Author: Nammur Express Admin

.1ರಂದು ಕಾರ್ಕಳ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ * ಕಾಮಗಾರಿ ಕಾರ್ಯಕ್ಕಾಗಿ ವಿದ್ಯುತ್ ನಿಲುಗಡೆ * ಯಾವೆಲ್ಲಾ ಪ್ರದೇಶದಲ್ಲಿ ಸರಬರಾಜಿನಲ್ಲಿ ವ್ಯತ್ಯಯ? NAMMUR EXPRESS NEWS ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ತುರ್ತುನಿರ್ವಹಣಾ ಕಾಮಗಾರಿ / ಮಾರ್ಗನಿರ್ವಹಣಾ ಕಾಮಗಾರಿ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ಅ.01ರಂದು ಬೆಳಿಗ್ಗೆ 09.00 ಘಂಟೆಯಿಂದ ಅಪರಾಹ್ನ 5.00 ಘಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು ಎಂದು ವಿದ್ಯುತ್ ಇಲಾಖೆ ಪ್ರಕಟಣೆ ತಿಳಿಸಿದೆ. ಕಾರ್ಕಳ ತಾಲೂಕಿನ ಬಜಗೋಳಿ, ಮುಡ್ರಾಲು, ಕಡಾರಿ, ಮುಳ್ಳೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಜೋಡುಕಟ್ಟೆ, ಕಾಜರಬೈಲು, ಅಡ್ಡರವಲೈ, ಕುರ್ಕಲ್ ಪಲ್ಕೆ, ಹಿನಾಪಾಡಿ, ನೆಲ್ಲಿಗುಡ್ಡೆ, ಮಂಜಡ್ಕ, ಮಿಯ್ಯಾರ್ ಇಂಡಸ್ಟ್ರಿಯಲ್ ಏರಿಯಾ, ಮಿಯ್ಯಾರು, ಕುಂಟಿಬೈಲು, ರಂಜಾಳ, ರಾಮೇರಗುತ್ತು, ಬೊರ್ಕಟ್ಟೆ, ಕಳತ್ರವಾದೆ, ಬೈಪಾನ್, ಮುರತ್ತಂಗಡಿ, ಇರ್ವತ್ತೂರು, ನಾಣೂರು, ಕುಂಟಲ್ಪಾಡಿ, ದೇಂದಬೆಟ್ಟು, ವರ್ಷಲೆ, ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ಬಾವಗುತ್ತು, ಶುಂಠಿಗುಡ್ಡೆ, ಚಿಲಿಂಬಿ, ಬೆಲ್ಮನ್, ಗೋಳಿಕಟ್ಟೆ, ಜಂತ್ರ, ನೀಚಾಲು, ಬೆಳ್ಳಣ್ ದೇವಸ್ಥಾನ, ನಂದಳಿಕೆ, ಕೆದಿಂಜಿ, ಇಟ್ಟಮೇರಿ ಮಾವಿನಕಟ್ಟೆ, ದೇಂದೊಟ್ಟು…

Read More

ಡಿಜಿಟಲ್ ಡೇಟಾ ಕಾನೂನು ಬಗ್ಗೆ ಕುಂದಾಪುರ ಟೆಕ್ಕಿ ಗೌತಮ್ ನಾವಡ ಕ್ಲಾಸ್! – ರಾಷ್ಟ್ರ ಮಟ್ಟದ ಡಿಜಿಟಲ್ ವರ್ಡ್ ಕ್ಯಾಂಪಲ್ಲಿ ಮಾರ್ಗದರ್ಶನ – ಡಿಜಿಟಲ್ ಕ್ಷೇತ್ರದಲ್ಲಿ ಸಾಧನೆಯತ್ತ ಫೋರ್ತ್ ಫೋಕಸ್ ಸಂಸ್ಥೆ NAMMUR EXPRESS NEWS ಉಡುಪಿ: ಡಿಜಿಟಲ್ ಡೇಟಾ ಕಾನೂನಿನ ಬಗ್ಗೆ ಸೆ.28ರಂದು ನಾಗಪುರದಲ್ಲಿ ನಡೆಯಲಿರುವ ವರ್ಡ್ ಕ್ಯಾಂಪ್ ನಾಗಪುರ 2024ರಲ್ಲಿ ಖ್ಯಾತ ಡಿಜಿಟಲ್ ಮಾರ್ಕೆಟಿಂಗ್ ತಜ್ಞ ಗೌತಮ್ ನಾವಡ ಅವರ ಪ್ರಭಾವಶಾಲಿ ಪ್ರಸ್ತುತಿಗೆ ವೇದಿಕೆ ಸಿದ್ಧವಾಗಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ದಶಕಗಳ ಅನುಭವದ ಜತೆಗೆ ಸಂಸ್ಥೆ ಕಟ್ಟಿ, ದೇಶ ವಿದೇಶದ ನೂರಾರು ಹೈ ಪ್ರೊಫೈಲ್ ಗ್ರಾಹಕರ ಸೇವೆ ನೀಡುತ್ತಿರುವ ಕುಂದಾಪುರದ ಫೋರ್ತ್ ಫೋಕಸ್ ಎಂಬ ಡಿಜಿಟಲ್ ಮಾರ್ಕೆಟಿಂಗ್ & ವೆಬ್ ಡೆವಲಪ್ಮೆಂಟ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿ ಗೌತಮ್ ನಾವಡ ಅವರು ವರ್ಡ್ ಕ್ಯಾಂಪ್ ನಾಗಪುರ 2024ರಲ್ಲಿ “Navigating the DPDP Act 2023: What Digital Professionals Need to Know?”…

Read More

ಅರಕಲಗೂಡಲ್ಲಿ ಮಧು ಬಂಗಾರಪ್ಪ ರೌಂಡ್ಸ್! – ಶಿಕ್ಷಕರ ದಿನದಲ್ಲಿ ಭಾಗಿ: ಹಾಸನದ ಸಾಧನೆ ಬಗ್ಗೆ ಮೆಚ್ಚುಗೆ – ಶಾಸಕ ಮಂಜಣ್ಣ ಅವರನ್ನು ಗುರು ಎಂದ ಶ್ರೇಯಸ್ ಪಟೇಲ್ NAMMUR EXPRESS NEWS ಅರಕಲಗೂಡು: ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು, ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯ ಹೊಂದಿದ್ದು, ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿಂದು ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಚಿವರ ತಂದೆ, ಈ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ದೇಶಮೆಚ್ಚುವ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಸರ್ವಾಂಗೀಣ ಸಾಧನೆ ಇಂದೂ ಸಹ ಅಜರಾಮರವಾಗಿದೆ. ಅಂತಹವರ ಪುತ್ರರಾಗಿರುವ ಸಚಿವರು, ದೂರದೃಷ್ಟಿ ಉಳ್ಳವರಾಗಿದ್ದಾರೆ ಎಂದು ಕೊಂಡಾಡಿದರು. ಶಿಕ್ಷಣ ಇಲಾಖೆಯಲ್ಲಿ ವಿಭಿನ್ನ ರೀತಿಯಲ್ಲಿ ಸುಧಾರಣೆ ತರಲು ಸಚಿವರು ಸಂಕಲ್ಪ ಮಾಡಿದ್ದು, ನಮ್ಮ ಜಿಲ್ಲೆಯಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದ್ದು, ಹಂತ ಹಂತವಾಗಿ ಬಗೆಹರಿಸುವ ವಿಶ್ವಾಸ ಇದೆ…

Read More

ಪುನೀತ್‌ ನೆನಪಿಗೆ ಗುಡಿ ನಿರ್ಮಿಸಿದ ಅಭಿಮಾನಿ! * 9 ಲಕ್ಷ ರೂ.ವೆಚ್ಚದಲ್ಲಿ ಗುಡಿ ನಿರ್ಮಿಸಿದ ಹಾವೇರಿ ಅಭಿಮಾನಿ * ಉದ್ಘಾಟನೆಗೆ ಬಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ * ಅಭಿಮಾನಿಯ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿ ಕಣ್ಣೀರು NAMMUR EXPRESS NEWS ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ 3 ವರ್ಷಗಳಾದ್ರೂ ಇನ್ನು ಕೂಡ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರತಿ ದಿನ ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ. ಬೇರೆ ಬೇರೆ ರೀತಿಯಲ್ಲಿ ಅಪ್ಪುವಿನ ಅಭಿಮಾನಿಗಳು ಅವರ ಮೇಲಿನ ಪ್ರೀತಿ,ಅಭಿಮಾನವನ್ನು ಇಂದಿಗೂ ವ್ಯಕ್ತಪಡಿಸುತ್ತಲೇ ಇದ್ದಾರೆ. ಹೀಗಿರುವಾಗಲೇ ಹಾವೇರಿಯಲ್ಲೊಬ್ಬರು ಅಭಿಮಾನಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೇಲಿನ ತಮ್ಮ ಅಭಿಮಾನವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಯಲಗಚ್ಚ ಗ್ರಾಮದ ಪ್ರಕಾಶ್ ಎಂಬುವರು ತಮ್ಮ ನೆಚ್ಚಿನ ನಟ ಪುನೀತ್‌ಗಾಗಿ ಗುಡಿಯೊಂದನ್ನು ನಿರ್ಮಿಸಿದ್ದಾರೆ. ಹೌದು..ಹಾವೇರಿಯ ಯಲಗಚ್ಚ ಗ್ರಾಮದಲ್ಲಿ ಪ್ರಕಾಶ್‌ರವರು ತಮ್ಮ ಪ್ರೀತಿಯ ನಟ ಅಪ್ಪುವಿಗಾಗಿ ಗುಡಿ ನಿರ್ಮಾಣ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್…

Read More

ಆಪತ್ಭಾಂದವ ಈಶ್ವರ್ ಮಲ್ಪೆ ಸೇವೆಗೆ ಸಲಾಂ! – ಕರಾವಳಿ, ಮಲೆನಾಡು ಭಾಗದಲ್ಲಿ ನಿಸ್ವಾರ್ಥ ಸೇವೆ – ತನ್ನ ಕುಟುಂಬದ ಆಸೆ ಬಿಟ್ಟು ನೂರಾರು ಕಿಮೀ ಈಜಿ ಸೇವೆ – ನೂರಾರು ಶವಗಳ ಹುಡುಕಿ ಕೊಟ್ಟ ಕರಾವಳಿ ಹೀರೋ! NAMMUR EXPRESS NEWS ಉಡುಪಿ: ಈಶ್ವರ್ ಮಲ್ಪೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಹೆಸರು ಕೆಲದವರಿಲ್ಲ. ದೈವದತ್ತವಾಗಿ ದೇವರು ಕೊಟ್ಟ ಈಜು ಮತ್ತು ಧೈರ್ಯವನ್ನೇ ಸೇವೆಗೆ ಬಳಸಿಕೊಂಡ ಸೇವಕ. ಕಷ್ಟದಲ್ಲಿ ಅದರಲ್ಲೂ ನೀರಿಗೆ ಬಿದ್ದವರ ಆಪತ್ಭಾಂದವ ಈಶ್ವರ್ ಮಲ್ಪೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು,ಉತ್ತರ ಕನ್ನಡ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನೂರಾರು ಮಂದಿ ಪ್ರಾಣ ಉಳಿಸಿದ ರಿಯಲ್ ಹೀರೋ ಇವರು. ಕರಾವಳಿ, ಮಲೆನಾಡು ಭಾಗದಲ್ಲಿ ಇವರ ನಿಸ್ವಾರ್ಥ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ಕುಟುಂಬದ ಆಸೆ ಬಿಟ್ಟು ನೂರಾರು ಕಿಮೀ ಈಜಿ ಸೇವೆ ನೂರಾರು ಶವಗಳ ಹುಡುಕಿ ಕೊಟ್ಟ ಕರಾವಳಿ ಹೀರೋ!. ಆಪತ್ಬಾಂಧವ, ಜೀವ ರಕ್ಷಕ, ಮುಳುಗು ತಜ್ಞ…

Read More

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್. ಐ. ಆರ್..! – ಮೈಸೂರು ಲೋಕಾಯುಕ್ತದಲ್ಲಿ ದೂರು ದಾಖಲು – ಏನಾಗುತ್ತೆ? ಮುಂದಿನ ಕಾನೂನು ಪ್ರಕ್ರಿಯೆ ಏನು? NAMMUR EXPRESS NEWS ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿದೆ. ಕೋರ್ಟ್​ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ. ಸಿಆರ್‌ಪಿಸಿ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿ ಎಂದು ಕೋರ್ಟ್​ ಆದೇಶ ನೀಡಿತ್ತು. ಅದೇ ಕಾಯ್ದೆಯಡಿ ಇದೀಗ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಯಾವೆಲ್ಲಾ ಸೆಕ್ಷನ್ ದಾಖಲು ಮಾಡಲಾಗಿದೆ ಎಂಬುದು ತಿಳಿದುಬರಬೇಕಿದೆ. ದೂರು ನೀಡಿದ್ದು ಯಾರು? ದೂರುದಾರ, ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಸಿಎಂ…

Read More

ಶೃಂಗೇರಿ ಶಾಸಕ ರಾಜೇಗೌಡರಿಗೆ ಸುಪ್ರೀಂ ಕೋರ್ಟಿನಲ್ಲೂ ಹಿನ್ನಡೆ! * ಜೀವರಾಜ್ ಸಲ್ಲಿಸಿದ್ದ ಅರ್ಜಿ ಅಮಾನ್ಯ ಮಾಡಬೇಕೆಂದು ಸಲ್ಲಿಸಿದ್ದ ಅರ್ಜಿ ತಿರಸ್ಕಾರ * ರಾಜೇಗೌಡ ಚುನಾವಣೆಯಲ್ಲಿ ಗೆದ್ದಿದ್ದು ಅಕ್ರಮ ಎಂಬ ಅರ್ಜಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಕರ್ನಾಟಕ ಹೈ ಕೋರ್ಟ್‌ನಲ್ಲಿ ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ್ದ ಚುನಾವಣೆ ಅರ್ಜಿಯನ್ನು ಅಮಾನ್ಯ ಮಾಡಬೇಕೆಂದು ಶಾಸಕ ಟಿ.ಡಿ ರಾಜೇಗೌಡ ಅರ್ಜಿ ಸಲ್ಲಿಸಿದ್ದರು ಇದನ್ನು ಕರ್ನಾಟಕ ಹೈ ಕೋರ್ಟ್ ವಜಾಗೊಳಿಸಿಗಿತ್ತು. ಇದನ್ನು ಪ್ರಶ್ನಿಸಿ ಶಾಸಕ ಟಿ.ಡಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈಗ ಅದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಅಂಚೆ ಮತಗಳ ತಿರಸ್ಕಾರ ಕಾನೂನು ಬಾಹಿರ ಎಂಬ ಜೀವರಾಜ್‌ವಾದ ಸಮ್ಮತವಾದದ್ದು ಮತ್ತು ಮತಗಳ ಮರು ಏಣಿಕೆ, ಮಾನ ಹಾನಿಗೆ ಸಂಬಂಧಿಸಿದ ಭಾಷಣ,ಸಾಮಾಜಿಕ ಜಾಲತಾಣಗಳ ಪೋಸ್ಟರ್,ಚುನಾವಣೆ ಅಫಿಡವಿಟ್‌ನಲ್ಲಿ ಸುಳ್ಳು ಆಸ್ತಿ ಮಾಹಿತಿ ಮತ್ತು ಚುನಾವಣಾ ಅಕ್ರಮಗಳ ಕುರಿತಾದ…

Read More

ತೀರ್ಥಹಳ್ಳಿ ಟಾಪ್ ನ್ಯೂಸ್ ಮೇಗರವಳ್ಳಿ: ಶವದ ಪೆಟ್ಟಿಗೆಯಂತೆ ಬಿಳಿ ಬಟ್ಟೆ ಹೊದಿಸಿರುವ ಎಟಿಎಂ! – ಮೇಗರವಳ್ಳಿ ಸೇರಿ ತೀರ್ಥಹಳ್ಳಿ ತಾಲೂಕಲ್ಲಿ ಏಟಿಎಂ ಅವ್ಯವಸ್ಥೆ – 20 ದಿನಗಳಿಂದ ಕಾರ್ಯ ಸ್ಥಗಿತ ಸಾರ್ವಜನಿಕರಿಗೆ ತೊಂದರೆ – ಸಿಎಂ ರಾಜೀನಾಮೆಗೆ ವಿಧಾನ ಸೌಧದ ಮುಂದೆ ಜ್ಞಾನೇಂದ್ರ ಪ್ರತಿಭಟನೆ – ಹೆದ್ದೂರು ಬಳಿ ಮರ ಬಿದ್ದು ವಿದ್ಯುತ್ ಕಂಬ ತುಂಡು NAMMUR EXPRESS NEWS ಮೇಗರವಳ್ಳಿ: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಎಸ್‌ಬಿಐ ಬ್ಯಾಂಕ್ ಒಳಗಿರುವ ಎಟಿಎಂ ಮಿಷನ್ ಕಳೆದ 20 ದಿನಗಳಿಂದ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ಬೇಜಾಬ್ದಾರಿಯಿಂದ ಸರಿಯಾದ ಮಾಹಿತಿ ನೀಡದೆ ಸಾರ್ವಜನಿಕರು ಪ್ರತಿ ದಿನ ಅಲೆದಾಡುವ ಪರಿಸ್ಥಿತಿ ಬಂದಿರುತ್ತದೆ. ಹಿರಿಯ ನಾಗರೀಕರು ಬ್ಯಾಂಕ್‌ನೊಳಗೆ ಹೋಗುವ ಹಾಗಿಲ್ಲ. ಬ್ಯಾಂಕ್ ಮುಂದೆ ಹೊಂಡ ಗುಂಡಿಗಳು ಬಿದ್ದಿರುತ್ತದೆ. 20 ದಿನಗಳಿಂದ ಬಿಳಿಬಟ್ಟೆ ಹೊದಿಸಿ ಎಂಟಿಎಂನ್ನು ಶವದಪೆಟ್ಟಿಯಂತೆ ಮುಚ್ಚಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಎಸ್‌ಬಿಐ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿ ಮೇಗರವಳ್ಳಿ ನಿವಾಸಿಗಳು ಆಕ್ರೋಶ…

Read More

ಟಾಪ್ ನ್ಯೂಸ್ ಹಾಸನ ಜಿಲ್ಲೆ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ! * ಅರಕಲಗೂಡಿನ ರಾಗಿಮರೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಘಟನೆ * ಬೇಲೂರಿನಲ್ಲಿ ‌ಮಿತಿ‌ ಮೀರಿದ ಮೀಟರ್ ಬಡ್ಡಿ ದಂಧೆ! * ಚಾಕೊಲೇಟ್ ಎಸೆದಿದ್ದು ಬ್ಯುಸಿನೆಸ್ ಕೆಡಿಸಲು ಪ್ಲಾನ್?! * ಕೌಟಿಂಬಿಕ ಕಲಹ: ಕಾರಿನ ಗಾಜು ಪುಡಿ‌ಪುಡಿ‌ ಮಾಡಿದ ಮಹಿಳೆ NAMMUR EXPRESS NEWS ಹಾಸನ: ಸೆ.26ರಂದು ಮಧ್ಯಾಹ್ನ ಹಲ್ಲಿ ಬಿದ್ದು ಬಿಸಿಯೂಟ ಸೇವಿಸಿ ಹಾಸನ ಜಿಲ್ಲೆ‌ಯ ಅರಕಲಗೂಡು ತಾಲೂಕಿನ ರಾಗಿಮರೂರು ಸರ್ಕಾರಿ ಪ್ರೌಢಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ. ಕೂಡಲೇ ತಾಲೂಕಿನ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಧ್ಯಾಹ್ನ ಹಲ್ಲಿ ಬಿದ್ದು ಕಲುಷಿತಗೊಂಡ ಅಹಾರವನ್ನು ಸೇವಿಸಿದ ನೂರಾರು ಮಕ್ಕಳು ಏಕಾಎಕಿ ವಾಂತಿಯಿಂದ ಬಳಲಲು ಶುರುಮಾಡಿದ್ದಾರೆ. ಇದನ್ನು ಗಮನಿಸಿದ ಶಿಕ್ಷಕರು, ಕೂಡಲೇ…

Read More

ತೀರ್ಥಹಳ್ಳಿಯಲ್ಲಿ ಉಚಿತ ಶ್ರವಣ ತಪಾಸಣೆ: ಇನ್ನು 2 ದಿನ ಬಾಕಿ! – ಸೆ.29 ಭಾನುವಾರ ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಶ್ರವಣ ಯಂತ್ರಗಳ ವಿತರಣೆ – ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರಿಂದ ಶಿಬಿರ NAMMUR EXPRESS NEWS ಭಂಡಾರಿ ಸಮಾಜ ಸಂಘ (ರಿ.) ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಮುಖ್ಯಸ್ಥರಾದ ಲವಕುಮಾರ್ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ನಡೆಯಲಿದೆ. ಭಂಡಾರಿ ಸಮಾಜ ಸಂಘ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಭಂಡಾರಿ ಸಮಾಜ ಸಂಘ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ರಿಂದ 50% ಮೊತ್ತವನ್ನು ಭರಿಸಲಾಗುತ್ತಿದ್ದು ರೋಗಿಗಳು ಇದರ…

Read More