ಅಂತಾರಾಷ್ಟ್ರೀಯ ಶಾಸಕರ ಸಭೆಯಲ್ಲಿ ಖಾದರ್, ಮಂಜುನಾಥ್ ಭಂಡಾರಿ
– ಅಮೇರಿಕಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಕರ್ನಾಟಕದ ಶಾಸಕರ ತಂಡ ಭಾಗಿ
– ಶಾಸಕರ ಯೋಜನೆ, ನೀತಿ, ಸವಾಲುಗಳ ಬಗ್ಗೆ ಚರ್ಚೆ
NAMMUR EXPRESS NEWS
ಮಂಗಳೂರು/ ಬೆಂಗಳೂರು: ಅಂತಾರಾಷ್ಟ್ರೀಯ ಶಾಸಕರ ಸಭೆಗೆ ಕರ್ನಾಟಕದ ರಾಯಭಾರಿಗಳಾಗಿ ಸ್ಪೀಕರ್ ಯು.ಟಿ. ಖಾದರ್ ಮತ್ತು ಎಮ್.ಎಲ್.ಸಿ. ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಅಮೆರಿಕಾದ ಕೆಂಟುಕಿ ರಾಜ್ಯದ ಲೂಯಿಸ್ವಿಲ್ಲೆಯಲ್ಲಿ ಆಗಸ್ಟ್ 5 ರಿಂದ 7ರವರೆಗೆ ಜರುಗಿದ ಅಂತರಾಷ್ಟ್ರೀಯ ಶಾಸಕರ ಸಮ್ಮೇಳದಲ್ಲಿ ಕರ್ನಾಟಕದ ಸರ್ಕಾರದ ಪರವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕೆಂಟಕಿ ರಾಜ್ಯದ ಹೊನ್ಲೆ ಆಂಡಿ ಬೇಷೀರ್ ಮತ್ತು ಹೊನ್ಲೆ ಸೆನೆಟರ್ ವೇನ್ ಹಾರ್ಪರ್ ಅವರಿಗೆ ಮೈಸೂರು ಶಾಲು ನೀಡಿ ಗೌರವಿಸಿದರು. ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಮುಖ್ಯ ಸಚೇತಕರಾದ ಅಶೋಕ್ ಪಟ್ಟೆನ್ ಮತ್ತು ಸಲೀಂ ಅಹಮದ್ ಮತ್ತು ಕರ್ನಾಟಕದ ಒಟ್ಟು 10 ಶಾಸಕರು ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 5600 ಶಾಸಕರು ಈ ಶಾಸಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ NCSL ಸಿಇಒ ಟಿಮ್ ಸ್ಟೋರಿ “ಅಂತರರಾಷ್ಟ್ರೀಯ NCSL ಶೃಂಗಸಭೆಯು ಪ್ರಪಂಚದಾದ್ಯಂತದ ನಿಮ್ಮ ಶಾಸಕರ ಸವಾಲುಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಏನು ಕೆಲಸ ಮಾಡುತ್ತದೆ ಮತ್ತು ಏನನ್ನು ಬದಲಾಯಿಸಬೇಕು” ಹಾಗೂ ನೀವು ಸಂಪರ್ಕದಲ್ಲಿರುವಾಗ, ಮುಂದಿನ 50 ವರ್ಷಗಳ ಬಗ್ಗೆ ಯೋಚಿಸಲು ಈ ಶೃಂಗ ಅನುಕೂಲವಾಗಲಿದೆ. ಶಾಸಕಾಂಗ ಸಂಸ್ಥೆಯು ವಿಕಸನಗೊಳ್ಳಲು ಮತ್ತು ಇನ್ನಷ್ಟು ಬಲವಾಗಿ ಬೆಳೆಯಲು ಸಹಾಯ ಮಾಡಲು ಈ ಸಂಘಟನೆ ಅತ್ಯಗತ್ಯವಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರ ನೀತಿ, ನಿಯಮ, ಯೋಜನೆ, ಜನಪರ ಕೆಲಸ, ಕೌಶಲ್ಯದ ಬಗ್ಗೆ ಈ ಸಮ್ಮೇಳನ ಬೆಳಕು ಚೆಲ್ಲಿತು.