Author: Nammur Express Admin

ಅರಣ್ಯದ ಮರಗಳನ್ನೇ ಕದ್ದ ಅರಣ್ಯ ಅಧಿಕಾರಿ!? – ಅಕ್ರಮ ಕಡಿತಲೆ ಮಾಡಿ ಸ್ವಂತಕ್ಕೆ ಬಳಸಿಕೊಂಡ ವನಪಾಲಕ!? – ಆಗುಂಬೆ ವಲಯದ ವನಪಾಲಕರೊಬ್ಬರ ಗೋಲ್ಮಾಲ್! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಶೀರೂರು ಗ್ರಾಮದ ಮಜರೆ ಪಡುವಳ್ಳಿ ವ್ಯಾಪ್ತಿಯಲ್ಲಿ ಸ.ನಂ. 118 ಅರಣ್ಯ ಇಲಾಖೆ ಭೂಮಿಯಲ್ಲಿ ಬೆಳೆದು ನಿಂತಿದ್ದ ಸುಮಾರು 200-250 ವರ್ಷಗಳಷ್ಟು ಹಳೆಯದಾದ ಭಾರೀ ಗಾತ್ರದ ಹಲಸಿನ ಮರವನ್ನು ಆಗುಂಬೆ ವಲಯದ ವನಪಾಲಕರೊಬ್ಬರು ಮರ ಕೊಯ್ಯುವ ಕೆಲಸ ಮಾಡುವ ಕಮ್ಮರಡಿ ಕಡೆಯ ಮರಕೆಲಸಗಾರರನ್ನು ಸೇರಿಸಿಕೊಂಡು ನಾಲ್ಕು ದಿನಗಳಿಂದ ಸತತವಾಗಿ ಈ ಹಲಸಿನ ಮರವನ್ನು ಕಡಿತಲೆ ಮಾಡಿ ಕೊಯ್ತ ಮಾಡಿಸಿದ್ದಾರೆ. ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ತನ್ನ ಕಡೆಯ ಜನಗಳನ್ನು ಕರೆದುಕೊಂಡು ರಾತ್ರಿ ವೇಳೆ ಮನೆಗಳಿಗೆ ಬಂದು ಈ ವಿಚಾರವನ್ನು ಹೊರಗಡೆ ಸುದ್ದಿ ಮಾಡಿದರೆ, “ನಿಮ್ಮನ್ನೆಲ್ಲಾ ಏನಾದರೂ ಮಾಡಿ ಸಿಲುಕಿಸಿ ಅರಣ್ಯ ಕೇಸು ಹಾಕಿಸಿ ಒಳಗೆ ಹಾಕಿಸುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾರೆ. ಕೊಯ್ತ ಮಾಡಿದ ಸ್ಥಳದಲ್ಲಿ ಬಿದ್ದಿರುವ ಮರದ ಪುಡಿಗಳು ಈ…

Read More

ನಕಲಿ ದಾಖಲೆ ಸೃಷ್ಟಿಸಿ ಪಿಂಚಣಿ ಹಣ ಗೋಲ್ಮಾಲ್! – ಕಡೂರಲ್ಲಿ ಘಟನೆ: ಡಿಸಿ ತನಿಖೆ ವೇಳೆ ಆರೋಪ ಧೃಡ,ಉಪ ತಹಶೀಲ್ದಾರ್ ಅಮಾನತು – ಕೊಪ್ಪ: ವಿದ್ಯುತ್ ತಂತಿ ತುಳಿದು 5 ಹಸುಗಳು ಸಾವು – ಮೂಡಿಗೆರೆಯ ಬಣಕಲ್ಲಿನಲ್ಲಿ ಮನೆ ಗೋಡೆ ಕುಸಿತ – ಶೃಂಗೇರಿ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ NAMMUR EXPRESS NEWS ಕಡೂರು: ಕಡೂರಿನಲ್ಲಿ ಶಿರಸ್ತೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅರ್ಹ ಫಲಾನುಭವಿಗಳಿಗೆ ಬರುತ್ತಿದ್ದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆ ವ್ಯಕ್ತಿಗಳ ಖಾತೆಗೆ ಜಮೆಯಾಗುವಂತೆ ಮಾಡಿದ್ದ ಬಿ.ಸಿ ಕಲ್ಮುರುಡಪ್ಪ ವಿರುದ್ಧ ನಿರಂತರ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತನಿಖೆ ನಡೆಸಿ ಆಮಾನತು ಮಾಡಲಾಗಿದೆ.. ಈ ವೇಳೆ 1156 ಪಿಂಚಣಿ ಪ್ರಕರಣಗಳಲ್ಲಿ ಅಕ್ರಮ ಧೃಡವಾಗಿದೆ.ಈ ಹಿನ್ನೆಲೆಯಲ್ಲಿ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್.ಎನ್ ಸುದರ್ಶನ್ ಅವರಿಂದ ಅಮಾನತು ಮಾಡಿ ಆದೇಶ…

Read More

ಹೊಳೆಯಲ್ಲಿ ಈಜಿ ಊರಿಗೆ ಕರೆಂಟ್ ಕೊಟ್ಟ ಲೈನ್ ಮ್ಯಾನ್! – ಲೈನ್ ಮ್ಯಾನ್ ಸೇವೆಗೆ ಗ್ರಾಹಕರ ಮೆಚ್ಚುಗೆ – ಮಂಗಳೂರು: ಪ್ಲೆಕ್ಸ್, ಬ್ಯಾನರ್ ಗಳಿಗೆ ಅಕ್ರಮವಾಗಿ ವಿದ್ಯುತ್ ಇಲ್ಲ NAMMUR EXPRESS NEWS ಹೆಬ್ರಿ: ಹೊಳೆಯಲ್ಲಿ ಸುಮಾರು 70 ಅಡಿ ದೂರದವರಗೆ ಈಜಾಡುತ್ತಾ ತುಂಡಾದ ವಿದ್ಯುತ್ ತಂತಿಯನ್ನು ದುರಸ್ತಿಗೊಳಿಸಿ ಮನೆಗೆ ವಿದ್ಯುತ್ ಸಂಪರ್ಕ ನೀಡಿದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಅವರ ಸಾಧನೆ ಗಮನ ಸೆಳೆದಿದೆ. ಶಿವಪುರ ಗ್ರಾಮದ ಉಪ್ಪಳ ಮೂರು ಸಾಲು ಹೊಳೆಯ ಮಧ್ಯದಲ್ಲಿ ಹಾದುಹೋದ ವಿದ್ಯುತ್ ತಂತಿ ತುಂಡಾಗಿ ಹಲವಾರು ದಿನಗಳು ಕಳೆದಿತ್ತು. ವಿಪರೀತ ಮಳೆಯಿಂದಾಗಿ ದುರಸ್ತಿ ಮಾಡಲಾಗದೆ ಹಾಗೆ ಉಳಿದಿತ್ತು.ಈ ಪರಿಸರದ ಜನ ವಿದ್ಯುತ್ ಮೋಟರ್ ಗಳನ್ನು ಬಳಸಲಾಗದೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ವಿಷಯ ತಿಳಿದ ದಾವಣಗೆರೆ ಚೆನ್ನಗಿರಿ ಮೂಲದ ಹೆಬ್ರಿ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಹಾಗೂ ಅರೆಕಾಲಿಕ ಸಿಬ್ಬಂದಿ ಸುಧೀ‌ರ್ ಸಹಾಯದೊಂದಿಗೆ ಕೇವಲ ಇಬ್ಬರೇ ತೆರಳಿ ಸಮಸ್ಯೆ ಬಗೆಹರಿಸಿದ್ದಾರೆ.…

Read More

ಹೆಬ್ರಿ ತಾಲೂಕಿನಲ್ಲಿ ಕಾಡಾನೆ ಕಾಟ! – ಕುಚ್ಚಾರು ಭಾಗದಲ್ಲಿ ಆನೆ ಹಾವಳಿ: ಜೀವ ಭಯದಲ್ಲಿ ಜನ – ಸೋಮೇಶ್ವರ ಅಭಯಾರಣ್ಯದಲ್ಲಿ 4 ತಿಂಗಳಿಂದ ಆನೆ ಸಂಚಾರ NAMMUR EXPRESS NEWS ಹೆಬ್ರಿ: ಹೆಬ್ರಿ ತಾಲೂಕಿನಲ್ಲಿ ಕಾಡಾನೆಗಳ ಕಾಟ ರೈತರ ಬದುಕನ್ನು ಇದೀಗ ಆತಂಕಕ್ಕೆ ತಳ್ಳಿದೆ. ಹೆಬ್ರಿ ತಾಲ್ಲೂಕಿನ ಕುಚ್ಚಾರು ಪರಿಸರದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ. ಕಳೆದ 2 ವರ್ಷಗಳಿಂದ ಹೆಬ್ರಿ ತಾಲ್ಲೂಕಿನ ಹಲವೆಡೆ ಆನೆಗಳು ಕೃಷಿ ಭೂಮಿಯನ್ನು ಹಾಳು ಮಾಡಿವೆ. ನಾಡ್ಪಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದ ಪರಿಸರದಲ್ಲಿ 4 ತಿಂಗಳಿಂದ ಆನೆ ಸಂಚರಿಸುತ್ತಿದ್ದು, ಈಗ ಕುಚ್ಚಾರು ಮಾತ್ಕಲ್‌ ಪ್ರದೇಶಕ್ಕೂ ಧಾಂಗುಡಿ ಇಟ್ಟಿದೆ. ಮಾತ್ಕಲ್‌ನ ಆನಂದ ನಾಯ್ಕ ಅವರ ತೋಟದ ಬಾಳೆ ಹಾಗೂ ತೆಂಗು ಗಿಡಗಳಿಗೆ ಹಾನಿ ಮಾಡಿದೆ. ಅಣ್ಣಯ್ಯ ಅಂಬಿಗರ ಮನೆ ಸಮೀಪ ಬೈನೆ ಮರವನ್ನೂ ಕೆಡಹಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಆನೆ ಬಗ್ಗೆ ಇಲಾಖೆ ಸಿಬಂದಿ…

Read More

ಕಳಸದಲ್ಲಿ ರಸ್ತೆ ಅವ್ಯವಸ್ಥೆ: 3 ಕಿಮೀ ಅಜ್ಜಿಯನ್ನು ಹೊತ್ತುಕೊಂಡೇ ಆಸ್ಪತ್ರೆಗೆ! – ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ರಸ್ತೆ ಸಂಪರ್ಕ ಕಡಿತ – ಕಳಸ ತಾಲೂಕು ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ಘಟನೆ NAMMUR EXPRESS NEWS ಚಿಕ್ಕಮಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಸಂಜೆ, ರಾತ್ರಿ ವೇಳೆ ಮಳೆಯ ಪ್ರಮಾಣ ಹೆಚ್ಚಾಗಿದೆ. ಇದೀಗ ಮಳೆ ಮತ್ತೆ ರಸ್ತೆ ಸಮಸ್ಯೆಗೆ ಕಾರಣವಾಗಿದೆ. ಮಳೆಯಿಂದ ನದಿಗಳಲ್ಲಿ ನೀರಿ ಮಟ್ಟ ಹೆಚ್ಚಾಗಿದ್ದು ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳಸ ತಾಲೂಕು ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ರಸ್ತೆ ಸಂಪರ್ಕ ಇಲ್ಲದೇ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಕುಟುಂಬಸ್ಥರು 3 ಕಿ.ಮೀ. ದೂರು ಹೊತ್ತುಕೊಂಡೇ ಆಸ್ಪತ್ರೆಗೆ ಸೇರಿಸಿದ ಘಟನೆ ಸೆ.25ರ ಸಂಜೆ ವರದಿಯಾಗಿದೆ. ಕುದುರೆಮುಖ, ಸಂಸೆ, ನಲ್ಲಿಬೀಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ತುಂಗಾ, ಭದ್ರಾ, ನದಿಗಳಲ್ಲಿ ನೀರಿನ…

Read More

ಹಾಸನಾಂಬೆ ದೇವಾಲಯದಲ್ಲಿ ಇಸ್ಕಾನ್ ಲಡ್ಡು..!? – ತಿರುಪತಿ ವಿವಾದ ಹಿನ್ನೆಲೆ ಇಸ್ಕಾನ್ ಸಂಸ್ಥೆ ಜೊತೆ ಚರ್ಚೆ – ಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ಧತೆ – ಅಕ್ಟೋಬರ್ 28ರಂದು ಹಾಸನಾಂಬೆ ಬಾಗಿಲು ಓಪನ್ NAMMUR EXPRESS NEWS ಹಾಸನ: ತಿರುಪತಿ ದೇವಸ್ಥಾನದ ಲಾಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾದ ಬಗ್ಗೆ ವಿವಾದ ಕೇಳಿಬಂದ ಹಿನ್ನಲೆಯಲ್ಲಿ ಹಾಸನಾಂಬೆ ದೇವಾಲಯದಲ್ಲಿ ಈ ವರ್ಷದಿಂದ ಇಸ್ಕಾನ್ ಲಡ್ಡು ವಿತರಣೆ ಮಾಡಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಪ್ರಸಿದ್ಧ ದೇವಾಲಯಗಳಲ್ಲಿ ಈ ದೇವಾಲಯ ಒಂದಾಗಿದ್ದು ಹಾಸನ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಡಿಸಿ ಸಿ. ಸತ್ಯಭಾಮ ಮಾತನಾಡಿ, ಈವರ್ಷದ ಹಾಸನಾಂಬೆ ಬಾಗಿಲು ಅಕ್ಟೋಬರ್ 28ರಂದು ತೆರೆಯಲಾಗುವುದು. ಜೊತೆಗೆ ಶ್ರೀ ಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಭಕ್ತರಿಗೆ ಕೊಡುವ ಲಾಡು ಬಗ್ಗೆ ಯೋಚಿಸಿ ಸ್ವಚ್ಛತೆ, ಭಕ್ತಿಭಾವದಿಂದ ಕೊಡಲು ಮುಂದಾಗಿದ್ದು, ಈವರ್ಷದಿಂದ ೩೦೦ ರೂ ಕೊಟ್ಟು ಟಿಕೆಟ್ ಪಡೆದವರಿಗೂ ಒಂದು ಲಾಡು ಕೊಡಲಾಗುತ್ತಿದೆ. ೧ ಸಾವಿರ ನೀಡಿ ಟಿಕೆಟ್ ಪಡೆದವರಿಗೆ…

Read More

ಸಾಮಾಜಿಕ ಜಾಲ ತಾಣದಲ್ಲಿ ಹೈಕೋರ್ಟ್ ಕಲಾಪದ ವಿಡಿಯೊ ಹಾಕಾಂಗಿಲ್ಲ! – ಖಾಸಗಿ ಡಿಜಿಟಲ್ ವೇದಿಕೆಗಳಿಗೆ ಕೋರ್ಟ್ ತರಾಟೆ – ಯೂಟ್ಯೂಬ್, ಫೇಸ್‌ಬುಕ್ ಲ್, ಎಕ್ಸ್ ಸಂಸ್ಥೆಗಳಿಗೆ ಆದೇಶ NAMMUR EXPRESS NEWS ಬೆಂಗಳೂರು: ನ್ಯಾಯಾಲಯದ ಕಲಾಪದ ನೇರಪ್ರಸಾರದ ದೃಶ್ಯಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಕಲಾಪದ ದೃಶ್ಯಾವಳಿಗಳ ದುರ್ಬಳಕೆ ತಡೆಗೆ ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ (ಎಎಬಿ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ಪೀಠ ಈ ಆದೇಶ ಹೊರಡಿಸಿ ರಾಜ್ಯ ಹೈಕೋರ್ಟ್ ಜಾರಿಗೊಳಿಸಿರುವ ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021’ರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಖಾಸಗಿ ಡಿಜಿಟಲ್ ವೇದಿಕೆಗಳಾದ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ನಲ್ಲಿ ಬಳಕೆ ಮಾಡಲಾಗಿರುವ ಹೈಕೋರ್ಟ್ ಕಲಾಪದ ವಿಡಿಯೊಗಳನ್ನು…

Read More

ಆವಿಷ್ಕಾರ್ ಸೌಹಾರ್ದ ಸಹಕಾರಿಯ ಮಹಾ ಸಭೆ – ತೀರ್ಥಹಳ್ಳಿಯಲ್ಲಿ 2024 ವಾರ್ಷಿಕ ಸರ್ವಸದಸ್ಯರ ಸಭೆ – ರಾಜ್ಯದ ವಿವಿಧ ಭಾಗದಿಂದ ಬಂದ ಷೇರುದಾರರು NAMMUR EXPRESS NEWS ತೀರ್ಥಹಳ್ಳಿ: ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ತೀರ್ಥಹಳ್ಳಿ 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಅಧ್ಯಕ್ಷ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಸೊಪ್ಪುಗುಡ್ಡೆಯಲ್ಲಿರುವ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನೆರವೇರಿತು. ಚಿಕ್ಕಮಗಳೂರು,ಹೊಸಪೇಟೆ,ತೀರ್ಥಹಳ್ಳಿ ಭಾಗದಿಂದ ಷೇರುದಾರರು ಆಗಮಿಸಿದ್ದರು. ಸೌಹಾರ್ದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷರು ಅನಿಲ್ ಕುಮಾರ್,ಉಪಾಧ್ಯಕ್ಷರು ಎಸ್ ಆರ್ ವೆಂಕಟೇಶ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸಿ,ರಾಜ್ಯ ನಿರ್ದೇಶಕರಾದ ಎಮ್ ಬಸವರಾಜ್, ಜ್ಯೋತಿ ಆರ್ ದಿಲೀಪ್, ನಯನ ಜೆ ಶೆಟ್ಟಿ, ಸಿ ರವಿ, ಎಮ್. ಸೋಮಶೇಕರಪ್ಪ, ಬಿ ನರಸಿಂಹಮೂರ್ತಿ, ಕೆ ಮಂಜುನಾಥ ಗುಪ್ತ, ಕೆ. ಟಿ ಶ್ರೀನಿವಾಸ್, ಡಿ ವೀರಭದ್ರಪ್ಪ, ಲಿಂಗರಾಜು ಜಿ, ರಮೇಶ್ ಡಿ ಪುಟ್ನಳ್ಳಿ, ವೃತ್ತಿಪರ ನಿರ್ದೇಶಕರಾದ ವಿಠಲ್ ಕೆ.ಜಿ ಸೇರಿದಂತೆ 14 ಜನ ನಿರ್ದೇಶಕರು 2 ವೃತ್ತಿ ಪರ ನಿರ್ದೇಶಕರು…

Read More

ಕರಾವಳಿ ಟಾಪ್ ನ್ಯೂಸ್ – ಕುಂದಾಪುರ: ಪಿಕಪ್ ಡಿಕ್ಕಿ: ಬಸ್‌ ಪಲ್ಟಿ: 8 ಮಂದಿಗೆ ಗಾಯ – ಪುತ್ತೂರು: ಎರಡು ಬೈಕ್ ಗಳ ಮಧ್ಯೆ ಡಿಕ್ಕಿ: ಸವಾರರಿಬ್ಬರಿಗೂ ಗಾಯ – ಪುತ್ತೂರು: ತಾಲೂಕು ಕಚೇರಿಯ ಕನಕರಾಜ್ ಇನ್ನಿಲ್ಲ – ಕೋಟಾ: ನಾಯಿಯನ್ನು ಹೊತ್ತುಕೊಂಡು ಹೋದ ಚಿರತೆ! – ಮಂಗಳೂರು: ಅಂಬ್ಯುಲೆನ್ಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ,ರೋಗಿ ಮೃತ್ಯು ಕುಂದಾಪುರ: ಕುಂದಾಪುರದಿಂದ ಕೊಲ್ಲೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೆಂದು ಇಡೂರು-ಕುಂಜಾಡಿ ಬಳಿಯ ಇಡೂರು ಜನ್ನಲ್‌ ಎಂಬಲ್ಲಿ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ನಡೆದಿದೆ ಕುಂದಾಪುರದಿಂದ ಕೊಲ್ಲೂರಿಗೆ ತೆರಳುತ್ತಿದ್ದ ವಿಜಯಲಕ್ಷ್ಮೀ ಬಸ್‌ ಇಡೂರು ಜನ್ನಲ್ ಎಂಬಲ್ಲಿ ಕೆಂಪು ಮೆಣಸು ಸಾಗಾಟದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ ಈ ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 5 ಮಂದಿಯನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಇಬ್ಬರನ್ನು ಕುಂದಾಪುರ ನಗರದ ಸರಕಾರಿ ಆಸ್ಪತ್ರೆ ಹಾಗೂ ಗಂಭೀರ ಗಾಯಗೊಂಡ ಪಿಕಪ್ ವಾಹನ ಚಾಲಕನನ್ನು ಮಣಿಪಾಲದ ಕೆ ಎಂ ಸಿ ಗೆ ದಾಖಲಿಸಲಾಗಿದೆ…

Read More

ಕಾರ್ಕಳದಲ್ಲಿ ಕೊಲೆಯೋ… ಆತ್ಮಹತ್ಯೆಯೋ..? – ಲಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ! – ಲಾರಿ ಚಾಲಕನಾಗಿದ್ದವನ ಬದುಕು ಅಂತ್ಯ NAMMUR EXPRESS NEWS ಕಾರ್ಕಳ: ಕಾರ್ಕಳ ಬೈಪಾಸ್ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ಲಾರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.  ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಟ್ಯಾಂಕರ್‌ಗೆ ನೇಣು ಬಿಗಿದು ಲಾರಿ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಕುಂದೂರು ಗ್ರಾ.ಪಂ. ಬಳಿಯ ಕಾಂಗ್ರೆಸ್‌ ಕಚೇರಿ ಮುಂಭಾಗ ನಡೆದಿದೆ. ಬೆಳಗಾಂ ಮೂಲದ ಈರಣ್ಣ (40) ಆತ್ಮಹತ್ಯೆಗೆ ಶರಣಾದ ಚಾಲಕ. ಕಳೆದ 10 ವರ್ಷಗಳಿಂದ ಕಾರ್ಕಳದಲ್ಲಿ ಲಾರಿ ಚಾಲಕರಾಗಿ ದುಡಿಯುತ್ತಿದ್ದ ಈರಣ್ಣ ಸೆ. 25 ರ ತಡರಾತ್ರಿ ಟ್ಯಾಂಕರ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಆಕ್ಟಿವಾ ಮತ್ತು ಚಪ್ಪಲಿ ಪತ್ತೆಯಾಗಿದೆ. ಕಾರ್ಕಳ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಸ್ಥಳ ಪರಿಶೀಲನೆ ಮಾಡಿದ್ದು ತನಿಖೆ ಮಾಡುತ್ತಿದ್ದಾರೆ.…

Read More