ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಶುರು!
– ಯಾರು ಬಿಲ್ ಪಾವತಿಸಬೇಕು? ಯಾರಿಗೆ ಫ್ರೀ?
– ಅನ್ನ ಭಾಗ್ಯ ಕೂಡ ಶುರು: ಏನಿದು ಯೋಜನೆ?!
NAMMUR EXPRESS NEWS
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಗೃಹ ಜ್ಯೋತಿ ಜಾರಿಗೆ ಬರಲಿದೆ, ಇದರ ಜೊತೆಯಲ್ಲಿ ಶನಿವಾರದಿಂದ ಅನ್ನಭಾಗ್ಯ ಯೋಜನೆ ಕೂಡ ಜಾರಿಗೆ ಬರಲಿದೆ.
ಶನಿವಾರ ಗೃಹಜ್ಯೋತಿ ಯೋಜನೆ ಜಾರಿಗೆ ಬರಲಿದ್ದು, 200 ಯುನಿಟ್ವರೆಗಿನ ಕರೆಂಟ್ ಬಳಕೆಗೆ ಬಿಲ್ ಪಾವತಿ ಮಾಡುವ ಅಗತ್ಯ ಇರೋದಿಲ್ಲ. ಆಗಸ್ಟ್ ರಿಂದ ನಿಮ್ಮ ಕೈ ಸೇರಲಿರುವ ಬಿಲ್ನಲ್ಲಿ ಈ ವಿನಾಯಿತಿ ಪಡೆಯಬಹುದು.
12 ತಿಂಗಳ ನಿಮ್ಮ ಕರೆಂಟ್ ಬಳಕೆ ಸರಾಸರಿ 200 ಯುನಿಟ್ ಆಗಿದ್ದರೆ ಸಂಪೂರ್ಣ ವಿದ್ಯುತ್ ಬಿಲ್ ಸರ್ಕಾರವೇ ಭರಿಸಲಿದೆ. ಆದರೆ ಇದಕ್ಕಿಂತ ಕೊಂಚ ಯುನಿಟ್ ಬಳಕೆ ಹೆಚ್ಚಾದರೂ ಅದಕ್ಕೆ ನೀವೆ ಜವಾಬ್ದಾರರಾಗುತ್ತೀರಿ.
ಜೂನ್ 18ರಿಂದ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಆರಂಭಗೊಂಡಿದ್ದು ಈಗಾಗಲೇ 8 ಲಕ್ಷ ಜನರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಒಂದೂವರೆ ಕೋಟಿ ಜನರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕಿದೆ. ಇನ್ನು ಜುಲೈ 1ರಿಂದ ಜಾರಿಗೆ ಬರಲಿರುವ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ 170 ರೂಪಾಯಿ ಸಿಗಲಿದೆ. ಅಂದರೆ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ 340 ರೂಪಾಯಿ ಸಿಗಲಿದೆ. ನಾಲ್ವರಿದ್ದಾರೆ 680 ರೂ. ಸಿಗಲಿದೆ. ಇನ್ನುಳಿದ ಐದು ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023