5ನೇ ವರ್ಷದತ್ತ “ನಮ್ಮೂರ್ ಎಕ್ಸ್ಪ್ರೆಸ್”!
- ಕಲ್ಲು ಮುಳ್ಳಿನ ಹಾದಿಯಲ್ಲಿ ಸಾರ್ಥಕ ಸೇವೆ
- ಮಾಧ್ಯಮ ಕ್ಷೇತ್ರದಲ್ಲಿ ಹೊಸ ಇತಿಹಾಸ!
ರಾಜ್ಯದ ಮುಂಚೂಣಿ ಡಿಜಿಟಲ್ ಮಾಧ್ಯಮ ನಿಮ್ಮ ನಮ್ಮೂರ್ ಎಕ್ಸ್ಪ್ರೆಸ್.
ನಿಮ್ಮ ಕೈಗೆ ಸುದ್ದಿಯನ್ನು ನಿಖರವಾಗಿ, ನಿಷ್ಪಕ್ಷಪಾತವಾಗಿ ಕಳೆದ 5 ವರ್ಷದಿಂದ ನೀಡುತ್ತಾ ಬಂದಿದ್ದೇವೆ.ಸಾಮಾಜಿಕ ಜಾಲತಾಣಗಳಲ್ಲಿ ಇವರೆಗೆ ಸುಮಾರು 30,000ಕ್ಕೂ ಹೆಚ್ಚು ವಸ್ತು ನಿಷ್ಠ ವರದಿ ಮಾಡಿದ್ದೇವೆ. ನುರಿತ ಕೆಲಸಗಾರರ ಸಮಸ್ಯೆ, ಗ್ರಾಮೀಣ ಭಾಗದ ತಂತ್ರಜ್ಞಾನ ಸಮಸ್ಯೆ,ಬಂಡವಾಳ, ಜಾಹಿರಾತುಗಳ ಕೊರತೆಯ ನಡುವೆಯೂ ನಮ್ಮ ಸೇವೆ ನಡೆಯುತ್ತಲೇ ಬಂದಿದೆ. ಸುಮಾರು 1 ಕೋಟಿವರೆಗೆ ಬಂಡವಾಳ ಹೂಡಿಕೆಯಾಗಿದ್ದು, ಇದೀಗ ಹೂಡಿಕೆದಾರರ ನಿರೀಕ್ಷೆಯಲ್ಲಿ ಸಂಸ್ಥೆ ಇದೆ. ಸಂಸ್ಥೆ ರಾಜ್ಯದ ಎಲ್ಲಾ ತಾಲೂಕಲ್ಲಿ ಸೇವೆ ಮತ್ತು ಉದ್ಯಮ ಶುರು ಮಾಡುವ ಯೋಜನೆ ಹಾಕಿಕೊಂಡಿದೆ.
ಜನರ ದನಿಯಾಗಿ, ಕಷ್ಟದಲ್ಲಿರುವರಿಗೆ ನೇರವಾಗಿ, ಆಡಳಿತವನ್ನು ಜನಪರವಾಗಿರುವಂತೆ ಎಚ್ಚರಿಸುತ್ತಾ ಬಂದಿದ್ದೇವೆ. ಸಾವಿರಾರು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದೇವೆ. ಆರ್ಥಿಕ ಹಿಂಜರಿತ, ಕರೋನಾ ಕಾಟದಿಂದ ಪ್ರತಿ ದಿನವೂ ಸಂಸ್ಥೆಯನ್ನು ನಷ್ಟದಲ್ಲೇ ಬೃಹತ್ ಸಂಸ್ಥೆಯಾಗಿ ಬೆಳೆಸಿದ್ದೇವೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದೇವೆ.
2021 ಮಾರ್ಚ್ 15ರವರೆಗೆ ಸುಮಾರು 60 ಲಕ್ಷ ಓದುಗರು ನಮ್ಮ ಸುದ್ದಿಯನ್ನು ಮೆಚ್ಚಿಕೊಂಡು ಸುದ್ದಿ ಪಡೆಯಲು ಸಿದ್ದರಾಗಿದ್ದಾರೆ.
ಕಷ್ಟದ ದಿನಗಳಲ್ಲಿ ಕೆಲವೊಮ್ಮೆ ಸೇವೆ ನೀಡಲು ಎಡವಿದ್ದೇವೆ. ಕ್ಷಮೆ ಇರಲಿ.
ದೇಶದಲ್ಲೇ ಮೊದಲ ಬಾರಿಗೆ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡಿದ ಹೆಗ್ಗಳಿಕೆ ನಿಮ್ಮ ಹೆಮ್ಮೆಯ ನಮ್ಮೂರ್ ಎಕ್ಸ್ಪ್ರೆಸ್ ಮೇಲಿದೆ.
ಸತತವಾಗಿ ಸೋಲು ಕಂಡರೂ, ಆರ್ಥಿಕ ಹೊಡೆತದ ನಡುವೆಯೂ ಸಂಸ್ಥೆ ಇದೀಗ ಮತ್ತಷ್ಟು ಹೊಸತನ, ಪ್ರಯೋಗ, ವ್ಯವಹಾರ ಕಲ್ಪನೆಗಳೊಂದಿಗೆ 5 ವರ್ಷದ ಸಂಭ್ರಮಕ್ಕೆ ಮುನ್ನಡಿ ಇಟ್ಟಿದೆ.
ಓದುಗರು, ಜಾಹಿರಾತುದಾರರು, ಮಾರ್ಗದರ್ಶಕರು, ಹಿತೈಷಿಗಳು, ಸಂಸ್ಥೆಯ ಸಿಬ್ಬಂದಿ ಸಹಕಾರದೊಂದಿಗೆ ಇನ್ನಷ್ಟು ಸಾಧನೆ ಮಾಡುವ ಬಯಕೆ ನಮ್ಮದು. ಸುದ್ದಿ ಜತೆ ಜತೆಗೆ
ತಮ್ಮೆಲ್ಲರ ಸಹಕಾರ, ಸಲಹೆ, ಸಹಭಾಗಿತ್ವ ಸಂಸ್ಥೆಯ ಉಳಿವಿಗೆ ಬೇಕಿದೆ. ಹೊಸತನದೊಂದಿಗೆ ಹೊಸ ಹೊಸ ಯೋಜನೆಗಳೊಂದಿಗೆ ಓದುಗರ ಬಳಿ ಬರಲಿದ್ದೇವೆ.
ಧನ್ಯವಾದಗಳು..
ಸಂಪಾದಕರು
ಸುದ್ಧಿಗಾಗಿ:
9481949101
ಜಾಹಿರಾತಿಗಾಗಿ: 9480181535.