- ಹೈಕಮಾಂಡ್ ಸೂಚನೆ ನೀಡಿದ್ರೆ ರಾಜೀನಾಮೆ
- ಪಕ್ಷದ ಆದೇಶ ಪಾಲಿಸಲು ಸಿದ್ದ ಎಂದ ನಾಯಕ
- ನಾನು ರಾಜೀನಾಮೆ ಕೊಡ್ತೇನೆ ಎಂದ ಯೋಗೇಶ್ವರ್
NAMMUR EXPRESS
ಬೆಂಗಳೂರು: ಹೈಕಮಾಂಡ್ ಸೂಚನೆ ನೀಡಿದ ತಕ್ಷಣ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.
ಕಳೆದ ವಾರ ಸಚಿವ ಯೋಗೇಶ್ವರ್ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಬಳಿಕ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಇದೀಗ ಈ ರಾಜಕೀಯ ಬೆಳವಣಿಗೆ ಮಹತ್ವ ಪಡೆದಿದೆ.
ನಾನು ರಾಜೀನಾಮೆ ಕೊಡ್ತೇನೆ!: ಹೈಕಮಾಂಡ್ ಹೇಳಿದರೆ ರಾಜೀನಾಮೆಗೆ ಸಿದ್ದ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.
ನಮ್ಮದು ರಾಷ್ಟ್ರೀಯ ಪಕ್ಷ. ಉನ್ನತ ಮಟ್ಟದ ನಾಯಕರು ಇದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ನಾನು ಕೂಡ ಪಕ್ಷ ರಾಜೀನಾಮೆ ಕೇಳಿದರೆ ಕೊಡಬೇಕು ಎಂದು ಹೇಳಿದ್ದಾರೆ.
ನನ್ನ ಹೇಳಿಕೆ ಸಾಕಷ್ಟು ಸುದ್ದಿಯಾಗಿದೆ. ಇದರಿಂದ ನನಗೆ ನೋವಾಗಿದೆ. ನಾನು ಸಿಎಂ ಬಗ್ಗೆ ಮಾತನಾಡುವುದಿಲ್ಲ. ನನ್ನನ್ನು ಜಾಸ್ತಿ ಮಾತನಾಡಿಸಬೇಡಿ. ಈ ಸಂದರ್ಭದಲ್ಲಿ ಸಿಎಂ ಬಗ್ಗೆ ಮಾತನಾಡಿದರೆ ವಿವಾದವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.