Categories
ತೀರ್ಥಹಳ್ಳಿ

ಛತ್ರಕೇರಿ ಗಣಪತಿ ಉತ್ಸವದಲ್ಲಿ ಕಾರಂತರ ಸಂಗೀತ ಸುಧೆ

ಛತ್ರಕೇರಿ ಗಣಪತಿ ಉತ್ಸವದಲ್ಲಿ ಕಾರಂತರ ಸಂಗೀತ ಸುಧೆ
– ಖ್ಯಾತ ಗಾಯಕ ಶಶಿಕುಮಾರ್ ಕಾರಂತ ತಂಡದ ಸಂಗೀತಕ್ಕೆ ಜನ ಖುಷ್
– ರೆಟ್ರೋ, ಭಾವಗೀತೆ ಮೂಲಕ ಜನ ಮನ ಸೆಳೆದ ಹಾಡುಗಾರರು
– ತೀರ್ಥಹಳ್ಳಿ ತಾಲೂಕಲ್ಲೇ ಮಾದರಿಯಾದ ಅಯೋಧ್ಯಾ ಗಣಪತಿ

NAMMUR EXPRESS NEWS
ತೀರ್ಥಹಳ್ಳಿ: ಶ್ರೀ ಸಿದ್ದಿವಿನಾಯಕ ಯುವಕ ಸಂಘ ಛತ್ರಕೇರಿ 41ನೇ ವರ್ಷದ ಗಣಪತಿ ಉತ್ಸವ ನಡೆಯುತ್ತಿದ್ದು ಸೋಮವಾರ ರಾತ್ರಿ ಖ್ಯಾತ ಗಾಯಕ ಶಶಿಕುಮಾರ್ ಕಾರಂತ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಖ್ಯಾತ ಕಲಾವಿದರಾದ ಶಿವಮೊಗ್ಗ ರಾಘವೇಂದ್ರ ಧಾರಿಣಿ ಕುಂದಾಪುರ, ಆತ್ಮಿಕಾ, ಶಶಿಕುಮಾರ್ ಕಾರಂತ ಅವರು ಸಿನಿಮಾ, ರೆಟ್ರೋ, ಭಾವಗೀತೆಗಳ ಮೂಲಕ ಜನ ಮನ ಸೆಳೆದರು. ಅಬ್ಬರ ಇಲ್ಲದ ಅಚ್ಚುಕಟ್ಟಿನ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ರಾಜ್ ಕುಮಾರ್ ಸೇರಿದಂತೆ ಭಾವಗೀತೆ, ಭಕ್ತಿ ಗೀತೆ, ಹಳೆಯ ಕನ್ನಡ ಗೀತೆಗಳ ಸಮಾಗಮ ನಡೆಯಿತು. ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಇಂದು ಸಂಗೀತ ಸುಧೆ ಕಾರ್ಯಕ್ರಮ

ಛತ್ರಕೇರಿ ಗಣಪತಿ ಕಾರ್ಯಕ್ರಮದಲ್ಲಿ ಇಂದು ಸ್ಥಳೀಯ ಕಲಾವಿದ ರಮೇಶ್ ಗವಾಸ್ಕರ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ತೀರ್ಥಹಳ್ಳಿಯಲ್ಲೇ ಗಮನ ಸೆಳೆದ ಗಣಪತಿ!

ಅತ್ಯಂತ ಅಚ್ಚುಕ್ಕಟ್ಟು ಕಾರ್ಯಕ್ರಮದ ಮೂಲಕ ಪ್ರಸಿದ್ದಿಯಾಗಿರುವ ತೀರ್ಥಹಳ್ಳಿ ಛತ್ರಕೇರಿ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘವು 41 ವರ್ಷ ತನ್ನ ಸೇವೆ, ವಿಭಿನ್ನತೆ ಮೂಲಕ ಗಮನ ಸೆಳೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.