ಮೌರ್ಯ, ಮುರೊಳ್ಳಿ, ಸೆಂಥಿಲ್ ಸೇವೆ ಮರೆಯಿತೇ ಕಾಂಗ್ರೆಸ್?!
– ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ವಾಗ್ಮಿಗಳು
– ಸ್ಥಾನಮಾನ ಕೊಟ್ಟು ಸಂಘಟನೆಗೆ ಅವಕಾಶ ಕೊಡುತ್ತಾ?
NAMMUR EXPRESS NEWS
ಬೆಂಗಳೂರು: ಅಧಿಕಾರಕ್ಕೆ ಬಂದೊಡನೆ ಪಕ್ಷಕ್ಕೆ ದುಡಿದವರನ್ನು ಕಡೆಗಣಿಸುವುದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಸರ್ವೇ ಸಾಮಾನ್ಯ. ಇದೀಗ ಕಾಂಗ್ರೆಸ್ ಸರದಿ.
ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಸಮಯದಲ್ಲೂ ವರ್ಷಗಟ್ಟಲೆ ಭಾಷಣ ಮಾಡಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಪ್ರಮುಖ ವಾಗ್ಮಿಗಳಾದ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳ್ಳಿ, ನಿವೃತ್ತ ಐಎಎಸ್ ಅಧಿಕಾರಿ ಸೆಸಿಕಾಂತ್ ಸೆಂಥಿಲ್ ಸೇರಿದಂತೆ ಅನೇಕ ಪ್ರಾಮಾಣಿಕರನ್ನು ಕಾಂಗ್ರೆಸ್ ಇನ್ನು ಗಮನ ವಹಿಸಿಲ್ಲ. ಎಂಎಲ್ಸಿ ಹುದ್ದೆಗಳಿಗೆ ಇಂತವರಿಗೆ ಅವಕಾಶ ಕೊಟ್ಟಲ್ಲಿ ಪಕ್ಷ ಬೆಳೆಯುತ್ತೆ ಜತೆಗೆ ಪಕ್ಷದ ಇಮೇಜ್ ಹೆಚ್ಚುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಕಾಂಗ್ರೆಸ್ ಅನೇಕರಿಗೆ ಹುದ್ದೆ, ಸ್ಥಾನಮಾನ ನೀಡಿದ್ದು ಅದು ಪಕ್ಷ ಹಾಗೂ ಸಂಘಟನೆಗೆ ಅನುಕೂಲ ಆಗಿಲ್ಲ.
ಅನೇಕ ಹುದ್ದೆಗಳಂತೂ ವಿಸಿಟಿಂಗ್ ಕಾರ್ಡ್, ವೇದಿಕೆ ಮೇಲೆ ಕೂರಲು ಮಾತ್ರ ಪ್ರಯೋಜನ ಆಗಿದೆ. ಇನ್ನಾದರೂ ಪಕ್ಷ ಸಂಘಟನೆ, ಪಕ್ಷದ ಇಮೇಜ್ ಹೆಚ್ಚಿಸಿದ ಯುವ ನಾಯಕರಿಗೂ ಅವಕಾಶ ಸಿಗಲಿ ಎಂಬ ಅಗ್ರಹ ಪಕ್ಷದ ವಲಯದಲ್ಲೇ ಕೇಳಿ ಬಂದಿದೆ.
ಚುನಾವಣೆ ಹಾಗೂ ಚುನಾವಣೆ ಮುನ್ನ ಪಕ್ಷದ ಪರ ರಾತ್ರಿ ಹಗಲು ದುಡಿದ ಸಂಘಟಕರಿಗೆ ಸರ್ಕಾರ ದಲ್ಲಿ ಯಾವುದಾದರೂ ಉತ್ತಮ ಹುದ್ದೆ ನೀಡಬೇಕು. ಪಕ್ಷ ಸಂಘಟನೆ, ಪಕ್ಷದ ಇಮೇಜ್ ಹೆಚ್ಚಿಸಲು ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ ಪಕ್ಷ ಈಗಾಗಲೇ ಹಲವು ರಾಜ್ಯಗಳಲ್ಲಿ ಅಸ್ಥಿತ್ವವನ್ನೆ ಕಳೆದುಕೊಂಡಿರುವಾಗ ಕರ್ನಾಟಕದಲ್ಲಿ ಜನ ಕೊಟ್ಟ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ. ಚುನಾವಣಾ ಪೂರ್ವದ ಗ್ಯಾರಂಟಿಗಳ ಬಗ್ಗೆ ನೀಡಿದ ಭರವಸೆಗಳನ್ಬು ಈಡೇರಿಸುವುದೊಂದೆ ಅಲ್ಲ. ಯೋಜನೆಗಳ ಬಗ್ಗೆ ಜನರಿಗೆ ಇರುವ ಗೊಂದಲ ನಿವಾರಣೆ ಮಾಡಬೇಕು. ಪಕ್ಷಕ್ಕಾಗಿ ದುಡಿದವರನ್ನು ಗೌರವಿಸಿ ಸ್ಥಾನಮಾನ ನೀಡಬೇಕು. ಕಾಂಗ್ರೆಸ್ ಯೋಜನೆ, ಅಭಿವೃದ್ಧಿ ಬಗ್ಗೆ ಜನತೆಗೆ ತಿಳಿ ಹೇಳುವ ವಾಗ್ಮಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅವರಿಗೆ ಸ್ಥಾನಮಾನ ಕೂಡ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023