Categories
ತೀರ್ಥಹಳ್ಳಿ

ಮೋದಿ ಹುಟ್ಟು ಹಬ್ಬಕ್ಕೆ ತೀರ್ಥಹಳ್ಳಿಯಲ್ಲಿ ರಕ್ತದಾನ!

ಮೋದಿ ಹುಟ್ಟು ಹಬ್ಬಕ್ಕೆ ತೀರ್ಥಹಳ್ಳಿಯಲ್ಲಿ ರಕ್ತದಾನ!
* ಬಿಜೆಪಿ ಯುವ ಮೋರ್ಚಾ ವತಿಯಿಂದ ಶಿಬಿರ ಆಯೋಜನೆ
* ನೂರಾರು ಮಂದಿ ಯುವಕರಿಂದ ರಕ್ತದಾನ: ನಾಯಕರ ಪ್ರಶಂಸೆ

NAMMUR EXPRESS NEWS
ತೀರ್ಥಹಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 74ನೇ ಜನ್ಮದಿನದ ಅಂಗವಾಗಿ ತೀರ್ಥಹಳ್ಳಿ ಬಿಜೆಪಿ ಯುವಮೋರ್ಚಾ ಮಂಡಲ ವತಿಯಿಂದ ಬೆಳಿಗ್ಗೆ 9 ಗಂಟೆಯಿಂದ ಬೃಹತ್ ರಕ್ತದಾನ ಕಾರ್ಯಕ್ರಮ ತೀರ್ಥಹಳ್ಳಿ ಪಟ್ಟಣದ ಕುಶಾವತಿಯ ಕೆ.ಟಿ.ಕೆ ಸಭಾಭವನದಲ್ಲಿ ನಡೆಯಿತು.
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ,ಭಾಗವಹಿಸಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹಿರಿಯ ವೈದ್ಯ ನಾರಾಯಣ ಸ್ವಾಮಿ, ಸರ್ಕಾರಿ ಆಸ್ಪತ್ರೆ ಮುಖ್ಯ ಅಧಿಕಾರಿ ಗಣೇಶ್ ಭಟ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಾಕ ಆರಗ ಜಞಾನೇಂದ್ರ ಭೇಟಿ ನೀಡಿ ಉತ್ತಮ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಪ್ರಮುಖರಾದ ಚಂದವಳ್ಳಿ ಸೋಮಶೇಖರ್, ಯುವ ಮೋರ್ಚಾದ ಅಧ್ಯಕ್ಷ ಸಂತೋಷ್ ದೇವಾಡಿಗ – ಪ್ರಮುಖರಾದ ಮಹಾಂತ ಗೌಡ , ಪ್ರದೀಪ್ ಗಬಡಿ, ಚೇತನ್ ಗಡಿಕಲ್ಲು, ಯಶಸ್ವಿ ಕಡ್ತುರ್, ಪ್ರಶಾಂತ್, ಅಕ್ಷಯ ಹೊದಲ, ರಕ್ಷಿತ್, ಪ್ರಮೋದ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.