ಬಿಜೆಪಿ ಸಂಸದನ ಮೊಬೈಲ್ ಕರೆ ಮಾಡಿ ಮಹಿಳೆ ನಗ್ನ!
– ಸಿದ್ದೇಶ್ವರ್ ಅವರನ್ನು ಹನಿ ಟ್ರ್ಯಾಪ್ ಬೀಳಿಸಲು ಪ್ಲಾನ್!
– ವಾಟ್ಸಪ್ ಕರೆ ಮಾಡಿ ನಗ್ನಳಾದ ಮಹಿಳೆ..ಏನಿದು ಕೇಸ್!?
NAMMUR EXPRESS NEWS
ಬೆಂಗಳೂರು: ದಾವಣಗೆರೆಯ ಬಿಜೆಪಿ ಸಂಸದ ಜಿ ಎಂ ಸಿದ್ದೇಶ್ವರ ಅವರಿಗೆ ಮಹಿಳೆ ಒಬ್ಬಳು ವಾಟ್ಸಪ್ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದು, ವಿಡಿಯೋ ಕಾಲ್ ಬರುತ್ತಿದ್ದಂತೆ ಮಹಿಳೆ ನಗ್ನಳಾಗಿದ್ದಾಳೆ. ಘಟನೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದೇಶ್ವರ ಅವರು ಜುಲೈ 20ರಂದು ರಾತ್ರಿನಗರದ ಯುಬಿಸಿಟಿ ಬಳಿಯ ತಮ್ಮ ಪ್ಲಾಟ್ ನಲ್ಲಿದ್ದ ಅಪರಿಚಿತ ಮಹಿಳೆ ವಾಟ್ಸಾಪ್ ಕರೆ ಮಾಡಿದ್ದಾಳೆ. ಸಿದ್ದೇಶ್ವರ ಅವರು ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗಲೇ ಆ ಮಹಿಳೆ ನಗ್ನಳಾಗಿದ್ದಾಳೆ. ಇದರಿಂದ ಗಲಿಬಿಲಿಯಾದ ಸಂಸದರು ಜೊತೆಯಲ್ಲೇ ಇದ್ದ ತಮ್ಮ ಪತ್ನಿಗೆ ಮೊಬೈಲ್ ಕೊಟ್ಟಿದ್ದಾರೆ. ಸಿದ್ದೇಶ್ವರ ಪತ್ನಿ ಮಾತನಾಡಲು ಆರಂಭಿಸುತ್ತಿದ್ದಂತೆ ಆ ಮಹಿಳೆ ಕರೆ ಸ್ಥಗಿತಗೊಳಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆ ಮಹಿಳೆ ಜುಲೈ 21ರಂದು ಬೆಳಗ್ಗೆ ಮತ್ತೊಮ್ಮೆ ಸಿದ್ದೇಶ್ವರ್ ಅವರಿಗೆ ಕರೆ ಮಾಡಿ ಅಸಂಭ್ಯವಾಗಿ ಮಾತನಾಡಿದ್ದಾಳೆ ಅಲ್ಲದೆ, ವಾಟ್ಸಪ್ ಕರೆಯ ವಿಡಿಯೋ ರೆಕಾರ್ಡ್ ಮಾಡಿ ಕೊಂಡಿರುವುದು ಹೇಳಿದ್ದಾಳೆ. ಜೊತೆಗೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾಳೆ. ಈ ಸಂಬಂಧ ದೂರು ಸ್ವೀಕರಿಸಲು ಪುಲಿಕೇಶಿ ನಗರ ಉಪ ವಿಭಾಗದ ಎಸಿಪಿಯು ಸಿದ್ದೇಶ್ವರ ಮನೆಗೆ ಹೋಗಿದ್ದರು. ಆಗಲು ಆ ಮಹಿಳೆ ಸಿದ್ದೇಶ್ವರ ಅವರಿಗೆ ಕರೆ ಮಾಡಿ ಅಶ್ಲೀಲವಾಗಿ ಸಂಭಾಷಣೆ ನಡೆಸಿದ್ದಾಳೆ. ಆಗ ಅಲ್ಲಿಯೇ ಇದ್ದ ಎಸಿಪಿ ಕರೆ ಮಧ್ಯೆ ಮಾತನಾಡಲು ಮುಂದಾಗುತ್ತಿದ್ದಂತೆ ಮಹಿಳೆ ಕರೆ ಸ್ಥಗಿತಗೊಳಿಸಿದ್ದಾಳೆ. ಆ ಮಹಿಳೆಯು ಸಂಸದರನ್ನು ಬೆದರಿಸಿ ಹಣ ಪೀಕುವ ಉದ್ದೇಶಕ್ಕೆ ಈ ರೀತಿ ಮಾಡಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನದಿಂದ ಬಂತು ಕರೆ!
ಸಿದ್ದೇಶ್ವರ ಅವರಿಗೆ ರಾಜಸ್ಥಾನದಿಂದ ಕರೆ ಬಂದಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ದುರ್ಬಳಕೆಗೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಕಿಡಿಗೇಡಿಗಳು ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಆ ಸಿಮ್ ಕಾರ್ಡ್ ಖರೀದಿಸುವುದು ಗೊತ್ತಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಈ ಬಗ್ಗೆ ಸಂಸದ ಸಿದ್ದೇಶ್ವರ ನಾನು ತಕ್ಷಣ ದಾವಣಗೆರೆ ಎಸ್ ಪಿ ಗೆ ಕರೆ ಮಾಡಿ ವಿಷಯ ತಿಳಿಸಿದೆ. ಬೆಂಗಳೂರಿನಲ್ಲಿದ್ದರೆ ಅಲ್ಲಿಯ ದೂರು ನೀಡುವಂತೆ ಹೇಳಿದರು. ಆಗ ನನಗೆ ಗೊತ್ತಿರುವ ಮಹಿಳಾ ಎಸಿಪಿಗೆ ತಿಳಿಸಿದಾಗ ಅವರು ಬಂದು ದೂರು ಬರೆದುಕೊಂಡು ಹೋಗಿದ್ದಾರೆ. ದೂರು ಪಡೆಯುವ ವೇಳೆಯಲ್ಲೂ ಆ ಮಹಿಳೆ ಮತ್ತೆ ಕರೆ ಮಾಡಿದಳು, ವಾಟ್ಸಪ್ ಕಾಲ್ ಮಾಡುವಂತೆ ಹೇಳಿದರು ಆನಂತರ ಕರೆ ಮಾಡಲಿಲ್ಲ, ನಮ್ಮ ಎಸ್ಪಿ ಯವರು ನಾವು ತನಿಖೆ ಮಾಡುತ್ತೇವೆ, ನೀವು ಆ ನಂಬರ್ ಬ್ಲಾಕ್ ಮಾಡಲು ಹೇಳಿದರು. ಈಗ ಬ್ಲಾಕ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023