- ಕರೋನಾ ಕಷ್ಟದಲ್ಲಿ ಅನೇಕ ಸೇವೆಗಳ ಬೆಲೆ ಏರಿಕೆ
- ಚಿನ್ನ,ಪೆಟ್ರೋಲ್ ದುಬಾರಿ: ಡಿಜಿಟಲ್ ಉದ್ಯಮಕ್ಕೂ ತೆರಿಗೆ ಬರೆ!
ಬೆಂಗಳೂರು: ಪೆಟ್ರೋಲ್ 100 ಲೀಟರ್ ಆಗಿದೆ.
ಚಿನ್ನ, ಪೆಟ್ರೋಲ್, ಅಡುಗೆ ಎಣ್ಣೆ ದರ ಹೆಚ್ಚಳ ಆಗಿದೆ.
ಲಾಕ್ ಡೌನ್ ಕಾರಣ ತರಕಾರಿ, ಹಣ್ಣು ಬೆಲೆ ಗಗನಕ್ಕೇರಿದೆ. ಈ ನಡುವೆ ಆರ್ ಬಿ ಐ 2000 ರೂ. ಮುಖಬೆಲೆಯ ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. 2021-22ರ ಆರ್ಥಿಕ ವರ್ಷದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಣ ಮಾಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ಬಿಐ ) ತಿಳಿಸಿದೆ. ಭದ್ರತಾ ಕಾರಣಗಳಿಂದಾಗಿ ಹೆಚ್ಚಿನ ಮೌಲ್ಯದ ಮುಖಬೆಲೆಯ ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಹೀಗಾಗಿ ಇದು ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ.
ಡಿಜಿಟಲ್ ಕ್ಷೇತ್ರಕ್ಕೆ ಹೊಡೆತ!: ಜೂನ್ 1 ರಿಂದ ಯೂಟ್ಯೂಬ್ ಮೂಲಕ ಸಿಗುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಮೆರಿಕ ಮುಂತಾದೆಡೆಯಿಂದ ವಿಡಿಯೋ ವೀಕ್ಷಣೆ ಮಾಡುವವರಿಂದ ಬಂದ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ.
ಗೂಗಲ್ ಡ್ರೈವ್ ತನ್ನ ಸ್ಟೋರೇಜ್ ಮಿತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಜೂನ್ 1 ರಿಂದ ಗೂಗಲ್ ಡ್ರೈವ್ ಸ್ಟೋರೇಜ್ ಮಿತಿ 15 ಜಿಬಿ ಮಾತ್ರ ಸಿಗಲಿದೆ. ಜಿಮೇಲ್ ಹಾಗೂ ಫೋಟೋಸ್ ಎರಡು ಸೇರಿ ಇಷ್ಟು ಮಾತ್ರ ಶೇಖರಣೆ ಮಿತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಸ್ಪೇಸ್ ಬೇಕಾದರೆ ಹಣ ಪಾವತಿಸಬೇಕು.
ಜೂನ್ 1 ರಿಂದ ಚಿನ್ನದ ಮೇಲಿನ ಹಾಲ್ ಮಾರ್ಕ್ ಕಡ್ಡಾಯ ಎಂದು ಕೇಂದ್ರ ಈ ಹಿಂದೆ ಆದೇಶ ನೀಡಿತ್ತು. ಆದರೆ, ನಂತರ ಜೂನ್ 15 ರಂದು ಪ್ರಕಟಣೆ ಹೊರಡಿಸಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಹಾಲ್ಮಾರ್ಕ್ ಕಡ್ಡಾಯವಾಗಲಿದ್ದು, ಪರಿಶುದ್ಧ ಚಿನ್ನ ಪಡೆಯಬಹುದಾಗಿದೆ. ಜೊತೆಗೆ ಚಿನ್ನದ ದರವೂ ಏರಿಕೆಯಾಗಲಿದೆ.
ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಚೆಕ್ ಪೇಮೆಂಟ್ ಮಾಡುವ ವ್ಯವಸ್ಥೆಯಲ್ಲಿ ಬದಲಾವಣೆ ಕಂಡು ಬರಲಿದೆ. ಜೂನ್ 1 ರಿಂದ 2 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ ವ್ಯವಹಾರ ಮಾಡುವ ಗ್ರಾಹಕರು ಈ ಬಗ್ಗೆ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ. ಎಸ್ಬಿಐ ಬ್ಯಾಂಕ್ ಅನೇಕ ಶುಲ್ಕ ಹೆಚ್ಚಳ ಮಾಡಿದೆ.
ಹೀಗೆ ನೂರಾರು ವಸ್ತುಗಳ ಬೆಲೆ ಏರಿಕೆಯಾಗಿದೆ.