ಬಿಪಿಎಲ್ ಕಾರ್ಡುದಾರರಿಗೆ ಶಾಕ್!
* ಬರೋಬ್ಬರಿ 22 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡು ರದ್ದು!
* ಯಾವ ಕಾರಣಕ್ಕೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್ ?
NAMMUR EXPRESS NEWS
ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೇ ಸಂಕಷ್ಟ ಎದುರಿಸುತ್ತಿರುವ ಹೊತ್ತಲ್ಲೇ ಬಿಪಿಎಲ್ ಕಾರ್ಡುದಾರರಿಗೆ ಮತ್ತೊಂದು ಶಾಕ್ ಸಿಕ್ಕಿದೆ.
ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳು ರದ್ದಾಗಲಿವೆ.
ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹ ಪಡಿತರ ಕಾರ್ಡುದಾರರನ್ನು ಪತ್ತೆ ಮಾಡಿದೆ. ಹಾಗಾದರೆ ಯಾವ ಜಿಲ್ಲೆಯಿಂದ ಎಷ್ಟು ಕಾರ್ಡುಗಳು ರದ್ದಾಗಲಿವೆ.
ಬೆಂಗಳೂರಿನಲ್ಲಿ 2.54 ಲಕ್ಷ, ಕಲಬುರಗಿಯಲ್ಲಿ 1.57 ಲಕ್ಷ, ಮೈಸೂರಿನಲ್ಲಿ 1.41 ಲಕ್ಷ, ಬೀದರ್ ನಲ್ಲಿ 1.30 ಲಕ್ಷ, ಬೆಳಗಾವಿಯಲ್ಲಿ 1.27 ಲಕ್ಷ, ಕೋಲಾರದಲ್ಲಿ 1.25 ಲಕ್ಷ, ದಕ್ಷಿಣ ಕನ್ನಡ 1.11 ಲಕ್ಷ, ಶಿವಮೊಗ್ಗ1.08 ಲಕ್ಷ, ಚಿಕ್ಕಮಗಳೂರು 1.05 ಲಕ್ಷ, ದಾವಣಗೆರೆ 85 ಸಾವಿರ, ಉಡುಪಿ 80 ಸಾವಿರ, ಬಾಗಲಕೋಟೆ 74 ಲಕ್ಷ, ವಿಜಯಪುರ 62 ಸಾವಿರ, ರಾಯಚೂರು 59 ಸಾವಿರ, ಹಾಸನ 58 ಸಾವಿರ, ಧಾರವಾಡ 55 ಸಾವಿರ, ಮಂಡ್ಯ 51 ಸಾವಿರ, ತುಮಕೂರು 51 ಸಾವಿರ, ಬೆಂಗಳೂರು ಗ್ರಾಮಾಂತರ 50 ಸಾವಿರ, ಹಾವೇರಿ 49 ಸಾವಿರ, ಉತ್ತರ ಕನ್ನಡ49 ಸಾವಿರ, ಚಿತ್ರದುರ್ಗ 43 ಸಾವಿರ, ಕೊಡಗು 32 ಸಾವಿರ, ಬಳ್ಳಾರಿ 31 ಸಾವಿರ, ಗದಗ 29 ಸಾವಿರ, ರಾಮನಗರ 26 ಸಾವಿರ, ವಿಜಯನಗರ 25 ಸಾವಿರ, ಚಾಮರಾಜನಗರ 20 ಸಾವಿರ, ಯಾದಗಿರಿ 19 ಸಾವಿರ, ಕೊಪ್ಪಳ 18 ಸಾವಿರ, ಚಿಕ್ಕಬಳ್ಳಾಪುರ 18 ಸಾವಿರಕ್ಕೂ ಅಧಿಕ ಕಾರ್ಡುಗಳು ರದ್ದಾಗಲಿವೆ.
* ಯಾವ ಕಾರಣಕ್ಕೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್ ?
ಸರಕಾರದ ಹೊಸ ನಿಯಮದ ಪ್ರಕಾರ ರೇಷನ್ ಕಾರ್ಡ್ದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಮಾಡಬೇಕು. ಹೀಗೆ ಮಾಡುವುದರಿಂದ ಕಾರ್ಡುದಾರರ ಆರ್ಥಿಕ ಸ್ಥಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.
ಬ್ಯಾಂಕುಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯ. ಒಂದೊಮ್ಮೆ ಕಡಿಮೆ ಆದಾರವಿದ್ದವರು ಸಾಲದ ಕಾರಣಕ್ಕೆ ಹೆಚ್ಚುವರಿ ಆದಾಯವನ್ನು ತೋರಿಸಿದರೆ ಆಗ ಆದಾಯ ಮಿತಿ 1.20 ಕ್ಕಿಂತ ಅಧಿಕವಾಗುವ ಕಾರಣಕ್ಕೆ ನಿಮ್ಮ ಬಿಪಿಎಲ್ ಕಾರ್ಡ್ರದ್ದಾಗಲಿದೆ