ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಿಗ್ ಶಾಕ್
– ಹೆಚ್ಚುವರಿ ಅಕ್ಕಿ ಹಣ ಜಮಾಗೆ ಬ್ರೇಕ್!
– ಅನ್ನಭಾಗ್ಯ ಯೋಜನೆಗೆ ಹೊಸ ನಿಯಮ
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಸಿಗದ ಕಾರಣ, ಹಣ ಹಾಕೋದಾಗಿ ಘೋಷಣೆ ಮಾಡಲಾಗಿತ್ತು. ಅಲ್ಲದೇ ಜುಲೈ, ಆಗಸ್ಟ್ ತಿಂಗಳ ಹಣ ಕೂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಆದ್ರೇ ಈ ಹಣದ ನಿರೀಕ್ಷೆಯಲ್ಲಿದ್ದಂತ ರೇಷನ್ ಕಾರ್ಡ್ ದಾರರಿಗೆ ಮಾತ್ರ, ಕೆಲ ಕಾರಣಗಳಿಂದ ಹಣ ಜಮಾ ಮಾಡಲಾಗುತ್ತಿಲ್ಲ.
ಅದು ಯಾಕೆ.?
ಯಾರಿಗೆ ಅಂತ ಮುಂದೆ ಓದಿ. ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಸುಮಾರು 29 ಲಕ್ಷ ಫಲಾನುಭವಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡದೇ ಬ್ರೇಕ್ ಹಾಕಿದೆ. ಸರ್ಕಾರದ ವಿವಿಧ ತಾಂತ್ರಿಕ ಕಾರಣದ ನೆಪ ಹೇಳಿ, ಯೋಜನೆಯ ಅರ್ಹ ಫಲಾನುಭವಿ ಕುಟುಂಬಗಳಿಗೆ ಸವಲತ್ತು ನೀಡದೇ ಅರ್ಧ ಚಂದ್ರ ತೋರಿಸಿದೆ. ಅಲ್ಲದೇ ಫಲಾನುಭವಿಗಳ ಕುಟುಂಬದ ಗರಿಷ್ಠ ಸದಸ್ಯರ ಮಿತಿ ದಾಟಿ, ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದ ಕುಟುಂಬಗಳಿಗೆ ಡಿಬಿಟಿ ಸವಲತ್ತು ಸ್ಥಗಿತಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಅವರು, ತಾಂತ್ರಿಕ ದೋಷದ ಕಾರಣ 29 ಲಕ್ಷ ರೇಷನ್ ಕಾರ್ಡ್ ಕುಟುಂಬಗಳಿಗೆ ಡಿಬಿಟಿ ಸ್ಥಗಿತಗೊಳಿಸಿದ್ದೇವೆ. ಈ ಸವಲತ್ತಿನಿಂದ ವಂಚಿತವಾಗಿರುವ ಫಲಾನುಭವಿ ಕುಟುಂಬಗಳು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೇ ಸರಿಪಡಿಸಿ, ಸವಲತ್ತು ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಹೊಸ ನಿಯಮ:
ಸತತ ಮೂರು ತಿಂಗಳಿಂದ ಪಡಿತರ ಪಡೆಯದ ಸುಮಾರು 5.40 ಲಕ್ಷ ಕುಟುಂಬಗಳಿಗೆ ಹಾಗೂ ಎಎವೈ ಯೋಜನೆಯ ಗರಿಷ್ಠ ಕುಟುಂಬ ಸದಸ್ಯರ ಮಿತಿ ದಾಟಿದಂತ 3.50 ಲಕ್ಷ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಿಲ್ಲ. ಹಣ ತಡೆ ಹಿಡಿದಿರುವ ಸರ್ಕಾರ ಪಡಿತರ ಮಾತ್ರ ವಿತರಿಸುತ್ತಿದೆ. ಈ ಮೂಲಕ ಅನ್ನಭಾಗ್ಯ ಫಲಾನುಭವಿಗಳಾಗಿದ್ದಂತ ಇವರಿಗೆ, ಈ ನಿಯಮದಡಿ ಹೆಚ್ಚುವರಿ ಅಕ್ಕಿ ಹಣ ಖಾತೆಗೆ ಜಮಾ ಮಾಡಿಲ್ಲ. ಹೀಗಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಅಕ್ಕಿಯ ಹಣ ನಿರೀಕ್ಷೆಯಲ್ಲಿದ್ದಂತ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಮೂರು ತಿಂಗಳಿಂದ ರೇಷನ್ ತಗೊಳ್ಳದೇ ಇರೋರು, ಗರಿಷ್ಠ ಕುಟುಂಬದ ಮಿತಿಯನ್ನು ಮೀರಿದವರಿಗೆ ಹೆಚ್ಚುವರಿ ಅಕ್ಕಿ ಹಣ ಜಮಾಗೆ ಬ್ರೇಕ್ ಹಾಕಿದೆ.