ಜೈ ಹೋ ಇಂಡಿಯಾ.. ಜೈ ಹೋ ಇಸ್ರೋ..!
– ಚಂದ್ರನ ಅಂಗಳದಲ್ಲಿ ಭಾರತದ ಮೈಲುಗಲ್ಲು?
– 140 ಕೋಟಿ ಭಾರತೀಯರ ಹಾರೈಕೆ, ಪೂಜೆ
– ಲ್ಯಾಂಡಿಂಗ್ ತಪ್ಪಿದ್ರೆ ಆ. 27ಕ್ಕೆ ಮತ್ತೊಂದು ಮುಹೂರ್ತ
NAMMUR EXPRESS NEWS
ಬೆಂಗಳೂರು : ಚಂದ್ರಯಾನ 3ಕ್ಕೆ ಕ್ಷಣಗಣನೆ ಆರಂಭವಾಗಿದ್ದು ಚಂದ್ರನ ಅಂಗಳದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಲು ಸಿದ್ಧತೆ ನಡೆಸಿದೆ. ವಿಕ್ರಂ ಲ್ಯಾಂಡರ್ ಚಂದ್ರಯಾನ 2ರ ಆರ್ಬೀಟರೊಂದಿಗೆ ಸಂಪರ್ಕ ಸಾಧಿಸಿದೆ. ಸಾಮಾನ್ಯವಾಗಿ ವಿಕ್ರಂ ಲ್ಯಾಂಡರ್ ಚಂದ್ರಯಾನ 3ರ ಜೊತೆಗೆ ಮಾತ್ರ ಸಂಪರ್ಕದಲ್ಲಿ ಇರಬೇಕಿತ್ತು. ಆದರೆ ಚಂದ್ರಯಾನ 2 ಆರ್ಬಿಟರ್ ಅಂದಿಗೂ ಸಂಪರ್ಕ ಸಾಧಿಸುವ ಮೂಲಕ ಮಹತ್ವದ ಸಾಧನೆ ಮೆರೆದಿದೆ. ಏಕಕಾಲಕ್ಕೆ ಎರಡು ನೌಕೆಗಳೊಂದಿಗೆ ವಿಕ್ರಂ ಲ್ಯಾಂಡರ್ ಸಂಪರ್ಕ ಹೊಂದಿರುವುದರಿಂದ ಭವಿಷ್ಯದಲ್ಲಿ ಭಾರತಕ್ಕೆ ಭಾರಿ ಲಾಭವಾಗಲಿದೆ. ಭವಿಷ್ಯದಲ್ಲಿ ಯಾವುದಾದರೂ ಒಂದರ ಸಂಪರ್ಕ ಕಡಿತಗೊಂಡರೂ ಮತ್ತೊಂದರ ಮೂಲಕ ಭಾರತಕ್ಕೆ ಚಂದ್ರನ ಚಿತ್ರಗಳು ಮತ್ತು ವಿಶ್ಲೇಷಣೆಗಳನ್ನು ಕಳುಹಿಸಲು ಇದು ನೇರವಾಗಲಿದೆ.
ಇಸ್ರೋ ಚಂದ್ರಯಾನ-3 ಬಗ್ಗೆ ದೊಡ್ಡ ಅಪ್ಡೇಟ್ ನೀಡಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಎಂದು ಇಸ್ರೋ ಮಾಹಿತಿ ನೀಡಿದೆ. 2023ರ ಆಗಸ್ಟ್ 21ರಂದು ಚಂದ್ರಯಾನ-3 ಚಂದ್ರನ ಕಡೆಗೆ ಚಲಿಸುವ ಮೂಲಕ ಚಂದ್ರಯಾನ-2ರ ಆರ್ಬಿಟರ್ನೊಂದಿಗೆ ಸಂಪರ್ಕವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಸಮಯವನ್ನು ಆಗಸ್ಟ್ 23ರಂದು ಸಂಜೆ 6.04ಕ್ಕೆ ಇರಿಸಲಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ, ಚಂದ್ರನ ಮೇಲ್ಕೆಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ಗಾಗಿ ಪ್ರಯತ್ನಿಸಲಾಗುತ್ತದೆ. ಸ್ಥಳೀಯ ಕಾಲಮಾನ ಸಂಜೆ 5.20ಕ್ಕೆ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 23ರಂದು ಭಾರತವು ಚಂದ್ರನ ಮೇಲ್ಮಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡಲು ಸಿದ್ಧರಿದ್ದೇವೆ. ಒಂದು ಅಂದು ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡಿಂಗ್ ಮಾಡಿದರೆ ಭಾರತ ಇತಿಹಾಸವನ್ನು ಸೃಷ್ಟಿಸುತ್ತದೆ. ಹಾಗೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಯಶಸ್ವಿಯಾಗಿದ್ದವು. ಅಷ್ಟೇ ಅಲ್ಲ, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಭಾರತ ಆಗಲಿದೆ.
ದೇಶದೆಲ್ಲೆಡೆ ಜನರ ಪ್ರಾರ್ಥನೆ: ವಿಶೇಷ ಪೂಜೆ
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇಶದೆಲ್ಲೆಡೆ ಕೋಟಿ ಕೋಟಿ ಜನ ಪೂಜೆ, ಪ್ರಾರ್ಥನೆ ಮಾಡುತ್ತಿದ್ದಾರೆ. ದೇವಾಲಯ, ಮಸೀದಿ, ಚರ್ಚ್ ಎಲ್ಲಾ ಕಡೆ ಪ್ರಾರ್ಥನೆ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದವರು ಲಕ್ನೋ ದ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ನಮಾಜ್ ಮಾಡಿದ್ದಾರೆ. ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ಗಾಗಿ ಮುಸ್ಲಿಂ ಸಮುದಾಯದ ಸದಸ್ಯರು ಪ್ರಾರ್ಥನೆ ಸಲ್ಲಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.