ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರವಾದ ಪ್ಲೆಕ್ಸ್! – ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ – ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಜ್ಞಾನೇಂದ್ರ ಪಟ್ಟು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಹಣಗೆರೆಕಟ್ಟೆಯಲ್ಲಿ ಪ್ಯಾಲೇಸ್ಟೀನ್ ಬೆಂಬಲಿಸಿ ಬ್ಯಾನರ್ ಹಾಕಲಾಗಿದ್ದು ಇದೀಗ ಪೊಲೀಸರು ಅಲ್ಲಿ ಭಾರೀ ಬಂದೋಬಸ್ತ್ ಒದಗಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಸರ್ವಧರ್ಮದ ಕ್ಷೇತ್ರದಲ್ಲಿ ಕೆಲ ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿದ್ದು ರಾತ್ರಿ ಧ್ವಜ ಹಾರಿಸಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ತೀರ್ಥಹಳ್ಳಿ ತಾಲ್ಲೂಕು ಹಣಗೆರೆಯಲ್ಲಿ ರಾಷ್ಟ್ರ ವಿರೋಧಿ ಪ್ಲೆಕ್ಸ್ ಅಳವಡಿಕೆ ವಿಚಾರದ ಕುರಿತು ಶಾಸಕ ಆರಗ ಜ್ಞಾನೇಂದ್ರ ಶಿವಮೊಗ್ಗ ಎಸ್ಪಿ ಅವರಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ. ತೀರ್ಥಹಳ್ಳಿ ತಾಲ್ಲೂಕು, ಹಣಗೆರೆಯಲ್ಲಿ ಎರಡೂ ಧರ್ಮಿಯರ ಪ್ರಾರ್ಥನಾ ಸ್ಥಳವಿದ್ದು, ಮುಜರಾಯಿ ಇಲಾಖೆಯ ಆಡಳಿತದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಬೇರೆ ಬೇರೆ ಧಾರ್ಮಿಕ ಆರಣೆಯ ಜನ ಬಂದು ಹೋಗು ಸ್ಥಳವಾದರೂ ಕೂಡ ಸೌಹಾರ್ದತೆ, ಸಾಮರಸ್ಯಕ್ಕೆ ದಕ್ಕೆಯಾಗದೆ ಕಳೆದ ಹತ್ತಾರು ವರ್ಷಗಳಿಂದ ಧಾರ್ಮಿಕ ಚಟುವಟಿಕೆಗಳು,…
Author: Nammur Express Admin
ಛತ್ರಕೇರಿ ಗಣಪತಿ ಉತ್ಸವದಲ್ಲಿ ಕಾರಂತರ ಸಂಗೀತ ಸುಧೆ – ಖ್ಯಾತ ಗಾಯಕ ಶಶಿಕುಮಾರ್ ಕಾರಂತ ತಂಡದ ಸಂಗೀತಕ್ಕೆ ಜನ ಖುಷ್ – ರೆಟ್ರೋ, ಭಾವಗೀತೆ ಮೂಲಕ ಜನ ಮನ ಸೆಳೆದ ಹಾಡುಗಾರರು – ತೀರ್ಥಹಳ್ಳಿ ತಾಲೂಕಲ್ಲೇ ಮಾದರಿಯಾದ ಅಯೋಧ್ಯಾ ಗಣಪತಿ NAMMUR EXPRESS NEWS ತೀರ್ಥಹಳ್ಳಿ: ಶ್ರೀ ಸಿದ್ದಿವಿನಾಯಕ ಯುವಕ ಸಂಘ ಛತ್ರಕೇರಿ 41ನೇ ವರ್ಷದ ಗಣಪತಿ ಉತ್ಸವ ನಡೆಯುತ್ತಿದ್ದು ಸೋಮವಾರ ರಾತ್ರಿ ಖ್ಯಾತ ಗಾಯಕ ಶಶಿಕುಮಾರ್ ಕಾರಂತ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಕಲಾವಿದರಾದ ಶಿವಮೊಗ್ಗ ರಾಘವೇಂದ್ರ ಧಾರಿಣಿ ಕುಂದಾಪುರ, ಆತ್ಮಿಕಾ, ಶಶಿಕುಮಾರ್ ಕಾರಂತ ಅವರು ಸಿನಿಮಾ, ರೆಟ್ರೋ, ಭಾವಗೀತೆಗಳ ಮೂಲಕ ಜನ ಮನ ಸೆಳೆದರು. ಅಬ್ಬರ ಇಲ್ಲದ ಅಚ್ಚುಕಟ್ಟಿನ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ರಾಜ್ ಕುಮಾರ್ ಸೇರಿದಂತೆ ಭಾವಗೀತೆ, ಭಕ್ತಿ ಗೀತೆ, ಹಳೆಯ ಕನ್ನಡ ಗೀತೆಗಳ ಸಮಾಗಮ ನಡೆಯಿತು. ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಇಂದು ಸಂಗೀತ ಸುಧೆ ಕಾರ್ಯಕ್ರಮ ಛತ್ರಕೇರಿ ಗಣಪತಿ ಕಾರ್ಯಕ್ರಮದಲ್ಲಿ…
ಮೋದಿ ಹುಟ್ಟು ಹಬ್ಬಕ್ಕೆ ತೀರ್ಥಹಳ್ಳಿಯಲ್ಲಿ ರಕ್ತದಾನ! * ಬಿಜೆಪಿ ಯುವ ಮೋರ್ಚಾ ವತಿಯಿಂದ ಶಿಬಿರ ಆಯೋಜನೆ * ನೂರಾರು ಮಂದಿ ಯುವಕರಿಂದ ರಕ್ತದಾನ: ನಾಯಕರ ಪ್ರಶಂಸೆ NAMMUR EXPRESS NEWS ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 74ನೇ ಜನ್ಮದಿನದ ಅಂಗವಾಗಿ ತೀರ್ಥಹಳ್ಳಿ ಬಿಜೆಪಿ ಯುವಮೋರ್ಚಾ ಮಂಡಲ ವತಿಯಿಂದ ಬೆಳಿಗ್ಗೆ 9 ಗಂಟೆಯಿಂದ ಬೃಹತ್ ರಕ್ತದಾನ ಕಾರ್ಯಕ್ರಮ ತೀರ್ಥಹಳ್ಳಿ ಪಟ್ಟಣದ ಕುಶಾವತಿಯ ಕೆ.ಟಿ.ಕೆ ಸಭಾಭವನದಲ್ಲಿ ನಡೆಯಿತು. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ,ಭಾಗವಹಿಸಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಹಿರಿಯ ವೈದ್ಯ ನಾರಾಯಣ ಸ್ವಾಮಿ, ಸರ್ಕಾರಿ ಆಸ್ಪತ್ರೆ ಮುಖ್ಯ ಅಧಿಕಾರಿ ಗಣೇಶ್ ಭಟ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಾಕ ಆರಗ ಜಞಾನೇಂದ್ರ ಭೇಟಿ ನೀಡಿ ಉತ್ತಮ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಪ್ರಮುಖರಾದ ಚಂದವಳ್ಳಿ ಸೋಮಶೇಖರ್, ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ದೇವಾಡಿಗ – ಪ್ರಮುಖರಾದ…
ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ: ಕಿಗ್ಗಾದಲ್ಲಿ ಸಂಭ್ರಮ! * ಕಿಗ್ಗಾದಲ್ಲಿ ಜಾರುಗಂಬ ಸ್ಪರ್ಧೆ ಆಯೋಜನೆ: * ಬಜರಂಗದಳ ಘಟಕಕ್ಕೆ ಜನರ ಶಹಬ್ಬಾಸ್ ಗಿರಿ NAMMUR EXPRRSS NEWS ಶೃಂಗೇರಿ:ಕಿಗ್ಗಾದಲ್ಲಿ ಜಾರುಗಂಬ ಸ್ಪರ್ಧೆ ಆಯೋಜನೆ ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ ಆಯೋಜನೆಗೊಂಡ ಸ್ಪರ್ಧೆಗಳು ಸಾಂಪ್ರದಾಯಿಕ ಕ್ರೀಡೆಗಳ ಆಯೋಜಿಸಿದ ಬಜರಂಗದಳ ಘಟಕಕ್ಕೆ ಶಹಬ್ಬಾಸ್..!! ಶೃಂಗೇರಿ: ತಾಲೂಕಿನ ಕಿಗ್ಗಾದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಿಗ್ಗಾ ಘಟಕದ ವತಿಯಿಂದ ಮೂರನೇ ವರ್ಷದ ಜಾರುಗಂಬ,ರಾಧಾಕೃಷ್ಣ ವೇಷ,ಭಕ್ತಿಗೀತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಶ್ವ ಹಿಂದೂಪರಿಷದ್ ಸ್ಥಾಪನಾ ದಿನ ಹಾಗೂ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ವಿ ಹಿಂ ಪ ನ ಕ್ಷೇತ್ರೀಯ ಧರ್ಮ ಪ್ರಸಾರ ಪ್ರಮುಖರಾದ ಸೂರ್ಯನಾರಾಯಣರವರು ಭಾಗವಹಿಸಿ ಧರ್ಮ ರಕ್ಷಣೆಯಲ್ಲಿ ಹಿಂದೂ ಸಮಾಜದ ಎಲ್ಲಾ ಹಿರಿಯ ಕಿರಿಯ ಜವಾಬ್ದಾರಿ ಮತ್ತು ಹಿಂದೂ ಸಮಾಜ ಜಾತಿ,ಮತಗಳನ್ನು ಬಿಟ್ಟು ಸಂಘಟಿತರಾಗಬೇಕು ಎಂದು ೆೊಟ್ಟರು. ಕರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ ನಟರಾಜ್ ರಾವ್ ತೋರಣಗದ್ದೆಯವರು ವಹಿಸಿದ್ದರು,…
ಗೀತಾ ಚಂದ್ರ ಆಚಾರ್ಯರಿಗೆ ಜಯಕರ್ನಾಟಕ ಜನಪರ ಜಿಲ್ಲಾ ಶಿಕ್ಷಕ ಪ್ರಶಸ್ತಿ – ಕಾರ್ಕಳ ಜಯರ್ನಾಟಕ ಜನಪರ ವೇದಿಕೆಯ ಮಾದರಿ ಕಾರ್ಯಕ್ರಮ NAMMUR EXPRESS NEWS ಕಾರ್ಕಳ: ಜಯರ್ನಾಟಕ ಜನಪರ ವೇದಿಕೆಯು ಜಿಲ್ಲೆಯ ಶಿಕ್ಷಕರ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲು ಬದ್ದವಾಗಿದೆ. ಗೀತಾ ಚಂದ್ರ ಆಚಾರ್ಯ ಅವರಂತಹ ಬಹುಮುಖ ವ್ಯಕ್ತಿತ್ವದ ಶಿಕ್ಷಕಿಗೆ ಜಿಲ್ಲಾ ಪ್ರಶಸ್ತಿಯನ್ನು ನೀಡುತ್ತಿರುದಕ್ಕೆ ವೇದಿಕೆಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕಾರ್ಕಳ ವ್ಯಾಪ್ತಿಯಲ್ಲಿ ವೇದಿಕೆಯ ಸಂಘಟನಾ ಶಕ್ತಿ ಪ್ರಬಲವಾಗಿದ್ದು ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಬದ್ಧರಾಗಿರುತ್ತೇವೆ ಎಂಬುದಾಗಿ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿ ಹೇಳಿದ್ದಾರೆ. ಸೆ.16ರಂದು ಕಾರ್ಕಳದಲ್ಲಿ ಗೀತಾ ಚಂದ್ರ ಆಚಾರ್ಯರ ಮನೆಯಲ್ಲಿ ಪ್ರಶಸ್ತಿ ಪ್ರದಾನ ಮಾಿ ಮಾಗಳ್ನು ಆಡಿದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳಾದ ಸ್ಯಾಮಸನ್ ಸಿಕ್ವೆರಾ ಮಟಪಾಡಿ, ಆಶೀಶ್ ಹೆಗ್ಡೆ, ಅಭಿಷೇಕ್ ಕುಂದರ್ ಯಕ್ಷಿಮಠ,ಅವಿನಾಶ್ ಬಂಗೇರ ತೆಕ್ಕಟ್ಟೆ, ಚಿರಾಗ್ ತೆಕ್ಕಟ್ಟೆ, ಗಣೇಶ್…
ಟಾಪ್ ನ್ಯೂಸ್ ಕರಾವಳಿ ಕರಾವಳಿಯಲ್ಲಿ ಹೆಚ್ಚಾಯ್ತು ಆತ್ಮಹತ್ಯೆ! – ಕಾಪು: ಕಂದಕಕ್ಕೆ ಬಿದ್ದ ಖಾಸಗಿ ಬಸ್: ಅಪಾಯದಿಂದ ಪಾರು – ಬ್ರಹ್ಮಾವರ: ಮುಂಡಾಡಿ ಗೋಡಂಬಿ ಫಾಕ್ಟರಿಯಲ್ಲಿ ಕಳವು – ಪುತ್ತೂರು: ಹೆಲ್ಮಟ್ ಧರಿಸಿಲ್ಲ ಎಂದು ಆಟೋ ಚಾಲಕನಿಗೆ ದಂಡ! – ಮಂಗಳೂರು: ಯುವಕ ಆತ್ಮಹತ್ಯೆ: ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆ! – ಪಡುಬಿದ್ರಿ:ಬಚ್ಚಲು ಕೋಣೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ NAMMUR EXPRESS NEWS ಬ್ರಹ್ಮಾವರ: ಕಾಡೂರು ಗ್ರಾಮದ ಮುಂಡಾಡಿ ಗೋಡಂಬಿ ಫಾಕ್ಟರಿಯಲ್ಲಿ 15 ಲಕ್ಷ ರೂ. ಬೆಲೆಬಾಳುವ ವಸ್ತುಗಳು ಕಳವಾಗಿರುವುದಾಗಿ ಪಾಲುದಾರ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ. ಸೋಮವಾರ ಬೆಳಗ್ಗೆ ಫ್ಯಾಕ್ಟರಿ ಸಮೀಪ ಹೋದಾಗ ಇಬ್ಬರು ಹಿಂಬದಿ ಬಾಗಿಲು ಮುರಿದು ಮೆಷಿನರಿ ಮತ್ತು ಸಲಕರಣೆಗಳನ್ನು ತೆಗೆಯುತ್ತಿದ್ದು, ತನ್ನನ್ನು ನೋಡಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಅನಂತರ ಫ್ಯಾಕ್ಟರಿ ಒಳಗೆ ಹೋ ಪರಿೀಲಿಸುವಗ ಸೊತ್ತು ಕಳವಾಗಿರುವುದು ಕಂಡು ಬಂದಿರುವುದಾಗಿ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ. ಕಾಪು: ಕಂದಕಕ್ಕೆ ಬಿದ್ದ ಖಾಸಗಿ ಬಸ್ ಉಡುಪಿ:…
ಆಡಂಬರದ ಗಣೇಶೋತ್ಸವ ಬಿಟ್ಟು ಸಮಾಜ ಸೇವೆ! – ವಿದ್ಯುತ್ ಕಂಬಗಳಿಗೆ ಲೈಟ್ ಅಳವಡಿಕೆ ಮಾಡಿದ ಶಾಂತಿನಗರ ಯುವಕರು – ರಾಜ್ಯಕ್ಕೆ ಮಾದರಿ ಆಯ್ತು ಹೊಸದುರ್ಗದ ಗಣೇಶ ಸಮಿತಿ NAMMUR EXPRESS NEWS ಹೊಸದುರ್ಗ: ಹೊಸದುರ್ಗ ನಗರದ ಬೆಟ್ಟಗಳಿಗೆ ಹೊಂದಿಕೊಂಡಿರುವ ಶಾಂತಿನಗರ ಬಡಾವಣೆಯಲ್ಲಿ 11 ವರ್ಷಗಳಿಂದ ಹಿಂದೂ ಮಹಾಗಣಪತಿ ಯುವಕರ ತಂಡ ಗಣಪತಿ ಮೂರ್ತಿಯನ್ನು ಕೂರಿಸಿ, ಗಣೇಶೋತ್ಸವ ಆಚರಿಸಿಕೊಂಡು ಬಂದಿದ್ದರು. ಅದರಂತೆಯೇ, ಈ ಬಾರಿ ಹನ್ನೆರಡನೇ ವರ್ಷದ ಗಣೇಶ ಮಹೋತ್ಸವವನ್ನು ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಆರ್ಕೆಸ್ಟ್ರಾ ನಡೆಸಲು ಇಟ್ಟಿದ್ದ ಹಣದಲ್ಲಿ ಆರ್ಕೆಸ್ಟ್ರಾ ಆಯೋಜಿಸದೆ, ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ತಮ್ಮ ಬಡಾವಣೆಯ ಕೆಲವು ವಿದ್ಯುತ್ ಕಂಬಗಳಿಗೆ ಹೈ ಮಾಸ್ಕ್ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಬಗ್ಗೆ ಶಾಂತಿನಗರ ಬಡಾವಣೆಯ ಗಣಪತಿ ಯುವಕ ಸಂಘದ ಸಂಚಾಲಕ ಗೋಪಾಲ್ ಮಾತನಾಡಿ, 12 ವರ್ಷಗಳಿಂದಲೂ ಕೂಡ ಗಣೇಶ ಮಹೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. 2 ಗಂಟೆಯ ಆರ್ಕೆಸ್ಟ್ರಾ ಗಾಗಿ ಬಹಳ ದುಡ್ಡನ್ನು ಖರ್ಚು ಮಾಡುವ ಬದಲು ನಮ್ಮ…
ಮನೆ ಯಜಮಾನಿಯರಿಗೆ ಗುಡ್ ನ್ಯೂಸ್!! * ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ರದ್ದುಪಡಿಸುವುದಿಲ್ಲ ಎಂಬ ಸ್ಪಷ್ಟನೆ! * ಬಾಕಿ ಉಳಿದಿರುವ ಎರಡು ತಿಂಗಳ ಹಣ ಒಟ್ಟಿಗೆ ಜಮೆ! NAMMUR EXPRESS NEWS ಬೆಂಗಳೂರು: ಗೃಹಲಕ್ಷ್ಮೀ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ರಾಜ್ಯ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ. ಬಾಕಿ ಉಳಿದಿರುವ ಎರಡು ತಿಂಗಳ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಕರ್ನಾಟಕ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ತಿಂಗಳು ಮನೆಯ ಯಜಮಾನಿಯರ ಖಾತೆಗೆ ೨೦೦೦ ರೂಪಾಯಿ ಹಣವನ್ನು ವರ್ಗವಣೆ ಮಾಡಲಾಗುತ್ತಿದೆ. ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ ಕುರಿತು ಸಾಕಷ್ಟು ಅಪಸ್ರ ಕೇಳಿಬಂದಿ್ತು. ್ಯಾರಂಟಿ ಯೋಜನೆಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಲಿದೆ…
ಲಿವರ್ ದಾನ ಮಾಡಿ ಜೀವ ಕಳೆದುಕೊಂಡ ಉಪನ್ಯಾಸಕಿ! – ಮಂಗಳೂರಲ್ಲಿ ಘಟನೆ: ಆರೋಗ್ಯದಿಂದಿದ್ದ ಮಹಿಳೆ ಸಾವು – ಅರ್ಚನಾ ಅವರ ಸಾವಿಗೆ ಎಲ್ಲೆಡೆ ಸಂತಾಪ NAMMUR EXPRESS NEWS ಮಂಗಳೂರು: ತನ್ನ ಸಂಬಂಧಿಯೋರ್ವರಿಗೆ ಲಿವರ್ ದಾನ ಮಾಡಿದ್ದ ಉಪನ್ಯಾಸಕಿ, ಸಮಾಜ ಸೇವಕಿ, ಅರ್ಚನಾ ಕಾಮತ್ (33) ಅವರು ದಿಢೀರ್ ಅಸ್ವಸ್ಥಗೊಂಡು ನಿಧನರಾದ ಘಟನೆ ಮಂಗಳೂರಲ್ಲಿ ನಡೆದಿದೆ. ತನ್ನ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್ ಕಸಿ ಮಾಡಬೇಕಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅರ್ಚನಾ ಅವರ ಲಿವರ್‌ನ ಸ್ವಲ್ಪ ಭಾಗವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಆದರೆ ಕಳೆದ ನಾಲ್ಕು ದಿನಗಳ ಹಿಂದೆ ಅರ್ಚನಾ ದಿಢೀರ್ ಅಸ್ವಸ್ಥಗೊಂಡಿದ್ದು, ಸೆ.15ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಇದೀಗ ಅವರ ಆಪ್ತ ವಲಯದಲ್ಲಿ ಭಾರೀ ನವು ತರಿಿದೆ. ಿವರ…
ಹ್ಯಾಪಿ ಬರ್ತ್ ಡೇ ನಮೋ…! – ಪ್ರಧಾನಿ ಮೋದಿ ಅವರಿಗೆ 74 ವರ್ಷದ ಸಂಭ್ರಮ: ದೇಶದೆಲ್ಲೆಡೆ ರಕ್ತದಾನ, ವಿಶೇಷ ಕಾರ್ಯಕ್ರಮ – ಗುಜರಾತಿನ ಗಲ್ಲಿಯಿಂದ ದೇಶದ ಚುಕ್ಕಾಣಿ ಹಿಡಿವವರೆಗೆ ಪಯಣ NAMMUR EXPRESS NEWS ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಜೀ ಅವರಿಗೆ 74 ವರ್ಷ!. ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ನಾಯಕ ಸೆಪ್ಟೆಂಬರ್ 17, 1950 ರಂದು ಗುಜರಾತಿನ ವಡ್ನಗರದಲ್ಲಿ ದಿನಸಿ ವ್ಯಾಪಾರಿಗಳ ಕುಟುಂಬದಲ್ಲಿ ಜನಿಸಿದರು. ಭಾರತದ 15ನೇ ಪ್ರಧಾನ ಮಂತ್ರಿಯಾಗಿರುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಎಂದರೆ ತಪ್ಪಾಗದು. ಬಾಲ್ಯದಲ್ಲಿ, ಮೋದಿಯವರು ತಮ್ಮ ತಂದೆಗೆ ವಡ್ನಗರ್ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರಲು ಸಹಾಯ ಮಾಡುತ್ತಿದ್ದರು. ನಂತರ ಬಸ್ ನಿಲ್ದಾಣದ ಬಳಿ ತನ್ನ ಸಹೋದರನೊಂದಿಗೆ ಟೀ ಸ್ಟಾಲ್ ನಡೆಸುತ್ತಿದ್ದರು ಎಂದು ನರೇಂದ್ರ ಮೋದಿ ದಿ ಮ್ಯಾನ್, ದಿ ಟೈಮ್ಸ್ ಎಂಬ ಪುಸ್ತಕದ ಪ್ರಕಾರ ನಿಲಂಜನ್ ಮುಖೋಪಾಧ್ಯಾಯ ಅವರು ಬರೆದಿದ್ದಾರೆ. ನರೇಂದ್ರ ಮೋದಿಯವರು “ ಜನ ನಾಯಕ”. ಜನಸಾಮಾನ್ಯರ ಕ್ಷೇಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು.…