- ಅನೇಕ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್
- ಜೂ.14ರಿಂದ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?
- ಯಾವ ಸೇವೆ ಇರುತ್ತೆ… ಏನಿರಲ್ಲ..ಸಂಪೂರ್ಣ ಸುದ್ದಿ!
NAMMUR EXPRESS
ಬೆಂಗಳೂರು: ರಾಜ್ಯ ಅರ್ಧ ಓಪನ್ ಆಗಲಿದೆ. ಹೌದು. ಸೋಮವಾರದಿಂದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ತೆರವು ಆಗಲಿದೆ. ಆದರೆ ಸುಖಾಸುಮ್ಮನೆ ಓಡಾಡುವ ಹಾಗಿಲ್ಲ. ಬೆಂಗಳೂರಿನಲ್ಲಿ ವೀಕೆಂಡ್ ಬಂದ್ ಆಗಲಿದೆ.
ಸೋಮವಾರದಿಂದಅನ್ ಲಾಕ್ ಬಳಿಕ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?:ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ2 ವರೆಗೆ ಅವಕಾಶ. ಪಾರ್ಕ್ ಬೆಳಿಗ್ಗೆ 5ರಿಂದ 10, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ. ಆಟೋ, ಟ್ಯಾಕ್ಸಿ ಓಡಾಟ. 2 ಮಂದಿ ಪ್ರಯಾಣಿಕರು ಮಾತ್ರ. ಗಾರ್ಮೆಂಟ್ಸ್ ಶೇ.30ರಷ್ಟು ಕಾರ್ಮಿಕರು ಮಾತ್ರ. ಕೈಗಾರಿಕೆಗಳು ಓಪನ್ ಆಗಲಿದ್ದು ಶೇ.50ರಷ್ಟು ಕಾರ್ಮಿಕರನ್ನು ಬಳಸಬಹುದಾಗಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸಿಮೆಂಟ್, ಸ್ಟೀಲ್, ಪೈಪ್ ಅಂಗಡಿಗಳು ಓಪನ್ ಆಗಲಿವೆ.
ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ನೈಟ್ ಕರ್ಫ್ಯೂ ಮತ್ತು ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಜೂನ್ 14ರಿಂದ ಈ ನಿಯಮ ಜಾರಿಗೆ ಬರಲಿದೆ.
11 ಜಿಲ್ಲೆ ಮತ್ತೆ ಲಾಕ್!: ಪಾಸಿಟಿವಿಟಿ ದರ ಕಡಿಮೆ ಇರುವ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಜೂ.21ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಲ್ಲಾಧಿಕಾರಿಗಳಿಗೆ ಇನ್ನು ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಯಾವ ಯಾವ ಜಿಲ್ಲೆ?: ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ
ಮೈಸೂರು, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹಾಸನ, ಮಂಡ್ಯ, ದ.ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 21 ವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡಲಾಗಿದೆ.
ಬೆಂಗಳೂರು ಓಪನ್: ರಾಜಧಾನಿ ಬೆಂಗಳೂರಿನಲ್ಲಿ ಜನರ ಸಂಖ್ಯೆ ಹೆಚ್ಚಿದೆ. ಸೋಮವಾರದಿಂದ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಇದೆ. ಪಾರ್ಕ್ ವಾಯು ವಿಹಾರಕ್ಕೆ 10 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ.
ವಲಸಿಗರು, ಬೇರೆ ಜಿಲ್ಲೆಗಳಿಂದ ಬರುತ್ತಿರುವ ಜನರನ್ನು ಪರೀಕ್ಷೆ ಮಾಡದಿದ್ದಲ್ಲಿ ಸೋಂಕು ಹೆಚ್ಚಾಗಲಿದೆ. ಬಿಬಿಎಂಪಿ ಹೀಗಾಗಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಿದೆ.
ಮರು ವಲಸೆ ಶುರು!: ಕರೋನಾ ಲಾಕ್ ಡೌನ್ ಕಾರಣ ತಮ್ಮ ಊರುಗಳಿಗೆ ಹೋಗಿದ್ದ ಜನ ಮತ್ತೆ ರಾಜಧಾನಿಗೆ ಬರುತ್ತಿದ್ದಾರೆ. ಕೈಗಾರಿಕೆ, ಗಾರ್ಮೆಂಟ್ಸ್, ಇತರೆ ಕಂಪನಿಗಳಿಗೆ ಅವಕಾಶ ನೀಡಿರುವ ಕಾರಣ ಜನ ಬರುತ್ತಿದ್ದಾರೆ. ರೈಲುಗಳಲ್ಲಿ ಜನ ಬರುತ್ತಿದ್ದಾರೆ. ಬಸ್ ಸೇವೆ ಶುರುವಾಗಿಲ್ಲ.