ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿ ಕುಟುಂಬಕ್ಕೆ ಪರಿಹಾರ
– ಅರಣ್ಯ ಇಲಾಖೆ ಹಾಗೂ ಶಾಸಕರಿಂದ ವೈಯಕ್ತಿಕ ಪರಿಹಾರದ ಚೆಕ್ ವಿತರಣೆ
– ಶಾಸಕ ರಾಜೇಗೌಡ, ಡಾ. ಅಂಶುಮಂತ್ ಸೇರಿ ಹಲವರು ಹಾಜರ್
NAMMUR EXPRESS NEWS
ಎನ್.ಆರ್. ಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಮದ
ಎಕ್ಕಡಬೈಲ್ನಲ್ಲಿ ಕಾಡಾನೆ ತುಳಿದು ಸಾವನ್ನಪ್ಪಿದ ಎಲಿಯಾಸ್ ಅವರ ಮನೆಗೆ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ, ಡಿ.ಒಫ್.ಒ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇಲಾಖೆಯಿಂದ 15 ಲಕ್ಷ ರೂಗಳ ಪರಿಹಾರದ ಚೆಕ್ಕನ್ನು ವಿತರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಜೇಗೌಡ ವೈಯಕ್ತಿಕವಾಗಿ 1 ಲಕ್ಷ ರೂಗಳ ಪರಿಹಾರವನ್ನು ಆ ಕುಟುಂಬಕ್ಕೆ ಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರಬೈಲ್ ನಟರಾಜ್ ಹಾಗೂ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಡಾ.ಅಂಶಮಂತ್ ಮುತ್ತಿನಕೊಪ್ಪ ಪಂಚಾಯಿತಿಯ ಅಧ್ಯಕ್ಷರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗ್ರಾಮಸ್ಥರು ಉಪಸ್ಥಿತರಿದ್ದರು.