- ಕರೋನಾ ವೇಳೆ ರಾಜಕೀಯ ಮಾಡಿದ್ರೆ ಡ್ಯಾಮೇಜ್
- ಯಡಿಯೂರಪ್ಪ ಪರ ಶಾಸಕರು, ಸಚಿವರ ಮಾತು
- ತಣ್ಣಗಾದ ವಿರೋಧಿ ಬಣ: ಯಡಿಯೂರಪ್ಪ ಸೇಫ್
NAMMUR EXPRESS
ಬೆಂಗಳೂರು: ಬಿಜೆಪಿಯ 80ಕ್ಕೂ ಹೆಚ್ಚು ಮಂದಿ ಶಾಸಕರ ಸಹಿ ಸಂಗ್ರಹ ಕೆಲಸ ಶುರು ಮಾಡಲಾಗಿದೆ. ವಿರೋಧವಾಗಿ ಒಂದಷ್ಟು ಮಂದಿ ಸಹಿ ಸಂಗ್ರಹ ಮಾಡಿದ್ದರು. ಈಗಾಗಲೇ ಶಾಸಕರು ಯಡಿಯೂರಪ್ಪ ಅವರ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಆಪ್ತ ಶಾಸಕರರು ಸಭೆ ನಡೆಸಲು ಸಿದ್ಧತೆ ನಡೆಸಿದ್ದು, ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಒಂದು ಕಡೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ತಮ್ಮ ತಂದೆಯ ಕುರ್ಚಿ ಭದ್ರ ಮಾಡಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ನಾನು ರಾಜೀನಾಮೆಗೆ ಸಿದ್ದ ಎನ್ನುವ ಮೂಲಕ ಭಾರೀ ಸಂಚಲನ ಮೂಡಿಸಿದೆ. ಇತ್ತ ವಿರೋಧಿ ಬಣ ಕೂಡ ಮಾಸ್ಟರ್ ಪ್ಲಾನ್ ಮಾಡಿದೆ.
ಒಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಇನ್ನು 6 ತಿಂಗಳು ಯಡಿಯೂರಪ್ಪ ಸ್ಥಾನಕ್ಕೆ ಕುತ್ತು ಬರಲ್ಲ ಎನ್ನಲಾಗಿದೆ.
ಯಡಿಯೂರಪ್ಪ ಅಧಿಕಾರಕ್ಕೆ ಆಂಟಿಕೂತವರಲ್ಲ. ಅವರು ಆದರ್ಶವಂತವರು ಎನ್ನುವ ಮೂಲಕ ಬಿಜೆಪಿ ನಾಯಕ, ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿಕೆ ಚರ್ಚೆ ಮೂಡಿಸಿದೆ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಕರೋನಾ ಪೀಡಿತ ರಾಜ್ಯದಲ್ಲಿ ಯಡಿಯೂರಪ್ಪ ಇಳಿ ವಯಸ್ಸಿನಲ್ಲಿ ಅತ್ಯಂತ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಸಚಿವರು, ಶಾಸಕರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ಆದ್ರೆ ವಿರೋಧಿ ಬಣದ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಂದಾಯ ಸಚಿವ ಅಶೋಕ್, ಬೊಮ್ಮಾಯಿ, ಸುಧಾಕರ್, ಅಶ್ವತನಾರಾಯಣ ಕೂಡ ಯಡಿಯೂರಪ್ಪ ಪರ ನಿಂತಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.