ಟೋಮೋಟೋ, ಬೆಳ್ಳುಳ್ಳಿ ದುಬಾರಿ!
– ಮತ್ತೆ 400ರೂ. ಗೆ ತಲುಪಿದ ಬೆಳ್ಳುಳ್ಳಿ ದರ, ಟೋಮೋಟೋ 100 ರೂನತ್ತ
– 34,863 ಹುದ್ದೆ ಭರ್ತಿ ಮಾಡಲು ಸಿಎಂ ಸೂಚನೆ
NAMMUR EXPRESS NEWS
ಬೆಂಗಳೂರು: ಆರು ತಿಂಗಳ ಬಳಿಕ ಮತ್ತೆ ಬೆಳ್ಳುಳ್ಳಿ ದರ ಕೆಜಿಗೆ 350ರೂ.- 400ರೂ ದರ ಹೆಚ್ಚಳ ಆಗಿದೆ. ಈಗಾಗಲೇ ಚೈನಾ ಬೆಳ್ಳುಳ್ಳಿ ಅಬ್ಬರ ಶುರುವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತ ಟೋಮೋಟೋ ದರ ಕೂಡ ಕೆಜಿಗೆ 100 ರೂ. ನತ್ತ ಹೆಚ್ಚುವ ಸಾಧ್ಯತೆ ಇದೆ.
ಹೊರ ರಾಜ್ಯಗಳಿಂದ ಕಡಿಮೆ ಸರಬರಾಜು ಆಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದ್ದು, ನವೆಂಬರ್ ಹೊತ್ತಿಗೆ ಗಗನಕ್ಕೇರುವ ಎಲ್ಲ ಲಕ್ಷಣಗಳಿವೆ ಎಂದು ವರ್ತಕರು ಹೇಳುತ್ತಿದ್ದಾರೆ.
ಈರುಳ್ಳಿ, ಟೊಮೆಟೋ ಬಳಿಕ ಈಗ ಬೆಳ್ಳುಳ್ಳಿಯ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಫೆಬ್ರವರಿಯಲ್ಲಿ ಕೆಜಿಗೆ ₹500 ಸಮೀಪಿಸಿತ್ತು.
ಇದೀಗ ಪುನಃ ಬೆಲೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊದಲ ದರ್ಜೆ ಬೆಳ್ಳುಳ್ಳಿಗೆ ಕೆಜಿಗೆ ಗರಿಷ್ಠ 360-370 ಬೆಲೆಯಿದ್ದು, ಕೆಲವೆಡೆ ಈಗಾಗಲೇ ಕೆಜಿಗೆ ₹ 400 ದರವಿದೆ.
ಹಾವೇರಿ, ದಾವಣಗೆರೆಯಲ್ಲಿ ಜವಾರಿ ಬೆಳ್ಳು ಳ್ಳಿಯೂ 250ರೂ.ಬೆಲೆಯಲ್ಲಿದೆ. ಹದಿನೈದು ದಿನಗಳ ಹಿಂದಷ್ಟೇ 200-280ರೂವರೆಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಏಕಾಏಕಿ ರೂ.350ರಿಂದ 400ರೂ.ಗೆ ಮಾರಾಟವಾಗುತ್ತಿರುವುದು ಜನಸಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ರಾಜ್ಯಕ್ಕೆ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರದಿಂದ ಬೆಳ್ಳುಳ್ಳಿ ಅಮದಾಗುತ್ತದೆ. ಆದರೆ, ಈ ತಿಂಗಳು ಆಮದಿನಲ್ಲಿ ತೀವ್ರ ಕುಸಿತವಾಗಿದೆ. ಮಳೆ ಕೊರತೆ ಕಾರಣದಿಂದ ಗುಜರಾತ್ ಹಾಗೂ ಉತ್ತರಪ್ರದೇಶದಲ್ಲಿ ಇಳುವರಿ ಇಲ್ಲ. ಹೀಗಾಗಿ ಮಧ್ಯಪ್ರದೇಶ, ಗುಜರಾತ್ ಗಳೇ ಬೆಳ್ಳುಳ್ಳಿ ಪೂರೈಸುತ್ತಿವೆ ಎಂದು ಬೆಳ್ಳುಳ್ಳಿ ವರ್ತಕರ ಸಂಘ ತಿಳಿಸಿದೆ.
34,863 ಹುದ್ದೆ ಭರ್ತಿ ಮಾಡಲು ಸಿಎಂ ಸೂಚನೆ
ಯುಪಿಎಸ್ಸಿ ಮಾದರಿಯಲ್ಲಿ ರಾಜ್ಯ ನೇಮಕಾತಿ ಪ್ರಾಧಿಕಾರಗಳಲ್ಲಿ ಸಮಗ್ರ ಸುಧಾರಣೆ ತಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆ ಗಳನ್ನು ಭರ್ತಿ ಮಾಡಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ವಿವಿಧ ಇಲಾಖೆಗಳ ನೇಮಕಾತಿ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.
ಕಳೆದ ವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ನೇಮಕಾತಿ ಪ್ರಾಧಿಕಾರಗಳ ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಜಾರಿಗೊಳಿಸಬೇಕು.
ಯುಪಿಎಸ್ಸಿಯಲ್ಲಿ ಕೇವಲ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್ಸಿ ಕೇವಲ ಗ್ರೂಪ್ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್ ‘ಸಿ’ಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮಾಡುವ
ಕುರಿತು ಚರ್ಚೆ ನಡೆಸಲಾಗಿದೆ. 371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರ ಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮೊದಲು ಲಿಖಿತ ಪರೀಕ್ಷೆ!: ಪಿಎಸ್ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ.ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲಿಸಬೇಕು ಎಂದರು.