ಜಿಪಂ, ತಾಪಂ ಚುನಾವಣೆ 3 ತಿಂಗಳ ಬಳಿಕ!
– ಕೋರ್ಟ್ 12 ವಾರದ ಬಳಿಕ ವಿಚಾರಣೆ ಆದೇಶ
– ಎಲ್ಲಾ ಪಕ್ಷದಲ್ಲೂ ಕುತೂಹಲ…ತಯಾರಿ ಜೋರು!
NAMMUR EXPRESS NEWS
ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕನಿಷ್ಠ 3 ತಿಂಗಳು ಮುಂದಕ್ಕೆ ಹೋಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದೆ.
ಜಿಲ್ಲಾ, ತಾಲೂಕು ಪಂಚಾಯ್ತಿ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡನೆಗೆ ಹೈಕೋರ್ಟ್ ಕಾಲಾವಕಾಶ ನೀಡಿದ ಕಾರಣ, ಮತ್ತೆ ಚುನಾವಣೆ ಮುಂದೂಡಿಕೆ ಖಚಿತ ಎನ್ನಲಾಗಿದೆ.
ಏನಿದು ಕೇಸ್?:
ಹೈಕೋರ್ಟಿನಲ್ಲಿ ಸಲ್ಲಿಕೆಯಾಗಿದ್ದ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಸಂಬಂಧದ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆಗೆ ಕಾಲಾವಕಾಶವನ್ನು ಎಜೆ ಶಶಿಕಿರಣ್ ಶೆಟ್ಟಿ ಕೇಳಿದರು.
ರಾಜ್ಯ ಸರ್ಕಾರದ ಮನವಿ ಪುರಸ್ಕರಿಸಿದಂತ ಹೈಕೋರ್ಟ್ ವಿಭಾಗೀಯ ಪೀಠವು, 10 ವಾರಗಳ ಕಾಲಾವಕಾಶವನ್ನು ನೀಡಿದೆ. 10 ವಾರಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ, ಮೀಸಲಾತಿಯನ್ನು ಅಂತಿಮಗೊಳಿಸುವಂತೆ ಸೂಚಿಸಿದೆ.
ಇನ್ನೂ ಈ ಅರ್ಜಿಯ ವಿಚಾರಣೆಯನ್ನು 12 ವಾರ ಮುಂದೂಡಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆ ಮತ್ತೆ ಮುಂದೂಡಿಕೆ ಆಗುವುದು ಖಚಿತವಾದಂತೆ ಆಗಿದೆ.
ಅಭ್ಯರ್ಥಿಗಳು ತುದಿಗಾಲಲ್ಲಿ!
ಎಲ್ಲಾ ಜಿಲ್ಲೆಯಲ್ಲೂ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಲೇ ಪ್ರಚಾರ ಕೂಡ ಶುರು ಮಾಡಿದ್ದಾರೆ. ಈ ನಡುವೆ ಕೋರ್ಟ್ ಆದೇಶ ಅನೇಕರ ನಿದ್ದೆಗೆಡಿಸಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023