7 ಕೋಟಿ ರೂ.ಆನ್ಲೈನ್ ವಂಚನೆ: ಗ್ಯಾಂಗ್ ಅರೆಸ್ಟ್! – ಮೈಸೂರು: ಹೆದ್ದಾರಿಯಲ್ಲಿ ಕೆಎಸ್‌ಆರ್ ಟಿ ಸಿ ಬಸ್ ಭೀಕರ ಅಪಘಾತ! * ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ * ಮೈಸೂರು ಅನುಮಾನಾಸ್ಪದವಾಗಿ ವೈದ್ಯೆ ಸಾವು! * ಪಿತೃಪಕ್ಷ ಪೂಜೆ ಬಳಿಕ ಎಣ್ಣೆ ಪಾರ್ಟಿ, ಸ್ನೇಹಿತನ ಬಗೆದು ಕೊಂದ! NAMMUR EXPRESS NEWS ಬೆಂಗಳೂರು: ಪ್ರಮುಖ ಕೈಗಾರಿಕೋದ್ಯಮಿ ಪ್ರತಿಷ್ಠಿತ ವರ್ದಮಾನ್ ಗ್ರೂಪ್ ಮಾಲಿಕರಾದ ಶ್ರೀಪಾಲ್ ಓಸ್ವಾಲ್ ಅವರಿಗೆ 7 ಕೋಟಿ ರೂಪಾಯಿ ವಂಚಿಸಿದ ಆರೋಪಿ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ವಂಚಿಸಲಾದ ಆರೋಪಿಗಳಿಂದ ಈಗಾಗಲೇ 5.25 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಲೂಧಿಯಾನ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿ ಹೆಚ್ಚುವರಿ ಗ್ಯಾಂಗ್ ಸದಸ್ಯರನ್ನು ಗುರುತಿಸಿದ್ದಾರೆ. ಎಲ್ಲರೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಬಂದವರು ಮತ್ತು ಅವರನ್ನು ಬಂಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಂಚಕರು ವರ್ಧಮಾನ್…
Author: Nammur Express Admin
ಶೃಂಗೇರಿಯಲ್ಲಿ ಭದ್ರಾವತಿ ಮೂಲದ 10 ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ! – ಪರೀಕ್ಷೆಗೆ ಹಾಜರಾಗದೆ ಪಿಜಿಯಲ್ಲಿ ಆತ್ಮಹತ್ಯೆ: ಕಾರಣ ನಿಗೂಢ – ಕಳಸದಲ್ಲಿ ತೋಟದಲ್ಲಿದ್ದ ರೈತನಿಗೆ ಕಾಡು ಕೋಣ ತಿವಿದು ಗಾಯ! NAMMUR EXPRESS NEWS ಶೃಂಗೇರಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 10ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ. ಧ್ರುವ ಎಸ್ ಕೆ (16) ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ. ಶೃಂಗೇರಿಯ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಧ್ರುವ, ಸೋಮವಾರ ಮಧ್ಯಾಹ್ನ 11:30 ಸುಮಾರಿಗೆ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರ ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಇದ್ದು, ಆದರೆ, ದ್ರುವ ಗೈರುಹಾಜರಾಗಿದ್ದಾನೆ. ಗೈರುಹಾಜರಾದ ಕಾರಣ ಶಾಲೆಯಿಂದ ಧ್ರುವನ ಪೋಷಕರಿಗೆ ಕರೆ ಮಾಡಿದ್ದಾರೆ. ನಂತರ ಪೋಷಕರು ಧ್ರುವ ಉಳಿದಿರುವ ಬಾಯ್ಸ್ ಪಿಜಿಯ ಮಾಲೀಕರಿಗೆ ಕರೆ ಮಾಡಿದ್ದಾರೆ. ಪಿಜಿಯ ಮಾಲೀಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ,…
BREAKING NEWS ಕಾರ್ಕಳದಲ್ಲಿ ಭೀಕರ ಅಪಘಾತಕ್ಕೆ ನಾಲ್ವರು ಬಲಿ! – ನಲ್ಲೂರು ಬಳಿ ಬೈಕ್ ಗೂಡ್ಸ್ ವಾಹನ ಅಪಘಾತ – ಮಕ್ಕಳು ಸೇರಿ 4 ಮಂದಿ ಮೃತ್ಯು ದುರ್ಮರಣ NAMMUR EXPRESS NEWS ಕಾರ್ಕಳ: ಕಾರ್ಕಳದ ನಲ್ಲೂರು ಪಾಜೆ ಗುಡ್ಡೆ ಬಳಿ ಬೈಕ್ ನಲ್ಲಿ ಬರುತ್ತಿದ್ದ 5 ಮಂದಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು 4 ಮಂದಿ ಮೃತ ಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೈಕ್ ನಲ್ಲಿ ಪತಿ, ಪತ್ನಿ ಹಾಗೂ 3 ಮಕ್ಕಳು ಬರುತ್ತಿದ್ದಾಗ ಪಾಜೇಗುಡ್ಡೆ ಬಳಿ ಗೂಡ್ಸ್ ವಾಹನ ಕ್ಕೆ ಡಿಕ್ಕಿ ಹೊಡೆದಿದೆ. ಮೃತ ಪಟ್ಟವರು ವೇಣೂರು ಗಾಂಧಿ ನಗರದವರೆಂದು ಹೇಳಲಾಗಿದೆ. ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.
ಸಂಭ್ರಮದಿಂದ ನಡೆದ ಬಿಜೆಪಿ ಸಾಹಿತ್ಯ ಸಮಾವೇಶ! – ಮೈಸೂರು ಸಂಸದ ಯದುವೀರ್ ಭೇಟಿ: ಉದ್ಘಾಟನೆ – ಸಾಹಿತಿಗಳು, ಬರಹಗಾರರ ಸಮಾಗಮ: ಗೌರವ NAMMUR EXPRESS NEWS ಉಡುಪಿ: ಕನ್ನಡ ಭಾಷೆಯ ಮೂಲಕ ರಾಜ್ಯದ ಒಗ್ಗೂಡುವಿಕೆಗಾಗಿ ಹೋರಾಟ ಮಾಡಿದ ಏಕೈಕ ಸಮುದಾಯ ಸಾಹಿತಿಗಳು, ಕಲಾವಿದರು ಹಾಗೂ ಕವಿಗಳು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸಾಹಿತ್ಯ ಸಮ್ಮೇಳನ ಆಯೋಜನೆ ಅಭಿನಂದನಾರ್ಹ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದರು. ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಕುಂಜಿಬೆಟ್ಟು ಶಾರದ ಮಂಟಪದಲ್ಲಿ ಜರುಗಿದ ಬಿಜೆಪಿ ಸಾಹಿತ್ಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮೈಸೂರು ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ, ಅದು ಚಾಮುಂಡೇಶ್ವರಿ ತಾಯಿಯ ಆಸ್ತಿ. ನಾವು ಆ ತಾಯಿಯನ್ನು ಮಹಿಷಾಸುರಮರ್ದಿನಿ ಎಂದು ನಂಬುತ್ತೇವೆ. ಈ ಧಾರ್ಮಿಕ ಭಾವನೆಗೆ ಧಕ್ಕೆ ಆಗದಂತೆ ಮಹಿಷ ದಸರಾ ಆಚರಿಸಬಹುದು. ಆದರೆ ಚಾಮುಂಡಿಬೆಟ್ಟದ ಮೇಲೆ ಮಹಿಷ ದಸರಾ ಸರಿಯಲ್ಲ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಸಾರ್ವಜನಿಕರಿಗೆ…
ಕೌನ್ ಬನೇಗಾ ಕರೋಡ್‌ಪತಿ: 6.40 ಲ.ರೂ. ಗೆದ್ದ ಮಂಗಳೂರಿನ ಅಪೂರ್ವಾ ಶೆಟ್ಟಿ! – ತುಳುವಿನಲ್ಲಿಯೇ ಮಾತನಾಡಿ ಗಮನ ಸೆಳೆದ ಕುಡ್ಲದ ಹುಡುಗಿ – ತುಳುನಾಡ ಪ್ರತಿಭೆಗೆ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆಗಳು NAMMUR EXPRESS NEWS ಮಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರವಾಗುವ “ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ಕಾರ್ಯಕ್ರಮದಲ್ಲಿ ಮಂಗಳೂರು ಪಂಪ್‌ವೆಲ್‌ನ ಯುವತಿ ಅಪೂರ್ವಾ ಶೆಟ್ಟಿ 6.40 ಲ.ರೂ. ಬಹುಮಾನ ಗೆದ್ದುಕೊಂಡಿದ್ದಾರೆ. ಅಲ್ಲದೆ ಅವರು ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ಮತ್ತು ಮಾವನ ಜತೆ ತುಳುವಿನಲ್ಲೇ ಮಾತನಾಡಿರುವುದಕ್ಕೆ ತುಳುವರಿಂದ ಶ್ಲಾಘನೆ ವ್ಯಕ್ತವಾಗಿದೆ. ಸೆ. 27ರಂದು ರಾತ್ರಿ ಅಪೂರ್ವಾ ಅವರ ಸಂಚಿಕೆ ಪ್ರಸಾರವಾಗಿದೆ. ಅಪೂರ್ವಾ 10 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದರು. 11ನೇ ಪ್ರಶ್ನೆಯಾಗಿ “ಮ್ಯಾನ್ ಗ್ರೋವ್ ಫಾರೆಸ್ಟ್(ಕಾಂಡ್ಲಾವನ) ಹೆಚ್ಚಿರುವ ದೇಶ ಯಾವುದು?’ ಪ್ರಶ್ನೆಯನ್ನು ಕೇಳಲಾಗಿತ್ತು. ಬ್ರೆಜಿಲ್, ನೈಜಿರೀಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶ್ಯಾದ ಆಯ್ಕೆ ನೀಡಲಾಗಿತ್ತು. ಉತ್ತರಿಸಲು ಗೊಂದಲಕ್ಕೀಡಾದ ಅಪೂರ್ವಾ ಉತ್ತರಕ್ಕಾಗಿ ಮಾವನಿಗೆ ಕರೆ ಮಾಡಿದರು. ಅವರೊಂದಿಗೆ ತುಳುವಿನಲ್ಲೇ ಪ್ರಶ್ನೆ ಕೇಳಿದ್ದರು. ಅವರು ನೈಜೀರಿಯಾ…
ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ – ವಾಗ್ದೇವಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ – ಮಾಳೂರು ಪ್ರೌಢ ಶಾಲೆ ವಿದ್ಯಾರ್ಥಿ ದೀಕ್ಷಿತ್ ಸಾಧನೆ – ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ, ಸೊರಬದ ವಾಮದೇವ ಗೌಡರಿಗೆ ಗೌರವ – ದಸರಾ ಕ್ರೀಡಾಕೂಟಕ್ಕೆ ತುಂಗಾ ಕಾಲೇಜಿನ ಜಯಸೂರ್ಯ ಆಯ್ಕೆ NAMMUR EXPRESS NEWS ತೀರ್ಥಹಳ್ಳಿ : ಭದ್ರಾವತಿಯಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಹಾಗೂ ಯೋಗಾಸನ ಸ್ಪರ್ಧೆಗಳಲ್ಲಿ ಪಟ್ಟಣದ ಪ್ರತಿಷ್ಠಿತ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತೇಜಸ್ ಎಂ ಶೆಣೈ ( 10 ನೆಯ ತರಗತಿ ), ಪ್ರಥಮ್ ಟಿ ಎನ್ ರಾವ್ (8 ನೆಯ ತರಗತಿ), ಆದ್ಯ ಹೆಚ್ ಕೆ ( 7 ನೆಯ ತರಗತಿ) ಚೆಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ ಸಂಹಿತಾ (6 ನೆಯ ತರಗತಿ) ರಿದಮಿಕ್ ಯೋಗದಲ್ಲಿ ಡಿವಿಜನ್ ಗೆ ಆಯ್ಕೆಯಾಗಿದ್ದಾರೆ. ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ…
ಮೂಡಿಗೆರೆ ಪಟ್ಟಣಕ್ಕೆ ಬಂದ ಕಾಡಾನೆ! – ಬೆಳ್ಳಂಬೆಳಿಗ್ಗೆ ಗಜರಾಜನ ಸಿಟಿ ರೌಂಡ್ಸ್ * ಅರಣ್ಯ ಇಲಾಖೆಯಿಂದ ಕಾರ್ಯಚರಣೆ * ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ NAMMUR EXPRESS NEWS ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ರಸ್ತೆಯಲ್ಲಿ ಸೋಮವಾರ ಬೆಳಗಿನ ಜಾವ ಒಂಟಿ ಸಲಗ ಅಡ್ಡಾದಿಡ್ಡಿ ಓಡಾಡಿ ಜನರಲ್ಲಿ ಆತಂಕ ಸೃಷ್ಠಿಸಿದೆ. ಒಂಟಿಸಲಗ ಓಡಾಡಿದ ವಿಡಿಯೋ ಹೆಸ್ಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೇ ನಂದ ಮೂರ್ತಿಯವರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಡಿಗೆರೆ ಪಟ್ಟಣದ ಸಂತೆ ಮೈದಾನ, ಪಟ್ಟಣ ಪಂಚಾಯಿತಿ ರಸ್ತೆ, ಹೊಯ್ಸಳ ಕ್ರೀಡಾಂಗಣದ ಪಕ್ಕದಲ್ಲಿ ಒಂಟಿಸಲಗ ರೌಂಡ್ಸ್ ನಡೆಸಿದ್ದು ಜನರು ಆತಂಕಗೊಂಡಿದ್ದಾರೆ. ಒಂಟಿಸಲಗವನ್ನು ಕಾಡಿಗಟ್ಟುವ ನಿಟ್ಟಿನಲ್ಲಿ ಕಾರ್ಯಚಾರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ – ಬಡ, ಜನ ಪರ ಸರ್ಕಾರ ನಿರಾತಂಕವಾಗಿ ಅವಧಿ ಪೂರೈಸಲಿದೆ: ಶ್ರೇಯಸ್ ಪಟೇಲ್ – ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ NAMMUR EXPRESS NEWS ಹಾಸನ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಡ್ಡಿ, ಆತಂಕ ಇಲ್ಲದೆ ಮುಂದುವರಿಯಲಿದೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯಕ್ಕಿಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರು, ಅಧಿಕಾರಿಗಳೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನಮ್ಮದು ಜನಪರ, ಬಡವರ ಪರ ಇರುವ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದು, ಅಜರಾಮರ ಅನ್ನೋ ಹಾಗೆ ನಿರಾತಂಕವಾಗಿ ಅವಧಿ ಪೂರೈಸಲಿದೆ ಎಂದು ನುಡಿದರು. ಜಿಲ್ಲೆಯ ಹಾಗೂ ನಾಡಿನ ಸಮಸ್ತ ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲೆ ಹೀಗೆಯೇ ಇರಲಿ ಎಂದು ಮನವಿ ಮಾಡಿದರು. ಸಚಿವ ರಾಜಣ್ಣ ಬಗ್ಗೆ ಮೆಚ್ಚುಗೆ ರಾಜಣ್ಣ ಅವರು…
ಹಾಸನದಲ್ಲಿ ಮೊಳಗಿತು ಮತ್ತೆ ರೈತ ಹೋರಾಟದ ದನಿ! – ರೈತ ಒಡನಾಡಿಗಳ ಜೊತೆ ಸಂವಾದ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥೆಯ ನಾಟಕ ಪ್ರದರ್ಶನ – ರೈತ ಹೋರಾಟ ಏನಾಗಿದೆ? ಸರ್ಕಾರಗಳ ವಿರುದ್ಧ ಆಕ್ರೋಶ NAMMUR EXPRESS NEWS ಹಾಸನ: ರೈತ ಚಳುವಳಿಯ ಗರ್ಭ ಚೆನ್ನಾಗಿಯೇ ಇದೆ ಆದರೆ, ಸಂತಾನ ಅಭಿವೃದ್ಧಿ ತಡವಾಗುತ್ತಿದೆ ಎಂದು ರೈತ ಸಂಘಟನೆ ಮುಂಖಡ ಕೆ.ಟಿ.ಗಂಗಾಧರ್ ತಿಳಿಸಿದ್ದಾರೆ. ಹಾಸನಾಂಬ ಕಲಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಸಾಮೂಹಿಕ ನಾಯಕತ್ವದಲ್ಲಿ ಭಾನುವಾರ ಹಮಿಕೊಂಡಿದ್ದ ರೈತ ಒಡನಾಡಿಗಳ ಜೊತೆ ಸಂವಾದ ಹಾಗು ಡೈರೆಕ್ಟ್ ಆಕ್ಷನ್ ಎಂಬ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥೆಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1980ರ ರೈತರ ಚಳುವಳಿ ನವಲಗುಂದ, ನರಗುಂದ, ಗಜೇಂದ್ರಗಡ, ನಿಪ್ಪಾಣಿ ಸೇರಿ ವಿವಿಧೆಡೆ ನಡೆದ ಹೋರಾಟದಲ್ಲಿ 156 ಜನರನ್ನು ಪೊಲೀಸರು ಗುಂಡಿಕ್ಕಿ ಕೊಂದರು. ಆಕಸ್ಮಿಕವಾಗಿ ಗುಂಡು ತಗುಲಿ ರೈತರು ಸಾಯಲಿಲ್ಲ, ನಿರ್ಧಾಕ್ಷಣ್ಯವಾಗಿ ಕೊಲ್ಲಲಾಯಿತು. ಕೊಲ್ಲುತ್ತಾರೆ ಎಂದು ಗೊತ್ತಿದ್ದರೂ ಮಹಿಳೆಯರು,…
ಮೋಡ ಗುಡುಗು ಮಳೆ: ದೇವರೇ ಕಾಪಾಡು! – ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ – ಕರಾವಳಿಯಲ್ಲಿ ಚದುರಿದಂತೆ ಹಗುರದಿಂದ ಮಳೆ – ರಾಜ್ಯದಲ್ಲಿ ಹಲವೆಡೆ ಮಳೆ ಅಲರ್ಟ್ NAMMUR EXPRESS NEWS ಬೆಂಗಳೂರು: ರಾಜ್ಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಪ್ರತ್ಯೇಕವಾಗಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆ. ತಕ್ಕಮಟ್ಟಿಗೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. * ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ! ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಿಜಯನಗರ, ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ. ಮಲೆನಾಡಲ್ಲಿ ಭಾರೀ ಮಳೆ ಅಲರ್ಟ್! ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ…