ಜಯದೇವ ಸಂಸ್ಥೆ, ನಿತಿನ್ ಕಾಮತ್, ಅದಿತಿ ಅಶೋಕ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ!
– ಕೆಂಪೇಗೌಡ ಜನ್ಮ ದಿನದ ಹಿನ್ನೆಲೆ ಘೋಷಣೆ
NAMMUR EXPRESS NEWS
ಬೆಂಗಳೂರು: ಜಯದೇವ ಹೃದ್ರೋಗ ಸಂಸ್ಥೆ, ಜೆರೋಧಾ ಕಂಪನಿ ಸಂಸ್ಥಾಪಕ ನಿತಿನ್ ಕಾಮತ್, ಗಾಲ್ಪ್ ಆಟಗಾರ್ತಿ ಅದಿತಿ ಅಶೋಕ್ ಸೇರಿ ಮೂವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಸೋಮವಾರ ರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೆಂಪೇಗೌಡ ಅವರ 514ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಬೆಂಗಳೂರಿನ 198 ಮಂದಿಗೆ ಕೆಂಪೇಗೌಡ ಪ್ರಶಸ್ತಿ ಘೋಷಣೆ ಮಾಡಿದ್ದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಹಾಗೆಯೇ ಪ್ರತಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಆಚರಣೆ ನಡೆಯಲಿದೆ.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಲಕ್ಷ ಲಕ್ಷ ಮಂದಿಗೆ ಹೃದಯ ಸಮಸ್ಯೆ ಪರಿಹಾರ ನೀಡಿದ್ದಲ್ಲದೆ ಲಕ್ಷ ಜನರ ಜೀವ ಉಳಿಸಿದ ಸಂಸ್ಥೆಗೆ ಪ್ರಶಸ್ತಿ ಸಿಕ್ಕಿದೆ.
ಕರ್ನಾಟಕದ ಖ್ಯಾತ ಯುವ ಉದ್ಯಮಿ, ಜೆರೋಧಾ ಕಂಪನಿ ಸಂಸ್ಥಾಪಕ ನಿತಿನ್ ಕಾಮತ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಭಾಜನರಾಗಿದ್ದಾರೆ.
ತಮ್ಮ ಸಂಸ್ಥೆಯ ಲಾಭದಲ್ಲಿ ಬಡವರು, ಸಾಮಾಜಿಕ ಕೆಲಸಗಳಿಗೆ ಹಂಚುವುದಾಗಿ ಘೋಷಣೆ ಮಾಡಿದ್ದು, ನಾಡಿನ ಉದ್ಯಮ ಕ್ಷೇತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರು ಭಾರತೀಯ ಖ್ಯಾತ ಗಾಲ್ಫ್ ಆಟಗಾರ್ತಿಯಾಗಿ ಹಲವು ಪ್ರಶಸ್ತಿ ಗೆದ್ದು ಕರುನಾಡ ಕೀರ್ತಿ ಹೆಚ್ಚಿಸಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023