ಶಿವಮೊಗ್ಗ 857 ಕೇಸ್, 17 ಮಂದಿ ಬಲಿಚಿಕ್ಕಮಗಳೂರು 582 ಕೇಸ್, 2 ಸಾವುಉಡುಪಿ ಜಿಲ್ಲೆಯಲ್ಲೂ ಕರೋನಾ ಕಾಟ! ಮಲೆನಾಡು/ಕರಾವಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ 857 ಪ್ರಕರಣ ದಾಖಲಾಗಿದೆ. 17 ಮಂದಿ ಸಾವನ್ನು ಕಂಡಿದ್ದಾರೆ. ಇದರಿಂದಾಗಿ 495 ಸಾವು ಕಂಡಂತಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ 4592 ಸಕ್ರಿಯ ಪ್ರಕರಣ ಇದೆ. ಈ ಪೈಕಿ ಶಿವಮೊಗ್ಗ 256, ಭದ್ರಾವತಿ 34, ಶಿಕಾರಿಪುರ 43, ತೀರ್ಥಹಳ್ಳಿ 129, ಸೊರಬ 62, ಹೊಸನಗರ 111, ಸಾಗರ 192 ಪ್ರಕರಣ ವರದಿಯಾಗಿದೆ.ಶಿವಮೊಗ್ಗ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.ಕಾಫಿ ನಾಡಲ್ಲಿ ಅಬ್ಬರ!: ಚಿಕ್ಕಮಗಳೂರಲ್ಲಿ 582 ಪ್ರಕರಣ ವರದಿಯಾಗಿದೆ. ಒಟ್ಟು 4629 ಸಕ್ರಿಯ ಪ್ರಕರಣ ಇವೆ.ಚಿಕ್ಕಮಗಳೂರು 195, ಕಡೂರು 139, ತರೀಕೆರೆ 130, ಮೂಡಿಗೆರೆ 73, ಎನ್. ಆರ್. ಪುರ 9, ಕೊಪ್ಪ 8, ಶೃಂಗೇರಿ 28 ಪ್ರಕರಣ ದಾಖಲಾಗಿದೆ. 2 ಸಾವು ಸಂಭವಿಸಿದೆ.ಎನ್. ಆರ್. ಪುರದ ತಾಲೂಕಿನ ಸತ್ಯನಾರಾಯಣ ಎಂಬುವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಸಾವನ್ನು ಕಂಡಿದ್ದಾರೆ.ಕರಾವಳಿಗೂ ಕರೋನಾ…
Author: Nammur Express Admin
ತೀರ್ಥಹಳ್ಳಿ ಪಟ್ಟಣದ ಸಮೀಪವೇ ಘಟನೆಮೇಳಿಗೆ ಬಳಿ ದ್ವೇಷಕ್ಕೆ ಅಡಿಕೆ ಮರ ಕಡಿತಲೆಸಹಾಯವಾಣಿಗೆ ಕಾಲ್ ಮಾಡಲು ನೆಟ್ವರ್ಕ್ ಇಲ್ಲ! ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಹತ್ತಿರ ವಾಟಗಾರು ಗ್ರಾಮದಲ್ಲಿ ಕಾಡಿನಲ್ಲಿ ಕಾಡು ಕೋಣದ ಶವವೊಂದು ಪತ್ತೆಯಾಗಿದೆ . ಶಿಕಾರಿಯಿಂದ ಹತ್ಯೆ ಮಾಡಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸುಮಾರು 8 -10 ದಿನಗಳ ಹಿಂದೆ ಈ ಕೋಣವು ಸತ್ತು ಬಿದ್ದಿರುವಂತೆ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಶಿಕಾರಿಯ ಗುಂಡು ತಗಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಡಿಕೆ ಮರ ಕಡಿತ.. ದ್ವೇಷ ಕಾರಣ..!ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗರಡಿಗದ್ದೆಯಲ್ಲಿ 25-30 ಅಡಿಕೆ ಸಸಿಗಳನ್ನು ವಯುಕ್ತಿಕ ದ್ವೇಷ ಕಡಿದಿದ್ದಾರೆ ಎಂದು ಹೇಳಲಾಗಿದೆ. ಗರಡಿಗದ್ದೆ ಶ್ರೀನಿವಾಸ್ ಎಂಬುವರ ತೋಟ ಕಡಿಯಲಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಶ್ರೀನಿವಾಸ್ ಪತ್ನಿ ಮೇಲೂ ಹಲ್ಲೆ ನಡೆದು ದೂರು…
ಒಂದೇ ಕುಟುಂಬದ ಮೂವರ ಕೊರೋನಾ ಸಾವು!ಮೆಗ್ಗಾನ್ ನಲ್ಲಿ ಮುಗಿಲು ಮುಟ್ಟಿದ ನೋವಿನ ದನಿದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಳ: ಜನತೆಗೆ ಆತಂಕ ಶಿವಮೊಗ್ಗ: ದಿನೇ ದಿನೇ ಶಿವಮೊಗ್ಗದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ದಿನ ಹತ್ತಾರು ಮಂದಿ ಸಾಯುತ್ತಿದ್ದಾರೆ. ಇದೀಗ ಒಂದೇ ಕುಟುಂಬದ ಮೂವರು ಸದಸ್ಯರು ಕೊರೋನಾ ಸೋಂಕಿಗೆ ಬಲಿಯಾದ ಹಿನ್ನಲೆಯಲ್ಲಿ ಈಗಲೇ ಶವಗಳನ್ನ ನೀಡುವಂತೆ ಆಗ್ರಹಿಸಿ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಾವಿಗೆ ಕುಟಬಸ್ಥರು ಆಕ್ರೋಶ ಹೊರಹಾಕಿದ್ದಾರೆ .60 ವರ್ಷದ ತಾಯಿ, 40 ವರ್ಷದ ಮಗ ಹಾಗೂ 35 ವರ್ಷದ ಮಗಳು ಸಾವು ಕಂಡಿದ್ದು ತಕ್ಷಣವೇ ಮೃತದೇಹವನ್ನ ಕುಟುಂಬಸ್ಥರಿಗೆ ನೀಡುವಂತೆ ಆಗ್ರಹಿಸಿದ್ದಾರೆ. ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ಮಂದಿ ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನ ಸಾವು ಕಂಡಿದ್ದಾರೆ. ಮೃತರು ಶಿವಮೊಗ್ಗದ ಕುಂಬಾರಬೀದಿ ನಿವಾಸಿಗಳಾಗಿದ್ದು , ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಾವಿನ…
ದೆಹಲಿಯಲ್ಲಿ 2 ತಿಂಗಳು ಉಚಿತ ರೇಷನ್ಟ್ಯಾಕ್ಸಿ-ಆಟೋ ಚಾಲಕರಿಗೆ ಸಹಾಯ ಧನಆಂಧ್ರದಲ್ಲೂ ಜಗನ್ ಜನ ಸೇವೆಕರ್ನಾಟಕದಲ್ಲಿ ಜನತೆಗೆ ಏನೂ ಇಲ್ಲ! ನವ ದೆಹಲಿ: ಕರೋನಾ ತುರ್ತು ಸಂದರ್ಭದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಮಾದರಿಯಾಗಿದ್ದಾರೆ. ಮುಂದಿನ ಎರಡು ತಿಂಗಳು ಉಚಿತ ಪಡಿತರ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.ಕೊರೊನಾ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಲಾಕ್‍ಡೌನ್ ಜಾರಿಗೆ ತರಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಸರ್ಕಾರ ಜನರ ನೆರವಿಗೆ ಧಾವಿಸಿದೆ. ಆದರೆ ಕರ್ನಾಟಕದಲ್ಲಿ ಇನ್ನು ಯಾವುದೇ ಯೋಜನೆ ಘೋಷಣೆಯಾಗಿಲ್ಲ.ದೆಹಲಿಯ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೇಷನ್ ಸಿಗಲಿದೆ. ದೆಹಲಿಯಲ್ಲಿರುವ ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂಪಾಯಿಯ ಆರ್ಥಿಕ ಸಹಾಯ ದೊರೆಯಲಿದೆ. ಸುಮಾರು ಒಂದೂವರೆ ಲಕ್ಷ ಜನರಿಗೆ ಆರ್ಥಿಕ ಸಹಾಯ ಸಿಗಲಿದೆ. ಕಳೆದ ವಾರವೂ ಕೇಜ್ರಿವಾಲ್ ಸರ್ಕಾರ ಕಾರ್ಮಿಕ ವರ್ಗಕ್ಕೂ ನೆರವು…
ಹೈದ್ರಾಬಾದ್ ಮೃಗಾಲಯದ ಸಿಂಹಗಳಿಗೆ ಕೋವಿಡ್ ಸೋಂಕು!ಅಪಾಯ.. ಅಪಾಯ.. ಪ್ಲೀಸ್ ಹುಷಾರ್..! ಬೆಂಗಳೂರು: ಕರೋನಾ ಮಹಾಮಾರಿ ಇದೀಗ ದೇಶದಲ್ಲಿ ಜನರನ್ನು ಬೀದಿ ಹೆಣ ಮಾಡುತ್ತಿದೆ. ಈ ನಡುವೆ ಆತಂಕಕಾರಿ ವಿಷಯವೊಂದು ಹೊರ ಬಿದ್ದಿದೆ. ಪ್ರಾಣಿಗಳಿಗೂ ಕರೋನಾ ರೀತಿಯ ಸೋಂಕು ಹರಡುತ್ತಿರುವುದು ಬೆಳಕಿಗೆ ಬಂದಿದೆ. ಕರೋನಾ ಸೋಂಕಿತರು ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿದರೆ ಕರೋನಾ ಬರುವ ಸಾಧ್ಯತೆಗಳಿವೆ. ಕರೋನಾ ಸೋಂಕು ತಗುಲಿದವರು ಪ್ರತ್ಯೇಕವಾಗಿ ಐಸೋಲೇಷನ್ ಆಗುವುದರ ಜೊತೆಗೆ ಪ್ರಾಣಿಗಳಿಗೂ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಿದೆ. ಹೈದರಾಬಾದ್‌ನಲ್ಲಿರುವ ಮೃಗಾಲಯದಲ್ಲಿ ಕರೋನಾ ಸೋಂಕು ಪ್ರಾಣಿಗಳಿಗೂ ಹಬ್ಬಿದೆ. ಮೃಗಾಲಯದಲ್ಲಿರುವ ಎಂಟು ಸಿಂಹಗಳಲ್ಲಿ ಕರೋನಾ ಸೋಂಕು ಲಕ್ಷಣ ಕಂಡುಬಂದಿದೆ. ಕರೋನಾ ಪ್ರಾಣಿಗಳಿಗೂ ಬಿಡದೇ ಕಾಡುವ ಭೀತಿಯಿದ್ದು, ಆದಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಪ್ರಾಣಿಗಳಿಗೆ ಕರೋನಾ ಸೋಂಕು ಹಬ್ಬಿದರೆ ನಿಜಕ್ಕೂ ಅದು ದುರಂತಕ್ಕೆ ಮುನ್ನಡಿ ಬರೆಯಲಿದೆ.ಗ್ರಾಮೀಣ ಪ್ರದೇಶದಲ್ಲಿ ಸಾಕು ಪ್ರಾಣಿಗಳಾದ ದನ, ಕುರಿ, ಕೋಳಿ, ಬೆಕ್ಕು, ನಾಯಿಗಳನ್ನು ಕೊರೋನಾ ಸೋಂಕಿನಿಂದ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಾಗಲಿದೆ.ಒಂದು ವೇಳೆ ಪ್ರಾಣಿಗಳಿಗೆ ಸೋಂಕು ತಗುಲಿದ್ದೇ…
ಕರೋನಾ ಸಂಕಷ್ಟದಲ್ಲಿ ರಾಜಕೀಯ ಧರಣಿ ಏಕೆ..?ಜನರ ಜೀವನಮರಣ ಹೋರಾಟಕ್ಕೆ ನೇರವಾಗಿ..!ರಾಜಕೀಯ ಬಿಡಿ.. ಜನರ ಕೆಲಸ ಮಾಡಿ..! ನವ ದೆಹಲಿ: ದೇಶದಲ್ಲಿ ಚುನಾವಣೆ ನಡೆಸಿದ್ದೆ ತಪ್ಪು. ಮತದಾನದಿಂದ ದೇಶದಲ್ಲಿ ಕರೋನಾ ಹೆಚ್ಚಿರುವ ನಡುವೆ ಇದೀಗ ಚುನಾವಣಾ ಫಲಿತಾಂಶದ ದಿನ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಮೇ 5ರಂದು ಧರಣಿ ಮಾಡುವುದಾಗಿ ಬಿಜೆಪಿ ತಿಳಿಸಿದೆ. ದೇಶ ಅಳುತ್ತಿರುವ ಪಕ್ಷದ ಈ ನಿರ್ಧಾರ ಇದೀಗ ಜನರ ಪಿತ್ತ ನೆತ್ತಿಗೆರಿಸಿದೆ. ತಕ್ಷಣ ಧರಣಿ ಕೈಬಿಡುವಂತೆ ಒತ್ತಾಯ ಮಾಡಲಾಗಿದೆ. ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಇಲ್ಲಿ ಜನ ಕರೋನಾದಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬಿಜೆಪಿ ಬರಬೇಕಿದೆ. ಆದರೆ ದೇಶದಲ್ಲಿ ಪಕ್ಷದ ಎಲ್ಲಾ ಸಾಂಸ್ಥಿಕ ಮಂಡಳಿಗಳಲ್ಲಿ ಕೋವಿಡ್ ನಿಯವನ್ನು ಪಾಲಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಲಾಗಿದೆ. ಆದರೆ ಕರೋನಾ ಪ್ರತಿ ಊರಲ್ಲೂ ನೂರಾರು ಪ್ರಾಣ ಬಲಿ ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಧರಣಿ, ಪ್ರತಿಭಟನೆಗಳಿಂದ ಮತ್ತಷ್ಟು ಜನತೆಗೆ ಕರೋನಾ ಹರಡಿ ಮತ್ತಷ್ಟು ಜನ…
ಮದ್ಯ ಬೇಡಿಕೆಯಲ್ಲಿ ಭಾರೀ ಕುಸಿತಹಣ ಇಲ್ಲ: ಎಣ್ಣೆ ಖರೀದಿಗೆ ಹಿಂದೇಟು!ಕುಡಿತ ಬಿಡಿ..ಮನೆ ಕಾಪಾಡಿ..! ಬೆಂಗಳೂರು: ರಾಜ್ಯದಲ್ಲಿ ಕರೋನಾ ಕರ್ಫ್ಯೂ ಜಾರಿಯಿಂದ ಮದ್ಯ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿದ್ದು, ಸಾಮಾನ್ಯ ದಿನಗಳಿಗೆ ಹೋಲಿಕೆ ಮಾಡಿದರೆ ನಿತ್ಯ ₹30ರಿಂದ ₹34 ಕೋಟಿ ನಷ್ಟವಾಗುತ್ತಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಟಫ್ರೂಲ್ಸ್ ಜಾರಿಯಲಿದ್ದು, ಮದ್ಯ ಮಾರಾಟಕ್ಕೆ ಬೆಳಗ್ಗೆ 6 ರಿಂದ10 ಗಂಟೆವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಾರ್ಸೆಲ್ ರೂಪದಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅನುಮತಿ ಇರುವುದರಿಂದ ಜನ ಮದ್ಯ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಪ್ರತಿ ದಿನ ₹65 ಕೋಟಿಯಿಂದ ರಿಂದ ₹70 ಕೋಟಿ ಮದ್ಯ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಸರಿ ಸುಮಾರು ₹45 ಕೋಟಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ರಾಜ್ಯದ ಆರ್ಥಿಕ ಮೂಲ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಸಾಮಾನ್ಯ ದಿನಗಳಲ್ಲಿ ಹೋಲಿಕೆ ಮಾಡಿದರೆ ನಿತ್ಯ₹ 30 ರಿಂದ₹34 ಕೋಟಿ ನಷ್ಟವಾಗುತ್ತಿದೆ ಎಂದು ಅಬಕಾರಿ…
ಒಂದೇ ದಿನ ಚಾಮರಾಜನಗರದಲ್ಲಿ 24 ಸಾವುಆಕ್ಸಿಜೆನ್ ಸಿಗದೇ ಪ್ರಾಣಬಿಟ್ಟ ರೋಗಿಗಳು!ಆಸ್ಪತ್ರೆ ಎದುರು ಈಗ ಕುಟುಂಬದ ನರಳಾಟ!ಈ ಸಾವಿಗೆ ಯಾರು ಹೊಣೆ..? ಚಾಮರಾಜನಗರ: ರಾಜ್ಯದಲ್ಲಿ ಕರೋನಾ ಮಹಾಮಾರಿ ಸಾವಿನ ಮನೆಯಾಗುತ್ತಿದೆ. ದಿನೇ ದಿನೇ ಸಾವು ಹೆಚ್ಚಾಗುತ್ತಿದೆ. ಇತ್ತ ಸರ್ಕಾರದ ನಿರ್ಲಕ್ಷ್ಯ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸರ್ಕಾರಕ್ಕೆ ಈ ಪ್ರಕರಣ ದೊಡ್ಡ ಸಾವಾಲಾಗಿದೆ.ಏನಿದು ಘಟನೆ?: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಗದೇ ಒಂದೇ ದಿನ 24ಕ್ಕೂ ಅಧಿಕ ಮಂದಿ ಕರೊನ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾನುವಾರ ನಡುರಾತ್ರಿಯಲ್ಲಿ ಈ ಅವಘಡ ನಡೆದಿದ್ದು, ಕರೊನ ಸೋಂಕಿತರಿಗಾಗಿ ಚಿಕಿತ್ಸೆ ನೀಡಲಾಗುತ್ತಿದ್ದ ಕೊಠಡಿಗೆ ತಲುಪುತ್ತಿದ್ದ ಅಕ್ಸಿಜನ್ ಏಕಾಏಕಿ ವ್ಯತ್ಯಯದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆದರೆ ಘಟನೆಯಲ್ಲಿ ಸಾವನ್ನಪ್ಪಿರುವವರು ನಾನಾ ಕಾರಣದಿಂದ ಮೃತಪಟ್ಟಿದ್ದರೆ ಅಂತ ಜಿಲ್ಲಾಧಿಕಾರಿ ಹೇಳುತ್ತಿದ್ದು, ತನಿಖೆ ಬಳಿಕ ಮಾತ್ರ ಈ ಬಗ್ಗೆ ಸತ್ಯ ತಿಳಿದು ಬಂದಿದೆ. ಆಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿದ್ದಾರೆ.…
ಸೊರಬದ ದತ್ತಾತ್ರೇಯ ಹೊಸಬಾಳೆಗೆ ಮಹತ್ವದ ಹುದ್ದೆಪ್ರಧಾನ ಕಾರ್ಯದರ್ಶಿ ಸ್ಥಾನ ಶಿವಮೊಗ್ಗ: ರಾಜಕೀಯ ಕ್ಷೇತ್ರದಲ್ಲಿ ದೇಶ ಮಟ್ಟದಲ್ಲಿ ಇದೀಗ ಶಿವಮೊಗ್ಗ ಜಿಲ್ಲೆ ಸದ್ದು ಮಾಡುತ್ತಿದೆ. ಈ ನಡುವೆ ದೇಶದ ಆರೆಸ್ಸೆಸ್ ಆಗ್ರ ಸ್ಥಾನ ಸರ ಕಾರ್ಯ ವಾಹಕ್ ಸ್ಥಾನಕ್ಕೆ ಶಿವಮೊಗ್ಗ ಜಿಲ್ಲೆ ಸೊರಬ ಮೂಲದ ದತ್ತಾತ್ರೇಯ ಹೊಸಬಾಳೆ ನೇಮಕವಾಗಿದ್ದಾರೆ.ಸೊರಬದಲ್ಲಿ ಜನಿಸಿದ ದತ್ತ ಖ್ಯಾತಿಯ ಸಂಘಟಕ ದತ್ತಾತ್ರೇಯ ಈ ಹಿಂದೆ ಸಂಘದಲ್ಲಿ ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸಿದ್ದರು. 1975-77ರವರೆಗೆ 16 ತಿಂಗಳು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ವಾಸ ಅನುಭವಿಸಿದ್ದರು. ಶನಿವಾರ ಬೆಂಗಳೂರಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ಎಬಿವಿಪಿಯಲ್ಲಿ ಸುಮಾರು 12 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಹೊಸಬಾಳೆ ಅವರು ಮೈಸೂರು ವಿವಿ ಇಂಗ್ಲಿಷ್ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿರುವ ಇವರು ಅಸೀಮ ಎಂಬ ಕನ್ನಡ ಮ್ಯಾಗಜೀನ್ ಹುಟ್ಟು ಹಾಕಿದರು. ಈಗಾಗಲೇ ಶಿವಮೊಗ್ಗ ಮೂಲದ ಸಂತೋಷ್ ಜೀ ಸಂಘದ ಮಹತ್ವದ ಹುದ್ದೆ ಹೊಂದಿದ್ದಾರೆ.ರಾಷ್ಟ್ರ ಮಟ್ಟದ…
ಮಾ.20ಕ್ಕೆ ಶಿವಮೊಗ್ಗದಲ್ಲಿ ಸಮಾವೇಶಸಾವಿರಾರು ರೈತರು ಹಾಜರ್ರಾಜ್ಯದಲ್ಲಿ ಹೊಸ ಹೋರಾಟಕ್ಕೆ ನಾಂದಿ ಶಿವಮೊಗ್ಗ: ರಾಜ್ಯದಲ್ಲಿ ರೈತರ ಹೋರಾಟಕ್ಕೆ ರೈತರ ನಾಡು, ಹೋರಾಟಗಳ ಬೀಡು ಶಿವಮೊಗ್ಗ ಸಜ್ಜಾಗಿದೆ.ಮಾ.20ರಂದು ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ರೈತ ಪಂಚಾಯತ್ ಆಯೋಜನೆ ಮಾಡಲಾಗಿದೆ.ಸಾವಿರಾರು ಜನ ರೈತರು, ಹೋರಾಟಗಾರರು ಈಗಾಗಲೇ ಆಗಮಿಸಲು ಸಿದ್ಧತೆ ನಡೆಸಿದ್ದಾರೆ.ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ, ಕಾರ್ಮಿಕ ಕಾಯ್ದೆ ವಿರೋಧಿಸಿ, ರೈತರ ಹೋರಾಟ ಬೆಂಬಲಿಸಿ ಈ ರೈತ ಪಂಚಾಯತ್ ಹಮ್ಮಿಕೊಳ್ಳಲಾಗಿದೆ.ಬಹುತೇಕ ಎಲ್ಲಾ ಸಮುದಾಯ, ಸಂಘಟನೆ, ಸಂಘ ಸಂಸ್ಥೆಗಳು ಸಹಕಾರ ನೀಡಿವೆ.ರಾಷ್ಟ್ರದ ಪ್ರಮುಖ ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯಧುವೀರ್ ಸಿಂಗ್ ಸೇರಿದಂತೆ ದೇಶ ಹಾಗೂ ರಾಜ್ಯದ ಪ್ರಮುಖ ರೈತ ಹೋರಾಟಗಾರರು ಭಾಗಿಯಾಗಲಿದ್ದಾರೆ.ಶನಿವಾರ ಸಂಜೆ 3ಕ್ಕೆ ಸಮಾವೇಶ ಶುರುವಾಗಲಿದ್ದು, ಈಗಾಗಲೇ ತಾಲೂಕುವಾರು ಸಾವಿರಾರು ರೈತರು ಸಿದ್ಧತೆ ನಡೆಸಿದ್ದಾರೆ.ಸಂಯುಕ್ತ ಕಿಸಾನ್ ಮೋರ್ಚಾ, ಐಕ್ಯ ಹೋರಾಟ ಸಮಿತಿ, ಕರ್ನಾಟಕ ರೈತ ಸಂಘ, ಹಸಿರು ಮನೆ ಈ ಸಮಾವೇಶ ಅಯೋಜನೆ ಮಾಡಿದೆ.ಮೆರವಣಿಗೆ ಇಲ್ಲ: ಕರೋನಾ ಮಾರ್ಗಸೂಚಿ ಹಿನ್ನೆಲೆ ಮೆರವಣಿಗೆ…