- ಕರೋನಾ ಕಡಿಮೆಯಾದ್ರೆ ಜೂ.7ರಿಂದ ಸಡಿಲಿಕೆ
- ಜೂನ್ ತಿಂಗಳು ಡೇಂಜರ್ ತಿಂಗಳು ನೋಡಿಕೊಳ್ಳಿ!
- ಸರಕಾರದ ಪ್ಲಾನ್ ಏನು ಸುದ್ದಿ ಓದಿ…!
ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುತ್ತಿದ್ದಂತೆ ಕರೋನಾ ಸಂಖ್ಯೆ ಇಳಿಮುಖವಾಗಿದೆ. ಆದರೆ ಸರಕಾರ ಕೊಂಚ ಯಾಮಾರಿದರೂ ಮತ್ತೆ ಕರೋನಾ ತನ್ನ ಇನ್ನೊಂದು ಮುಖ ತೋರಲಿದೆ.
ರಾಜ್ಯ ಸರಕಾರ ಹೀಗಾಗಿ ಜಾಣ ನಡೆ ಇಡಬೇಕಿದೆ. ಈ ನಡುವೆ ಜೂನ್ 7ರ ಬಳಿಕವೂ ಒಂದು ವಾರ ಲಾಕ್ ಡೌನ್ ಮುಂದುವರಿಯಲಿಯಲಿದೆ ಎಂದು ಹೇಳಲಾಗಿದೆ.
ಆದ್ರೆ ಪಾಸಿಟಿವಿಟಿ ರೇಟ್ ಕಡಿಮೆಯಾಗಿ ಸೋಂಕು ಕಡಿಮೆಯಾದರೆ ಜೂನ್ 7ರ ನಂತರ ಹಂತ ಹಂತವಾಗಿ ಅನ್ಲಾಕ್ ಮಾಡಿ ಎಂದು ತಜ್ಞರ ತಂಡ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಸಿದ್ಧತೆ ನಡೆಸಿದೆ. ಆದರೆ ಇದೆಲ್ಲವೂ ಕರೋನಾ ಕಡಿಮೆಯಾದರೆ.ಮಾತ್ರ..!.
ಹಂತ ಹಂತವಾಗಿ ಆನ್ ಲಾಕ್..!:
ಹಂತ -1 (ಜೂನ್ 13ರವರೆಗೆ) * ದಿನಸಿ, ಕಿರಾಣಿ ಅಂಗಡಿಗಳು ಇಡೀ ದಿನ ಒಪನ್ * ತರಕಾರಿ ಹೆಣ್ಣಿನ ಅಂಗಡಿಗಳು ಒಪನ್ * ಅಗತ್ಯ ವಸ್ತುಗಳ ಖರೀದಿಗೆ ಸಂಪೂರ್ಣ ಅವಕಾಶ * ಹೋಟೆಲ್ಗಳಲ್ಲಿ ಪಾರ್ಸೆಲ್ಗೆ ಇಡೀ ದಿನ ಅವಕಾಶ * ಸೀಮಿತ ಸಂಖ್ಯೆಯಲ್ಲಿ ಸಾರಿಗೆ ಸೇವೆ ಆರಂಭ.
ಹಂತ -2 (ಜೂನ್ 20 ರವರೆಗೆ) * ಬಟ್ಟೆಯಂಗಡಿ ಓಪನ್ * ಜ್ಯುವೆಲ್ಲರಿ ಶಾಪ್ ಓಪನ್ * ಚಪಲಿಯಂಗಡಿ * ಬಾರ್ ವೈನ್ * ಸೀಮಿತ ಸಿಬ್ಬಂದಿಯೊಂದಿಗೆ ಕೈಗಾರಿಕೆ (ಶೇ. 30-50) * ಸಮೂಹ ಸಾರಿಗೆ ವ್ಯವಸ್ಥೆ ಶೇ.50-60ರಷ್ಟು ಹೆಚ್ಚಳ
ಹಂತ -3 (ಜೂನ್ 27ರವರೆಗೆ) * ಕೈಗಾರಿಕೆಗಳಿಗೆ, ಐಟಿ ವಲಯಕ್ಕೆ ಸಂಪೂರ್ಣ ಅವಕಾಶ * ಮೆಟ್ರೋ ಸಮೂಹ ಸಾರಿಗೆ ಆರಂಭ * ಬಿಎಂಟಿಸಿ, ಕೆಎಸ್ಆರ್ಟಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ
ಹಂತ -4 (ಜೂನ್ 27ರ ನಂತರ) * ಮಾಲ್ಗಳಿಗೆ ಅವಕಾಶ * ಧಾರ್ಮಿಕ ಕ್ಷೇತ್ರಗಳು ಓಪನ್ * ಸಿನಿಮಾ ಥಿಯೇಟರ್ ಓಪನ್(ಶೇ.50 ಆಸನ ಭರ್ತಿ) * ಪಾರ್ಕ್, ಜಿಮ್ ಓಪನ್ * ಶಿಕ್ಷಣ ಸಂಸ್ಥೆಗಳು ಓಪನ್ * ಹೋಟೆಲ್ಗಳಲ್ಲಿ ಡೈನಿಂಗ್ ಸೇವೆ * ಕ್ಲಬ್ ಗಳು ಓಪನ್.
ಹೀಗೆ ಸರಕಾರ ಪ್ಲಾನ್ ಮಾಡಿಕೊಂಡಿದೆ. ಆದರೆ ಜೂನ್ ತಿಂಗಳು ಯಾವುದೇ ಅವಕಾಶ ಕೊಡದೆ ಸಂಪೂರ್ಣ ಕರೋನಾ ಚೈನ್ ಬ್ರೇಕ್ ಮಾಡುವುದು ಒಳಿತು. ಇಲ್ಲವಾದಲ್ಲಿ ಮೂರನೇ ಅಲೆಗೆ ನಾವೇ ಅವಕಾಶ ಮಾಡಿಕೊಡುತ್ತೇವೆ. ಜಾಗ್ರತೆ ಇರಲಿ. ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಪಾಡಿ…!.