ವಿವೇಕಾನಂದರ ಜನ್ಮದಿನದ ಪ್ರಯುಕ್ತ ಪ್ರಬಂಧ ಸ್ಪರ್ಧೆ..
– ಎಬಿವಿಪಿಯಿಂದ ಪ್ರಬಂಧ ಸ್ಪರ್ಧೆ ಆಯೋಜನೆ
– ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಂದು ಶೃಂಗೇರಿಯ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳಿಗೆ “ಸ್ವಾಮಿ ವಿವೇಕಾನಂದರ ದೃಷ್ಠಿಯಲ್ಲಿ ರಾಷ್ಟ್ರ ಪುನರ್ನಿರ್ಮಾಣ” ಎಂಬ ವಿಷಯವಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾಜದಲ್ಲಿ ಆಗಬೇಕಾದ ಪಂಚಪರಿವರ್ತನೆ,ಸ್ವದೇಶಿ ವಸ್ತುಗಳ ಬಳಕೆ,ಪರ್ಯಾವರಣದ ಸ್ವಚ್ಛತೆ ನಿರ್ವಹಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ್ ನಾಯಕ್,ಹಿರಿಯ ಎಬಿವಿಪಿ ಕಾರ್ಯಕರ್ತ ಅಭಿರಾಮ್, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಾರ್ಥ್,ಶೃಂಗೇರಿ ಎಬಿವಿಪಿಯ ತಾಲೂಕು ಸಂಚಾಲಕರಾದ ಧನುಷ್, ಹಿಂದೂ ಸೇವಾ ಪ್ರತಿಷ್ಠಾನದ ತಾಲೂಕು ಸಂಚಾಲಕರಾದ ನೂತನ್ ಸೂರ್ಯ,ಹಿಂದೂ ಸೇವಾ ಪ್ರತಿಷ್ಠಾನದ ಮಾತೃ ಮಂಡಳಿ ಪ್ರಮುಖ್ರಾದ ಸುಮಂಗಲಿ ಆನಂದ ಸ್ವಾಮಿಯವರು ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.