ಬೆಲೆ ಏರಿಕೆ ಬಿಸಿ: ಬದುಕು ಬರ್ಬಾತ್!
– ಟೊಮ್ಯಾಟೊ, ನುಗ್ಗೆಕಾಯಿ, ಬೀನ್ಸ್, ಮೆಣಸು ಮುಟ್ಟಕಾಗೋಲ್ಲ
– ಮಳೆ ಇಲ್ಲ,ಇಳುವರಿ ಕಡಿಮೆ: ಬೆಲೆ ಏರಿಕೆ?
– ಹಾಲು, ಬೇಳೆ ಕೂಡ ಏರಿಕೆ ಸಾಧ್ಯತೆ
– ಹೋಟೆಲ್ ಊಟ, ಉಪಹಾರ ಕೂಡ ಏರುತ್ತಾ?
NAMMUR EXPRESS NEWS
ಬೆಂಗಳೂರು: ತರಕಾರಿ ಬೆಲೆ ಗಗನಕ್ಕೇರುತ್ತಿದ್ದು ಜನರ ಬದುಕು ಹೊರೆ ಆಗುತ್ತಿದೆ. ಒಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ, ಗ್ಯಾಸ್ ಬೆಲೆ ಏರಿಕೆ ಹೆಚ್ಚಾದ ಹಿನ್ನೆಲೆ ತರಕಾರಿ ಕೂಡ ಈಗ ಹೆಚ್ಚಾಗಿದೆ.
ಮಳೆ ಹಿನ್ನೆಲೆ ತರಕಾರಿ ಇಳುವರಿ ಕಡಿಮೆ ಆದ ಹಿನ್ನೆಲೆ ಬೇಡಿಕೆ ಹೆಚ್ಚಾಗಿದ್ದು ಬೆಲೆ ಏರಿದೆ. ಇನ್ನೊಂದು ಕಡೆ ಬೇಳೆ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ.
ಟೊಮ್ಯಾಟೊ ಬೆಲೆ ಕಳೆದ ಕೆಲವು ದಿನಗಳಿಂದ ಗಗನಮುಖಿಯಾಗಿದ್ದು, ನೂರರ ಸನಿಹ ಬಂದು ನಿಂತಿದೆ. 15 ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ 1,500 ರೂ ಆಗಿದೆ. ಇನ್ನೆರಡು ದಿನದಲ್ಲಿ ಟೊಮ್ಯಾಟೊ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ವಾರ 20-30 ರೂ.ಇದ್ದ ಟೊಮ್ಯಾಟೊ ಬೆಲೆ ಈಗ ಏಕಾಏಕಿ ಕೆಜಿಗೆ 80 ರೂ ಹತ್ತಿರ ಬಂದಿದೆ. ಏಲ್ಲ ಕಡೆಗಳಲ್ಲಿ 90-100 ರೂಪಾಯಿ ದರದಲ್ಲಿ ಟೊಮ್ಯಾಟೊ ಮಾರಾಟ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದ ಟೊಮ್ಯಾಟೊ ಬಾಂಗ್ಲಾಕ್ಕೆ ರಫ್ತು ಮಾಡಲಾಗುತ್ತಿದೆ. ಕೋಲಾರದಿಂದ ಹೊರರಾಜ್ಯಗಳಿಗೆ ರಫ್ತು ಹೆಚ್ಚಾಗುತ್ತಿದ್ದು ಬೇರೆ ರಾಜ್ಯಗಳಲ್ಲಿ ಟೊಮ್ಯಾಟೊಗೆ ಭಾರಿ ಡಿಮಾಂಡ್ ಇದೆ. ಇದರಿಂದಾಗಿಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಟೊಮ್ಯಾಟೊ ಖರೀದಿ ಮಾಡಲು ಜನರು ಹಿಂದೇಟು ಹಾಕುವಂತಾಗಿದೆ. ದಿನಸಿ ಪದಾರ್ಥಗಳ ಬೆಲೆಯು ಕೂಡ ಏರಿಕೆಯಾಗಿದೆ.
ಕಾರಣ ಏನು?: ಈ ಸಲ ಮುಂಗಾರು ಮಳೆಯೂ ಸರಿಯಾಗಿ ಬಂದಿಲ್ಲ. ಎಲ್ಲೆಡೆ ಮಳೆ ಕೊರತೆಯಾಗಿದೆ. ಇದರ ನಡುವೆ ಬೆಲೆ ಏರಿಕೆಯಾಗುತ್ತಿದೆ.ರಾಜ್ಯದ ಮೇಲೆ ಬರಗಾಲದ ಛಾಯೆ ಆವರಿಸಿದ್ದು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಎಲ್ಲ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಳವಾಗುವ ಭೀತಿಯಲ್ಲಿ ಜನರಿದ್ದಾರೆ.
ಊಟ, ಉಪಹಾರ ಬೆಲೆ ಹೆಚ್ಚಳ?: ದಿನಸಿ, ತರಕಾರಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವ ಹಿನ್ನೆಲೆ ಹೋಟೆಲ್ ಅಲ್ಲಿ ಕೂಡ ಊಟ ಉಪಹಾರಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಬೆಲೆ ಏರಿಕೆಯಿಂದ ಜನರ ಬದುಕು ಬರ್ಬಾತ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023