- ಕರುನಾಡಲ್ಲಿ ಮಂಕು ಕವಿದ ವಾತಾವರಣ
- ಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ರಶ್
NAMMUR EXPRESS NEWS
ಬೆಂಗಳೂರು: ಹವಾಮಾನದಲ್ಲಿ ಬದಲಾವಣೆಗಳು ಉಂಟಾಗಿದ್ದು, ಮುಂದಿನ ಎರಡು ಮೂರು ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸುಳಿಗಾಳಿ ಚಂಡಮಾರುತವಾಗಲು ಸಾಕಷ್ಟು ಬದಲಾವಣೆಗಳು ಆಗಬೇಕಿದೆ. ಸುಳಿಗಾಳಿಯು ಹೆಚ್ಚಿನ ವೇಗ ಪಡೆದುಕೊಂಡು ಬಲಗೊಳ್ಳಬೇಕು, ನಂತರ ಅದು ವಾಯುಭಾರ ಕುಸಿತವಾಗಿ ರೂಪಗೊಳ್ಳುತ್ತದೆ. ಆ ವಾಯುಭಾರ ಕುಸಿತದಿಂದ ಗಾಳಿಯ ಒತ್ತಡ ಒಂದೆಡೆ ಅತ್ಯಧಿಕ ಪ್ರಮಾಣದಲ್ಲಿ ಉಲ್ಬಣಗೊಳ್ಳಬೇಕು. ಇಷ್ಟು ಹಂತಗಳನ್ನು ದಾಟಿ ಮೇಲೆ ಈ ಗಾಳಿ ಚಂಡಮಾರುತವಾಗಿ ಬದಲಾಗುತ್ತದೆ. ಇಷ್ಟು ಹಂತ ದಾಟಲು ಸುಮಾರು ಎರಡರಿಂದ ಮೂರು ದಿನ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ಚಂಡ ಮಾರುತ ಕಾರಣ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಶಿವಮೊಗ್ಗಕ್ಕೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಇನ್ನು ಮಳೆ, ಗಾಳಿ ಕಾರಣ ಅನಾರೋಗ್ಯ ಹೆಚ್ಚುತ್ತಿದೆ. ಆಸ್ಪತ್ರೆಗಳ ಮುಂದೆ ಜನ ಹೆಚ್ಚು ಕಾಣುತ್ತಿದ್ದಾರೆ.