Author: Nammur Express Admin

ಸೆ.29 ರಂದು“ಜೊತೆಗಿರುವನು ಚಂದಿರ” ನಾಟಕ * ಜಯಂತ್ ಕಾಯ್ಕಿಣಿ ಅವರ ಕನ್ನಡಕ್ಕೆ ಭಾಷಾಂತರಿಸಿ ರಂಗರೂಪ * ಅಪರೂಪದ ರಂಗ ಪ್ರದರ್ಶನವಾಗಿದ್ದು, ಅದ್ಭುತ ನಾಟಕ NAMMUR EXPRESS NEWS ತೀರ್ಥಹಳ್ಳಿ: ಅದ್ಭುತವಾದ ರಂಗ ಪ್ರಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಸೆ.29 ಸಂಜೆ 7:00ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ “ಜೊತೆಗಿರುವವನು ಚಂದಿರ” ನಾಟಕವನ್ನು ಆಯೋಜಿಸಲಾಗಿದೆ. ಇದೊಂದು ಅಪರೂಪದ ರಂಗ ರೂಪ ರಷ್ಯನ್ ಕವಿ ತೊಕೋಮ್ ಅಲೈಖೆಮ್- ಜೋಸೆಫ್ ಸ್ಟೀನ್ ರಚಿತ “ಫಿಡ್ಲರ್ ಆನ್ ದಿ ರೂಫ್” ಕಥೆಗಳನ್ನು ಆಧರಿಸಿ ರಚಿಸಿದ ನಾಟಕ ಗೋಪಾಲಗೌಡ ರಂಗಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಂದೇಶ್ ಜವಳಿ ಇವರು ಮಾತನಾಡಿದರು. ರಷ್ಯಾದ ಅಲ್ಪಸಂಖ್ಯಾತ ಕುಟುಂಬವೊಂದರ ಕಥಾ ನಾಟಕವಾಗಿದ್ದು, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಏಕ ಮಾತ್ರ ಉಪಾಯದಂತಿರುವ ಜ್ಯೂ ಜನರ ವಿಶಿಷ್ಟ ಹಾಸ್ಯ ಪ್ರಜ್ಞೆ ಮತ್ತು ದಟ್ಟ ಕೌಟುಂಬಿಕತೆ ಈ ನಾಟಕದ ಜೀವಾಳ ಎಂದು ಹೇಳಿದ್ದಾರೆ. ಯುದ್ದ, ದೇಶವಿಭಜನೆ, ಅಭಿವೃದ್ದಿ, ಅಣೆಕಟ್ಟು ಇತ್ಯಾದಿಗಳ ನೆಪದಲ್ಲಿ ಮನುಷ್ಯನ ಸ್ಥಾನಾಂತರ ಮತ್ತು ಉಚ್ಚಾಟಣೆಗಳು ವಿಶ್ವದೆಲ್ಲಡೆ ನಡೆದೇ ಇವೆ.…

Read More

ಟಾಪ್ ನ್ಯೂಸ್ ಶಿವಮೊಗ್ಗ ಶಿವಮೊಗ್ಗದ ಮಾರುಕಟ್ಟೆಗೂ ಚೀನಾ ಬೆಳ್ಳುಳ್ಳಿ..! – ಆರೋಗ್ಯಕ್ಕೆ ಹಾನಿಕರವಾಗಿರುವ ಬೆಳ್ಳುಳ್ಳಿ ನಿಷೇಧ ಮಾಡಿದ ಸರ್ಕಾರ – ತೀರ್ಥಹಳ್ಳಿ, ಹೊಸನಗರದಲ್ಲಿ ಇಸ್ಪೀಟ್ ಆಡುತ್ತಿದ್ದವರು ಅರೆಸ್ಟ್! – ಸಾಗರ: 3 ಕಳ್ಳತನ ಪ್ರಕರಣ ದಾಖಲು ಇಬ್ಬರು ಸೆರೆ – ಹೊಸ ನಗರ: ಬೀಟೆ ಮರದ ದಿಮ್ಮಿಗಳ ಕಳ್ಳ ಸಾಗಾಣಿಕೆ: ಅಮಾನತು NAMMUR EXPRESS NEWS ಶಿವಮೊಗ್ಗ: ಭಾರತದಲ್ಲಿ ಬಂದ್ ಆಗಿರುವ ಚೀನಾ ಬೆಳ್ಳುಳ್ಳಿ ಶಿವಮೊಗ್ಗದ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚೀನಾದಿಂದ ಆಮದು ಆಗುತ್ತಿದ್ದ ಬೆಳ್ಳುಳ್ಳಿಯನ್ನು ನಿಷೇಧ ಮಾಡಿದೆ. ಆದರೂ ಬಂದಿದ್ದು ಹೇಗೆ ಎಂಬ ಅನುಮಾನ ಮೂಡಿದೆ. ಕೆಲವು ವ್ಯಾಪಾರಿಗಳು ಹಣದ ಆಸೆಗೆ ಕಡಿಮೆ ಬೆಲೆಗೆ ಬೆಳ್ಳುಳ್ಳಿ ಸಿಗುತ್ತದೆ ಎನ್ನುವ ಕಾರಣಕ್ಕೆ ಚೈನಾದ ಈ ಕಡಿಮೆ ಬೆಳೆಯ ಬೆಳ್ಳುಳ್ಳಿಯನ್ನು ಅನ್ಯ ಮಾರ್ಗದಿಂದ ತರಿಸಿಕೊಳ್ಳುತ್ತಿದ್ದಾರೆ. ಅನ್ಯ ಮಾರ್ಗದಿಂದ ಬಂದ ಬೆಳ್ಳುಳ್ಳಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಾರುಕಟ್ಟೆಗೆ ಪ್ರವೇಶವಾದ ನಂತರ ಆಹಾರ ಸುರಕ್ಷತಾ ಅಧಿಕಾರಿಗಳು ಅಂತಹ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಆತಂಕಕಾರಿ…

Read More

ಟಾಪ್ ನ್ಯೂಸ್ ಚಿಕ್ಕಮಗಳೂರು – ಚಿಕ್ಕಮಗಳೂರು: 4.5 ಲಕ್ಷ ಮೌಲ್ಯದ 24 ಮೊಬೈಲ್ ಫೋನ್ ಪತ್ತೆ! – ಮೂಡಿಗೆರೆ: ಭತ್ತ ಗದ್ದೆಯಲ್ಲಿ ತಂತಿ ತುಳಿದು ರೈತ ಸಾವು! – ಅಜ್ಜಂಪುರ: ವೈದ್ಯರ ನಿರ್ಲಕ್ಷದಿಂದ ಬಾಲಕ ಬಲಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರುಗಳನ್ನು ಮೂಲ ಗ್ರಾಹಕರಿಗೆ ಹಿಂತಿರುಗಿಸಲಾಗಿದೆ. CEIR ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಸುಮಾರು ರೂ. 4.5 ಲಕ್ಷ ಮೌಲ್ಯದ 24 ಮೊಬೈಲ್ ಫೋನ್ ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಿಂದಿರುಗಿಸಲಾಗಿರುತ್ತದೆ. ಈ ನಡುವೆ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಮೊಬೈಲ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವೇಳೆ ಯಾರಾದರೂ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ಗುರುತಿನ ಪುರಾವೆ, ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು,CEIR ವೆಬ್ ಪೋರ್ಟಲ್ https://www.ceir.gov.in ರಲ್ಲಿ ವರದಿ…

Read More

ಉಡುಪಿಯಲ್ಲಿ ಸಿದ್ಧವಾಗ್ತಿದೆ 80 ಕೆಜಿ ಬೆಳ್ಳಿಯ ಪುಷ್ಪರಥ! – ಬೆಂಗಳೂರಿನ ರಾಯರಮಠಕ್ಕೆ ರಥ ನಿರ್ಮಾಣ – ದೇಶ ವಿದೇಶದಲ್ಲಿ ಉಡುಪಿ ಶಿಲ್ಪಿಗಳ ಕೈಚಳಕ! NAMMUR EXPRESS NEWS ಉಡುಪಿ: ರಾಜ್ಯ, ದೇಶದ ವಿವಿಧ ದೇವಾಲಯಗಳಿಗೆ ಉಡುಪಿಯ ಶಿಲ್ಪಿಗಳೇ ಮರದ ಹಾಗೂ ವಿವಿಧ ಲೋಹದ ಅನೇಕ ರಥಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇದನ್ನು ಚಂದ್ರಮಂಡಲ ರಥ ಎಂದು ಕರೆಯಲಾಗುತ್ತದೆ. ಈ ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯರವರು ತಮ್ಮ ತಂಡದ ಜೊತೆ ರಚಿಸಿದ್ದಾರೆ. ಸುಮಾರು 22 ದಿನ ನಿರಂತರ ಬೆಳ್ಳಿಯ ಕುಸುರಿ ಕೆಲಸದೊಂದಿಗೆ ರಥವನ್ನು ನಿರ್ಮಿಸಲಾಗಿದೆ. ಇಲ್ಲಿನ ರಾಯರ ಮಠದ ಸನ್ನಿಧಿಯಲ್ಲಿ ನಿರ್ಮಿಸಿ ಕೊಟ್ಟಿದ್ದು, ಈ ಪುಷ್ಪ ರಥದ ನಿರ್ಮಾಣ ವೆಚ್ಚವು ಸುಮಾರು 80 ಲಕ್ಷ ಆಗಿರುತ್ತದೆ ಎಂದು ತಿಳಿದು ಬಂದಿದೆ.

Read More

ಇನ್ಮೇಲೆ ಪರೀಕ್ಷಾ ಪ್ರಶ್ನೆಪತ್ರಿಕೆ ಅಕ್ರಮವಾದರೆ ಕ್ರಿಮಿನಲ್ ಕೇಸ್! * ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಅಕ್ರಮಕ್ಕೆ ದೊಡ್ಡ ಶಿಕ್ಷೆ * ಅಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿ, ಪಾಲ್ಗೊಳ್ಳುವವವರ ವಿರುದ್ಧ ಕ್ರಮ NAMMUR EXPRESS NEWS ಬೆಂಗಳೂರು: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಾಗೂ ಇಲಾಖಾ ವಿಚಾರಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ಅಧೀನ‌ ಕಾರ್ಯದರ್ಶಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು ಈ ತರಹದ ಕಾನೂನುಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟು ಮಾಡುವುದು ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವುದು ಇವರ ಉದ್ದೇಶವಾಗಿರುತ್ತದೆ. ಇದಕ್ಕೆ ಅಧಿಕಾರಿಗಳು, ನೌಕರರು ನೆರವಾಗುತ್ತಾರೆ. ಇಂತಹವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರೀಕ್ಷಾ ಅವ್ಯವಹಾರವನ್ನು ತಡೆಗಟ್ಟಲು ಕಠಿಣ ಕ್ರಮವನ್ನು ಕೈಗೊಳ್ಳುವುದು ಸೂಕ್ತವೆಂದು…

Read More

ಅಡಿಕೆ ಆಯ್ತು ಈಗ ಕಾಳು ಮೆಣಸಿಗೂ ಕಂಟಕ! – ಮಳೆ ಹೆಚ್ಚಳವಾಗಿರುವುದರಿಂದ ಕೊಳೆ ರೋಗ ಹೆಚ್ಚಾಯ್ತು – ಉದುರುತ್ತಿರುವ ಮೆಣಸಿನ ಕಾಳು, ಕಾಫಿ – ಮಲೆನಾಡು, ಕರಾವಳಿ ರೈತರಿಗೆ ಶಾಪವಾದ ಮಳೆ NAMMUR EXPRESS NEWS ಮಲೆನಾಡು/ ಕರಾವಳಿ: ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಧಾರ ಬೆಳೆಗಳಲ್ಲಿ ಒಂದಾದ ಅಡಿಕೆಗೆ ಈಗಾಗಲೇ ಕೊಳೆ ರೋಗಗಳಿಂದ ಸಂಕಷ್ಟ ಎದುರಾಗಿದೆ. ಈಗ ಕಾಳು ಮೆಣಸು, ಕಾಫಿ ಕೂಡ ಆತಂಕದಲ್ಲಿದೆ. ಮಳೆಯಿಂದ ಹೆಚ್ಚಾಗುತ್ತಿರುವ ಕೊಳೆ ರೋಗ ಇನ್ನೊಂದು ಕಡೆ ಎಲೆ ಚುಕ್ಕಿ ರೋಗ ಸೇರಿದಂತೆ ಅನೇಕ ರೋಗಗಳು ಬಾಧಿಸುತ್ತಾ ಇದೆ. ಇದರಿಂದಾಗಿ ರೈತರನ್ನ ಕಂಗಾಲಾಗುವಂತ ಪರಿಸ್ಥಿತಿಗೆ ಎಡೆಮಾಡಿದೆ. ಈ ನಡುವೆ ಅಡಿಕೆ ಬೆಲೆ ಕೂಡ ಕುಸಿತವಾಗುತ್ತಿರುವುದರಿಂದ ಆತಂಕವನ್ನು ಸೃಷ್ಟಿ ಮಾಡಿದೆ. ಈ ನಡುವೆ ಮತ್ತೊಂದು ವಾಣಿಜ್ಯ ಆಧಾರ ಬೆಳೆಯಾಗಿರುವ ಕಾಳು ಮೆಣಸು ಕೂಡ ರೋಗಕ್ಕೆ ಬಲಿಯಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಮುಖ ಭಾಗಗಳಾದ ತೀರ್ಥಹಳ್ಳಿ, ಕೊಪ್ಪ,…

Read More

ಶೃಂಗೇರಿ ಶಾರದಾ ಶರನ್ನವರಾತ್ರಿಗೆ ಸಿಂಗಾರ! * ಶ್ರೀಮಠದ ಆವರಣ,ರಾಜಗೋಪುರ,ರಥ ಬೀದಿಯುದ್ದಕ್ಕೂ ವಿದ್ಯುತ್ ದೀಪಾಲಂಕಾರ * ಕಳೆಗಟ್ಟಿದ ಶೃಂಗೇರಿ ಮದುವಣಗಿತ್ತಿಯಂತೆ ಸಿಂಗಾರ * ದೇಶವಿದೇಶಗಳಿಂದ ಸಾವಿರಾರು ಪ್ರವಾಸಿಗರ ಆಗಮನ ವಿಶೇಷ ವರದಿ: ಸಚಿನ್ ಶೃಂಗೇರಿ NAMMUR EXPRESS NEWS ಶೃಂಗೇರಿ: ಅಕ್ಟೋಬರ್ 3 ರಿಂದ ಶ್ರೀಶಾರದಾ ಪೀಠ ಶೃಂಗೇರಿಯಲ್ಲಿ ಪ್ರಾರಂಭಗೊಳ್ಳರಿರುವ ಜಗತ್ಪ್ರಸಿದ್ಧ ಶಾರದಾ ಶರನ್ನವರಾತ್ರಿ ಉತ್ಸವಕ್ಕೆ ಶೃಂಗೇರಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಶ್ರೀಮಠದ ಆವರಣ,ದೇವಾಲಯ,ರಾಜಗೋಪುರ,ಹರಿಹರ ಬೀದಿ,ರಥ ಬೀದಿ(ಭಾರತೀ ಬೀದಿ) ಉದ್ದಕ್ಕೂ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಅದ್ದೂರಿ ನವರಾತ್ರಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಒಂಭತ್ತು ದಿನಗಳು ವಿವಿಧ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶಾರದೆಗೆ ನಿತ್ಯವೂ ಬೀದಿ ಉತ್ಸವ ನಡೆಯಲಿದೆ. ಬೀದಿ ಉತ್ಸವದಲ್ಲಿ ಪ್ರತಿ ದಿನ ತಾಲೂಕಿನ ಒಂದೊಂದು ಪಂಚಾಯ್ತಿಯಿಂದ ಭಜನೆ,ನೃತ್ಯ,ಸ್ಥಬ್ಧಚಿತ್ರಗಳ ಮೂಲಕ ವಿಜೃಂಭಣೆ ಉತ್ಸವದ ಜವಾಬ್ದಾರಿ ನೀಡಲಾಗಿದೆ. ಆಯುಧ ಪೂಜೆ,ವಿಜಯದಶಮಿ,ಚಂಡಿಯಾಗ ಅದ್ದೂರಿಯಾಗಿ ನೆರವೇರಲಿದ್ದು 13ನೇ ತಾರೀಖಿನಂದು ವಿಜೃಂಭಣೆಯ ಶಾರದಾ ರಥೋತ್ಸವ ನಡೆಯಲಿದ್ದು ಇದರಲ್ಲಿ ಶ್ರಿಜಗದ್ಗುರುಗಳು ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ವಿಶೇಷ…

Read More

ಟಾಪ್ 3 ನ್ಯೂಸ್ ತೀರ್ಥಹಳ್ಳಿ ವಿಕಲ ಚೇತನರಿಗೆ ತ್ರಿಚಕ್ರ ವಾಹನ ಭಾಗ್ಯ! – ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರಿಂದ ವಿತರಣೆ – ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಪ್ರಶಾಂತ್ ಹಂದಿಗೆ ಮನೆ – ರೋಟರಿ ಸಂಸ್ಥೆಯಿಂದ ಐವರು ಸಾಧಕ ಶಿಕ್ಷಕರಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ :ಸೆ. 27ರಂದು ಪಟ್ಟಣದ ಗ್ರಾಮೀಣಾಭಿವೃದ್ಧಿ ಭವನದಲ್ಲಿ 10 ಮಂದಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ವಿಕಲಚೇತನ ಬಂಧುಗಳಿಗೆ ಓಡಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಈ ಅನುಕೂಲ ಸೌಲಭ್ಯವನ್ನು ನೀಡಲಾಗುತ್ತಿದೆ. ತ್ರಿಚಕ್ರದ ಮೂಲಕ ವಿಕಲಚೇತನರಲ್ಲಿ ಆತ್ಮ ವಿಶ್ವಾಸ ಮೂಡಿ ತ್ರಿಚಕ್ರ ವಾಹನದಲ್ಲಿ ತಾನು ಓಡಾಡಬಲ್ಲೆ ಭಾವನೆಯ ಜೊತೆಗೆ ಜೀವನದಲ್ಲಿ ಹೊಸ ಉತ್ಸಾಹಕ್ಕೆ ನೆರವಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಕಲಚೇತನ ಇಲಾಖೆ ತಾಲ್ಲೂಕು ಸಂಯೋಜಕರಾದ ದಿವಾಕರ್ ಬಿ. ಆರ್,ಪಟ್ಟಣ ಪಂಚಾಯತ್ ಸದಸ್ಯರಾದ ಜ್ಯೋತಿ ಮೋಹನ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾದ ಯಶೋದಾ ಮಂಜುನಾಥ್ ಸೇರಿ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾವಿಷ್ಣುವಿನ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಬಹಳ ಶುಭ ದಿನವಾಗಲಿದೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗುತ್ತದೆ. ಮಾನಸಿಕ ಗೊಂದಲ ಉಂಟಾಗಲಿದೆ. ಭಾವನೆಗಳಲ್ಲಿ ಏರುಪೇರು ಸಾಧ್ಯ. ಕೆಲಸದ ಸಂಬಂಧದಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ. ಆಸ್ತಿ ಅಥವಾ ವಾಹನ ಖರೀದಿ ಸಾಧ್ಯ. ಇಂದು ನಿಮ್ಮ ಫಿಟ್ನೆಸ್ ಮೇಲೆ ಕೇಂದ್ರೀಕರಿಸಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ** ವೃಷಭ ರಾಶಿ : ನೀವು ಇಂದು ಬಹಳ ಜಾಗರೂಕರಾಗಿರಬೇಕು. ಆರ್ಥಿಕ ನಷ್ಟದ ಲಕ್ಷಣಗಳಿವೆ. ವೃತ್ತಿ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಹೊಸ ಸವಾಲುಗಳನ್ನು ನಿಭಾಯಿಸಲು…

Read More

ಕರಾವಳಿ ಟಾಪ್ ನ್ಯೂಸ್ ಕರಾವಳಿಯಲ್ಲೂ ಕಸ್ತೂರಿ ರಂಗನ್ ವರದಿ ಹೋರಾಟ! – ಕುಂದಾಪುರ: ಹಳ್ಳಿಗಳಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ – ಕಾಸರಗೋಡು: ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ!! – ಮಂಗಳೂರು: ಮೊಬೈಲ್ ವಿಚಾರಕ್ಕೆ ಕೊಲೆ: ಅರೆಸ್ಟ್ NAMMUR EXPRESS NEWS ಕುಂದಾಪುರ: ಇಡೂರು ಕುಂಜ್ಞಾಡಿ, ಹೊಸೂರು ಗ್ರಾಮಸ್ಥರ ಹಿತರಕ್ಷಣಾ ಸಮಿತಿ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ 29-09-2024 ಬೆಳಿಗ್ಗೆ 10ಕ್ಕೆ ಶ್ರೀ ದುರ್ಗಾ ಸಭಾಭವನ ಹೊಸೂರು (ಶ್ರೀ ಮಹಿಷಮರ್ದಿನಿ ದೇವಸ್ಥಾನ ಕಾನ್‌ಬೇರು) ನಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ನೆರವೇರಲಿದೆ. ಸಮಾನ ಮನಸ್ಕರ ಸಹಯೋಗದೊಂದಿಗೆ ಮಾನವ ಪ್ರೇಮಿಗಳೆಲ್ಲರಿಗೂ ಆದರದ ಸ್ವಾಗತವನ್ನ ಗ್ರಾಮಸ್ಥರ ಹಿತರಕ್ಷಣಾ ಸಮಿತಿ ವಿನಂತಿಸಿದೆ. ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ!! ಕಾಸರಗೋಡು : ಮೂರು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ…

Read More