ವರುಣನ ಅಬ್ಬರ ಕಡಿಮೆಯಾಯ್ತು!
– 4 ದಿನದ ಬಳಿಕ ಅನೇಕ ಕಡೆಯಲ್ಲಿ ಶಾಲೆಯತ್ತ ಮಕ್ಕಳು
– ಮಲೆನಾಡು, ಕರಾವಳಿಯಲ್ಲಿ ಜಿಟಿ ಜಿಟಿ ಮಳೆ
– ಮಳೆ ನಿಂತರೂ ಅನಾಹುತ ನಿಂತಿಲ್ಲ!
NAMMUR EXPRESS NEWS
ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜನರು ಹೈರಾಣಾಗಿದ್ದು ಇದೀಗ ಎರಡು ದಿನಗಳಿಂದ ಕೊಂಚ ಕಡಿಮೆ ಆಗಿದೆ. ಗುರುವಾರ ಮಳೆರಾಯ ಕೊಂಚ ಬಿಡುವು ತೆಗೆದುಕೊಂಡಿದ್ದು, ನಾಲೈದು ದಿನದಿಂದ ಶಾಲೆಗೆ ರಜೆಯಿಂದ ಮನೆಯಲ್ಲಿ ಇದ್ದ ಮಕ್ಕಳು ಶಾಲೆಯತ್ತ ಮುಖ ಮಾಡಿದ್ದಾರೆ. ಅಲ್ಲದೆ ಜನರು ಕೂಡ ತಮ್ಮ ಸಾಮಾನ್ಯ ಚಟುವಟಿಕೆಯಲ್ಲಿ ಬ್ಯುಸಿ ಆಗಿದ್ದಾರೆ. ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಾತ್ರ ಮಳೆಯ ಆರ್ಭಟ ಜೋರಾಗಿದೆ. ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.ಗುರುವಾರದ ವರೆಗೂ ಕೆಲವು ಕಡೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆದರೆ, ಶುಕ್ರವಾರ ದಕ್ಷಿಣ ಒಳನಾಡಿನ ಯಾವುದೇ ಜಿಲ್ಲೆಗಳಿಗೆ ಎಚ್ಚರಿಕೆ ಅಲರ್ಟ್ ನೀಡಿರುವುದಿಲ್ಲ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಗುರುವಾರ ಬೆಳಗಿನವರೆಗೆ ರೆಡ್ ಅಲರ್ಟ್ ಘೋಷಿಸಿತ್ತು. ಮಳೆ ಕಡಿಮೆ ಆದರೂ ಅನಾಹುತ ಕಡಿಮೆ ಆಗುತ್ತಿಲ್ಲ. ಮನೆ ಕುಸಿತ ಹೆಚ್ಚಾಗುತ್ತಿದೆ. ಮಳೆ ಕಾರಣ ವಾಹನ ಅಪಘಾತ ಕೂಡ ಹೆಚ್ಚುತ್ತಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023