತ್ತಷ್ಟು ಪರಿಶೀಲನೆ…
ಇಂದು ಮಧ್ಯಾಹ್ನ ಸೂಪರ್ ಮೂನ್ನಿನ್ನೆ ಸೂರ್ಯನ ಸುತ್ತ ಮೂಡಿತ್ತು ಚಕ್ರಪ್ರಾಕೃತಿಕ ವಿಸ್ಮಯ: ಏನು ಹೇಳುತ್ತೆ ಇತಿಹಾಸ..? ಬೆಂಗಳೂರು: ಮೇ 26ರ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಅಂದು ಸೂಪರ್ ಮೂನ್ ಮತ್ತು ಚಂದ್ರಗ್ರಹಣ ನಡೆಯಲಿದೆ. ಆದರೆ ಈ ಚಂದ್ರ ಭಾರತದಲ್ಲಿ ಕಾಣುವುದಿಲ್ಲ. 2021ರಲ್ಲಿ 3 ಸೂಪರ್ ಮೂನ್‍ಗಳ ಗೋಚರವಾಗುತ್ತದೆ. ಈ ವರ್ಷ ಭೂಮಿಗೆ ಅತಿ ಹತ್ತಿರದಿಂದ ಗೋಚರವಾಗುವ ಗ್ರಹಣ ಮೇ 26ಕ್ಕೆ ಸಂಭವಿಸಲಿದೆ.ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಸಂದರ್ಭ ಭೂಮಿಗೆ ಅತಿ ಸಮೀಪ ಚಂದ್ರ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಭೂಮಿಗೆ ಚಂದ್ರ ಬಹಳ ಹತ್ತಿರ ಬರಲಿದ್ದಾನೆ. 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಪರ್ಯಟನೆ ಮಾಡಲಿದ್ದಾನೆ. ಸುಮಾರು ಏಳು ಶೇಕಡದಷ್ಟು ಚಂದ್ರ ದೊಡ್ಡದಾಗಿ ಮೇಲೆ ನಿಂತು ನಮಗೆ ಕಾಣಲಿದ್ದಾನೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಗ್ರಹಣ ನಡೆಯುತ್ತದೆ. ನಾವು ಭಾರತೀಯರು ಗ್ರಹಣವನ್ನು…
ಹೈಟೆಕ್ ಕಾರ್ಬನ್ ಫೈಬರ್ ದೋಟಿ ಬಂದಿದೆ!ಅಡಿಕೆ ಕೊಯ್ಲು, ಬೋರ್ಡು ದ್ರಾವಣ ಸಿಂಪಡಣೆ ಸಹಕಾರಿ ಮಲೆನಾಡು: ಅಡಿಕೆ ಬೆಳೆಗೆ ಆರ್ಥಿಕವಾದ ಮತ್ತು ಸಾಂಪ್ರದಾಯಕವಾದ ಮಹತ್ವವಿದೆ. ಆದರೆ ಇಂದಿನ ದಿನಗಳಲ್ಲಿ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ, ಅದು ಅಡಿಕೆ ಗೊನೆಯನ್ನು ಮರದಿಂದ ಇಳಿಸುವ (ಕೊಯ್ಯವ)ಮತ್ತು ಅಡಿಕೆ ಗೊನೆಗೆ ದ್ರಾವಣ (ಔಷಧಿಯನ್ನು) ಹೊಡೆಯಲು ನುರಿತ ಶ್ರಮಿಕರ ಕೊರತೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಔಷಧಿಯನ್ನು ಹೊಡೆಯಲು ಮತ್ತು ಅಡಿಕೆ ಗೊನೆ ಯನ್ನು ತೆಗೆಯಲು ದೋಟಿಯನ್ನು ಕೃಷಿ ಉಪಕಾರ್ ಸಂಸ್ಥೆ ಆವಿಷ್ಕರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಇದು ಮಲೆನಾಡಿನ ರೈತರಿಗೆ ಅನುಕೂಲವಾಗಲಿದೆ.ಹೈಟೆಕ್ ದೋಟಿಯ ಉಪಯೋಗಗಳು.1.ಅಡಿಕೆಯ ಮರವೇರದೆ ಕೊಯ್ಲು ಮತ್ತು ಔಷಧಿಯನ್ನು ಸಿಂಪಡಣೆ ಮಾಡಬಹುದು.2.ದೋಟಿಯಲ್ಲಿ ಔಷಧಿಯನ್ನು ಸಿಂಪಡಿಸುವುದರಿಂದ, ಅಡಿಕೆ ಗೊನೆಗೆ ನೇರವಾಗಿ ಔಷಧಿಯು ಹಿಡಿಯುವುದರಿಂದ ಬೇರೆ ಪದ್ಧತಿಗಿಂತ ಔಷಧಿಯು ಸಾಕಷ್ಟು ಉಳಿತಾಯವಾಗುತ್ತದೆ.3 ಹೈಟೆಕ್ ದೋಟಿಯನ್ನು ಯಾರೂ ಕೂಡ ಸುಲಭವಾಗಿ ಬಳಸಬಹುದಾದ ಉಪಯುಕ್ತವಾದ ಹಾಗು ಅತ್ಯುತ್ತಮವಾದ ಗುಣಮಟ್ಟದ ಸಾಧನವಾಗಿದೆ.4.ರೈತರೇ ಸಮಯವಾದಾಗ ಔಷಧಿ ಹೊಡೆದುಕೊಳ್ಳಬಹುದಾದ್ದರಿಂದ ಮರಕ್ಕೆ ಕೊಳೆ ರೋಗ ಬರುವ…
ರಾಜ್ಯಕ್ಕೆ ಮಾದರಿ ನಿಯಮ ತಂದ ಉಡುಪಿ ಡಿಸಿಕ್ರಿಕೆಟ್ ಆಡಿದ್ರೂ ಬೀಳುತ್ತೆ ಕೇಸ್: ಬಳಿಕ ಶಿಕ್ಷೆಏನಿದು ಆದೇಶ… ಸುದ್ದಿ ನೋಡಿ…! ಉಡುಪಿ/ಬೆಂಗಳೂರು: ಮದುವೆ, ಮೆಹಂದಿ, ತಿಥಿ ಕಾರ್ಯಕ್ರಮಗಳಿಂದ ಕರೋನಾ ಕೇಸ್ ಹೆಚ್ಚಳವಾಗುತ್ತಿದೆ. ಈಗಲೂ ಕೆಲವೆಡೆ ಮದುವೆಗಳಲ್ಲಿ ನೂರಕ್ಕೂ ಹೆಚ್ಚು ಜನ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 25ರಿಂದ ಜೂನ್ 7ರವರೆಗೆ ಯಾವುದೇ ಮದುವೆ, ಮೆಹಂದಿ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮದುವೆಯಿಂದಲೇ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಮದುವೆ ಸಮಾರಂಭ ನಡೆಸಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮೇ 24ರ ಸಂಜೆಯವರೆಗೆ ಅನುಮತಿ ನೀಡಿರುವ ಮದುವೆ ನಡೆಸಲು ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ನಾಳೆಯಿಂದ ಈಗಾಗಲೇ ಅನುಮತಿ ಪಡೆದಿರುವ ಮದುವೆ ನಡೆಸಲು ಅವಕಾಶವಿಲ್ಲ. ಜೂನ್ 7 ವರೆಗೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮದುವೆ ನಡೆಸಲು ಅವಕಾಶ ನೀಡುವುದಿಲ್ಲ…
ಕರೋನಾ ನಿಯಂತ್ರಣಕ್ಕೆ ನಾಯಕನ ಪ್ಲಾನ್ಆಡಳಿತದೊಂದಿಗೆ ಕೈಜೋಡಿಸಲು ಯೋಜನೆಜನರ ಕಷ್ಟಕ್ಕೆ ಜೊತೆಯಾದ “ಜನ ನಾಯಕ”..! ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಕರೋನಾ ಹೆಚ್ಚುತ್ತಿರುವ ಹಿನ್ನೆಲೆ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಕೆಪಿಸಿಸಿ ಟಾಸ್ಕ್ ಪೋರ್ಸ್ ಅಧ್ಯಕ್ಷ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಸದಸ್ಯರ ತಂಡ ಸಮಾಲೋಚನಾ ಸಭೆ ನಡೆಸಿ ಆಡಳಿತಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಜೊತೆಗೆ ತೀರ್ಥಹಳ್ಳಿ ತಾಲೂಕನ್ನು ಕರೋನಾ ಮುಕ್ತ ಮಾಡಲು ತಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಧೈರ್ಯ ತುಂಬಿದರು.ಇದೇ ವೇಳೆ ಸೋಂಕು ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು, ಮತ್ತು ಜೆಸಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದರು. ತಾಲ್ಲೂಕು ವೈದ್ಯಾಧಿಕಾರಿಗಳಾದ ಗಣೇಶ್ ಭಟ್, ಡಾ.ನಿಶ್ಚಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯೋಸ್, ಕಾಂಗ್ರೆಸ್ ನಾಯಕರಾದ ರಾಘವೇಂದ್ರ ರವೀಂದ್ರ ಶೆಟ್ಟಿ, ಕೆಸ್ತೂರು ಮಂಜುನಾಥ್, ಅಮ್ರಪಾಲಿ ಸುರೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಗೀತಾ ರಮೇಶ್, ಸುಶೀಲಾ ಶೆಟ್ಟಿ, ನಮ್ರತ್, ಟಾಸ್ಕ್ ಪೋರ್ಸ್ ಸಮಿತಿ…
ಕರೋನಾ ನಡುವೆ ಬ್ಲಾಕ್ ಫಂಗಸ್ ಅಬ್ಬರರಾಜ್ಯದಲ್ಲಿ ವಾಹನ ಸೀಜ್: ಸಮಸ್ಯೆ ಉಲ್ಬಣಒಂದು ತಿಂಗಳು ಕಾದಿದೆ ಗಂಡಾಂತರ!ಜುಲೈನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ? ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ವೈರಸ್ ಸೋಂಕಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಏರಿಕೆ ಯಾಗುತ್ತಿರೋದು ಆತಂಕವನ್ನು ಮೂಡಿಸಿದೆ. ರಾಜ್ಯದಲ್ಲಿ ಇದುವರೆಗೆ ಬರೋಬ್ಬರಿ 25,282 ಸಾವಿನ ಪ್ರಕರಣ ದಾಖಲಾಗಿದೆ. ಈ ನಡುವೆ ಬ್ಲಾಕ್ ಫಂಗಸ್ ಈಗ ರಾಜ್ಯದ ಜನತೆಯ ನಿದ್ದೆಗೆಡಿಸಿದೆ. ಪ್ರತಿ ನಿತ್ಯ 300ಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ಇನ್ನು ರಾಜ್ಯದಲ್ಲಿ ಸಾವಿರಾರು ವಾಹನಗಳು ಸೀಜ್ ಆಗಿವೆ. ನೂರಾರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಊರಲ್ಲೂ ಪೊಲೀಸರು ಎಲ್ಲಾ ವಾಹನಗಳ ತಪಾಸಣೆ ಮಾಡಲಾಗಿದೆ. ಇನ್ಮೇಲೆ ವಾಹನ ರಸ್ತೆಗಿಳಿದ್ರೆ ಸೀಜ್ ಗ್ಯಾರಂಟಿ. ದಾಖಲೆಯ ಸಾವು!: ರಾಜ್ಯದಲ್ಲಿ ಭಾನುವಾರ 626 ಮಂದಿ ಕರೋನಾದಿಂದ ಸಾವನ್ನು ಕಂಡಿದ್ದಾರೆ. ಇದು ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ. ಕಳೆದೊಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 11 ಸಾವಿರ ಮಂದಿ ಕೊರೊನಾ ವೈರಸ್…
ಆಗುಂಬೆ ಪೊಲೀಸರಿಂದ ಪತಿ ವಶಕ್ಕೆ: ವಿಚಾರಣೆಪತಿಯ ಅನುಮಾನ ಪತ್ನಿ ಪ್ರಾಣ ತೆಗೆಯಿತೇ..?ಬೆಜ್ಜವಳ್ಳಿ, ತೀರ್ಥಹಳ್ಳಿಯಲ್ಲಿ ನಡೆದಿತ್ತು ಸಾವು! ತೀರ್ಥಹಳ್ಳಿ: ತೀರ್ಥಹಳ್ಳಿಯ ಆಗುಂಬೆ ಠಾಣೆ ವ್ಯಾಪ್ತಿಯ ಕುಂದಾದ್ರಿ ಬಳಿ ಗೃಹಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪಟ್ಟೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ಮತ್ತು ಮಹಿಳೆ ಕುಟುಂಬದವರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆ ಪತಿಯನ್ನು ಆಗುಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಗೆರಿಯಲ್ಲಿ ಘಟನೆ ನಡೆದಿದ್ದು,ಜ್ಯೋತಿ(25) ಮೃತಪಟ್ಟ ದುರ್ದೈವಿ. ಆಗುಂಬೆ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್, ವೀರೇಂದ್ರ, ಉಮೇಶ್, ಸುದರ್ಶನ್, ನೇತೃತ್ವದ ಪೊಲೀಸ್ ತಂಡ ವಿಚಾರಣೆ ಕೈಗೊಂಡಿದೆ. ಪತ್ನಿಯ ಬಗ್ಗೆ ಪದೇ ಪದೇ ಪತಿ ದಯಾನಂದ ಅನುಮಾನ ವ್ಯಕ್ತಪಡಿಸುತ್ತಿದ್ದು ಕೊಲೆಗೆ ಪತಿಯ ಅನುಮಾನವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಕೊಲೆಯಾದ ಜ್ಯೋತಿ ಮೃತದೇಹ ತಾಲೂಕು ಜೆ.ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳಕ್ಕೆ ಶಾಸಕ ಆರಗಜ್ಞಾನೇಂದ್ರ ತಾಲ್ಲೂಕು ದಂಡಾಧಿಕಾರಿ ಡಾ.…