ಧರ್ಮಸ್ಥಳ ಸಂಘದಿಂದ ಸಾವಿರಾರು ಬಡ ಕುಟುಂಬಗಳಿಗೆ ಸ್ವಾವಲಂಬಿ ಬದುಕು – ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಅಭಿಮತ – ವಾತ್ಸಲ್ಯ ಯೋಜನೆ, ಮಧ್ಯವರ್ಜನ ಶಿಬಿರ ಸೇರಿ ನೂರಾರು ಯೋಜನೆ NAMMUR EXPRESS NEWS ಹೊಸದುರ್ಗ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವಾತ್ಸಲ್ಯ ಯೋಜನೆ, ಮಧ್ಯವರ್ಜನ ಶಿಬಿರ ಹಾಗೂ ಇನ್ನೂ ಹಲವಾರು ಯೋಜನೆಗಳ ಪರಿಣಾಮ ಗ್ರಾಮೀಣ ಭಾಗದ ಬಡ ಜನರು ಬದುಕು ಸುಧಾರಿಸಿಕೊಂಡಿದ್ದಾರೆ. ಅಲ್ಲದೇ, ನೂರಾರು ಕುಟುಂಬಗಳು ಸ್ವಾವಲಂಬನೆಯಿಂದ, ನೆಮ್ಮದಿಯಾಗಿ ಜೀವನ ನಡೆಸುವಂತಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ತುಂಬಿನಕೆರೆ ಬಸವರಾಜ್ ಅಭಿಮತ ವ್ಯಕ್ತಪಡಿಸಿದ್ದಾರೆ. ನಗರದ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಲು ರಾಮೇಶ್ವರ ಯೋಜನಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ…
Author: Nammur Express Admin
ಹರ್ಷ ಕೊಲೆ ಪ್ರಕರಣ ಎನ್ಐಎಗೆ ಹಸ್ತಾಂತರ ಸರಿ! – ಶಿವಮೊಗ್ಗದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಹೈಕೋರ್ಟ್ ತೀರ್ಪು – ಸಾಗರ: ರೈಲ್ವೆ ಹಳಿಯಲ್ಲಿ ಯುವಕನ ಕೊಲೆಯೋ? ಆತ್ಮಹತ್ಯೆ? – ತೀರ್ಥಹಳ್ಳಿ: ಭಾರೀ ಮಳೆ: ಗುಡುಗು ಸಿಡಿಲು ಅನಾಹುತ – ಶಿಕಾರಿಪುರ: ಸಂತೆಗೆ 37 ಜನರಿಗೆ ಕಚ್ಚಿದ ಹುಚ್ಚು ನಾಯಿ! – ಹೊಸನಗರ: ಅಕ್ರಮವಾಗಿ ಸಾಗಿಸುತಿದ್ದ 20 ಗೋವುಗಳ ರಕ್ಷಣೆ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗದಲ್ಲಿ ಫೆಬ್ರವರಿ 20, 2022 ರಂದು ನಡೆದಿದ್ದ ಹರ್ಷ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸುವ ಕೇಂದ್ರ ಗೃಹ ಸಚಿವಾಲಯದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಈ ಸಂಬಂಧ ಕೊಲೆ ಪ್ರಕರಣದ ಆರೋಪಿಯೊಬ್ಬರು ಎನ್‌ಐಎಗೆ ಪ್ರಕರಣವನ್ನ ವರ್ಗಾಯಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ. ಪ್ರಕರಣವನ್ನು ಎನ್‌ಐಎಗೆ ವಹಿಸಲು ಅನುಮತಿ ಪಡೆದಿಲ್ಲ ಎಂದು ವಾದಿಸಿದ್ದರು.…
ಹೆಬ್ರಿಯಲ್ಲಿ ನಡೆಯಿತು ಮನ ಕಲಕುವ ಘಟನೆ! – ಬಸ್ಸಿನಲ್ಲಿ ಅಸ್ವಸ್ಥಗೊಂಡಿದ್ದ ಯುವತಿ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿದರು – ಮುಸ್ಲಿಂ ಯುವತಿಯಿಂದ ಹಿಂದೂ ಯುವತಿಗೆ ಉಸಿರು! – ಕೋಟೇಶ್ವರ: ನಡೆದುಕೊಂಡು ಹೋಗುತ್ತಿದ್ದವನ ಬಲಿ ಪಡೆದ ಟಿಪ್ಪರ್! NAMMUR EXPRESS NEWS ಹೆಬ್ರಿ: ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಯೋರ್ವಳನ್ನು ಬಸ್ ಸಿಬ್ಬಂದಿಗಳು ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸೆ. 30 ರಂದು ಸೋಮವಾರ ಸಂಜೆ ನಡೆದಿದೆ. ಅಸ್ವಸ್ಥ ಗೊಂಡ ಪ್ರಯಾಣಿಕ ಯುವತಿ ಸುರಕ್ಷಾ ಎಂದು ತಿಳಿದು ಬಂದಿದೆ. ಇವರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು ಆಗುಂಬೆ ಘಾಟಿಯಲ್ಲಿ ತೀವ್ರ ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ ಪ್ರಯಾಣಿಕರ ಸಹಕಾರದೊಂದಿಗೆ ಹೆಬ್ರಿಯ ಸರ್ಕಾರಿ…
ಬಿಪಿಎಲ್ ಹೋಗುತ್ತೆ ಹುಷಾರ್! * ಕಾರು, ಬೈಕ್ ಇದ್ರೆ ಕಾರ್ಡ್ ಅನರ್ಹ? * 10,97,621 ಅಕ್ರಮ ಬಿಪಿಎಲ್, ಅಂತ್ಯೋದಯ ಕಾರ್ಡ್ ಪತ್ತೆ * ಹತ್ತು ದಿನಗಳ ಒಳಗೆ ಅನರ್ಹ ಪಡಿತರ ಚೀಟಿಗಳ ಮುಕ್ತಾಯ!? NAMMUR EXPRESS NEWS ಬೆಂಗಳೂರು :ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿದೆ. ಆದರೆ, ಅನರ್ಹ ರೇಷನ್ ಕಾರ್ಡ್ ರದ್ದುಪಡಿಸುವ ಕಾರ್ಯಕ್ಕೆ ವೇಗ ನೀಡಿರುವ ಆಹಾರ ಇಲಾಖೆ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಕುಟುಂಬ ತಂತ್ರಾಂಶದ ಮೊರೆ ಹೋಗಿದೆ. ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್ಗಳು ಇರುವುದನ್ನು ಈ ತಂತ್ರಾಂಶದ ಮೂಲಕ ಪತ್ತೆ ಮಾಡಿದೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆ ಇ- ಆಡಳಿತ ಕೇಂದ್ರಕ್ಕೆ ಮನವಿ ಮಾಡಿದ್ದು, ಈ ತಂತ್ರಾಂಶದಿಂದ ದೊರೆತ ಮಾಹಿತಿಯ ಅನ್ವಯ 10,97,621 ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳು ಪತ್ತೆಯಾಗಿವೆ. 10,54,368 ಕಾರ್ಡುಗಳನ್ನು…
ತೀರ್ಥಹಳ್ಳಿಯಲ್ಲಿ ಕಾರ್ಮಿಕರಿಗೆ ಗೌರವ: ಪ. ಪಂ ಮಾದರಿ ಹೆಜ್ಜೆ! – ಕಾರ್ಮಿಕರ ಸೇವೆ ಹೊಗಳಿದ ಶಾಸಕ ಆರಗ ಜ್ಞಾನೇಂದ್ರ – ಪೌರ ಕಾರ್ಮಿಕರು, ಸಿಬ್ಬಂದಿಗೆ ಸನ್ಮಾನ: ಮಸ್ಕಿರಿ ಕುಡ್ಲ ನಾಟಕ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಸೆ. 30ರಂದು ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಅವರನ್ನು ನೆನೆಯುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ಗೌರವ ನೀಡಲಾಯಿತು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಪಟ್ಟಣದ ಅಭಿವೃದ್ಧಿಗೆ ಪೌರ ಕಾರ್ಮಿಕರ ಕೊಡುಗೆ ಅಪಾರ. ನಾವೆಲ್ಲರೂ ಶುಚಿತ್ವದ ಬಗ್ಗೆ ಗಮನ ಕೊಡಬೇಕು. ತೀರ್ಥಹಳ್ಳಿ ಸುಸಂಸ್ಕೃತರ ನಾಡು. ತೀರ್ಥಹಳ್ಳಿ ಹಿರಿಮೆ ಹೆಚ್ಚಿಸಲು ನಾವೆಲ್ಲರೂ ಶ್ರಮ ಪಡೋಣ ಎಂದರು. ಸ್ವಚ್ಛ ಭಾರತ್ ಅಭಿಯಾನ ಮೂಲಕ ಪ್ರಧಾನಿಯವರೇ ಪೊರಕೆ ಹಿಡಿದು ಕಸ ಗುಡಿಸಿದ್ದರು. ಜನರಿಗೆ ಇತ್ತೀಚಿಗೆ ಸ್ವಚ್ಛತೆ ಬಗ್ಗೆ ಗಮನ ಇಲ್ಲದಂತಾಗಿದೆ.ಕಾಲೇಜು ವಿದ್ಯಾರ್ಥಿಗಳಿಗಳಿಗೂ ನಿಯಮ ಪಾಲನೆ ಇಲ್ಲ. ನಾವು ಕಸ ಹಾಕಿದರೆ ಯಾರೋ ತೆಗೆಯುತ್ತಾರೆ…
ಕ್ರೀಡೆಯಲ್ಲಿ ತೀರ್ಥಹಳ್ಳಿ ಮಕ್ಕಳ ಗೆಲುವಿನ ದಾಖಲೆ! – ವಾಗ್ದೇವಿ ಶಾಲೆಯ ಅನುಜ್, ಉತ್ಸವ್, ವರ್ಚಸ್, ಪೂರ್ವ ವಿಭಾಗ ಮಟ್ಟಕ್ಕೆ – ಸಹ್ಯಾದ್ರಿ ಶಾಲೆ ಸಹೋದರಿಯರಾದ ಪಾವನಿ, ಗಾನವಿ ರಾಜ್ಯ ಮಟ್ಟಕ್ಕೆ – ಯೋಗದಲ್ಲಿ ತೀರ್ಥಹಳ್ಳಿ ಗರ್ಲ್ಸ್ ಹೈಸ್ಕೂಲ್ ಶ್ರಾವಣಿ ಸಾಧನೆ ತೀರ್ಥಹಳ್ಳಿ: ಭದ್ರಾವತಿಯಲ್ಲಿ ಶಾಲಾಶಿಕ್ಷಣ ಇಲಾಖೆಯವರು ನಡೆಸಿದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಜಿಲ್ಲಾಮಟ್ಟದ ಕ್ರಿಕೆಟ್ ಆಯ್ಕೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಅನುಜ್ ( 9 ನೆಯ ತರಗತಿ), ಉತ್ಸವ್ ಗೌಡ (8 ನೆಯ ತರಗತಿ), ವರ್ಚಸ್ (8 ನೆಯ ತರಗತಿ) ಮತ್ತು ಪೂರ್ವ (7 ನೆಯ ತರಗತಿ) ಇವರು ಅತ್ಯುತ್ತಮವಾಗಿ ತಮ್ಮ ಆಟವನ್ನು ಪ್ರದರ್ಶಿಸಿ ಶೈಕ್ಷಣಿಕ ವಿಭಾಗವಾಗಿರುವ ಬೆಂಗಳೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ ಸಿಟಿ ಕ್ರಿಕೆಟ್ ಕ್ಲಬ್ ಮುಖ್ಯಸ್ಥರಾದ ಅಬ್ದುಲ್ ಕಲಾಂ ಆಜಾದ್ ರವರಿಗೆ ಹಾಗೂ ತರಬೇತುದಾರರಾದ ಸುಬ್ರಹ್ಮಣ್ಯ ಇವರಿಗೆ ವಾಗ್ದೇವಿ ಬಳಗ ಅಭಿನಂದನೆ ಸಲ್ಲಿಸಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು…
ಮಕ್ಕಳನ್ನು ಸಾಧಕರನ್ನಾಗಿ ಮಾಡುವುದು ಹೇಗೆ? – ಮಾಳದಲ್ಲಿ ಮಂಗಳೂರು ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ – ವಿದ್ಯೆಯ ಮಹತ್ವ ಮತ್ತು ಪರೀಕ್ಷೆ ಪೂರ್ವ ತಯಾರಿ ಶಿಬಿರ NAMMUR EXPRESS NEWS ಕಾರ್ಕಳ: ವಿಶೇಷ ಪರಿಶ್ರಮದಿಂದ ಮಕ್ಕಳು ವಿಶೇಷ ಸಾಧನೆಯನ್ನು ಮಾಡಲು ಸಾಧ್ಯ ಎಂದು ಮಂಗಳೂರಿನ ಸ್ವರೂಪ ಶಿಕ್ಷಣ ಸಂಸ್ಥೆಯ ಗೋಪಾಡ್ಕರ್ ಹೇಳಿದರು. ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ ಕಾರ್ಯಕ್ರಮವನ್ನು ನಡೆಸಿಕೊಟ್ಟು ಅವರು ಮಾತನಾಡಿದರು. ಶಾಲೆಯಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಬಗ್ಗೆ ಅಧ್ಯಾಪಕರಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ, ಸಂಚಾಲಕರಾದ ಸುಧಾಕರ ಡೋಂಗ್ರೆ,ಕೋಶಾಧಿಕಾರಿಯಾದ ರವೀಂದ್ರ ಜೋಶಿ, ಆಡಳಿತ ಮಂಡಳಿಯ ಸದಸ್ಯರಾದ ರಘುಪತಿ ಕಾಮತ್ ಮತ್ತು ವಸಂತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಮತ್ತು ಶಿಕ್ಷಕ ವೃಂದ ,ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು ಶಿಕ್ಷಕರಾದ ಸುನಿತಾ ಇವರು ನೆರವೇರಿಸಿದರು. ವಿದ್ಯೆಯ ಮಹತ್ವ…
ಅಡಿಕೆ ದರ ಎಷ್ಟಿದೆ? – ಬೆಟ್ಟೆ ಎಷ್ಟು? ರಾಶಿ ಎಷ್ಟು? NAMMUR EXPRESS NEWS ಶಿವಮೊಗ್ಗ ಸರಕು 56019-85100 ಬೆಟ್ಟೆ 47000-53800-55399 ರಾಶಿ 40166-47600-49069 ಗೊರಬಲು 18000-32800-33869
ನಾನು ಕೋರ್ಟ್, ದೇವರನ್ನು ನಂಬುತ್ತೇವೆ, ಟೈಂ ಬರುತ್ತೆ! – ಕೈ ಸರ್ಕಾರದ ವಿರುದ್ಧ ರೇವಣ್ಣ ಕಿಡಿ: ವರ್ಗಾವಣೆ ದಂಧೆ ಬಾಂಬ್! – ಹಾಸನ ಜಿಲ್ಲೆ ರೈತರಿಗೆ ಪರಿಹಾರ ಇಲ್ಲ: ರಸ್ತೆ ಗುಂಡಿ ಮುಚ್ಚಲು ಹಣ ನೀಡುತ್ತಿಲ್ಲ NAMMUR EXPRESS NEWS ಹಾಸನ: ಮಳೆಯಿಂದ ಹಾನಿ ಅನುಭವಿಸಿರುವ ಜಿಲ್ಲೆಯ ಸಾವಿರಾರು ರೈತರಿಗೆ ಪರಿಹಾರ ಕೊಡಲು ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತೀವ್ರವಾಗಿ ಖಂಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಸೇರಿದಂತೆ ಆಸ್ತಿಪಾಸ್ತಿ ನಷ್ಟಕ್ಕೂ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ರೈತರು ಕಾಯುತ್ತಿದ್ದು, ಇನ್ನಾದರೂ ಹಾನಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಐದು ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ರೈತರಿಗೆ ಪರಿಹಾರ ಕೊಡಲು ಆಗದೇ ಇದ್ದರೆ ಅದನ್ನು ಜನರ ಮುಂದೆ ಹೇಳಿ ಬಿಡಲಿ ಎಂದರು. ಮಳೆಹಾನಿಯಾಗಿ ಕಳೆದ ನಾಲ್ಕೈದು ತಿಂಗಳು ಕಳೆದರೂ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ತೋಟಗಾರಿಕೆ…
ಜಗತ್ಪ್ರಸಿದ್ಧ ಶಾರದಾ ಶರನ್ನವರಾತ್ರಿ ಉತ್ಸವ ಕ್ಷಣಗಣನೆ * ಒಂಭತ್ತು ದಿನವೂ ಶಾರದೆಗೆ ವಿವಿಧ ಅಲಂಕಾರ * ಹೇಗಿರಲಿದೆ ಈ ಬಾರಿಯ ಶೃಂಗೇರಿ ಶಾರದಾ ಶರನ್ನವರಾತ್ರಿ,? * ಏನೆಲ್ಲಾ ಕಾರ್ಯಕ್ರಮಗಳಿವೆ? ನೀವೂ ಬನ್ನಿ ಶೃಂಗೇರಿಗೆ NAMMUR EXPRESS NEWS ಶೃಂಗೇರಿ:- ಜಗತ್ಪ್ರಸಿದ್ಧ ಶೃಂಗೇರಿ ಶ್ರೀ ಶಾರದಾಪೀಠದ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 2ರ ಬುಧವಾರ ಪ್ರಾರಂಭಗೊಂಡು ಅ.13 ರ ಭಾನುವಾರದವರೆಗೆ ನೆರವೇರಲಿದೆ. ಈಗಾಗಲೇ ಉತ್ಸವದ ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದು ಶೃಂಗೇರಿ ಪೂರ್ತಿ ಹಬ್ಬದ ಕಳೆಗಟ್ಟಿದೆ. ಸಾವಿರಾರು ಜನರು ಈ ದಸರಾ ಹಬ್ಬಕ್ಕೆ ಶೃಂಗೇರಿಗೆ ಆಗಮಿಸಲಿದ್ದಾರೆ. ದಿನಕ್ಕೊಂದು ವಿಶೇಷ ಅಲಂಕಾರ ದಿನಕ್ಕೊಂದು ವಿಶೇಷ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶ್ರೀಶಾರದೆ ಅಕ್ಟೋಬರ್ 2 ರಂದು ಶ್ರೀ ಶಾರದಾಂಬೆಗೆ ಮಹಾಭಿಷೇಕ ನೆರವೇರಲಿದ್ದು ಜಗತ್ಪ್ರಸೂತಿಕಾಲಂಕಾರದಲ್ಲಿ ಶ್ರೀ ಶಾರದೆ ಕಂಗೊಳಿಸಲಿದ್ದಾಳೆ. ಅ.3ರಂದು ಶಾರದಾ ಪ್ರತಿಷ್ಠೆ ಹಾಗೂ ಜಗನ್ಮಾತೆಗೆ ಹಂಸವಹನಾಲಂಕಾರ, ಅ.4 ಬ್ರಾಹ್ಮೀ ಅಲಂಕಾರ, ಅ.5 ಮಾಹೇಶ್ವರೀ, ಅ.6 ಮಯೂರ ವಾಹನಾಲಂಕಾರ, ಅ.7 ಗರುಡವಾಹನಾಲಂಕಾರ, ಅಂದು ಶತ ಚಂಡೀಮಹಾಯಾಗದ ಸಂಕಲ್ಪ,ಪುರಶ್ಚರಣಾರಂಭ, ಅ.8 ಮೋಹಿನೀ…