7ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಭಂಡಿಗಡಿ ಶಾಲೆ ವಿದ್ಯಾರ್ಥಿಗಳು!
– ಪ್ರತಿಭಾ ಕಾರಂಜಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
– ಶಿಕ್ಷಕ ಅನಿಲ್ ಕುಮಾರ್, ವಿದ್ಯಾರ್ಥಿಗಳ ನಿರಂತರ ಶ್ರಮಕ್ಕೆ ಸಂದ ಜಯ
NAMMUR EXPRESS NEWS
ಕೊಪ್ಪ: ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ವಿಭಾಗದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಕೊಪ್ಪ ತಾಲೂಕು ಭಂಡಿಗಡಿಯ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅದ್ಬುತ ಪ್ರದರ್ಶನ ತೋರಿ ಪ್ರಥಮ ಸ್ಥಾನ ಪಡೆದು 7ನೇ ಬಾರಿಗೆ ರಾಜ್ಯಮಟ್ಟಕ್ಕೆ ಅಯ್ಕೆಯಾಗಿ ಶಾಲೆಗೆ ಹಾಗೂ ಕೊಪ್ಪ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಬೀರೂರು ತಾಲೂಕಿನಲ್ಲಿ ಬಳ್ಳಾವರದಲ್ಲಿ ಡಿ.23ರಂದು ನಡೆದ ಸ್ಪರ್ಧೆಯಲ್ಲಿ ಶಾಲಾ ಮಕ್ಕಳು ಗಮನ ಸೆಳೆದಿದ್ದಾರೆ. ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಭಂಡಿಗಡಿಯ ವಿದ್ಯಾರ್ಥಿಗಳ ಈ ನಿರಂತರ ಸಾಧನೆಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರ ಹರಿದುಬರುತ್ತಿದೆ, ರಾಜ್ಯಮಟ್ಟದಲ್ಲಿ ವಿಜಯಶಾಲಿಗಳಾಗಿ ಚಿಕ್ಕಮಗಳೂರು ಜಿಲ್ಲೆಗೆ ಹೆಮ್ಮ ತರುವಂತಾಗಲಿ ಎಂಬ ಹಾರೈಕೆ ವ್ಯಕ್ತವಾಗಿದೆ.
ಶಿಕ್ಷಕ ಅನಿಲ್ ಕುಮಾರ್, ವಿದ್ಯಾರ್ಥಿಗಳ ನಿರಂತರ ಶ್ರಮ
ವಿದ್ಯಾರ್ಥಿಗಳಾದ ಸೌಜನ್ಯ, ತ್ರಿಶ, ಕಿಶನ್, ಸುಶ್ಮಿತ , ಸಹನ, ಸೌಪರ್ಣಿಕ, ಉಜ್ವಲ್, ಸುಫಿಯಾನ್, ಮದನ್, ಕಿಶೋರ್, ಶ್ರೇಯಸ್̧ ಉಮಾ ಹಾಗೂ ತರಬೇತಿ ನೀಡಿದ ಶಾಲೆಯ ಇಂಗ್ಲೀಷ್ ಶಿಕ್ಷಕರಾದ ಪಿ. ಹೆಚ್ ಅನಿಲ್ ಕುಮಾರ್ ಅವರ ಕಠಿಣ ಪರಿಶ್ರಮಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಯ ಎಲ್ಲಾ ಕಾರ್ಯಗಳಿಗೂ ಸದಾ ಪ್ರೋತ್ಸಾಹಿಸಿ ಸಹಕರಿಸುವ ಮುಖ್ಯ ಶಿಕ್ಷಕರಾದ ಎನ್ ಎಸ್ ಸುರೇಂದ್ರ ಅವರಿಗೂ ಹಾಗು ಸಹಶಿಕ್ಷಕರಿಗೂ , ಸಾಧನೆಗೆ ಸಹಕಾರ ನೀಡುತ್ತಿರುವ ವಿಜ್ಞಾನ ಶಿಕ್ಷಕಿಯಾದ ಆಶಾ, ಶ್ರೀಮತಿ ಗೀತಾ ಅವರಿಗೂ,ಬಿ.ಏನ್. ಭಿಷೇಜ್, ಎಸ್. ಡಿ. ಎಂ. ಸಿ ಅಧ್ಯಕ್ಷ ರಾದ ರಮೇಶ್ ಹಾಗೂ ಸದಸ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಪೋಷಕರು ಸಲ್ಲಿಸಿದ್ದಾರೆ.