ಸೆ. 29 ಭಾನುವಾರ ಇನ್ನು 2 ದಿನ ಬಾಕಿ ಇಂದೇ ನೊಂದಾಯಿಸಿಕೊಳ್ಳಿ – ಉಚಿತ ಶ್ರವಣ ತಪಾಸಣೆ ಮತ್ತು ಬಹಳ ಕಡಿಮೆ ಬೆಲೆಯಲ್ಲಿ ಶ್ರವಣ ಯಂತ್ರಗಳ ವಿತರಣೆ – ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರಿಂದ ಈ ಶಿಬಿರ – ಅಂತರಾಷ್ಟ್ರೀಯ ಸಂಸ್ಥೆಗಳ ಶ್ರವಣ ಯಂತ್ರಗಳನ್ನ ನೀಡಲಿದ್ದಾರೆ – ಈ ಶಿಬಿರದಲ್ಲಿ ಸಂಸ್ಥೆಯವರು ತಮ್ಮ ದೇಣಿಗೆ ಮೊತ್ತದಿಂದ ಶೇಕಡ 40 ರಿಂದ 50 % ರಷ್ಟು ಯಂತ್ರದ ವೆಚ್ಚವನ್ನ ಬರಿಸಲಿದ್ದಾರೆ NAMMUR EXPRESS NEWS ಭಂಡಾರಿ ಸಮಾಜ ಸಂಘ (ರಿ.) ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಮುಖ್ಯಸ್ಥರಾದ ಲವಕುಮಾರ್ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಭಂಡಾರಿ ಸಮಾಜ ಸಂಘ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು ಸಮಸ್ಯೆಯಿಂದ…
Author: Nammur Express Admin
ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ – ಸಚಿವ ಸಂಪುಟ ನಿರ್ಧಾರ: ರಾಜ್ಯಗಳ ಆಕ್ಷೇಪದಿಂದಾಗಿ ಅಂತಿಮ ಅಧಿಸೂಚನೆ ಬಾಕಿ * ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಮಾಹಿತಿ NAMMUR EXPRESS NEWS ಚಿಕ್ಕಮಗಳೂರು: ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸುತ್ತದೆ. ಆಗ ಅಲ್ಲಿ ಮಾನವ ಹಸ್ತಕ್ಷೇಪ ಮಾಡುವ ಹಾಗೇ ಇಲ್ಲ. ಇಡೀ ಭೂ ಭಾಗ ರಾಜ್ಯದ ನಿಯಂತ್ರಣದಿಂದ ಕೇಂದ್ರದ ಸುಪರ್ದಿಗೆ ಹೋಗುತ್ತದೆ. ಈ ಬಗ್ಗೆ ಸಚಿವ ಸಂಪುಟವು ವಿಸ್ತ್ರತ ಚರ್ಚೆ ನಡೆಸಿದ್ದು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ತಿಳಿಸಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆ ಆಯೋಜಿಸಿದ್ದ ಸಮಾಲೋಚನೆಯಲ್ಲಿ, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಇಎಸ್‌ಎ ಹೊರಡಿಸಲಾಗಿದ್ದ ಆರನೇ ಕರಡು ಅಧಿಸೂಚನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.…
ಬಿಜೆಪಿ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ಇನ್ನಿಲ್ಲ! * ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ * ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ನಾಯಕ * ಬೆಂಗಳೂರಲ್ಲಿ ಅಂತಿಮ ದರ್ಶನ: ಸಂಜೆ ಅಂತ್ಯಕ್ರಿಯೆ NAMMUR EXPRESS NEWS ಬೈಂದೂರು: ಮಾಜಿ ಶಾಸಕ ಬೈಂದೂರು ಕೆ ಲಕ್ಷ್ಮೀ ನಾಯರಾಯಣ (85) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಇವರು 2008ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸ್ನಾತಕೋತ್ತರ ಪದವಿಧರರಾಗಿರುವ ಇವರು ಉದ್ಯಮಿಯಾಗಿ ಹೆಸರು ಗಳಿಸಿದ್ದಾರೆ. ಬೆಂಗಳೂರಲ್ಲಿ ಅಂತಿಮ ದರ್ಶನ: ಸಂಜೆ ಅಂತ್ಯಕ್ರಿಯೆ ಮೃತರ ಅಂತಿಮ ದರ್ಶನಕ್ಕಾಗಿ ಅವರ ಡಾಲರ್ ಕಾಲೋನಿಯಲ್ಲಿರುವ ಮನೆಯಲ್ಲಿ ಬೆಳಿಗ್ಗೆ 10.30 ರಿಂದ ಇರಿಸಲಾಗುವುದು, ಸಂಜೆ 4.30ಕ್ಕೆ ಬನಶಂಕರಿಯ ಚಿತ್ತಾಗಾರದಲ್ಲಿ…
ಕಾರ್ಮಿಕರಿಗೆ ತುಟ್ಟಿಭತ್ಯೆ ಪರಿಷ್ಕರಿಸಿ ಕನಿಷ್ಠ ವೇತನ ದರ ಫಿಕ್ಸ್! * ಕೌಶಲ್ಯ ಮಟ್ಟಗಳ ಆಧಾರದ ಮೇಲೆ ವೇತನ ದರ ವರ್ಗೀಕರಣ * ಕುಶಲ ಕಾರ್ಮಿಕರಿಗೆ ದಿನಕ್ಕೆ 868 ರೂ.ವೇತನ NAMMUR EXPRESS NEWS ನವದೆಹಲಿ : ಕಾರ್ಮಿಕರನ್ನು, ವಿಶೇಷವಾಗಿ ಸಂಘಟಿತ ವಲಯದವರನ್ನ ಬೆಂಬಲಿಸುವ ಮಹತ್ವದ ಕ್ರಮದಲ್ಲಿ ಕೇಂದ್ರ ಸರ್ಕಾರವು ವೆರಿಯಬಲ್ ತುಟ್ಟಿಭತ್ಯೆ (VDA) ಪರಿಷ್ಕರಿಸುವ ಮೂಲಕ ಕನಿಷ್ಠ ವೇತನ ದರಗಳನ್ನು ಘೋಷಿಸಿದೆ. ಹೊಸ ವೇತನ ದರಗಳು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿವೆ. ಕೊನೆಯ ಪರಿಷ್ಕರಣೆಯನ್ನು ಏಪ್ರಿಲ್ 2024 ರಲ್ಲಿ ಕನಿಷ್ಠ ವೇತನ ದರಗಳನ್ನು ಕೌಶಲ್ಯ ಮಟ್ಟಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಕೌಶಲ್ಯರಹಿತ, ಅರೆ-ನುರಿತ, ನುರಿತ ಮತ್ತು ಹೆಚ್ಚು ಕೌಶಲ್ಯ – ಜೊತೆಗೆ ಭೌಗೋಳಿಕ ಪ್ರದೇಶ – ಎ, ಬಿ ಮತ್ತು ಸಿ.ಪರಿಷ್ಕರಣೆಯ ನಂತರ, ಕಟ್ಟಡ ನಿರ್ಮಾಣ, ಗುಡಿಸುವಿಕೆ, ಶುಚಿಗೊಳಿಸುವಿಕೆ, ಲೋಡಿಂಗ್ ಮತ್ತು ಅನ್ನೋಡಿಂಗ್ ಮಾಡುವ ಕಾರ್ಮಿಕರಿಗೆ ಪ್ರದೇಶ ‘ಎ’ ಯಲ್ಲಿ ಕನಿಷ್ಠ ವೇತನ ದರಗಳು ಕುಶಲ ಕಾರ್ಮಿಕರಿಗೆ ದಿನಕ್ಕೆ…
ಕಾರಿನೊಳಗೆ ಇತ್ತು ಹೆಬ್ಬಾವು! – ಬೈಂದೂರು: ಕಾರಿನ ಬಾನೆಟಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ – ಮೂಡುಬಿದಿರೆ: ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದ ಬಾಲಕ ಅಪಘಾತಕ್ಕೆ ಬಲಿ! – ಪುತ್ತೂರು: ಸಾಲ ವಸೂಲಿಗೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲಿಂದ ಶೂಟ್ ಬೆದರಿಕೆ: ಕೇಸ್! NAMMUR EXPRESS NEWS ಉಡುಪಿ: ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವು ಕಂಡು ಕಾರು ಮಾಲೀಕ ಬೆಚ್ಚಿಬಿದ್ದಿದ್ದಾರೆ. ಬಡಕೆರೆ ಜೋಯಿಸರಬೆಟ್ಟು ನಿವಾಸಿ ಚಂದ್ರಪ್ರಕಾಶ್ ಶೆಟ್ಟಿ ಎಂಬವರ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅವರು ಕಾರು ಚಲಾಯಿಸಿಕೊಂಡು ಬರುವಾಗ ಕಾರಿನಲ್ಲಿ ವಿಪರೀತ ಸದ್ದು ಕೇಳಿಸಿದೆ. ಕಾರು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 12ಅಡಿ ಉದ್ದದ ಹೆಬ್ಬಾವೊಂದು ಬಾನೆಟ್ ಒಳಗೆ ತಣ್ಣಗೆ ಮಲಗಿತ್ತು. ಕಾರು ಚಲಾಯಿಸಿಕೊಂಡು ಹೋದಾಗ ಬಿಸಿಯ ಹಿನ್ನೆಲೆಯಲ್ಲಿ ಹೆಬ್ಬಾವು ಹೊರಗೆ ಬರಲು ಒದ್ದಾಡಿತ್ತು. ಕಾರಿನ ಮಾಲೀಕ ಕೂಡಲೇ ಅರಣ್ಯ ಇಲಾಖೆಗೆ…
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮಿ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮಗೆ ಸಂಪತ್ತು ವೃದ್ಧಿಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗಬಹುದು. ನಿಮ್ಮಲ್ಲಿರುವ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಇಂದು, ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ** ವೃಷಭ ರಾಶಿ : ಇಂದು ನಿಮಗೆ ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮ್ಮ ತಾಯಿಯ ನೆರವಿನಿಂದ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ವಾಹನ…
ಧರ್ಮ ಸಂರಕ್ಷಣಾ ಕಾರ್ಯಕ್ಕೆ ಶೃಂಗೇರಿ ಶ್ರೀಗಳ ನೆರವು..!! * ಮತಾಂತರಗೊಂಡ ಸುಮಾರು 8 ಸಾವಿರ ಹಿಂದೂ ಯುವತಿಯರ ರಕ್ಷಣೆ * ಮರಳಿ ಮಾತೃ ಧರ್ಮಕ್ಕೆ ಕರೆತಂದ ಕೇರಳ ತಿರುವನಂತಪುರದ ಆರ್ಷ ಸಮಾಜ ಸಂಸ್ಥೆಗೆ ಶೃಂಗೇರಿ ಶ್ರೀಗಳಿಂದ ನೆರವು ಶೃಂಗೇರಿ: ಜಗದ್ಗುರು ಶಂಕರ ಭಗವತ್ಪಾದರ ದಿವ್ಯ ಸಂಕಲ್ಪ ಶೃಂಗೇರಿ ಶಾರದಾ ಪೀಠವು ಕಳೆದ ಹಲವು ಶತಮಾನಗಳಿಂದ ಧರ್ಮ ಸಂರಕ್ಷಣೆಯ ಕಾರ್ಯವನ್ನು ನೆರವೇರಿಸಿಕೊಂಡು ಬರುತ್ತಿದ್ದು ಈ ಭವ್ಯ ಪರಂಪರೆಯಲ್ಲಿ ಬಂದ ಜಗದ್ಗುರುಗಳೆಲ್ಲರೂ ಲೋಕಕಲ್ಯಾಣಾರ್ಥವಾಗಿ ಮಾಡಿರುವ ಕಾರ್ಯಗಳೆಲ್ಲವೂ ವರ್ಣನಾತೀತವಾಗಿದೆ.ಧಾರ್ಮಿಕ ಮಾತ್ರವಲ್ಲದೆ ಶೈಕ್ಷಣಿಕ,ಆರೋಗ್ಯ ಮುಂತಾದ ಸಾಮಾಜಿಕ ಕ್ಷೇತ್ರಗಳಿಗೆ ಪೀಠವು ಸಲ್ಲಿಸಿದ ಕೊಡುಗೆ ಅಪಾರವಾದದ್ದು. ಈಗ ಪ್ರಸ್ತುತ ನೆರೆಯ ರಾಜ್ಯ, ಶಂಕರಾಚಾರ್ಯರು ಜನಿಸಿದ ಪುಣ್ಯಭೂಮಿ ಕೇರಳದಲ್ಲಿ ಮತಾಂತರದ ಪಿಡುಗು ವ್ಯಾಪಕವಾಗಿ ಹರಡುತ್ತಿದ್ದು,ತಿರುವನಂತಪುರದ ಆಚಾರ್ಯ ಮನೋಜ್ ರವರ ಆರ್ಷ ವಿದ್ಯಾ ಸಮಾಜವು ಮತಾಂತರಗೊಂಡ ಎಂಟು ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಮರಳಿ ಮಾತೃಧರ್ಮಕ್ಕೆ ಕರೆತಂದಿರುತ್ತಾರೆ.ಇದನ್ನು ಗುರುತಿಸಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು 50 ಲಕ್ಷ ರೂಪಾಯಿಗಳನ್ನು ನೆರವು…
ತೀರ್ಥಹಳ್ಳಿ ಸರ್ಕಾರಿ ಪಿಯು ಕಾಲೇಜು ಹಳೆ ವಿದ್ಯಾರ್ಥಿಗಳ ಸಭೆ! * ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಸೆ. 28ಕ್ಕೆ ಕಾರ್ಯಕ್ರಮ * ಎಲ್ಲಾ ಹಳೆಯ ವಿದ್ಯಾರ್ಥಿಗಳು ಆಗಮಿಸಲು ಕರೆ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ತೀರ್ಥಹಳ್ಳಿ ಇದರ ಹಳೆ ವಿದ್ಯಾರ್ಥಿಗಳ ಸಭೆ ಸೆ.28ರಂದು ಬೆಳಿಗ್ಗೆ 10:00 ಗಂಟೆಗೆ ಶಾಸಕರಾದ ಆರಗ ಜ್ಞಾನೇಂದ್ರ ಇವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. 1983ರಲ್ಲಿ ಈ ಕಾಲೇಜು ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿ ಉನ್ನತ ಮಟ್ಟದ ಸಾಧನೆಯೊಂದಿಗೆ ಉದ್ಯೋಗದಲ್ಲಿಯೂ ಒಳ್ಳೆಯ ಸ್ಥಾನಮಾನಗಳನ್ನು ಪಡೆದುಕೊಂಡಿರುತ್ತಾರೆ. ಕಾಲೇಜಿನ ಅಭಿವೃದ್ಧಿಯ ಹಿನ್ನಲೆಯಲ್ಲಿ ಈ ಕಾಲೇಜಿನಲ್ಲಿ ಓದಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಬೇಕಾಗಿದೆ. ಸಭೆಗೆ ಈ ಕಾಲೇಜಿನಲ್ಲಿ ಓದಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಜರಾಗಬೇಕಾಗಿ ನಾಗರಾಜ ಶೆಟ್ಟಿ ಉಪಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ತೀರ್ಥಹಳ್ಳಿ ಹಾಗೂ ಸುಧಾ ವೈ.ಎಂ.…
ಕಸ್ತೂರಿ ರಂಗನ್ ವರದಿ ಜಾರಿಗೆ ಕೊನೆ ಪ್ಲಾನ್! * ಒತ್ತುವರಿ ತೆರವು ಆತಂಕದಲ್ಲಿ ಮಲೆನಾಡಿನ ಜನತೆ * ಸಣ್ಣಪುಟ್ಟ ಒತ್ತುವರಿ ಮಾಡಿಕೊಂಡ ಕೃಷಿ ಚಟುವಟಿಕೆಗೆ ಸವಾಲು NAMMUR EXPRESS NEWS ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಶ್ರೇಣಿಗಳ ತಪ್ಪಲಲ್ಲಿರುವ ಶೃಂಗೇರಿ ತಾಲೂಕಿನ ಬಹುತೇಕ ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು, ಕಸ್ತೂರಿ ರಂಗನ್ ವರದಿ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಇನ್ನೊಂದೆಡೆ ಒತ್ತುವರಿ ತೆರವು ಆದೇಶ ಇದೀಗ ರೈತರಿಗೆ ಢವ ಢವ ಶುರುವಾಗಿದೆ. ಈಗಾಗಲೇ 5 ಬಾರಿ ಕರಡು ಅಧಿಸೂಚನೆ ಪ್ರಕಟಗೊಂಡಿದ್ದರೂ, ಮತ್ತೆ ಆರನೇ ಬಾರಿ ಕರಡು ಅಧಿಸೂಚನೆ ಪ್ರಕಟವಾಗಲಿದ್ದು, ಆಕ್ಷೇಪಣೆಗೆ ಸಂಬಂಧಿಸಿದಂತೆ 60 ದಿನಗಳ ಗಡುವು ನೀಡಲಾಗಿತ್ತು. ಪಶ್ಚಿಮ ಘಟ್ಟ ತಪ್ಪಲಿನ ನೂರಾರು ಹಳ್ಳಿಗಳು ವರದಿ ಜಾರಿಗೆ ಬಂದರೆ ಸಮಸ್ಯೆಗೆ ಸಿಲುಕಲಿದೆ. ಈಗಾಗಲೇ ಸರ್ಕಾರದ ಅರಣ್ಯ ಕಾಯ್ದೆಗಳು, ಅರಣ್ಯ ಇಲಾಖೆ ನೀತಿ ನಿಯಮಗಳಿಂದ ನಿರಂತರ ಶೋಷಣೆ ಗೊಳಗಾಗುತ್ತಿರುವ ಈ ಭಾಗದ ನಿವಾಸಿಗಳಿಗೆ ಇನ್ನೂ ಕಸ್ತೂರಿ ರಂಗನ್ ವರದಿ ಜಾರಿಯಾದರೆ ವಿದ್ಯುತ್,…
ಅರಣ್ಯದ ಮರಗಳನ್ನೇ ಕದ್ದ ಅರಣ್ಯ ಅಧಿಕಾರಿ!? – ಅಕ್ರಮ ಕಡಿತಲೆ ಮಾಡಿ ಸ್ವಂತಕ್ಕೆ ಬಳಸಿಕೊಂಡ ವನಪಾಲಕ!? – ಆಗುಂಬೆ ವಲಯದ ವನಪಾಲಕರೊಬ್ಬರ ಗೋಲ್ಮಾಲ್! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಶೀರೂರು ಗ್ರಾಮದ ಮಜರೆ ಪಡುವಳ್ಳಿ ವ್ಯಾಪ್ತಿಯಲ್ಲಿ ಸ.ನಂ. 118 ಅರಣ್ಯ ಇಲಾಖೆ ಭೂಮಿಯಲ್ಲಿ ಬೆಳೆದು ನಿಂತಿದ್ದ ಸುಮಾರು 200-250 ವರ್ಷಗಳಷ್ಟು ಹಳೆಯದಾದ ಭಾರೀ ಗಾತ್ರದ ಹಲಸಿನ ಮರವನ್ನು ಆಗುಂಬೆ ವಲಯದ ವನಪಾಲಕರೊಬ್ಬರು ಮರ ಕೊಯ್ಯುವ ಕೆಲಸ ಮಾಡುವ ಕಮ್ಮರಡಿ ಕಡೆಯ ಮರಕೆಲಸಗಾರರನ್ನು ಸೇರಿಸಿಕೊಂಡು ನಾಲ್ಕು ದಿನಗಳಿಂದ ಸತತವಾಗಿ ಈ ಹಲಸಿನ ಮರವನ್ನು ಕಡಿತಲೆ ಮಾಡಿ ಕೊಯ್ತ ಮಾಡಿಸಿದ್ದಾರೆ. ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ತನ್ನ ಕಡೆಯ ಜನಗಳನ್ನು ಕರೆದುಕೊಂಡು ರಾತ್ರಿ ವೇಳೆ ಮನೆಗಳಿಗೆ ಬಂದು ಈ ವಿಚಾರವನ್ನು ಹೊರಗಡೆ ಸುದ್ದಿ ಮಾಡಿದರೆ, “ನಿಮ್ಮನ್ನೆಲ್ಲಾ ಏನಾದರೂ ಮಾಡಿ ಸಿಲುಕಿಸಿ ಅರಣ್ಯ ಕೇಸು ಹಾಕಿಸಿ ಒಳಗೆ ಹಾಕಿಸುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾರೆ. ಕೊಯ್ತ ಮಾಡಿದ ಸ್ಥಳದಲ್ಲಿ ಬಿದ್ದಿರುವ ಮರದ ಪುಡಿಗಳು ಈ…