ಆಗಸ್ಟ್ 1 ದುಬಾರಿ ದಿನ!
– ಅನೇಕ ದಿನ ಬಳಕೆಯ ವಸ್ತುಗಳ ನೂತನ ದರ ಜಾರಿ
– ನಂದಿನಿ ಹಾಲು, ಹೋಟೆಲ್ ದರವೂ ಹೆಚ್ಚಳ
– ಕೆಎಸ್ಆರ್ಟಿಸಿ ಬಸ್ ಬಾಡಿಗೆ ದರ ಏರಿಕೆ ಆಯ್ತು
NAMMUR EXPRESS NEWS
ಬೆಂಗಳೂರು : ವಿದ್ಯುತ್, ಹಾಲಿನ ದರ ಹೆಚ್ಚಳದ ನಂತರ ಇದೀಗ ಒಪ್ಪಂದದ ಮೇಲೆ ಪಡೆಯಲಾಗುವ ಕೆಎಸ್ಆರ್ಟಿಸಿ ಬಸ್ ಬಾಡಿಗೆ ದರದಲ್ಲೂ ಏರಿಕೆ ಮಾಡಲಾಗಿದೆ. ಆ.1ರಿಂದ ಬಹುತೇಕ ವಸ್ತುಗಳ ಬೆಲೆ ಏರಿಕೆ ಆಗಲಿದೆ. ರಾಜ್ಯ ಸರ್ಕಾರದ ಮಹತ್ವದ ಶಕ್ತಿ ಯೋಜನೆ ಹೊರೆ ಭರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯ ಬೊಕ್ಕಸ ತುಂಬಿಸಲು ಮತ್ತು ಶಕ್ತಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಆದಾಯ ಹೆಚ್ಚಳಕ್ಕೆ ರಾಜ್ಯದ ಪ್ರಮುಖ ಇಲಾಖೆಗಳಿಗೆ ಸೂಚಿಸಿದ ಬೆನ್ನಲ್ಲೇ ಸಾರಿಗೆ ಇಲಾಖೆಯ ಬಸ್ ದರ ಹೆಚ್ಚಳಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ರಸ್ತೆ ಸಾರಿಗೆಯ 7 ವಿಧದ ಬಸ್ಗಳ ದರವನ್ನು ಪ್ರತಿ ಕಿ. ಮೀ.ಗೆ 2 ರೂಪಾಯಿ ನಿಂದ 5 ರೂಪಾಯಿಯವರೆಗೆ ಹೆಚ್ಚಿಸಲಾಗಿದ್ದು, ನೂತನ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ರಾಜ್ಯದೊಳಗೆ ಮತ್ತು ಅಂತಾರಾಜ್ಯಕ್ಕೆ ಸಂಚರಿಸಲು ಪಡೆಯಲಾಗುವ ಬಸ್ಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.
ಜತೆಗೆ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ಬಸ್ಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ. ಆದರ ಬದಲು ಪ್ರತಿದಿನಕ್ಕೆ ನಿಗದಿ ಮಾಡಲಾಗಿರುವ ಕನಿಷ್ಠ ಕಿ.ಮೀ. ದರವನ್ನು ಪಾವತಿಸುವವರಿಗೆ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ನಂದಿನಿ ಹಾಲು, ಹೋಟೆಲ್ ದರವೂ ಹೆಚ್ಚಳ!
ವಿದ್ಯುತ್, ಹಾಲಿನ ದರ ಏರಿಕೆ ಆ.1ರಿಂದ ಏರಿಕೆ ಆಗಲಿದೆ. ಹಾಲು, ಹಾಲಿನ ಪುಡಿ ಏರಿಕೆ ಆಗಲಿದೆ. ಮತ್ತು ಹೋಟೆಲ್ ತಿನಿಸುಗಳು ದುಬಾರಿ ಆಗಲಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023