Author: Nammur Express Admin

ಅದ್ದೂರಿ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಸಜ್ಜು! * 9 ದಿನ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ * ವಿಶೇಷ ದರ್ಶನ ಟಿಕೆಟ್‌ಗೆ ಲಾಡು ಪ್ರಸಾದ * ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಜಾತ್ರೆ NAMMUR EXPRESS NEWS ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬಾ ದೇವಾಲಯದ ಬಾಗಿಲು ಅಕ್ಟೋಬರ್ 24ರಂದು ತೆರೆಯಲಿದೆ. ನವೆಂಬರ್ 3ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ ನಡೆಯಲಿದೆ. ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬಾ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವಂತೆ ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶ್ರೀ ಹಾಸನಾಂಬಾ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ-2024 ಪೊಸ್ಟರ್ ಬಿಡುಗಡೆ ಮಾಡಿದ ಸಚಿವ ರಾಜಣ್ಣ, ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿಗಿಂತ ನಾಲ್ಕು ಲಕ್ಷ ಹೆಚ್ಚು ಭಕ್ತರು ಆಗಮಿಸುವುದರೊಂದಿಗೆ ಸುಮಾರು 20…

Read More

ಗೋ ಉಳಿಸಿ ಬರೀ ರಾಜಕೀಯಕ್ಕೆ ಸೀಮಿತ ಆಗ್ತಿದೆಯಾ? – ಮಲೆನಾಡು ಗಿಡ್ಡ ತಳಿ ಸಂಶೋಧನಾ ಕೇಂದ್ರಕ್ಕೆ ಬೀಗ? – ಇದೀಗ ಯಾರಿಗೂ ಬೇಡದ ಕೂಸು ಮಹತ್ವಕಾಂಕ್ಷೆಯ ಕೇಂದ್ರ! – ತಾಲೂಕುಗಳಲ್ಲಿ ನಿರ್ಮಾಣವಾಗದ ಗೋ ಶಾಲೆ!? NAMMUR EXPRESS NEWS ಶಿವಮೊಗ್ಗ/ ಚಿಕ್ಕಮಗಳೂರು: ರಾಜ್ಯದ ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿದ್ದ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಬೀಗ ಜಡಿಯುವ ಸ್ಥಿತಿಗೆ ತಲುಪಿದೆ. ಯಾವ ಸರ್ಕಾರ, ರಾಜಕಾರಣಿಗಳಿಗೆ ನಿಜವಾದ ಗೋ ಪ್ರೇಮ ಮಾತ್ರ ಕಾಣುತ್ತಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗಿದ್ದಾಗ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲಾಯಿತು. ಆರಂಭದಲ್ಲಿ 1 ಕೋಟಿ ರೂ. ಅನುದಾನ ಸಹ ಮಂಜೂರು ಮಾಡಲಾಗಿತ್ತು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೇಂದ್ರದ ಜವಾಬ್ದಾರಿ ಹೊರಲು ಹಿಂದೇಟು…

Read More

ಸಾಗರದ ಶೃಂಗೇರಿ ಶಂಕರಮಠದಲ್ಲಿ ದಸರಾ ಉತ್ಸವ! * 25 ವರ್ಷ ಪೂರೈಸಿದ ಮಠ: ಶರನ್ನವರಾತ್ರಿ ವಿಶೇಷ ಧಾರ್ಮಿಕ * ಅ.3ರಿಂದ 12ವರೆಗೆ ದಸರಾ ಉತ್ಸವ * ವಿಜಯ ದಶಮಿ ಅಂಗವಾಗಿ ವಿಶೇಷ ಪೂಜೆ NAMMUR EXPRESS NEWS ಸಾಗರ: ಸಾಗರ ಪಟ್ಟಣದ ಶೃಂಗೇರಿ ಶಂಕರಮಠ 25 ವರ್ಷ ಪೂರೈಸುತ್ತಿದ್ದು,ಅ.3ರಿಂದ 12ವರೆಗೆ ಶರನ್ನವರಾತ್ರಿ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಧಾರ್ಮಿಕ, ಹೋಮಹವನಾದಿ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ಮಠದ ಧರ್ಮದರ್ಶಿ ಅಶ್ವಿನಿಕುಮಾ‌ರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವರಾತ್ರಿ ಅಂಗವಾಗಿ ಅ.3ರಂದು ದಕ್ಷಿಣಾಮೂರ್ತಿ ಹವನ, ಅ.4ರಂದು ದುರ್ಗಾಸೂಕ್ತ ಹವನ, ಅ.5ರಂದು ಲಕ್ಷ್ಮೀನಾರಾಯಣ ಹೃದಯ ಹವನ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಕನ್ನಡದಿಂದ ಬೈಲ್‌ ಲಿಪಿಗೆ ತರ್ಜುಮೆಕಾರ ಬೆಂಗಳೂರಿನ ಶಶಿಕಲಾ ಮೂರ್ತಿ ಮತ್ತು ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ವಿ.ಜಯರಾಮ್ ಅವರಿಗೆ ಶಾರದಾ ಪ್ರಸಾದಮ್ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು. ಅ.6ರಂದು ಮಹಾಗಣಪತಿ ಉಪನಿಷತ್ ಹವನವಿದ್ದು, ಬೆಳಗ್ಗೆ 11.30ರಿಂದ ಸದಾನಂದ ಶರ್ಮ ವಿರಚಿತ ‘ಮಧು…

Read More

ಸೂಪರ್ ಸ್ಟಾರ್ ರಜನೀಕಾಂತ್ ದಿಢೀರ್ ಅಸ್ವಸ್ಥ! * ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು * ತಮ್ಮದೇ ಗನ್‌ನಿಂದ ಗುಂಡು ಹಾರಿಸಿಕೊಂಡ ನಟ ಗೋವಿಂದ! NAMMUR EXPRESS NEWS ಚೆನ್ನೈ: ದಿಢೀರ್ ಅಸ್ವಸ್ಥತೆ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. 73 ವರ್ಷದ ನಟನ ಪ್ರಸ್ತುತ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಅವರು ಹೊಟ್ಟೆನೋವಿನ ಕಾರಣ ಸೆ.30ರಂದು ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ. ಇಂಟರ್ವೆನ್ಷನಲ್ ಹೃದ್ರೋಗ ತಜ್ಞ ಡಾ.ಸಾಯಿ ಸತೀಶ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. “ತಲೈವರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ರಜನಿಕಾಂತ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು. ಶಿವಾಜಿ, ಬಾಷಾ, ಎಂದಿರನ್ (ರೋಬೋಟ್), ಅಣ್ಣಾಥೆ, ಪೆಟ್ಟಾ, ಕಾಲಾ, ದರ್ಬಾರ್ ಮತ್ತು ಕಬಾಲಿ ಸೇರಿದಂತೆ ಹಲವು…

Read More

ಈಶ್ವರ ಮಲ್ಪೆ ಕುಟುಂಬಕ್ಕೆ 1ಲಕ್ಷ ಮೊತ್ತದ ಚೆಕ್! – ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ಜೀವ ಉಳಿಸಿದ! * ಮಂಗಳೂರು: ನೀರುಪಾಲು ಘಟನೆ, ಓರ್ವ ಯುವಕನ ಮೃತದೇಹ ಪತ್ತೆ! * ಕಾರ್ಕಳ:ಕಂಟೈನರ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು * ಬಂಟ್ವಾಳ:ಮನೆಗೆ ಬಡಿದ ಸಿಡಿಲು: ಅಪಾರ ಹಾನಿ NAMMUR EXPRESS NEWS ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಜಲ ಅವಘಡದಲ್ಲಿ ಮೃತಪಟ್ಟ ಮೃತದೇಹಗಳನ್ನು ನೀರಿನಿಂದ ಮೇಲೆತ್ತಿದ ಅಪದ್ಭಾಂದವ, ಖ್ಯಾತ ಮುಳುಗುತಜ್ಞ ಈಶ್ವ‌ರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾ‌ರ್ ಪುತ್ತಿಲ ಈಶ್ವ‌ರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು. ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ…

Read More

ಸೊರಬ: ಫಾರ್ಚೂನರ್ ಕಾರಲ್ಲಿ ಬಂದು ಹಸು ಕಳ್ಳತನ ! – ಶಿರಾಳಕೊಪ್ಪ: ವಿದ್ಯುತ್ ಶಾಕ್ ನಿಂದ ಯುವಕ ಸಾವು – ಚಾರ್ಮಾಡಿ ಘಾಟ್ : ಕಾರು ಮತ್ತು ಮೀನಿನ ವಾಹನದ ನಡುವೆ ಮುಖಾಮುಖಿ ಡಿಕ್ಕಿ – ತೀರ್ಥಹಳ್ಳಿ: ಬೈಕ್ ಸವಾರನಿಗೆ ಗುದ್ದಿದ ಕಾಡುಕೋಣ NAMMUR EXPRESS NEWS ಸೊರಬ : ಫಾರ್ಚೂನರ್ ಕಾರಿನಲ್ಲಿ ಬಂದ ಖದೀಮರು ಹಸುವನ್ನು ಕದ್ದು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ. ಹಸು ಕಳವು ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. KA 01 MZ 5843 ಬೂದು ಬಣ್ಣದ ಟೊಯೋಟಾ FORTUNER ಕಾರು ಕಳ್ಳರು ಮಂಕಿ ಕ್ಯಾಪ್ ಹಾಕಿಕೊಂಡು ಬಂದು, ಆಕಳುವೊಂದನ್ನು ಕಳ್ಳತನ ಮಾಡಿದ್ದಾರೆ. ಹಸು ಕದ್ದ ವಿಷಯ ತಿಳಿದ ಕೂಡಲೇ ಸ್ಥಳೀಯರು ಕಾರನ್ನು ಅಡ್ಡ ಹಾಕಲು ಯತ್ನಿಸಿದ್ದಾರೆ. ಆದರೆ, ಕಳ್ಳರು ಸ್ಥಳೀಯರ ಮೇಲೆ ಕಾರು ಹತ್ತಿಸುವ ಯತ್ನಿಸಿದ್ದಾರೆ. ಘಟನೆ ಕುರಿತು ಸ್ಥಳೀಯರು ಸೊರಬ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೊರಬದಲ್ಲಿ ಇತ್ತೀಚೆಗೆ ಹಸು…

Read More

ನಕ್ಸಲ್ ನಾಯಕ ವಿಕ್ರಂ ಗೌಡ ನೇತೃತ್ವದ 6 ಮಂದಿ ಶರಣಾಗತಿಗೆ ಮನಸು? * ರಾಜ್ಯದಲ್ಲಿ 14 ಮಂದಿ ಶರಣು: ಕೆಲವರು ಎನ್‌ಕೌಂಟರ್‌ಗೆ ಬಲಿ * ಕಾರ್ಯನಿರತವಾಗಿರುವ ಎನ್‌ಎನ್‌ಎಫ್ ಯೋಧರ ತಂಡ * ರಾಜ್ಯದಲ್ಲಿ ನಕ್ಷಲ್ ವಿರುದ್ಧ ಭಾರೀ ಕಾರ್ಯಚರಣೆ NAMMUR EXPRESS NEWS ಕಾರ್ಕಳ/ಶೃಂಗೇರಿ: ರಾಜ್ಯದಲ್ಲಿ ದಶಕಗಳ ಹಿಂದೆ ಸಕ್ರಿಯವಾಗಿದ್ದ ನಕ್ಸಲರು ಶರಣಾಗತಿಯತ್ತ ಒಲವು ತೋರಿದ್ದಾರೆ ಎನ್ನಲಾಗಿದೆ. ಶಂಕಿತ ನಕ್ಸಲ್‌ ನಾಯಕ ವಿಕ್ರಂ ಗೌಡ ನೇತೃತ್ವದ 6 ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟದ ಅರಣ್ಯದಂಚಿನಲ್ಲಿ ಇತ್ತೀಚೆಗೆ ಕಂಡುಬಂದಿದ್ದ ಶಂಕಿತ ನಕ್ಸಲರು ತಪ್ಪಲು ಭಾಗದಲ್ಲೇ ತಳವೂರಿಕೊಂಡಿರುವ ಶಂಕೆಯಿದೆ. ಅಲ್ಲಿ ನಿಯೋಜಿಸಿದ ಎನ್‌ಎನ್‌ಎಫ್ ಯೋಧರ ತಂಡ ಈಗಲೂ ಆ ಭಾಗದಲ್ಲಿ ಕಾರ್ಯನಿರತವಾಗಿದೆ. ನಕ್ಸಲ್ ಚಟುವಟಿಕೆ ಸಂಪೂರ್ಣ ತಹಬದಿಗೆ ಬಂದಿದ್ದು ಇದೀಗ ನಕ್ಸಲರು ಶರಣಾಗತಿಗೆ ಮನಸು ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಸರಕಾರ ಈ ಹಿಂದೆ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನ ಫ‌ಲಕದಲ್ಲಿ 22 ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಹನುಮಂತನ ವಿಶೇಷ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರು ಎಲ್ಲಿಂದಲಾದರೂ ಹಠಾತ್ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಬಹುದು. ಕುಟುಂಬದೊಂದಿಗೆ ವಾತ್ಸಲ್ಯ ಹೆಚ್ಚಾಗಬಹುದು. ನೀವು ಕೆಲವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡಬಹುದು. ನೀವು ಕುಟುಂಬ ಸಂತೋಷವನ್ನು ಪಡೆಯಬಹುದು, ನೀವು ವಿದ್ಯಾರ್ಥಿಯಾಗಿದ್ದರೆ ನೀವು ಕ್ರೀಡೆಯಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ** ವೃಷಭ ರಾಶಿ : ಇಂದು ವೃಷಭ ರಾಶಿಯ ಜನರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು, ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಗೌರವ ಹೆಚ್ಚಾಗಲಿದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು.…

Read More

ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ಕನ್ನಡತನ ಪುಸ್ತಕ ಬಿಡುಗಡೆ – ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು – ಜನಮನ ಸೆಳೆದ “ಜೊತೆಗಿರುವನು ಚಂದಿರ” ನಾಟಕ NAMMUR EXPRESS NEWS ತೀರ್ಥಹಳ್ಳಿ: ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸು ವಲ್ಲಿ ಹಿಂದೆ ಬಿದ್ದಿದ್ದಾರೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆ‌ರ್.ದುರ್ಗಾದಾಸ್ ಅಭಿಪ್ರಾಯಪಟ್ಟರು. ಸರ್ಜಾಶಂಕರ್‌ ಹರಳಿಮಠ ಅವರ ಸಂಶೋಧನಾ ಕೃತಿ ‘ಕನ್ನಡತನ’ ಬಿಡುಗಡೆಗೊಳಿಸಿ ಮಾತನಾಡಿದರು. ಶನಿವಾರ ‘ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು. ಸಾಹಿತಿ ಜೆ.ಕೆ. ರಮೇಶ್ , ಪಂಚಾಯಿತಿ…

Read More