- ಹೈದ್ರಾಬಾದ್ ಮೃಗಾಲಯದ ಸಿಂಹಗಳಿಗೆ ಕೋವಿಡ್ ಸೋಂಕು!
- ಅಪಾಯ.. ಅಪಾಯ.. ಪ್ಲೀಸ್ ಹುಷಾರ್..!
ಬೆಂಗಳೂರು: ಕರೋನಾ ಮಹಾಮಾರಿ ಇದೀಗ ದೇಶದಲ್ಲಿ ಜನರನ್ನು ಬೀದಿ ಹೆಣ ಮಾಡುತ್ತಿದೆ. ಈ ನಡುವೆ ಆತಂಕಕಾರಿ ವಿಷಯವೊಂದು ಹೊರ ಬಿದ್ದಿದೆ. ಪ್ರಾಣಿಗಳಿಗೂ ಕರೋನಾ ರೀತಿಯ ಸೋಂಕು ಹರಡುತ್ತಿರುವುದು ಬೆಳಕಿಗೆ ಬಂದಿದೆ. ಕರೋನಾ ಸೋಂಕಿತರು ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿದರೆ ಕರೋನಾ ಬರುವ ಸಾಧ್ಯತೆಗಳಿವೆ. ಕರೋನಾ ಸೋಂಕು ತಗುಲಿದವರು ಪ್ರತ್ಯೇಕವಾಗಿ ಐಸೋಲೇಷನ್ ಆಗುವುದರ ಜೊತೆಗೆ ಪ್ರಾಣಿಗಳಿಗೂ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಿದೆ. ಹೈದರಾಬಾದ್ನಲ್ಲಿರುವ ಮೃಗಾಲಯದಲ್ಲಿ ಕರೋನಾ ಸೋಂಕು ಪ್ರಾಣಿಗಳಿಗೂ ಹಬ್ಬಿದೆ. ಮೃಗಾಲಯದಲ್ಲಿರುವ ಎಂಟು ಸಿಂಹಗಳಲ್ಲಿ ಕರೋನಾ ಸೋಂಕು ಲಕ್ಷಣ ಕಂಡುಬಂದಿದೆ. ಕರೋನಾ ಪ್ರಾಣಿಗಳಿಗೂ ಬಿಡದೇ ಕಾಡುವ ಭೀತಿಯಿದ್ದು, ಆದಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕಿದೆ. ಒಂದು ವೇಳೆ ಪ್ರಾಣಿಗಳಿಗೆ ಕರೋನಾ ಸೋಂಕು ಹಬ್ಬಿದರೆ ನಿಜಕ್ಕೂ ಅದು ದುರಂತಕ್ಕೆ ಮುನ್ನಡಿ ಬರೆಯಲಿದೆ.
ಗ್ರಾಮೀಣ ಪ್ರದೇಶದಲ್ಲಿ ಸಾಕು ಪ್ರಾಣಿಗಳಾದ ದನ, ಕುರಿ, ಕೋಳಿ, ಬೆಕ್ಕು, ನಾಯಿಗಳನ್ನು ಕೊರೋನಾ ಸೋಂಕಿನಿಂದ ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಾಗಲಿದೆ.
ಒಂದು ವೇಳೆ ಪ್ರಾಣಿಗಳಿಗೆ ಸೋಂಕು ತಗುಲಿದ್ದೇ ಆದರೆ ಅದನ್ನು ನಿಯಂತ್ರಿಸಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ತಕ್ಷಣ ರೋಗ ತಡೆಯುವತ್ತ ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕಿದೆ.
ಎಲ್ಲಾ ಸುದ್ದಿಗಳಿಗೆ Nammur Express ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!..
ಸುದ್ದಿ ಪಡೆಯಲು 9481949101 ನಿಮ್ಮ ಹೆಸರು, ಊರು, ತಾಲ್ಲೂಕು ವಾಟ್ಸಾಪ್ ಮಾಡಿ.!.