ಮಂಗಳೂರು ಕುಕ್ಕರ್ ಸ್ಫೋಟ ಕೇಸ್ ಟ್ವಿಸ್ಟ್!
– ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತು ಪತ್ತೆ
– ಶಂಕಿತ ಯಾಸಿನ್ ಸ್ಥಳ ಮಹಜರು: ಎಲ್ಲೆಲ್ಲಿ ಚಟುವಟಿಕೆ?
NAMMUR EXPRESS NEWS
ಬೆಂಗಳೂರು: ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ವೇಳೆ ಎನ್ಐಎ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಸ್ಪೋಟಕಕ್ಕೆ ಸಂಬಂಧಿಸಿದ ವಸ್ತುವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಘಟನೆಯಿಂದ ಮತ್ತಷ್ಟು ತನಿಖೆ ನಡೆಯಲಿದೆ. ಎನ್ಐಎ ಅಧಿಕಾರಿಗಳು ಇದೇ ಗುರುವಾರದಂದು ಶಿವಮೊಗ್ಗದಲ್ಲಿ ಶಂಕಿತ ಯಾಸಿನ್ ಎಂಬಾತನನ್ನು ಸ್ಥಳ ಮಹಜರ್ಗೆ ಕರೆತಂದಿದ್ದಾರೆ. ಈ ವೇಳೆ ಆತನಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಸ್ಫೋಟಕದ ವಸ್ತು ಅಧಿಕಾರಿಗಳಿಗೆ ಲಭ್ಯವಾಗಿದೆ.
ಕಳೆದ ಗುರುವಾರದಂದು ಯಾಸಿನ್ನನ್ನ ಕರೆದುಕೊಂಡು ಬಂದಿದ್ದ ಎನ್ಐಎ ಅಧಿಕಾರಿಗಳು ಶಿವಮೊಗ್ಗ ತೀರ್ಥಹಳ್ಳಿ, ಹೊನ್ನಾಳಿ ಸುತ್ತಮುತ್ತ ಸ್ಥಳಮಹಜರು ನಡೆಸಿದ್ದಾರೆ. ಈ ಮಹಜರ್ ವೇಳೆ ಯಾಸಿನ್ ತನ್ನ ಸಂಬಂಧಿಕರ ಮನೆಯೊಂದರ ಸ್ಲಾಬ್ ಮೇಲೆ ಅಡಗಿಸಿಟ್ಟಿದ್ದ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದನ್ನ ತೆಗೆದು ಅಧಿಕಾರಿಗಳಿಗೆ ನೀಡಿದ್ದಾನೆ. ರೆಡ್ ಪಾಸ್ಪರಸ್ ಪೌಡರ್ ಇದಾಗಿದ್ದು, ಸ್ಫೋಟಕದಲ್ಲಿ ಬಳಸುವ ಗನ್ ಪೌಡರ್ಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದ್ದು, ಎನ್ಎಐ ಅಧಿಕಾರಿಗಳು ವಸ್ತುವನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023