ಹಿಂದೂಸೇವಾ ಪ್ರತಿಷ್ಠಾನದಿಂದ ದೀಪ ಪೂಜನಾ
– ಸಮಾಜದಲ್ಲಿ ಸಾಮರಸ್ಯ ವೃದ್ಧಿಗಾಗಿ ಹಲವು ಚಟುವಟಿಕೆಗಳು
– ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಹೇಗಿರುತ್ತೆ?
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಅಡ್ಡಗದ್ದೆ,ಕಲ್ಕಟ್ಟೆ,ಹೊಸ್ಕೆರೆ ಗ್ರಾಮಗಳಲ್ಲಿ ಹಿಂದೂಸೇವಾ ಪ್ರತಿಷ್ಠಾನದ ವತಿಯಿಂದ ದೀಪ ಪೂಜನಾ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷ ಸಂಸ್ಥೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಸಾಮಾಜಿಕ ಸಮಾನತೆ ಬೆಳೆಸುವ ಸಲುವಾಗಿ ಇಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ಭಜನೆ,ಹೊಲಿಗೆ ತರಬೇತಿ ಶಿಬಿರ,ಬಾಲಗೋಕುಲ,ಮನೆಪಾಠದಂತಹ ಚಟುವಟಿಕೆಗಳನ್ನು ನಡೆಸುತ್ತಿದೆ. ದೀಪ ಪೂಜನಾ ಕಾರ್ಯಕ್ರಮವನ್ನು ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸುತ್ತಿದ್ದು ಗ್ರಾಮದ ಎಲ್ಲಾ ಮಹಿಳೆಯರು ಸೇರಿ ಸ್ವತಃ ತಾವೇ ಮಂತ್ರದೊಡನೆ ಪೂಜಿ ಸಲ್ಲಿಸುತ್ತಾರೆ. ಈ ಕಾರ್ಯಕ್ರಮವನ್ನು ಸುಮಂಗಲ ಆನಂದಸ್ವಾಮಿಯವರು ನೇತೃತ್ವ ವಹಿಸಿ ನಡೆಸಿಕೊಟ್ಟರು. ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಹಿಂದೂ ಸೇವಾ ಪ್ರತಿಷ್ಠಾನದ ಕಾರ್ಯ ಹೇಗಿರುತ್ತೆ?
ಹಿಂದು ಸೇವಾ ಪ್ರತಿಷ್ಠಾನ ಕಳೆದ ಹತ್ತಾರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಶಿಕ್ಷಣ, ಸಂಸ್ಕಾರ, ಸ್ವಾವಲಂಬಿ ಮತ್ತು ಪರಿಸರ ಈ ದೃಷ್ಟಿಯಿಂದ ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ವಿಶೇಷವಾಗಿ ಈ ದೀಪೋತ್ಸವ ಸಮಯದಲ್ಲಿ ದೀಪ ಪೂಜನಾ ಎಂಬ ವಿಭಿನ್ನ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಲ್ಲಿ ವಿಶೇಷವಾಗಿ ತಾಯಂದಿರೇ ಸ್ವತಃ ಪೂಜೆ ಮಾಡುತ್ತಾರೆ ಮತ್ತು ಜಾತಿ ಭೇದ ಮರೆತು ಮೇಲು ಕೀಳು ಎಂಬ ಭಾವನೆ ಇಲ್ಲದೆ ಸಾಮರಸ್ಯಕ್ಕೆ ಒತ್ತುಕೊಟ್ಟು ನಾವೆಲ್ಲರೂ ಹಿಂದು ಮತ್ತು ಭಾರತ ಎಂಬ ರಾಷ್ಟ್ರದ ಭಾಗಗಳು ಎಂಬುದನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮ ಇದು. ಜೊತೆಗೆ ಕುಟುಂಬ, ಪರಿಸರ, ಸ್ವದೇಶಿ, ಸಾಮರಸ್ಯ ಮತ್ತು ನಾಗರೀಕ ಕರ್ತವ್ಯ ಈ ಐದು ವಿಷಯಗಳನ್ನು ಈ ಬಾರಿ ವಿಶೇಷ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ.