ಬೇಲೂರಲ್ಲಿ ಮದವೇರಿದ ಸಲಗ ಸಂಚಾರ! – ರಸ್ತೆ ಸವಾರರಿಗೆ ಜೀವ ಭಯ: ತೋಟಕ್ಕೆ ನುಗ್ಗಿದ ಆನೆ – ಯುವಕರಿಂದ ವಿಡಿಯೋ ಮಾಡುತ್ತ ಹುಚ್ಚಾಟ NAMMUR EXPRESS NEWS ಬೇಲೂರು: ಮದವೇರಿದ ಒಂಟಿ ಸಲಗ ಹಾಡು ಹಗಲೇ ರಸ್ತೆಗಿಳಿದು ಹೆಜ್ಜೆ ಹಾಕುವ ಮೂಲಕ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ದರ್ಬಾರ್ ಪೇಟೆಯಲ್ಲಿ ನಡೆದಿದೆ. ಮೈಮೇಲೆ ಮಣ್ಣು ಸುರಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಕಾಡಾನೆ ಬಂದಿದ್ದನ್ನು ಕಂಡ ವಾಹನ ಸವಾರರು, ಆತಂಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ನಿಲ್ಲಬೇಕಾಯಿತು. ಈ ನಡುವೆ ಗ್ರಾಮದ ಕೆಲ ಯುವಕರು ಕಾಡಾನೆ ಹತ್ತಿರ ಹೋಗಿ ವಿಡಿಯೋ ಮಾಡುತ್ತ ಹುಚ್ಚಾಟ ಪ್ರದರ್ಶಿಸಿದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಲಗ, ರಸ್ತೆಯಲ್ಲಿ ನಡೆದು ಸಾಗಿ ನಂತರ ಕಾಫಿ ತೋಟದೊಳಗೆ ಹೋಯಿತು. ಕಾಡಾನೆ ಕಾಫಿ ತೋಟದೊಳಗೆ ಬರುತ್ತಿದ್ದಂತೆಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಭಯದಿಂದ ಕಾಫಿ ತೋಟದಿಂದ ಹೊರಗೆ ಬಂದಿದ್ದಾರೆ. ಒಂಟಿಸಲಗ ಕಾಫಿ ತೋಟದಲ್ಲೇ ಬೀಡು ಬಿಟ್ಟಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್…
Author: Nammur Express Admin
ರಸ್ತೆ ಮಧ್ಯೆ ಹೊತ್ತಿ ಉರಿಯುತ್ತಿರುವ ವಾಹನಗಳು.. ಹುಷಾರ್! – ರಾಜ್ಯದಲ್ಲಿ ಹಲವೆಡೆ ಕಾರು, ಲಾರಿ ನಿಂತಲ್ಲೇ ಭಸ್ಮ – ಮಂಗಳೂರು, ಹಾಸನ, ಚಿತ್ರದುರ್ಗದಲ್ಲಿ ಘಟನೆ NAMMUR EXPRESS NEWS ಮಂಗಳೂರು/ಹಾಸನ/ಚಿತ್ರದುರ್ಗ: ಇತ್ತೀಚಿಗೆ ರಸ್ತೆಯಲ್ಲಿ ಕಾರು, ವಾಹನಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿಯುವ ಘಟನೆಗಳು ಹೆಚ್ಚಾಗುತ್ತಿವೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಮೂರು ಘಟನೆಯಲ್ಲಿ ಲಾರಿ, ಕಾರು, ಓಮ್ನಿ ಹೊತ್ತಿ ಉರಿದಿದೆ. ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಶಾರ್ಟ್ ಸರ್ಕ್ಯೂಟ್‌ನಿಂದ ಆಯಿಲ್ ಕಂಟೈನರ್ ಹೊತ್ತಿ ಉರಿದ ಘಟನೆ – ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ನಗರದ ನವೀನ್ ಐಶ್ವರ್ಯ ಹೋಟಲ್ ಮುಂಭಾಗದ ಹೆದ್ದಾರಿಯಲ್ಲಿ ಬೆಂಗಳೂರಿಂದ ಬಳ್ಳಾರಿ ಕಡೆಗೆ ಸಾಗುತ್ತಿದ್ದ ಕಂಟೈನರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೇತ್ತ ಚಾಲಕ, ಕ್ಲೀನರ್ ಕಂಟೈನರ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಹಾಸನದಲ್ಲಿ ಹೊತ್ತಿ ಉರಿದ ಓಮ್ನಿ! ಹಾಸನ: ಚಲಿಸುತ್ತಿದ್ದ ಓಮ್ಮಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನದಲ್ಲಿ ನಡೆದಿದ್ದು ಇತರ ಸವಾರರನ್ನು ಬೆಚ್ಚಿ…
ಬಾಳೆಹೊನ್ನೂರಿನಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ..!! -ಶ್ರೀದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಆಯೋಜನೆ – 15 ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವ NAMMUR EXPRESS NEWS ಎನ್ ಆರ್ ಪುರ/ಬಾಳೆಹೊನ್ನೂರು: ಆಕ್ಟೋಬರ್ 3 ರಿಂದ 12ರವರೆಗೆ ನಡೆಯಲಿರುವ ನವರಾತ್ರಿ ಉತ್ಸವಕ್ಕೆ ಬಾಳೆಹೊನ್ನೂರು ಸಜ್ಜಾಗುತ್ತಿದೆ. ಇಲ್ಲಿನ ಶ್ರೀದುರ್ಗಾದೇವಿ ಸನ್ನಿಧಿಯಲ್ಲಿ ಶ್ರೀದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ವತಿಯಿಂದ ಆಯೋಜನೆ. 15ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದಲ್ಲಿ ಅಕ್ಟೋಬರ್ 3 ರಂದು ಬೆಳಿಗ್ಗೆ 8:50 ಕ್ಕೆ ಶ್ರೀದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಚಾಲನೆಗೊಳ್ಳುವ ನವರಾತ್ರಿ ಉತ್ಸವದಲ್ಲಿ ತಾಯಿಗೆ ಪ್ರತಿ ದಿನ ವಿಶೇಷ ಅಲಂಕಾರ ಹಾಗೂ ಪೂಜೆ,ವಿಜೃಂಭಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.ಅಕ್ಟೋಬರ್ 11 ರಂದು ಮಹಾನವಮಿ,ಆಯುಧ ಪೂಜಾ ಕಾರ್ಯಕ್ರಮ “ಧರ್ಮ ದಸರಾ” ಸಂಜೆ 7 ಗಂಟೆಯಿಂದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪೀಠಾಧಿಪತಿಗಳು ಶ್ರೀ ಪೇಜಾವರ ಮಠ,ಉಡುಪಿಯ ಪರಮಪೂಜ್ಯ ಶ್ರೀಶ್ರೀವಿಶ್ವ ತೀರ್ಥ ಪ್ರಸನ್ನ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ. ಯುವ ವಾಗ್ಮಿಗಳಾದ ಕುಮಾರಿ ಹಾರಿಕ ಮಂಜುನಾಥ್‌ರಿಂದ…
ಕೋಣಂದೂರಲ್ಲಿ ನಾಳೆ ಉಚಿತ ಶ್ರವಣ ತಪಾಸಣೆ – ಸೆ.29ಕ್ಕೆ ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಶ್ರವಣ ಯಂತ್ರಗಳ ವಿತರಣೆ – ಅನುಭವ ಪಡೆದಿರುವ ವೈದ್ಯರಿಂದ ಶಿಬಿರ: ಉಪಯೋಗಿಸಿಕೊಳ್ಳಿ NAMMUR EXPRESS NEWS ಭಂಡಾರಿ ಸಮಾಜ ಸಂಘ (ರಿ.) ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಲವಕುಮಾರ್ ಅವರ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಸೆ.29ರಂದು ನಡೆಯಲಿದೆ. ಭಂಡಾರಿ ಸಮಾಜ ಸಂಘ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಭಂಡಾರಿ ಸಮಾಜ ಸಂಘ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ರಿಂದ 50% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ…
ಸರ್ಕಾರಿ ಪಿಯು ಕಾಲೇಜು ಹಳೆ ವಿದ್ಯಾರ್ಥಿಗಳ ಸಭೆ! * 50ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಹಾಜರ್ * ಕಾಲೇಜಿನ ಅಭಿವೃದ್ಧಿಗೆ ಬದ್ಧ: ಶಾಸಕ ಆರಗ ಹಲವು ಸಲಹೆ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ತೀರ್ಥಹಳ್ಳಿ ಇದರ ಹಳೆ ವಿದ್ಯಾರ್ಥಿಗಳ ಸಭೆ ಕಾಲೇಜಲ್ಲಿ ಸೆ.28ರಂದು ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಗದ 50ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. 1983ರಲ್ಲಿ ಈ ಕಾಲೇಜು ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿ ಉನ್ನತ ಮಟ್ಟದ ಸಾಧನೆಯೊಂದಿಗೆ ಉದ್ಯೋಗದಲ್ಲಿಯೂ ಒಳ್ಳೆಯ ಸ್ಥಾನಮಾನಗಳನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನ ಅಭಿವೃದ್ಧಿಯ ಹಿನ್ನಲೆಯಲ್ಲಿ ಈ ಕಾಲೇಜಿನಲ್ಲಿ ಓದಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳು ಒಂದಾಗಬೇಕು. ನಾವೆಲ್ಲರೂ ಸೇರಿ ಈ ಕಾಲೇಜನ್ನು ಮತ್ತಷ್ಟು ಬೆಳೆಸಲು ಪ್ರಯತ್ನ ಮಾಡೋಣ ಎಂದು ಅಧ್ಯಕ್ಷತೆ ವಹಿಸಿದ್ದ ಆರಗ ಜ್ಞಾನೇಂದ್ರ ಹೇಳಿದರು. ಕಾಲೇಜು ಸಮಿತಿಯ ಉಪಾಧ್ಯಕ್ಷರಾದ ನಾಗರಾಜ…
ತೀರ್ಥಹಳ್ಳಿಯಲ್ಲಿ ಹೊಸ ಫ್ಲೈ ಓವರ್ ಸಂಚಾರ ಶುರು! – ತೀರ್ಥಹಳ್ಳಿ ಪಟ್ಟಣಕ್ಕೆ ಎಂಟ್ರಿ ಆಗುವ ಭಾರತಿಪುರ ಕ್ರಾಸ್ ಫ್ಲೈ ಓವರ್ – 55 ಕೋಟಿ ವೆಚ್ಚದಲ್ಲಿ ಹೊಸ ಫ್ಲೈ ಓವರ್: ರಸ್ತೆ ಸಮಸ್ಯೆಗೆ ಮುಕ್ತಿ – ತೀರ್ಥಹಳ್ಳಿ -ಕ್ಯಾತರ ಕ್ಯಾಂಪ್ ಚತುಷ್ಪತ ಹೈವೇ ಮಾರ್ಕ್ ಮುಕ್ತಾಯ NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ಭಾರತಿ ಪುರ ಕ್ರಾಸ್ ಬಳಿ ನೂತನ ಫ್ಲೈ ಓವರ್ ನಿರ್ಮಾಣವಾಗಿದ್ದು 0.5 ಕಿಲೋಮೀಟರ್ ನಷ್ಟು ಫ್ಲೈ ಓವರ್ ರಸ್ತೆ ನಿರ್ಮಾಣವಾಗಿದೆ. ಸುಮಾರು 55 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣವಾಗಿದ್ದು, ಫ್ಲೈ ಓವರ್ ಮೇಲೆ ವಾಹನ ಚಲಾಯಿಸುವಾಗ ಪರಿಸರದ ರಮಣೀಯ ದೃಶ್ಯಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಈ ರಸ್ತೆ ಒಂದು ವಾರದಿಂದ ಶುರುವಾಗಿದ್ದು ಪ್ರವಾಸಿಗರಿಗೆ ಹಾಗೂ ತೀರ್ಥಹಳ್ಳಿ ಜನತೆಗೆ ಸಂತಸವನ್ನ ಉಂಟುಮಾಡಿದೆ. ಬೆಂಗಳೂರಿನ ಕೃಷಿ ಇನ್ಫೋಟೆಕ್ ಈ ಕಾಮಗಾರಿ ಮಾಡಿದೆ. ರಸ್ತೆಗಳ ಅಕ್ಕ ಪಕ್ಕ ಇನ್ನಷ್ಟು ಸರಿಪಡಿಸಬೇಕಿದೆ. ತೀರ್ಥಹಳ್ಳಿ -ಕ್ಯಾತರ ಕ್ಯಾಂಪ್…
ಮಕ್ಕಳಿಗೆ ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿ! – ಕಾರ್ಕಳ ರೋಟರಿ ಕ್ಲಬ್ ಮಾದರಿ ಕಾರ್ಯಕ್ರಮಕ್ಕೆ ಮೆಚ್ಚುಗೆ – ಮಾಳ ಶಾಲೆಯಲ್ಲಿ ಕಾರ್ಯಕ್ರಮ: ರೊ.ಇಕ್ಬಾಲ್ ಅಹ್ಮದ್ ಸಾರಥ್ಯ NAMMUR EXPRESS NEWS ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳದಲ್ಲಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಒಳ್ಳೆ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ರೊಟೇರಿಯನ್ ಇಕ್ಬಾಲ್ ಅಹ್ಮದ್ ಹಾಗೂ ಮುಖ್ಯ ಅತಿಥಿಗಳಾಗಿ ರೋಟರಿ ಆಸ್ಪತ್ರೆ ಕಾರ್ಕಳ ಇದರ ವೈದ್ಯರಾದ ಜಯಶ್ರೀ ಹಾಗೂ ಕಾರ್ಯಕ್ರಮದಲ್ಲಿ ಸದಸ್ಯರಾದ ರೊಟೇರಿಯನ್ ವಸಂತ, ರೊಟೇರಿಯನ್ ಬಾಲಕೃಷ್ಣ, ರೊಟೇರಿಯನ್ ಶಶಿಕಲಾ, ರೊಟೇರಿಯನ್ ರೇಖಾ ಉಪಾಧ್ಯಾಯ, ರೊಟೇರಿಯನ್ ಮಮತಾ ಶೆಟ್ಟಿ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ರೋಟರಿ ಆಸ್ಪತ್ರೆ ಕಾರ್ಕಳ ಇದರ ವೈದ್ಯರಾದ ಜಯಶ್ರೀ ಇವರು ಕೆಟ್ಟ ಸ್ಪರ್ಶ ಮತ್ತು ಒಳ್ಳೆ ಸ್ಪರ್ಶದ…
ಕರಾವಳಿ ಟಾಪ್ ನ್ಯೂಸ್ ಮಂಗಳೂರು: ರಸ್ತೆಯಲ್ಲೇ ಹೊತ್ತಿ ಉರಿದ ಕಾರು! – ಶಿವಮೊಗ್ಗದಿಂದ ಮಂಗಳೂರಿಗೆ ಗೋ ಸಾಗಾಟ – ಅರ್ಜುನ್ ಮೃತದೇಹಕ್ಕೆ ಕರಾವಳಿ ಜನರ ನಮನ NAMMUR EXPRESS NEWS ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಸಂಭವಿಸಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿದ್ದು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದು ಕೂಡಲೇ ಕಾರಿನಲ್ಲಿದ್ದವರು ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ.ಬೆಂಕಿ ಅವಘಡದಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ ಶಿವಮೊಗ್ಗದಿಂದ ಮಂಗಳೂರಿಗೆ ಗೋಸಾಗಾಟ! ಮಂಗಳೂರು: ಶಿವಮೊಗ್ಗದಿಂದ ಮಂಗಳೂರಿಗೆ ಸಾಗಿಸುತ್ತಿದ್ದ 30 ಕ್ಕೂ ಹೆಚ್ಚು ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ಶುಕ್ರವಾರ ರಾತ್ರಿ ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಿಂದ ಕ್ಯಾಂಟರ್ ಮೂಲಕ ಒಂದೇ ವಾಹನದಲ್ಲಿ 30 ಕ್ಕೂ…
ಕಾಫಿ ನಾಡಲ್ಲಿ ಎಲ್ಲಾ ತಾಲೂಕಿನ ಗ್ರಾಮ ಆಡಳಿತಾಧಿಕಾರಗಳ ಅನಿರ್ದಿಷ್ಟಾವಧಿ ಮುಷ್ಕರ * ಟೇಬಲ್, ಕುರ್ಚಿ, ಅಲ್ಮೇರ್, ಮೊಬೈಲ್ ನೀಡಲು ಪಟ್ಟು * ಕೆಲಸದ ಒತ್ತಡ ತಪ್ಪಿಸಿ,ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೈಗೆ ಕಪ್ಪು ಬಟ್ಟೆ ಧರಿಸಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಯಾ ತಾಲೂಕಿನ ತಹಶೀಲ್ದಾರ್ ಕಛೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ಕೈಗೊಂಡಿದ್ದಾರೆ. ಇಲಾಖೆಯಿಂದ ಅಭಿವೃದ್ಧಿ ಪಡಿಸಿದ 17 ಕ್ಕೂ ಹೆಚ್ಚು ಮೊಬೈಲ್,ವೆಬ್ ತಂತ್ರಾಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಉತ್ತಮ ಗುಣಮಟ್ಟದ ಟೇಬಲ್,ಕುರ್ಚಿ,ಅಲ್ಮೆರಾ,ಮೊಬೈಲ್ ಫೋನ್ ಹಾಗೂ ಸರಿಯಾದ ಸಿಮ್,ಡೇಟಾ,ಲ್ಯಾಪ್ ಟಾಪ್,ಪ್ರಿಂಟರ್‌ಗಳನ್ನು ಕಲ್ಪಿಸಿಕೊಡು ಹಾಗೂ ಪ್ರಯಾಣ ಭತ್ಯೆಯನ್ನು 580/- ರೂ.ಗಳಿಂದ 5000/ ರೂ.ಗಳಿಗೆ ಹೆಚ್ಚಿಸಬೇಕು,ಗ್ರಾಮ ಆಡಳಿತ ಅಧಿಕಾರಿಗಳು ಒತ್ತಡದಿಂದ ಕೆಲಸ ನಿರ್ವಹಿಸುವಂತಾಗಿದೆ, ಅಭಿವೃದ್ಧಿ ಪಡಿಸಿದ ಮೊಬೈಲ್ ಹಾಗೂ ವೆಬ್ ತಂತ್ರಾಶದ ಕೆಲಸದ ಜೊತೆ ಅತಿವೃಷ್ಠಿ,ಅನಾವೃಷ್ಠಿ ಮತ್ತಿತರ ಪ್ರಮುಖ ಕೆಲಸಗಳನ್ನು ನಿರ್ವಹಿಸಬೇಕಿದೆ,ಸರ್ಕಾರಿ ರಜಾ…
ನವರಾತ್ರಿ ಹಬ್ಬದ ಪ್ರಯುಕ್ತ ‘ದಸರಾ ದರ್ಶನಿ-2024″ ವಿಶೇಷ ಪ್ಯಾಕೇಜ್! – ಅಕ್ಟೋಬರ್ 3ರಿಂದ ಅಕ್ಟೋಬರ್ 12 ರವರೆಗೆ ಪ್ಯಾಕೇಜ್ – ಬುಕ್ ಮಾಡೋದು ಹೇಗೆ? ಎಲ್ಲೆಲ್ಲಿಗೆ ಪ್ರವಾಸ NAMMUR EXPRESS NEWS ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ “ದಸರಾ ದರ್ಶನಿ-2024” ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ಕಾರ್ಯಾಚರಿಸಲಾಗುತ್ತಿದೆ. ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30ಕ್ಕೆ ತಲುಪಿ, 11.00 ಕ್ಕೆ ಹೊರಟು, ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11.30 ಕ್ಕೆ ತಲುಪಿ, ಮಧ್ಯಾಹ್ನ 12ಕ್ಕೆ ಹೊರಟು, ಕಮಲಶಿಲೆ ಬ್ರಾಹ್ಮದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1.30 ಕ್ಕೆ ತಲುಪಿ, ಮಧ್ಯಾಹ್ನ…