- ಬೆಂಗಳೂರಿನ ಕೆ.ಆರ್.ಪುರ ಠಾಣೆಯಲ್ಲಿ ದೂರು
- ನಂದೀಶ್ ಸಾವಿಗೆ ಕಾರಣ ಎಂಬ ಆರೋಪ
NAMMUR EXPRESS NEWS
ಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ 7 ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜ್, ಪೊಲೀಸ್ ಕಮಿಷನ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಭೈರತಿ ಬಸವರಾಜ್ ಸಂಬಂಧಿಗಳಾದ ಚಂದ್ರು ಹಾಗೂ ಗಣೇಶ್ರವರು ನಂದೀಶ್ ಸಾವಿಗೆ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಿದ್ದಾರೆ. ಭೈರತಿ ಬಸವರಾಜ್ ರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಘಾತಕ್ಕೆ ಕಾರಣ. ಜೊತೆಗೆ ಪೋಸ್ಟಿಂಗ್ ಗಾಗಿ ಭೈರತಿ ಬಸವರಾಜ್ ರಿಗೆ 50 ಲಕ್ಷ ರೂ. ಹಾಗೂ ಗೃಹ ಸಚಿವರಿಗೆ 20 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.