ಮಳೆ, ಬಿಸಿಲು: ಎಲ್ಲೆಡೆ ಜ್ವರ, ಶೀತ.. ಹುಷಾರು!
– ಟೈಫಾಯಿಡ್, ಜಾಂಡಿಸ್, ಜ್ವರ ಹೆಚ್ಚಳ
– ಆರೋಗ್ಯದ ಬಗ್ಗೆ ಇರಲಿ ಎಚ್ಚರ ಎಚ್ಚರ
NAMMUR EXPRESS NEWS
ಬೆಂಗಳೂರು: ಮಳೆ, ಬಿಸಿಲಿನ ಆಟ ಕಳೆದೊಂದು ತಿಂಗಳಿನಿಂದ ಎಲ್ಲೆಡೆ ಕಾಣುತ್ತಿದೆ. ಮಳೆ ಬಿಸಿಲು ಕಾರಣ ಅನೇಕ ರೋಗಗಳು ಉಲ್ಬಣಗೊಳ್ಳುತ್ತಿವೆ.
ಈಗಾಗಲೇ ರಾಜ್ಯದ ಎಲ್ಲೆಡೆ ಮಳೆ ಬಿಸಿಲಿನ ಆಟ ನಡೆಯುತ್ತಿದೆ. ಇದು ಜನರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ.
ಟೈಫಾಯಿಡ್, ಜಾಂಡಿಸ್, ಜ್ವರ, ಶೀತ ಹೆಚ್ಚಳವಾಗುತ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಜನ ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.