- ಒಂದೇ ದಿನ ಚಾಮರಾಜನಗರದಲ್ಲಿ 24 ಸಾವು
- ಆಕ್ಸಿಜೆನ್ ಸಿಗದೇ ಪ್ರಾಣಬಿಟ್ಟ ರೋಗಿಗಳು!
- ಆಸ್ಪತ್ರೆ ಎದುರು ಈಗ ಕುಟುಂಬದ ನರಳಾಟ!
- ಈ ಸಾವಿಗೆ ಯಾರು ಹೊಣೆ..?
ಚಾಮರಾಜನಗರ: ರಾಜ್ಯದಲ್ಲಿ ಕರೋನಾ ಮಹಾಮಾರಿ ಸಾವಿನ ಮನೆಯಾಗುತ್ತಿದೆ. ದಿನೇ ದಿನೇ ಸಾವು ಹೆಚ್ಚಾಗುತ್ತಿದೆ. ಇತ್ತ ಸರ್ಕಾರದ ನಿರ್ಲಕ್ಷ್ಯ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸರ್ಕಾರಕ್ಕೆ ಈ ಪ್ರಕರಣ ದೊಡ್ಡ ಸಾವಾಲಾಗಿದೆ.
ಏನಿದು ಘಟನೆ?: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಗದೇ ಒಂದೇ ದಿನ 24ಕ್ಕೂ ಅಧಿಕ ಮಂದಿ ಕರೊನ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾನುವಾರ ನಡುರಾತ್ರಿಯಲ್ಲಿ ಈ ಅವಘಡ ನಡೆದಿದ್ದು, ಕರೊನ ಸೋಂಕಿತರಿಗಾಗಿ ಚಿಕಿತ್ಸೆ ನೀಡಲಾಗುತ್ತಿದ್ದ ಕೊಠಡಿಗೆ ತಲುಪುತ್ತಿದ್ದ ಅಕ್ಸಿಜನ್ ಏಕಾಏಕಿ ವ್ಯತ್ಯಯದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆದರೆ ಘಟನೆಯಲ್ಲಿ ಸಾವನ್ನಪ್ಪಿರುವವರು ನಾನಾ ಕಾರಣದಿಂದ ಮೃತಪಟ್ಟಿದ್ದರೆ ಅಂತ ಜಿಲ್ಲಾಧಿಕಾರಿ ಹೇಳುತ್ತಿದ್ದು, ತನಿಖೆ ಬಳಿಕ ಮಾತ್ರ ಈ ಬಗ್ಗೆ ಸತ್ಯ ತಿಳಿದು ಬಂದಿದೆ. ಆಸ್ಪತ್ರೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ಭೇಟಿ ನೀಡಿದ್ದಾರೆ. ಸಿಎಂ ತಕ್ಷಣ ವರದಿ ನೀಡಲು ಆದೇಶ ಮಾಡಿದ್ದಾರೆ.
ಈ ನಡುವೆ ಆಸ್ಪತ್ರೆ ಮುಂದೆ ನೂರಾರು ಮಂದೆ ನೆರೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಸುಳ್ಳು ಹೇಳಿದರೆ ಸಚಿವ ಸುರೇಶ್ ಕುಮಾರ್?!: ಚಾಮರಾಜನಗರದಲ್ಲಿ ಆಕ್ಸಿಜನ್ ಇದೆ ಎಂದು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಿಎಂ ಜತೆ ವಿಡಿಯೋ ಕಾನ್ಫರೆನ್ಸ್ ಅಲ್ಲಿ ಹೇಳಿದ್ದರು. ಆದರೆ ಇದೀಗ ಈ ಪ್ರಕರಣ ಎಲ್ಲಾ ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಅನುಮಾನ ಮಾಡುವಂತೆ ಮಾಡಿದೆ.
ರಾಜ್ಯದಲ್ಲಿ ಆಡಳಿತ ನಡೆಸಲು ವಿಫಲರಾದ ಸಿಎಂ ಮತ್ತು ಆರೋಗ್ಯ ಸಚಿವರ ರಾಜೀನಾಮೆಗೆ ಇದೀಗ ವಿಪಕ್ಷ ಗಳು ಒತ್ತಾಯ ಮಾಡಿವೆ. ಈ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.
ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..
ಸುದ್ದಿ ಪಡೆಯಲು 9481949101 ಗೆ ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ…!..