ಅಕ್ರಮವಾಗಿ ಅಳವಡಿಸಿದ ಪಂಪ್ಸೆಟ್ ಸಕ್ರಮಕ್ಕೆ ಅಸ್ತು!
– 2015ರಿಂದ ಈಚೆಗೆ ಅಕ್ರಮವಾಗಿ ಅಳವಡಿಕೆ
-6,099 ಕೋಟಿ ಅನುದಾನ ನೀಡಿದ ಸಚಿವ ಸಂಪುಟ
NAMMUR EXPRESS NEWS
ಬೆಂಗಳೂರು: ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ 2015 ರಿಂದ ಈಚೆಗೆ ರೈತರು ಅಕ್ರಮವಾಗಿ ಅಳವಡಿಸಿದ್ದಂತ ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ಶುಕ್ರವಾರದಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ 2015ರಿಂದ ಈಚೆಗೆ ಅಕ್ರಮವಾಗಿ ಅಳವಡಿಕೆ ಮಾಡಿರುವ ಸುಮಾರು 2 ಲಕ್ಷ ಕೃಷಿ ಪಂಪ್ ಸೆಟ್ ಗಳ ಸಂಪರ್ಕವನ್ನು ಸಕ್ರಮಗೊಳಿಸೋದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸೋದಕ್ಕೆ ತಗಲುವ 6,099 ಕೋಟಿ ವೆಚ್ಚಕ್ಕೆ ಘಟನೋತ್ತರ ಅನುದಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸೋಲಾರ್ ಪಂಪ್ ಸೆಟ್ ಹಾಕಿದ್ರೆ ಸಹಾಯ ಧನ
ವಿದ್ಯುತ್ ಮಾರ್ಗದಿಂದ 500 ಮೀಟರ್ ದೂರದಲ್ಲಿರುವ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಬದಲು ಸ್ಟ್ಯಾಂಡ್ ಅಲೋನ್ ಸೋಲಾರ್ ಘಟಕ ಅಳವಡಿಸುವ ಕುಸುಮ್ -ಬಿ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಘಟಕ ವೆಚ್ಚದ ಶೇಕಡ 50ರಷ್ಟು ರಾಜ್ಯ ಸರ್ಕಾರ, ಶೇಕಡ 20ರಷ್ಟು ಫಲಾನುಭವಿ, ಶೇಕಡ 30ರಷ್ಟು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು. ಸೋಲಾರ್ ನಿಂದ ವಿದ್ಯುತ್ ಪಡೆದು ಕೃಷಿ ಪಂಪ್ಪೆಟ್ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.