-ಇಂದಿನಿಂದ ರಾಜ್ಯ ಪ್ರವಾಸ
-ಸಂಜೆ ಕೋರ್ ಕಮಿಟಿ ಸಭೆ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದು, ಅಮಿತ್ ಶಾ ಅವರು ಸಂಜೆ 4.40ರ ಬಳಿಕ ವಿಧಾನಸೌಧದಲ್ಲಿ ಅಧಿಕೃತ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ
ಸಚಿವ ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ತಲೆದೋರಿರುವ ಗೊಂದಲದ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಅಧಿಕೃತ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಶನಿವಾರ ಆಗಮಿಸಲಿದ್ದಾರೆ.
ಭದ್ರಾವತಿಯಲ್ಲಿ ಕೇಂದ್ರ ಕ್ಷಿಪ್ರ ಕಾರ್ಯಪಡೆ(ಆರ್ಎಎಫ್) ಘಟಕಕ್ಕೆ ಶಂಕುಸ್ಥಾಪನೆ, ಬೆಂಗಳೂರಿನಲ್ಲಿ ಪೊಲೀಸ್ ವಸತಿ ಗೃಹಗಳ ಸಮರ್ಪಣೆ, ಬಾಗಲಕೋಟೆಯಲ್ಲಿ ಎಥೆನಾಲ್ ಘಟಕಕ್ಕೆ ಭೂಮಿ ಪೂಜೆ ಹಾಗೂ ಬೆಳಗಾವಿಯ ಜನಪ್ರತಿನಿಧಿ ಸಮಾವೇಶದಲ್ಲಿ ಭಾಗಿಯಾಗಲು ಅಮಿತ್ ಶಾ ಬರುತ್ತಿದ್ದಾರೆ.
ಈ ಅವಧಿಯಲ್ಲಿ ಪಕ್ಷದ ಪ್ರಮುಖ ನಾಯಕರನ್ನೂ ಭೇಟಿಯಾಗಲಿದ್ದಾರೆ. ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಬೆಳಗಾವಿಯಲ್ಲಿ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಯಲಿದೆ. ಹಾಗಾಗಿ ರಾಜಕೀಯವಾಗಿಯೂ ಅಮಿತ್ ಶಾ ಭೇಟಿಗೆ ಮಹತ್ವ ಬಂದಂತಾಗಿದೆ.
Related Posts
Add A Comment