ರೇಣುಕಾಸ್ವಾಮಿ ಕೊಲೆ ಕೇಸ್: ಪವಿತ್ರ ಗೌಡಗೆ ಜೈಲು!
– ದರ್ಶನ್ ಸೇರಿದಂತೆ 6 ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ
– ದರ್ಶನ್ ಬಗ್ಗೆ ಏನೇನೋ ಬರೆಯೋ ಹಾಗಿಲ್ಲ: ಸ್ಟೇ ತಂದ ಪತ್ನಿ!
NAMMUR EXPRESS NEWS
ಬೆಂಗಳೂರು : ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಚಿತ್ರದುರ್ಗದ ರೇಣುಕಾಸ್ವಾಮಿಯ ಭೀಕರ ಕೊಲೆ ಕೇಸ್ ಆರೋಪ ಪ್ರಕರಣ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಎಸಿಎಂಎಂ ಕೋರ್ಟ್ ದರ್ಶನ್ ಸೇರಿದಂತೆ 6 ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಇನ್ನು ಆರೋಪಿ ಪವಿತ್ರಾಗೌಡ ಸೇರಿ ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಸೂಚಿಸಿದೆ.
ಪ್ರಕರಣದ ಆರೋಪಿಗಳ ಕಸ್ಟಡಿ ಇಂದಿಗೆ ಅಂತ್ಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಮೃತನ, ಹಾಗೂ ಆರೋಪಿಯ ಮೊಬೈಲ್ ಗಳನ್ನು ಕಲೆ ಹಾಕಬೇಕು. ಇದರಿಂದ ಹೆಚ್ಚು ಮಾಹಿತಿ ಸಿಗಲಿದೆ. ಇದು ಭೀಕರ ಕೊಲೆ ಕೇಸ್ ಆಗಿದ್ದರಿಂದ ಇನ್ನಷ್ಟು ಮಾಹಿತಿಯನ್ನು ಪತ್ತೆ ಹಚ್ಚಬೇಕಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್, ವಿನಯ್, ಪ್ರದೂಶ್, ಧನರಾಜ್, ನಾಗರಾಜ್, ಲಕ್ಷ್ಮಣ್ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು.
ಕೇಸ್ನಲ್ಲಿ ಪವಿತ್ರಾಗೌಡ A1, ದರ್ಶನ್ A2 ಆರೋಪಿಯಾಗಿದ್ದಾರೆ. ದರ್ಶನ್ ಆಪ್ತೆ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂದು ಆರೋಪಿಸಿ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಸೇರಿ ಸಹಚರರು ಹಲ್ಲೆ ನಡೆಸಿ ಕೊಂದಿದ್ದಾರೆಂಬ ಆಪಾದನೆ ಇದೆ. ರೇಣುಕಾಸ್ವಾಮಿಯನ್ನ ಜೂ.9ರಂದು ಹತ್ಯೆಗೈಯಲಾಗಿತ್ತು.
ದರ್ಶನ್ ಬಗ್ಗೆ ಏನೇನೋ ಬರೆಯೋ ಹಾಗಿಲ್ಲ: ಸ್ಟೇ ತಂದ ಪತ್ನಿ!
ದರ್ಶನ್ ಬಗ್ಗೆ ಮಾಧ್ಯಮಗಳು ಅವಹೇಳನ ಪದ ಹಾಗೂ ಸುದ್ದಿ ಬರೆಯದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೋರ್ಟಿನ ಮೂಲಕ ಸ್ಟೇ ಆರ್ಡರ್ ತಂದಿದ್ದಾರೆ.